Neer Dose Karnataka
Take a fresh look at your lifestyle.

ಅಪ್ಪಿ ತಪ್ಪಿ ಹೃದಯಾಗಾತವಾದಾಗ ಮೊದಲು ಏನು ಮಾಡಬೇಕು ಗೊತ್ತೇ?? ಜೀವ ಉಳಿಸಿಕೊಳ್ಳುವುದು ಹೇಗೆ ಗೊತ್ತೇ??

ಈಗಿನ ಕಾಲದಲ್ಲಿ ಜನರಿಗೆ ಒತ್ತಡ, ಜೀವನಶೈಯಲ್ಲಿ ಬದಲಾವಣೆ ಇವುಗಳ ಕಾರಣದಿಂದ ಹೃದಯಾಘಾತ ಸಮಸ್ಯೆ ಹೆಚ್ಚಾಗಿ ಎದುರಾಗುತ್ತಿದೆ. ಮೊದಲಿಗೆ ವಯಸ್ಸಾದವರಿಗೆ ಮಾತ್ರ ಹೃದಯಾಘಾತ ಆಗುತ್ತಿತ್ತು, ಆದರೆ ಈಗ ಚಿಕ್ಕ ವಯಸ್ಸಿನವರಿಗೂ ಹೃದಯಾಘಾತ ಆಗುತ್ತಿರುವುದು ದುಃಖದ ವಿಚಾರ. ಹೃದಯಾಘಾತ ಸಮಸ್ಯೆ ಒಂದು ರೀತಿ ಎಲ್ಲರನ್ನು ಕಾಡುತ್ತಿದೆ. ಜೀವನ ಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳುವ ಮೂಲಕ ಹೃದಯಾಘಾತ ಕಡಿಮೆ ಆಗುವ ಹಾಗೆ ತಡೆಗಟ್ಟಬಹುದು. ಹಾಗೂ ಹೃದಯಾಘಾತ ಆದ ತಕ್ಷಣ ಏನು ಮಾಡಬೇಕು ಎಂದು ಹಲವರಿಗೆ ಗೊತ್ತಾಗುವುದಿಲ್ಲ. ಅಂತಹ ಸಮಯದಲ್ಲಿ ಏನು ಮಾಡಬೇಕು ಎಂದು ನಿಮಗೇ ಇಂದು ತಿಳಿಸುತ್ತೇವೆ..

1.ಒಬ್ಬ ವ್ಯಕ್ತಿಗೆ ಹೃದಯಾಘಾತವಾದ ತಕ್ಷಣ ಮೊದಲಿಗೆ ಒತ್ತಡ ಮಾಡಿಕೊಳ್ಳದೆ, ಮುನ್ನೆಚ್ಚರಿಕೆಯ ಕ್ರಮಗಳನ್ನು ತೆಗೆದುಕೊಳ್ಳಬೇಕು.
2.ಹೃದಯಾಘಾತ ಆದಾಗ ರೋಗಿಯನ್ನು ಮೊದಲು ಮಲಗಿಸಿ, ಆ ತಕ್ಷಣವೇ ಆಸ್ಪಿರಿನ್ ಮಾತ್ರೆಯನ್ನು ರೋಗಿಗೆ ಕೊಡಬೇಕು. ಈ ಮಾತ್ರೆ ರಕ್ತ ಹೆಪ್ಪುಗಟ್ಟುವುದನ್ನು ತಡೆಯುತ್ತದೆ. ಹಾಗೆಯೇ 15% ಅಷ್ಫು ಮರಣದ ಪ್ರಮಾಣವನ್ನು ಕಡಿಮೆ ಮಾಡುತ್ತದೆ ಎಂದು ತಜ್ಞರು ಹೇಳಿದ್ದಾರೆ.
3.ಹೃದಯಾಘಾತವಾದಾಗ ಹೃದಯದ ಬಡಿತ ಕಡಿಮೆ ಆಗಬಹುದು ಅಥವಾ ನಿಂತು ಹೋಗಬಹುದು, ಆಗ ತಕ್ಷಣವೇ ನೀವು ರೋಗಿಯ ಎದೆಯ ಮೇಲೆ ಒತ್ತುವ ಮೂಲಕ ಅವರು ಉಸಿರಾಡುವ ಹಾಗೆ ನೋಡಿಕೊಳ್ಳಬೇಕು. ಈ ತಂತ್ರಕ್ಕೆ ಸಿಪಿಆರ್ ಎಂದು ಕರೆಯುತ್ತಾರೆ.
4.ಹೀಗೆ ಮಾಡಿದರು ರೋಗಿ ಚೇತರಿಸಿಕೊಳ್ಳದೆ ಹೋದರೆ, ಕೃತಕ ಉಸಿರಾಟ ಮಾಡಬೇಕಾಗುತ್ತದೆ, ಆಗ ರೋಗಿಯ ತಲೆಯ ಕೆಳಗೆ ದಿಂಬು ಇಡಬಾರದು.

