Neer Dose Karnataka
Take a fresh look at your lifestyle.

ಇನ್ನೇನು ನಡೆಯಲಿರುವ ಐಪಿಎಲ್ ಹರಾಜಿನಲ್ಲಿ ಎಲ್ಲ ತಂಡಗಳು ಮುಗಿಬಿದ್ದು ಖರೀದಿ ಮಾಡಲಿರುವ ಟಾಪ್ ಮೂವರು ಆಟಗಾರರು ಯಾರ್ಯಾರು ಗೊತ್ತೇ??

2023ರ ಐಪಿಎಲ್ ಬಿಡ್ಡಿಂಗ್ ಆಕ್ಷನ್ ಡಿಸೆಂಬರ್ ತಿಂಗಳಿನಲ್ಲಿ ನಡೆಯಲಿದೆ, ಕಳೆದ ವರ್ಷ 2 ಹೊಸ ತಂಡಗಳು ಸೇರ್ಪಡೆಯಾದ ಕಾರಣ ಮೆಗಾ ಆಕ್ಷನ್ ನಡೆದಿತ್ತು, ಆದರೆ ಈ ವರ್ಷ ಬಹುತೇಕ ತಂಡಗಳು ಪ್ಲೇಯರ್ ಗಳನ್ನು ಉಳಿಸಿಕೊಳ್ಳಲಿರುವ ಕಾರಣ, ಮಿನಿ ಆಕ್ಷನ್ ನಡೆಯಲಿದೆ. ಇದರಲ್ಲಿ ಕೆಲವು ಆಟಗಾರರು ಪಾಲ್ಗೊಳ್ಳಲಿದ್ದು, ಅವರ ಮೇಲೆ ಹಣ ಬಿಡ್ ಮಾಡಿ ತಂಡಗಳು ಕೊಂಡುಕೊಳ್ಳಲಿದೆ. ಇದುವರೆಗೂ ಐಪಿಎಲ್ ನಲ್ಲಿ ಅತಿಹೆಚ್ಚು ಹಣ ಬಿಡ್ ಮಾಡಿ ಖರೀದಿ ಮಾಡಿರುವ ಆಟಗಾರ ಕ್ರಿಸ್ ಮೋರಿಸ್, ಇವರನ್ನು 16.25 ಕೋಟಿ ರೂಪಾಯಿ ನೀಡಿ, ರಾಜಸ್ತಾನ್ ರಾಯಲ್ಸ್ ತಂಡ ಖರೀದಿ ಮಾಡಿತ್ತು. ಈ ವರ್ಷ ಇದೇ ರೀತಿ ಟಾಪ್ ಪ್ಲೇಯರ್ಸ್ ಲಿಸ್ಟ್ ನಲ್ಲಿ ಮೂವರು ಆಟಗಾರರು ಇದ್ದಾರೆ, ಎಷ್ಟು ಕೋಟಿ ಕೊಟ್ಟಾದರು ಸಹ, ಈ ಆಟಗಾರರನ್ನು ಖರೀದಿ ಮಾಡಬೇಕು ಎಂದು ತಂಡಗಳು ಕಾಯುತ್ತಿವೆ, ಆ ಆಟಗಾರರು ಯಾರ್ಯಾರು ಎಂದು ತಿಳಿಸುತ್ತೇವೆ ನೋಡಿ..

ಕೆಮೆರಾನ್ ಗ್ರೀನ್ :- ಆಸ್ಟ್ರೇಲಿಯಾ ತಂಡದ ಹೊಸ ಸೆನ್ಸೇಷನ್ ಇವರು. 23ವರ್ಷದ ಆಲ್ ರೌಂಡರ್ ಗ್ರೀನ್ ಅವರು ಈ ವರ್ಷ ವರ್ಲ್ಡ್ ಕಪ್ ಸ್ಕ್ವಾಡ್ ನಲ್ಲಿ ಇರಲಿಲ್ಲ, ಡೇವಿಡ್ ವಾರ್ನರ್ ಅವರ ಅಲಭ್ಯತೆಯ ಕಾರಣ ಇವರಿಗೆ ಅವಕಾಶ ಸಿಕ್ಕಿತು. ಸಿಕ್ಕ ಅವಕಾಶವನ್ನು ಚೆನ್ನಾಗಿ ಬಳಸಿಕೊಂಡ ಗ್ರೀನ್ ಅವರು, ಭಾರತದ ವಿರುದ್ಧದ ಪಂದ್ಯದಲ್ಲಿ ಮೊಹಾಲಿಯಲ್ಲಿ ನಡೆದ ಪಂದ್ಯದಲ್ಲಿ 30 ಬಾಲ್ ಗಳಲ್ಲಿ 61 ರನ್ ಭಾರಿಸಿದ್ದರು, ಹೈದರಾಬಾದ್ ನಲ್ಲಿ ನಡೆದ ಪಂದ್ಯದಲ್ಲಿ 21.ಎಸೆತಗಳಲ್ಲಿ 52 ರನ್ ಸಿಡಿಸಿದ್ದರು. ಯುವ ಆಟಗಾರನಾಗಿ ಬೌಲಿಂಗ್ ನಲ್ಲಿ ಸಹ ಎಲ್ಲರ ಗಮನ್ ಸೆಳೆದಿದ್ದರು. ಈ ಇನ್ನಿಂಗ್ಸ್ ನೋಡಿದ ಬಳಿಕ ಗ್ರೀನ್ ಅವರು ಐಪಿಎಲ್ ನ ಸೆನ್ಸೇಷನ್ ಆಗಿದ್ದಾರೆ. ಭಾರತ ತಂಡಗಳು ಸಹ ಇವರನ್ನು ಆಯ್ಕೆ ಮಾಡಲು ಕಾಯುತ್ತಿವೆ.

