Neer Dose Karnataka
Take a fresh look at your lifestyle.

T20 World Cup 2022: ಈ ಬಾರಿಯ ವಿಶ್ವಕಪ್ ಅಲ್ಲಿ ತಂಡವನ್ನು ಗೆಲ್ಲಿಸುವ ಸಾಮರ್ಥ್ಯವಿರುದ ಟಾಪ್ 5 ಆಟಗಾರರು ಯಾರ್ಯಾರು ಗೊತ್ತೇ??

ವಿಶ್ವಕಪ್ ನಲ್ಲಿ ಭಾರತ ತಂಡಕ್ಕೆ ಸ್ವಲ್ಪ ಸಂಕಷ್ಟವೆ ಎದುರಾಗಿದೆ, ಜಸ್ಪ್ರೀತ್ ಬುಮ್ರ ತಂಡದಿಂದ ಹೊರಗುಳಿದಿದ್ದಾರೆ. ಆಲ್ ರೌಂಡರ್ ಆಟಗಾರ ರವೀಂದ್ರ ಜಡೇಜಾ ಅವರು ಸಹ ಅಲಭ್ಯರಾಗಿದ್ದಾರೆ. ಭಾರತ ತಂಡದಲ್ಲಿ ಕಳೆದ ವರ್ಷ ಟಿ20 ವಿಶ್ವಕಪ್ ನಲ್ಲಿ ಯುಎಇ ನಲ್ಲಿ ನಡೆದ ಅದೇ ಸಮಸ್ಯೆ ಇನ್ನು ಕೊನೆಯಾಗಿಲ್ಲ, ಡೆತ್ ಬೌಲಿಂಗ್ ನಲ್ಲಿ ನಮ್ಮ ತಂಡಕ್ಕೆ ಸಮಸ್ಯೆ ಇದೆ. ಈ ವರ್ಷ ಟಿ20 ವಿಶ್ವಕಪ್ ನಲ್ಲಿ ಭಾರತ ತಂಡವನ್ನು ಗ್ರೂಪ್ 2 ನಲ್ಲಿ ಪಾಕಿಸ್ತಾನ್, ಸೌತ್ ಆಫ್ರಿಕಾ ಮತ್ತು ಬಾಂಗ್ಲಾದೇಶ ತಂಡಗಳ ಜೊತೆಗೆ ಹಾಕಲಾಗಿದೆ. ಈ ವರ್ಷ ಬ್ಯಾಟಿಂಗ್ ಲೈನಪ್ ಚೆನ್ನಾಗಿದ್ದು, ಕೆಲವು ಆಟಗಾರರಿಂದ ಭಾರತ ತಂಡ ಗೆಲುವಿನ ಕಡೆಗೆ ಸಾಗಬಹುದು. ಈ ವರ್ಷ ವಿಶ್ವಕಪ್ ನಲ್ಲಿ ಭಾರತ ತಂಡವನ್ನು ಗೆಲ್ಲಿಸುವ ಸಾಮರ್ಥ್ಯ ಇರುವ ಐವರು ಆಟಗಾರರು ಯಾರ್ಯಾರು ಎಂದು ತಿಳಿಸುತ್ತೇವೆ ನೋಡಿ..

ಸೂರ್ಯಕುಮಾರ್ ಯಾದವ್ :- ಭಾರತ ತಂಡದಲ್ಲಿ ಮಾತ್ರವಲ್ಲ, ಇಡೀ ಪ್ರಪಂಚದಲ್ಲಿ ಬೆಸ್ಟ್ ಫಾರ್ಮ್ ನಲ್ಲಿರುವ ಬ್ಯಾಟ್ಸ್ಮನ್ ಎಂದು ಹೇಳಬಹುದು. ಅಂತಾರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ, 30 ಇನ್ನಿಂಗ್ಸ್ ಗಳಲ್ಲಿ 973 ರನ್ಸ್ ಗಳಿಸಿದ್ದಾರೆ, ಇವರ ಆವರೇಜ್ 39, ಸ್ಟ್ರೈಕ್ ರೇಟ್ 173, ಇದರಲ್ಲಿ 1 ಸೆಂಚುರಿ, 8 ಅರ್ಧ ಶತಕ ಇದೆ. 2022ರ ಟಿ20 ವಿಶ್ವಕಪ್ ನಲ್ಲಿ 732 ರನ್ಸ್ ಗಳಿಸಿದ್ದು, 180ಇವರ ಸ್ಟ್ರೈಕ್ ರೇಟ್ ಆಗಿದೆ.
ಅರ್ಷದೀಪ್ ಸಿಂಗ್ :- ಇವರ ಮೇಲೆ ಭಾರತ ತಂಡ ಬಹಳಷ್ಟು ವಿಶ್ವಾಸ ಇಟ್ಟುಕೊಂಡಿದೆ, ಕೆಲವು ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಅರ್ಷದೀಪ್ ಸಿಂಗ್ ಅವರು ಉತ್ತಮವಾದ ಪ್ರದರ್ಶನ ನೀಡಿ ಭರವಸೆ ಮೂಡಿಸಿದರು. ಈ ವರ್ಷ ಐಪಿಎಲ್ ನಲ್ಲಿ ಡೆತ್ ಓವರ್ ಗಳಲ್ಲಿ ಅದ್ಭುತವಾದ ಪ್ರದರ್ಶನ ನೀಡುವ ಮೂಲಕ ಭಾರತ ತಂಡಕ್ಕೆ ಸೆಲೆಕ್ಟ್ ಆದರು. ವೆಸ್ಟ್ ಇಂಡೀಸ್ ಸೀರಿಸ್ ನಲ್ಲಿ ಮ್ಯಾನ್ ಆಫ್ ದಿ ಮ್ಯಾಚ್ ಪಡೆದ ಅರ್ಷದೀಪ್ ಸಿಂಗ್ ಅವರ ವಿಶ್ವಕಪ್ ನಲ್ಲಿ ಹೇಗೆ ಬೌಲಿಂಗ್ ಮಾಡುತ್ತಾರೆ ಎಂದು ಕಾದು ನೋಡಬೇಕಿದೆ.