5.ನಿಮ್ಮ ಬೆರಳುಗಳನ್ನು ಬಳಸಿ, ರೋಗಿಯ ಮೂಗನ್ನು ಪಿಂಚ್ ಮಾಡಬೇಕು. ಬಳಿಕ ನಿಮ್ಮ ಬಾಯಿಯಿಂದ ಉಸಿರು ನೀಡಬೇಕು. ಮೂಗನ್ನು ಪಿಂಚ್ ಮಾಡುವುದರಿಂದ ಬಾಯಿ ಇಂದ ನೀಡುವ ಉಸಿರು ನೇರವಾಗಿ, ರೋಗಿಯ ಶ್ವಾಸಕೋಶಕ್ಕೆ ಹೋಗುತ್ತದೆ. ಈ ಸಮಯದಲ್ಲಿ ನೀವು ಆಳವಾದ ಉಸಿರು ತೆಗೆದುಕೊಳ್ಳಬಾರದ. ಜೊತೆಗೆ ಬಾಯಿಯಿಂದ ಗಾಳಿ ಹೊರಹೋಗದ ಹಾಗೆ ಎಚ್ಚರವಹಿಸಿ.
6.ಹೃದಯಾಘಾತ ಆದಾಗ, ನಿರ್ಲ್ಯಕ್ಷ ಮಾಡಬಾರದು, ಸಮಯ ಹಾಳು ಮಾಡದೆ ರೋಗಿಯನ್ನು ವೈದ್ಯರ ಬಳಿಗೆ ಕರೆದುಕೊಂಡು ಹೋಗಬೇಕು.

ಹೃದಯದ ಆರೋಗ್ಯ ಚೆನ್ನಾಗಿಡಲು ಈ ಕ್ರಮಗಳನ್ನು ಅನುಸರಿಸಿ..
*ಜೀವನ ಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳಿ. ಧೂಮಪಾನಕ್ಕೆ ಶಾಶ್ವತವಾಗಿ ಗುಡ್ ಬೈ ಹೇಳಿ..
*ಪ್ರತಿದಿನ ಕನಿಷ್ಠ 20 ನಿಮಿಷಗಳ ಕಾಲ ವ್ಯಾಯಾಮ ಮತ್ತು ಯೋಗ ಮಾಡಿ.
*ಹೃದಯದ ಆರೋಗ್ಯಕ್ಕೆ ಉಪ್ಪು ಮತ್ತು ಸಕ್ಕರೆ ತಿನ್ನುವುದನ್ನು ಕಡಿಮೆ ಮಾಡಿ, ಇದರಿಂದ ಅನೇಕ ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ. ಇದು ರಕ್ತದ ಒತ್ತಡಕ್ಕೆ ಕಾರಣವಾಗಿ ಹೃದಯಾಘಾತ ಆಗುವ ಹಾಗೆ ಮಾಡುತ್ತದೆ.

Comments are closed.