Neer Dose Karnataka
Take a fresh look at your lifestyle.

ಕಣಗಿಲೆ ಎಲೆಯೆನ್ನು ತಿಂದರೆ ಏನಾಗುತ್ತದೆ ಗೊತ್ತೇ?? ಏನಾಗುತ್ತದೆ ಎಂದು ತಿಳಿದರೆ ಓಡೋಗಿ ತಿಂದು ಬಿಡ್ತೀರಾ. ಎಷ್ಟೆಲ್ಲ ಲಾಭ ಗೊತ್ತೇ??

ಕಣಗಿಲೆ ನಾವು ಸಾಮಾನ್ಯವಾಗಿ ನೋಡುವ ಗಿಡ, ಇದನ್ನು ನಿತ್ಯ ಕಲ್ಯಾಣಿ ಎಂದು ಸಹ ಕರೆಯುತ್ತಾರೆ. ಈ ಗಿಡದ ಎಲೆಗಳು ಮತ್ತು ಹೂವುಗಳಲ್ಲಿ ಬಹಳಷ್ಟು ಔಷಧೀಯ ಗುಣಗಳಿವೆ. ಕಣಗಿಲೆ ಎಲೆಯಿಂದ ಮತ್ತು ಹೂವಿನಲ್ಲಿ ಏನೆಲ್ಲಾ ಅಂಶಗಳಿವೆ ಮತ್ತು ಆರೋಗ್ಯಕ್ಕೆ ಹೇಗೆ ಸಹಾಯ ಮಾಡುತ್ತದೆ ಎಂದು ತಿಳಿಸುತ್ತೇವೆ.. ಕಣಗಿಲೆ ಗಿಡ ಕ್ಯಾನ್ಸರ್ ರೋಗಕ್ಕೆ ಮಾತ್ರ ಮದ್ದಲ್ಲ, ಮಧುಮೇಹವನ್ನು ತಡೆಗಟ್ಟುತ್ತದೆ. ಗಂಟಲು ನೋವು ಇದ್ದವರು ಈ ಎಲೆಗಳಿಂದ ಕಷಾಯ ತಯಾರಿಸಿ ಕುಡಿದರೆ ಗಂಟಲು ನೋವು ಮಾಯವಾಗುತ್ತದೆ, ಹಾಗು ಶ್ವಾಸಕೋಶದ ಸೋಂಕು ಮತ್ತು ಶ್ವಾಸಕೋಶದಲ್ಲಿ ಹರಡುವ ಲೋಳೆಯ ಶೇಖರಣೆ ಇಂದ ಮುಕ್ತಿ ಪಡೆಯುತ್ತೀರಿ.

ಇಷ್ಟೇ ಅಲ್ಲದೆ, ಚರ್ಮದಲ್ಲಿನ ಸೋಂಕು, ಕಣ್ಣಿನ ಕೆರಳಿಕೆ ಇಂಥಹ ಅನೇಕ ಆರೋಗ್ಯ ಸಮಸ್ಯೆಗಳಿಗೆ ಚಿಕಿತ್ಸೆಯಾಗಿ ಈ ಗಿಡವನ್ನು ಬಳಸಲಾಗುತ್ತದೆ. ಹಲವರು ಈ ಗಿಡದ ಎಲೆಗಳನ್ನು ಹಸಿಯಾಗಿ ತಿನ್ನುತ್ತಾರೆ. ಇನ್ನು ಕೆಲವರು, ಎಲೆಗಳನ್ನು ನೀರಿನಲ್ಲಿ ಕುದಿಸಿ, ಸೋಸಿ ಆ ನೀರನ್ನು ಸೇವಿಸುತ್ತಾರೆ. ಈ ಗಿಡ ಹೂವು ಮತ್ತು ಎಲೆಯ ರಸ ಸೇವಿಸಬಹುದು. ಇದು ಮಾರುಕಟ್ಟೆಯಲ್ಲಿ ಪುಡಿಯ ರೂಪದಲ್ಲಿ ಸಹ ಸಿಗುತ್ತದೆ. ಇದನ್ನು ನೀರಿನಲ್ಲಿ ಬೆರೆಸಿ ಕುದಿಸಿ ಸೇವಿಸುವುದರಿಂದ ಅನೇಕ ರೀತಿಯ ಆರೋಗ್ಯ ಸಮಸ್ಯೆಗಳು ದೂರವಾಗುತ್ತದೆ. ಮಧುಮೇಹ ಚಿಕಿತ್ಸೆಯಲ್ಲಿ ಇದನ್ನು ಬಳಸಲಾಗುತ್ತದೆ, ಈ ಗಿಡಕ್ಕೆ ದೇಹದಲ್ಲಿ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುವ ಗುಣ ಇದೆ. ಈ ಗಿಡವು ಮೇದೋಜೀರಿಕ ಗ್ರಂಥಿಯ ಬೀಟಾ ಕೋಶಗಳಿಗೆ ಶಕ್ತಿ ನೀಡುತ್ತದೆ, ಇದರಿಂದ ಇನ್ಸುಲಿನ್ ಉತ್ಪಾದನೆ ಹೆಚ್ಚಾಗುತ್ತದೆ.

ಈ ಗಿಡವು ಶ್ವಾಸಕೋಶದ ಸಮಸ್ಯೆಗಳಾದ ಬ್ರಾಂಖೈಟಿಸ್, ಸಿಒಪಿಡಿ, ಅಸ್ತಮಾ, ಕೆಮ್ಮು, ಶೀತ, ಇಂಥಹ ಆರೋಗ್ಯ ಸಮಸ್ಯೆಗಳಿಗೆ ಚಿಕಿತ್ಸೆ ಒದಗಿಸುತ್ತದೆ. ಉಸಿರಾಟದ ಸ್ಥಳದಲ್ಲಿ ಇರುವ ಸೋಂಕು ಅಥವಾ ಲೋಳೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಹಾಗೂ ಕೆಮ್ಮು ಗಂಟಲು ನೋವನ್ನು ಸರಿ ಮಾಡುತ್ತದೆ..ಈ ಗಿಡದಲ್ಲಿ ಅಜ್ಮಲಿನ್ ಮತ್ತು ಸರ್ಪಲಿನ್ ಅಂಶಗಳು ಕಾಣಸಿಗುತ್ತದೆ. ಈ ಗುಣಗಳು ರಕ್ತದ ಒತ್ತಡವನ್ನು ಕಡಿಮೆ ಮಾಡುತ್ತದೆ. ಇದನ್ನು ಬೇರೆ ಇಟ್ಟು, ಚೆನ್ನಾಗಿ ತೊಳೆದು, ಬೆಳಗ್ಗೆ ಜಗಿದು ತಿನ್ನುವುದರಿಂದ ರಕ್ತದಲ್ಲಿನ ಒತ್ತಡಕ್ಕೆ ಉಪಶಮನ ನೀಡುತ್ತದೆ. ಹಲವು ಆರೋಗ್ಯ ಸಮಸ್ಯೆಗಳು ಶುರುವಾಗುವುದು ಹೊಟ್ಟೆಯಿಂದ, ಮಲಬದ್ಧತೆ ಅಥವಾ ಬೇರೆ ಹೊಟ್ಟೆಯ ಸಂಬಂಧಿತ ಖಾಯಿಲೆಗಳಿಗೂ ಈ ಸಸ್ಯ ಉಪಯುಕ್ತವಾಗಿ ಸಹಾಯ ಮಾಡುತ್ತದೆ.

Comments are closed.