ರೋಹಿತ್ ಶರ್ಮಾ :- ಭಾರತ ತಂಡದ ಕ್ಯಾಪ್ಟನ್ ರೋಹಿತ್ ಶರ್ಮಾ ಅವರು ಈ ವರ್ಷ ಸ್ವಲ್ಪ ರಿಸ್ಕ್ ತೆಗೆದುಕೊಂಡು ಬ್ಯಾಟಿಂಗ್ ಮಾಡುತ್ತಿದ್ದಾರೆ. ತಂಡದ ರನ್ ರೇಟ್ ಹೆಚ್ಚಿಸಲು, ಆರಂಭದಲ್ಲೇ ಬಿಗ್ ಹಿಟ್ಸ್ ಹೊಡೆಯುವ ಪ್ರಯತ್ನ ಮಾಡುತ್ತಿದ್ದಾರೆ. ಈ ವರ್ಷ ಟಿ20 ಪಂದ್ಯಗಳಲ್ಲಿ, ರೋಹಿತ್ ಅವರ ಆವರೇಜ್ 26 ಇದ್ದು, ಸ್ಟ್ರೈಕ್ ರೇಟ್ 147 ಇದೆ. ರೋಹಿತ್ ಅವರ ಬ್ಯಾಟಿಂಗ್ ಅಪ್ರೋಚ್ ಸಹ ಈಗ ಬದಲಾಗಿದ್ದು, ಹಿಂದಿನ ವರ್ಷಗಳಿಗಿಂತ ಬೆಟರ್ ಸ್ಥಾನದಲ್ಲಿದೆ.
ವಿರಾಟ್ ಕೋಹ್ಲಿ :- ಮೂರು ವರ್ಷಗಳಿಂದ ಕಳಪೆ ಫಾರ್ಮ್ ಇಂದ ಬಳಲುತ್ತಿದ್ದ ವಿರಾಟ್ ಅವರು, ಈಗ ಕಂಬ್ಯಾಕ್ ಮಾಡಿದ್ದಾರೆ. ಆಸ್ಟ್ರೇಲಿಯಾ ಮತ್ತು ಸೌತ್ ಆಫ್ರಿಕಾ ತಂಡದ ವಿರುದ್ಧದ ಪಂದ್ಯಗಳಲ್ಲಿ ಉತ್ತಮವಾದ ಇನ್ನಿಂಗ್ಸ್ ಆಡಿದ್ದಾರೆ, ಅರ್ಧಶತಕ, ಒಂದು ಶತಕವನ್ನು ಭಾರಿಸಿದ್ದಾರೆ. ಪ್ರಸ್ತುತ ಕೋಹ್ಲಿ ಅವರ ಸ್ಟ್ರೈಕ್ ರೇಟ್ 137, ಅವರ ಆವರೇಜ್ 50 ಇದ್ದು, ಉತ್ತಮವಾದ ಪ್ಲೇಯರ್ ಆಗಿದ್ದಾರೆ ಕೋಹ್ಲಿ.

ದಿನೇಶ್ ಕಾರ್ತಿಕ್ :- ಪ್ರಸ್ತುತ ವಿಶ್ವದ ಬೆಸ್ಟ್ ಫಿನಿಷರ್ ಎಂದರೆ ದಿನೇಶ್ ಕಾರ್ತಿಕ್ ಎಂದು ಹೇಳಬಹುದು. ಪಂತ್ ಅವರ ಬದಲಾಗಿ ಕಾರ್ತಿಕ್ ಅವರನ್ನೇ ಪ್ರಿಫರ್ ಮಾಡುವುದು ಬಹುತೇಕ ಪಕ್ಕಾ ಆಗಿದೆ, ವಿಶೇಷವಾಗಿ ಡೆತ್ ಓವರ್ ಗಳಿಗೆ ಕಾರ್ತಿಕ್ ಅವರನ್ನು ಆಯ್ಕೆಮಾಡಲಾಗಿದೆ, ಹಾಗು ಇವರ ವಿಕೆಟ್ ಕೀಪಿಂಗ್ ಕೆಲಸ ಸಹ ಚೆನ್ನಾಗಿದೆ. 2022ರಲ್ಲಿ ಡೆತ್ ಓವರ್ ಗಳಲ್ಲಿ ಕಾರ್ತಿಕ್ ಅವರ ಸ್ಟ್ರೈಕ್ ರೇಟ್ 195 ಇದೆ, ಹಾಗಾಗಿ ವಿಶ್ವಕಪ್ ನಲ್ಲಿ ಇವರು ಉತ್ತಮ ಪ್ರದರ್ಶನ ಕೊಡುವುದು ಪಕ್ಕಾ ಎನ್ನುವ ವಿಶ್ವಾಸ ಇದೆ.

Comments are closed.