Neer Dose Karnataka
Take a fresh look at your lifestyle.

ಬಿಗ್ ಬಾಸ್ ಮನೆಯಿಂದ ಹೊರ ಬಂದಿರುವ ನವಾಜ್ ರವರಿಗೆ ಕೊಟ್ಟ ಹಣ ಎಷ್ಟು ಗೊತ್ತೇ?? ನವಾಜ್ ಕಷ್ಟ ಕಡಿಮೆಯಾಯಿತು.

190

ಬಿಗ್ ಬಾಸ್ ಕನ್ನಡ ಸೀಸನ್ 9ರಲ್ಲಿ ಎರಡನೇ ವಾರ ಮನೆಯಿಂದ ಎಲಿಮಿನೇಟ್ ಆಗಿರುವ ಸ್ಪರ್ಧಿ ಸೈಕ್ ನವಾಜ್. 19 ವರ್ಷದ ಈ ಹುಡುಗ ಕಳೆದ ಕೆಲವು ದಿನಗಳಿಂದ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದ್ದನು. ಪ್ರತಿ ವಾರ ಕನ್ನಡ ಸಿನಿಮಾಗಳನ್ನು ನೋಡಿ, ತನ್ನದೇ ಆದ ಶೈಲಿಯಲ್ಲಿ ಪ್ರಾಸಬದ್ಧವಾಗಿ, ಒನ್ ಲೈನರ್ ಗಳ ಮೂಲಕ ರಿವ್ಯೂ ಹೇಳುತ್ತಿದ್ದ ಹುಡುಗ ನವಾಜ್, ಇದರಿಂದಾಗಿ ನಟ ಧನಂಜಯ್, ಹಿರಿಯನಟ ಜಗ್ಗೇಶ್ ಅವರು ಸೇರಿದಂತೆ ಸ್ಯಾಂಡಲ್ ವುಡ್ ಕಲಾವಿದರಿಂದ ಮೆಚ್ಚುಗೆ ಪಡೆದುಕೊಂಡಿದ್ದರು. ಅಷ್ಟೇ ಅಲ್ಲದೆ, ಕೆಲವು ಜನರು ಕೂಡ ಇವರ ರಿವ್ಯೂ ಕೇಳಲು ಕಾಯುತ್ತಿದ್ದರು.

ಇದರಿಂದಲೇ ಸೋಷಿಯಲ್ ಮೀಡಿಯಾದಲ್ಲಿ ಸಹ ಒಂದಷ್ಟು ಫಾಲೋವರ್ಸ್ ಗಳಿಸಿದ ನವಾಜ್ ಗೆ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡುವ ಅವಕಾಶ ಸಿಕ್ಕಿದೆ. ಆದರೆ ಹೊರಗಿದ್ದ ನವಾಜ್ ಹವಾ ಬಿಗ್ ಬಾಸ್ ಮನೆಯೊಳಗೆ ನಡೆಯಲಿಲ್ಲ, ಮೊದಲ ವಾರ ಯಾರೊಂದಿಗೂ ಹೆಚ್ಚು ಬೆರೆಯಲಿಲ್ಲ ನವಾಜ್, ಜೋಡಿ ಟಾಸ್ಕ್ ನಲ್ಲಿ ಅರುಣ್ ಸಾಗರ್ ಅವರೊಡನೆ ಇದ್ದ ಕಾರಣ ಅವರ ಜೊತೆಯಲ್ಲೇ ಹೆಚ್ಚು ಬೆರೆತಿದ್ದರು, ಬೇರೆ ಸ್ಪರ್ಧಿಗಳ ಜೊತೆಗೆ ಹೆಚ್ಚು ಮಿಂಗಲ್ ಆಗಿರಲಿಲ್ಲ. ಆಗಾಗ ತೂಕಡಿಸಿ ಎದ್ದೇಳು ಮಂಜುನಾಥ ಹಾಡನ್ನು ಸಹ ಹಾಕಿಸಿಕೊಂಡಿದ್ದಿದೆ ನವಾಜ್. ಅಷ್ಟೇ ಅಲ್ಲದೆ, ನವಾಜ್ ಅವರಿಗೆ ಬೈಕರ್ ಐಶ್ವರ್ಯ ಪಿಸ್ಸೇ ಅವರ ಜೊತೆಗೆ ಲವ್ ಆಗಿತ್ತು. ಐಶ್ವರ್ಯ ಅವರಿಗೆ ಹಾಲಿವುಡ್ ಹೀರೋಯಿನ್ ಥರ ಇದ್ದೀರಾ ಎಂದು ಪ್ರೊಪೋಸ್ ಸಹ ಮಾಡಿದ್ದರು ನವಾಜ್.

ಆದರೆ ಮನೆಯೊಳಗಿದ್ದ ಎರಡು ವಾರಗಳು ಸಹ ನವಾಜ್ ಅವರು ಟಾಸ್ಕ್ ನಲ್ಲಿ ಹಿಂದೆ ಬಿದ್ದರು, ಮೊದಲ ವಾರ ಅರುಣ್ ಸಾಗರ್ ಅವರ ಜೊತೆಗೆ ಜೋಡಿ ಟಾಸ್ಕ್ ಆಡುವ ಅವಕಾಶ ಸಿಕ್ಕಾಗ, ನವಾಜ್ ಅವರು ಸರಿಯಾಗಿ ಆಡಲಿಲ್ಲ, ಎರಡನೇ ದೀಪಿಕಾ ದಾಸ್ ಅವರ ತಂಡದಲ್ಲಿದ್ದ ನವಾಜ್ ಗೆ ಟಾಸ್ಕ್ ಗಳಲ್ಲಿ ಆಡಲು ಉತ್ತಮವಾದ ಅವಕಾಶಗಳು ಸಿಗಲಿಲ್ಲ. ಟಾಸ್ಕ್ ಗಳಲ್ಲಿ ಚೆನ್ನಾಗಿ ಆಡದ ಕಾರಣ ಮತ್ತು ಮನೆಯ ಸ್ಪರ್ಧಿಗಳ ಜೊತೆಗೆ ಚೆನ್ನಾಗಿ ಬೆರೆಯಾದ ಕಾರಣ ನವಾಜ್ ಅವರು ಎರಡನೇ ವಾರ ಮನೆಯಿಂದ ಎಲಿಮಿನೇಟ್ ಆಗಿದ್ದಾರೆ. ಇನ್ನು ಈ ಎರಡು ವಾರಗಳ ಕಾಲ ನವಾಜ್ ಬಿಗ್ ಬಾಸ್ ಮನೆಯಲ್ಲಿ ಇದ್ದಿದ್ದಕ್ಕೆ ಅವರಿಗೆ ನೀಡಿದ ಸಂಭಾವನೆ ಎಷ್ಟು ಎನ್ನುವ ಚರ್ಚೆ ನಡೆಯುತ್ತಿದ್ದು, ಸಧ್ಯಕ್ಕೆ ಸಿಕ್ಕಿರುವ ಮಾಹಿತಿ ಪ್ರಕಾರ, ನವಾಜ್ ಅವರಿಗೆ 1 ಲಕ್ಷ ರೂಪಾಯಿ ನೀಡಲಾಗಿದೆ.

Leave A Reply

Your email address will not be published.