Neer Dose Karnataka
Take a fresh look at your lifestyle.

ಮನೆ ಮಾರಿ ಕಷ್ಟದಲ್ಲಿರುವ ರವಿಚಂದ್ರನ್ ಕತೆ ಇನ್ನು ಮುಗೀತು ಅಂದವರಿಗೆ ರವಿಚಂದ್ರನ್ ಖಡಕ್ ವಾರ್ನಿಂಗ್. ಹೇಳಿದ್ದೇನು ಗೊತ್ತೇ??

76

ಕ್ರೇಜಿಸ್ಟಾರ್ ರವಿಚಂದ್ರನ್ ಇವರು ಕನ್ನಡ ಚಿತ್ರರಂಗದ ಮಾಂತ್ರಿಕ ಎಂದರೆ ತಪ್ಪಾಗುವುದಿಲ್ಲ. ಇವರು ಕನ್ನಡ ಚಿತ್ರರಂಗಕ್ಕೆ ನೀಡಿದ ಕೊಡುಗೆ ಅಪಾರ, ಇಂದಿಗೂ ರವಿಚಂದ್ರನ್ ಅವರ ಹಳೆಯ ಸಿನಿಮಾಗಳನ್ನು ಕನ್ನಡ ಸಿನಿಪ್ರಿಯರು ಬಹಳ ಇಷ್ಟಪಟ್ಟು ನೋಡುತ್ತಾರೆ. ಪ್ರೇಮಲೋಕ, ರಣಧೀರ ಅಂತಹ ಸಿನಿಮಾಗಳಿಗೆ ಇಂದು ಕೂಡ ಬೇರೆ ಯಾವುದೇ ಸಿನಿಮಾ ಪೈಪೋಟಿ ಕೊಟ್ಟು ಗೆಲ್ಲಲು ಸಾಧ್ಯವಿಲ್ಲ, ಅಂತಹ ರವಿಚಂದ್ರನ್ ಅವರ ಬಗ್ಗೆ ಇಂದು ಹಲವರು ಹಲವು ರೀತಿಯ ಮಾತುಗಳನ್ನಾಡುತ್ತಿದ್ದಾರೆ, ರವಿಚಂದ್ರನ್ ಅವರ ಕಥೆ ಮುಗೀತು, ಅವರ ಸಿನಿಮಾಗಳು ಓಡುತ್ತಾ ಇಲ್ಲ ಎಂದು ಹಲವರು ಮಾತನಾಡಿಕೊಳ್ಳುತ್ತಿದ್ದರು. ಅಂಥವರಿಗೆಲ್ಲ ರವಿಚಂದ್ರನ್ ಅವರು ಈಗ ಖಡಕ್ ಉತ್ತರ ನೀಡಿದ್ದಾರೆ.

“ಮೊದಲೆಲ್ಲಾ ಜನರು ನನ್ನ ಸಿನಿಮಾ ನೋಡಲು ಥಿಯೇಟರ್ ಗೆ ನುಗ್ಗಿ ಬರುತ್ತಿದ್ದರು. ಈಗ ಜನರು ನನ್ನ ಸಿನಿಮಾ ನೋಡೋದಕ್ಕೆ ಬರ್ತಾ ಇಲ್ಲ. ನನಗೆ ಬೇಜಾರಾಗ್ತಾ ಇರೋದು ನಾನು ಸೋತೆ ಅಂತ ಅಲ್ಲ, ಜನರು ನನ್ನ ಸಿನಿಮಾ ಇಷ್ಟಪಡುವ ಹಾಗೆ ಮಾಡೋದಕ್ಕೆ ನನಗೆ ಸಾಧ್ಯ ಆಗ್ತಿಲ್ಲ ಅಂತ ಬೇಸರ. ಈ ಒಂದು ತಿಂಗಳಲ್ಲಿ ತುಂಬಾ ನೊಂದಿದ್ದೀನಿ. ತುಂಬಾ ಕಳ್ಕೊಂಡಿದ್ದೀನಿ, ಕಳ್ಕೊಂಡಿರೋದಕ್ಕೆ ನನಗೆ ಬೇಸರ ಇಲ್ಲ. ಅದನ್ನ ಹೇಗೆ ಪಡೆದುಕೊಳ್ಳಬೇಕು ಅಂತ ನನಗೆ ಗೊತ್ತಿದೆ. ಜನರು ಮತ್ತೆ ನನ್ನ ಸಿನಿಮಾ ನೋಡಲು ಬರುವ ಹಾಗೆ ಮಾಡುತ್ತೇನೆ, ನನಗೆ ಇಷ್ಟ ಆಗುವಂತಹ ಸಿನಿಮಾ ಮಾಡಿ ಜನರಿಗೂ ಅದು ಇಷ್ಟ ಆಗುವ ಹಾಗೆ ಮಾಡುತ್ತೇನೆ. ನನಗೆ ಯಾರು ಕಾಂಪಿಟೇಟರ್ ಇಲ್ಲ, ನನಗೆ ನಾನೇ ಕಾಂಪಿಟೇಟರ್. ನನ್ನನ್ನ ನಾನು ಗೆಲ್ಲೋದಕ್ಕೆ ಆಗ್ತಾ ಇಲ್ಲ.

