Neer Dose Karnataka
Take a fresh look at your lifestyle.

ಅಂದು ಬಹು ನಿರೀಕ್ಷಿತ ಸಿನಿಮಾ ರಣರಂಗ ಸಿನಿಮಾ ನೋಡಿ ಅಣ್ಣಾವ್ರು ಬೈದಿದ್ದು ಯಾಕೆ ಗೊತ್ತೇ?? ಅಲ್ಲಿ ಏನಾಗಿತ್ತು ಗೊತ್ತೇ??

ರಣರಂಗ, ಇದು 1988 ರಲ್ಲಿ ತೆರೆಕಂಡ ಸಿನಿಮಾ, ಶಿವ ರಾಜ್ ಕುಮಾರ್ ಅವರ ಕೆರಿಯರ್ ನ ಆರಂಭಿಕ ವರ್ಷಗಳಲ್ಲಿ ತೆರೆಕಂಡ ಬಹಳ ವಿಭಿನ್ನವಾದ ಸಿನಿಮಾ ಇದಾಗಿತ್ತು. ಜಯರಾಮ್ ಅವರು ಬರೆದ ಕತೆಯನ್ನು ಸೋಮಶೇಖರ್ ಅವರು ನಿರ್ದೇಶನ ಮಾಡಿದ್ದರು, ಶಿವಣ್ಣ ಮತ್ತು ಸುಧಾರಾಣಿ ಅವರ ಜೋಡಿ ಮತ್ತೊಮ್ಮೆ ಮೋಡಿ ಮಾಡಿತ್ತು, ಈ ಸಿನಿಮಾ ಮೂಲಕ ಹಂಶಲೇಖ ಅವರು ಮೊದಲ ಬಾರಿಗೆ ಶಿವಣ್ಣ ಅವರ ಸಿನಿಮಾಗೆ ಸಂಗೀತ ನೀಡಿ ಸಾಹಿತ್ಯ ಬರೆದರು. ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸಿ, 25ವಾರಗಳ ಕಾಲ ಪ್ರದರ್ಶನಗೊಂಡ ಈ ಸಿನಿಮಾ, ಅಣ್ಣಾವ್ರಿಗೆ ಇಷ್ಟ ಆಗಿರಲಿಲ್ಲ. ಸಿನಿಮಾ ನೋಡಿ ಅಣ್ಣಾವ್ರು ಅಸಮಾಧಾನ ವ್ಯಕ್ತಪಡಿಸಿದ್ದರಂತೆ. ಅದು ಯಾಕೆ ಗೊತ್ತಾ?

ರಣರಂಗ ಸಿನಿಮಾದ ಮೊದಲ ಕಾಪಿಯನ್ನು ಅಣ್ಣಾವ್ರಿಗೆ ತೋರಿಸಲಾಗಿತ್ತು, ಈ ಸಿನಿಮಾ ನೋಡುವಾಗ ಅಣ್ಣಾವ್ರ ಜೊತೆಗ ಹಂಸಲೇಖ ಅವರು ಸಹ ಇದ್ದರು, ಸಿನಿಮಾ ನೋಡುವಾಗ ಅಣ್ಣಾವ್ರಿಗೆ ಮುಖ ಚರ್ಯೆ ನೋಡಿದರೆ ಅವರಿಗೆ ಸಿನಿಮಾ ಇಷ್ಟ ಆಗುತ್ತಿಲ್ಲ ಎನ್ನುವುದು ಅರ್ಥ ಆಗುತ್ತಿತ್ತಂತೆ, ಕೆಲವು ದೃಶ್ಯಗಳಲ್ಲಿ ಮುಖವನ್ನು ಕಿವುಚಿಕೊಂಡಿದ್ದರಂತೆ ಅಣ್ಣಾವ್ರು, ಸಿನಿಮಾ ಮುಗಿದ ಬಳಿಕ, ಈ ರೀತಿ ಕಥೆ ಇರುವ ಸಿನಿಮಾ ಈಗ ಬೇಕಾ ಎಂದು ಹಂಸಲೇಖ ಅವರ ಬಳಿ ಕೇಳಿದ್ದರಂತೆ, ಆಗ ಹಂಸಲೇಖ ಅವರು ಸಿನಿಮಾ ಈಗಿನ ಟ್ರೆಂಡ್ ಗೆ ತಕ್ಕ ಹಾಗೆ ಇದೆ, ನೀವು ಯೋಚನೇ ಮಾಡಬೇಡಿ ಎಂದಿದ್ದರಂತೆ. ಆಗ ಅಣ್ಣಾವ್ರು, ಸಿನಿಮಾದ ಸೋಲು ಗೆಲುವು ನಂತರದ ವಿಚಾರ, ಸಿನಿಮಾದಲ್ಲಿದ್ದ ಕೆಲವು ಅಂಶಗಳು ನನಗೆ ಇಷ್ಟವಾಗಲಿಲ್ಲ, ಅದು ನನ್ನಲ್ಲೇ ಇರಲಿ. ಅದೇ ಅಂಶಗಳು ಜನರಿಗು ಇಷ್ಟವಾಗದೆ ಹೋದರೆ ಶಿವಣ್ಣ ಕೆರಿಯರ್ ಗೆ ಹಿನ್ನಡೆಯಾಗುತ್ತದೆ ಎಂದು ಹೇಳಿದ್ದರಂತೆ, ಆಗ ಹಂಸಲೇಖ ಅವರು ಹಾಗೇನು ಆಗುವುದಿಲ್ಲ ಎಂದಿದ್ದರಂತೆ.