ಕ್ರಿಸ್ ಮೋರಿಸ್ :- ಇವರು ಇಂಗ್ಲೆಂಡ್ ತಂಡದ ಅದ್ಭುತವಾದ ಆಲ್ ರೌಂಡರ್ ಆಗಿದ್ದಾರೆ. ಕಳೆದ ವರ್ಷ ಇವರು ಇಂಗ್ಲೆಂಡ್ ಟೆಸ್ಟ್ ತಂಡದ ಕ್ಯಾಪ್ಟನ್ ಆಗಿ ಆಯ್ಕೆಯಾದ ಕಾರಣ, ಐಪಿಎಲ್ ಇಂದ ದೂರ ಉಳಿದಿದ್ದರು. ಆಲ್ ರೌಂಡರ್ ಆಗಿ ಇಂಗ್ಲೆಂಡ್ ಪರವಾಗಿ ಅದ್ಭುತ ಪ್ರದರ್ಶನ ನೀಡಿದ್ದಾರೆ ಕ್ರಿಸ್. 2021ರ ಐಪಿಎಲ್ ನಲ್ಲಿ ರಾಜಸ್ತಾನ್ ರಾಯಲ್ಸ್ ಪರವಾಗಿ ಕೇವಲ 1 ಪಂದ್ಯವನ್ನಾಡಿ ಇಂಜುರಿ ಆದ ಕಾರಣ ಐಪಿಎಲ್ ಇಂದ ಹೊರಬಂದಿದ್ದರು. ಪ್ರಸ್ತುತ ಮೋರಿಸ್ ಅವರು ಟಿ20 ಫಾರ್ಮೇಟ್ ಬಗ್ಗೆ ಹೆಚ್ಚು ಗಮನ ಹರಿಸುತ್ತಿದ್ದಾರೆ. ಹಾಗಾಗಿ ದೊಡ್ಡ ಮೊತ್ತವನ್ನು ಕೊಟ್ಟು ಐಪಿಎಲ್ ನಲ್ಲಿ ಇವರನ್ನು ಖರೀದಿ ಮಾಡಲು ತಂಡಗಳು ಕಾಯುತ್ತಿವೆ.

ದಾಸುನ್ ಶನಾಕ :- ಶ್ರೀಲಂಕಾ ಆಲ್ ರೌಂಡರ್ ಆಗಿರುವ ಶನಾಕ ಅವರು ಆಲ್ ರೌಂಡರ್ ಆಗಿ ಕೆಲವು ವರ್ಷಗಳಿಂದ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಗುರುತಿಸಿಕೊಂಡಿದ್ದಾರೆ. ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 2015ರಲ್ಲಿ ಎಂಟ್ರಿ ಕೊಟ್ಟರು. ಡೆತ್ ಓವರ್ ಗಳಲ್ಲಿ ಶನಾಕ ಅವರ ಸ್ಟ್ರೈಕ್ ರೇಟ್ 212 ಇದೆ. ಬೌಲಿಂಗ್ ನಲ್ಲಿ ಸಹ ಶನಾಕ ಅವರು ಉತ್ತಮವಾದ ಪ್ರದರ್ಶನ ನೀಡುತ್ತಿದ್ದಾರೆ, 2022ರಲ್ಲಿ ಸಹ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. 31 ವರ್ಷದ ಶನಾಕ ಅವರು ಸಹ ಐಪಿಎಲ್ ನಲ್ಲಿ ಮೇಜರ್ ಆಕರ್ಷಣೆ ಆಗಿರಲಿದ್ದಾರೆ.

Comments are closed.