ಎಲ್ಲರೂ ರವಿಚಂದ್ರನ್ ಎಲ್ಲಾ ವೇದಿಕೆಗಳಲ್ಲೂ ಪ್ರೇಮಕೋಕ ರಣಧೀರ ಅಂತ ಮಾತಾಡ್ತಾರೆ ಅದರಿಂದ ಹೊರಬಂದಿಲ್ಲ ಅಂತ ಹೇಳ್ತಾರೆ. ನಮ್ಮ ಅಪ್ಪ ಅಮ್ಮನನ್ನ ಮರೆಯೋದಕ್ಕೆ ಆಗುತ್ತಾ, ಅಪ್ಪ ಅಮ್ಮನನ್ನ ನಾವು ಬಿಡ್ತಿವಾ. ಆ ಸಿನಿಮಾಗಳು ನನಗೆ ಅದೇ ರೀತಿ. ಆ ಸಿನಿಮಾಗಳ ಹಾಡಿಗೆ ಇವತ್ತಿಗೂ ಡ್ಯಾನ್ಸ್ ಮಾಡ್ತೀರಾ.. ಅಂದಮೇಲೆ ಆ ಸಿನಿಮಾಗಳ ಇಂಪ್ಯಾಕ್ಟ್ ಹೇಗಿದೆ ಎಂದು ಅರ್ಥ ಮಾಡಿಕೊಳ್ಳಿ. ಆ ಸಿನಿಮಾಗಳ ಬಗ್ಗೆ ನಾನು ಮಾತಾಡ್ತಾನೆ ಇರ್ತೀನಿ..ಈಗಲ್ಲಾ ಮುಂದೆ ಕೂಡ ಮಾತಾಡ್ತಾನೆ ಇರ್ತೀನಿ..”ಎನ್ನುತ್ತಾರೆ ಕ್ರೇಜಿಸ್ಟಾರ್. ನಮ್ಮ ಜನರು ಕನ್ನಡಕ್ಕೆ ದೊಡ್ಡ ಮಟ್ಟದ ಕೊಡುಗೆ ನೀಡಿರುವ ಈ ಕಲಾವಿದನನ್ನು ಮರೆಯಬಾರದು, ಅದೇ ರೀತಿ ರವಿಚಂದ್ರನ್ ಅವರು ತಾವು ಆಯ್ಕೆ ಮಾಡಿಕೊಳ್ಳುತ್ತಿರುವ ಕಥೆ ಮತ್ತು ಚಿತ್ರ ಕಥೆಯ ಬಗ್ಗೆ ಮರು ಆಲೋಚನೆ ಮಾಡಿ ಬದಲಾವಣೆ ಮಾಡಿಕೊಳ್ಳಬೇಕು. ಜನರು ಸಹ ರವಿಚಂದ್ರನ್ ಅವರನ್ನು ನೋಡುವ ರೀತಿ ಬದಲಾಯಿಸಿ, ಅವರ ಸಿನಿಮಾಗಳಿಗೆ ಪ್ರೋತ್ಸಾಹ ನೀಡಬೇಕು.

Leave A Reply

Your email address will not be published.