ಅಷ್ಟಕ್ಕೂ ಅಣ್ಣಾವ್ರಿಗೆ ರಣರಂಗ ಸಿನಿಮಾದಲ್ಲಿ ಇಷ್ಟ ಆಗದೆ ಇರುವ ಅಂಶ ಸಿನಿಮಾದ ಕಥೆ ಮತ್ತು ಸ್ವಲ್ಪ ಎಕ್ಸ್ಪೋಸಿಂಗ್ ಜಾಸ್ತಿ ಇದ್ದ ಕಾರಣ ಅಣ್ಣಾವರಿಗೆ ಇಷ್ಟ ಆಗಿರಲಿಲ್ಲ. ಇದೇ ಆತಂಕವನ್ನು ಪಾರ್ವತಮ್ಮನವರು ಮತ್ತು ವರದಪ್ಪನವರ ಬಳಿ ಸಹ ಹೇಳಿದ್ದರಂತೆ, ಆದರೆ ಪಾರ್ವತಮ್ಮನವರಿಗೂ ಮತ್ತು ವರದಪ್ಪನವರಿಗೂ ಕಥೆಯ ಮೇಲೆ ನಂಬಿಕೆ ಇತ್ತು, ಸಿನಿಮಾ ಚೆನ್ನಾಗಿದೆ, ಚೆನ್ನಾಗಿ ಓಡುತ್ತದೆ ನೀವು ಚಿಂತೆ ಮಾಡಬೇಡಿ ಎಂದು ಅಣ್ಣಾವ್ರಿಗೆ ಸಮಾಧಾನ ಮಾಡಿದ್ದರಂತೆ, ಆಗ ಅಣ್ಣಾವ್ರು ಸುಮ್ಮನಾಗಿದ್ದರಂತೆ. ಸಿನಿಮಾ ಬಿಡುಗಡೆಯಾಗಿ ಯಶಸ್ವಿಯಾಯಿತು, ಆದರೆ ಅಣ್ಣಾವ್ರಿಗೆ ಇಷ್ಟವಾಗದ ಆ ಅಂಶಗಳು ಜನರಿಗೂ ಇಷ್ಟವಾಲಿಲ್ಲ. ಅಣ್ಣಾವ್ರು ತಮ್ಮ ಮಗನ ಸಿನಿಮಾ ಆಗಿದ್ದರು, ತಮಗೆ ಇಷ್ಟ ಆಗದೆ ಇದ್ದಿದ್ದನ್ನ ಇದ್ದ ಹಾಗೆ ಹೇಳಿದ್ದು ಇಲ್ಲಿ ಅವರಲ್ಲಿ ಮೆಚ್ಚಬೇಕಾದ ಗುಣ ಆಗಿದೆ.

Comments are closed.