Neer Dose Karnataka
Take a fresh look at your lifestyle.

ಕೇವಲ KGF ಗೆ 5 ವರ್ಷ ಮುಡಿಪಾಗಿಟ್ಟು ನಟನೆ ಮಾಡಿದ ಶ್ರೀ ಶೆಟ್ಟಿ ರವರ ನಿಜವಾದ ವಯಸ್ಸು ಅಷ್ಟು ಗೊತ್ತೇ?? ಇಷ್ಟೊಂದು ವಯಸ್ಸಿಗಿದ್ಯಾ??

ಕೆಜಿಎಫ್ ಚಾಪ್ಟರ್1 ಮತ್ತು ಕೆಜಿಎಫ್ ಚಾಪ್ಟರ್2 ಮೂಲಕ ಪ್ರಸ್ತುತ ಎಲ್ಲಾ ಹುಡುಗರ ಕ್ರಶ್ ಆಗಿರುವವವರು ಶ್ರೀನಿಧಿ ಶೆಟ್ಟಿ. ಅದರಲ್ಲೂ ಕೆಜಿಎಫ್ ಚಾಪ್ಟರ್2 ನಲ್ಲಿ ಶ್ರೀನಿಧಿ ಮತ್ತು ಯಶ್ ಅವರ ಸನ್ನಿವೇಶಗಳನ್ನು ನೋಡಿ, ವೀಕ್ಷಕರು ಮನಸೋತಿದ್ದಾರೆ. ಕೆಜಿಎಫ್ ಮೂಲಕ ಎಲ್ಲಾ ಭಾಷೆಗಳಲ್ಲೂ ಜನಪ್ರಿಯತೆ ಗಳಿಸಿಕೊಂಡಿದ್ದಾರೆ. ಶ್ರೀನಿಧಿ ಅವರು ಹುಟ್ಟಿದ್ದು ಮಂಗಳೂರಿನಲ್ಲಿ. ಶ್ರೀ ನಾರಾಯಣ್ ಗುರು ಇಂಗ್ಲೀಷ್ ಮೀಡಿಯಂ ಸ್ಕೂಲ್ ನಲ್ಲಿ ಶಾಲಾ ಶಿಕ್ಷಣ ಮುಗಿಸಿದರು ಶ್ರೀನಿಧಿ, ಬೆಂಗಳೂರಿನ ಜೈನ್ ಯೂನಿವರ್ಸಿಟಿಯಲ್ಲಿ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ನಲ್ಲಿ ಪದವಿ ಪಡೆದಿದ್ದಾರೆ. 2012 ರಲ್ಲಿ ಕ್ಲೀನ್ ಅಂಡ್ ಕ್ಲಿಯರ್ ಸಂಸ್ಥೆಯ ಅಯೋಜಿಸಿದ್ದ ಕಾಂಪಿಟೇಶನ್ ನಲ್ಲಿ ಟಾಪ್ 5 ಫೈನಲಿಸ್ಟ್ ಗಳಲ್ಲಿ ಇವರು ಸಹ ಒಬ್ಬರಾಗಿದ್ದರು.

2015ರಲ್ಲಿ ಮನಪುರಂ ಮಿಸ್ ಸೌತ್ ಇಂಡಿಯಾದಲ್ಲಿ ಪಾರ್ಟಿಸಿಪೇಟ್ ಮಾಡಿದ್ದರು. ಮಿಸ್ ಕರ್ನಾಟಕ ಮತ್ತು ಮಿಸ್ ಬ್ಯೂಟಿಫುಲ್ ಸ್ಮೈಲ್ ಟೈಟಲ್ ಅನ್ನು ಮುಡಿಗೇರಿಸಿಕೊಂಡರು. ಆಕ್ಸೆಂಚರ್ ನಲ್ಲಿ ಕೆಲಸ ಮಾಡುತ್ತಾ, ಮಾಡೆಲಿಂಗ್ ಸಹ ಮಾಡುತ್ತಿದ್ದರು. 2016ರಲ್ಲಿ ಮಿಸ್ ದಿವಾ ಪೆಜೇಂಟ್ ನಲ್ಲಿ ಸಹ ಪಾರ್ಟಿಸಿಪೇಟ್ ಮಾಡಿದ್ದರು ಶ್ರೀನಿಧಿ, ಇದರಲ್ಲಿ ಫೈನಲಿಸ್ಟ್ ಆಗಿದ್ದರು. ಮಿಸ್ ಸುಪ್ರನ್ಯಾಶನಲ್ 2016 ಪಟ್ಟ ಅಲಂಕರಿಸಿದರು. ಇದಾದ ಬಳಿಕ ಶ್ರೀನಿಧಿ ಶೆಟ್ಟಿ ಅವರಿಗೆ ಸಿನಿಮಾಗಳಲ್ಲಿ ನಟಿಸಲು ಆಫರ್ ಗಳು ಬರಲು ಶುರುವಾದವು. ಶ್ರೀನಿಧಿ ಅವರು ಕೆಜಿಎಫ್ ಚಾಪ್ಟರ್1 ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಮೊದಲ ಸಿನಿಮಾ ಸೂಪರ್ ಹಿಟ್ ಆಗಿ, ಪ್ಯಾನ್ ಇಂಡಿಯಾ ಸಿನಿಮಾ ಆಗಿದ್ದರಿಂದ ಶ್ರೀನಿಧಿ ಅವರಿಗೆ ಅವಕಾಶಗಳ ಮೇಲೆ ಅವಕಾಶಗಳು ಬರಲು ಶುರುವಾದವು.

ಕೆಜಿಎಫ್ ಚಾಪ್ಟರ್2 ಬಿಡುಗಡೆಯಾಗಿ ಶ್ರೀನಿಧಿ ಅವರಿಗೆ ಇನ್ನಷ್ಟು ಯಶಸ್ಸು ಸಿಕ್ಕಿತು. ತಮಿಳಿನಲ್ಲಿ ಶ್ರೀನಿಧಿ ಶೆಟ್ಟಿ ಅಭಿನಯ ಕೋಬ್ರಾ ಸಿನಿಮಾ ಇತ್ತೀಚೆಗೆ ಬಿಡುಗಡೆಯಾಗಿ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿತು. ಶ್ರೀನಿಧಿ ಶೆಟ್ಟಿ ಅವರ ಮುಂದಿನ ಸಿನಿಮಾ ಯಾವುದು ಎನ್ನುವ ಬಗ್ಗೆ ಇನ್ನು ಗುಟ್ಟು ಬಿಟ್ಟುಕೊಟ್ಟಿಲ್ಲ. ಶ್ರೀನಿಧಿ ಅವರು ಹೆಚ್ಚು ಸಂಭಾವನೆ ಡಿಮ್ಯಾಂಡ್ ಮಾಡುತ್ತಿದ್ದಾರೆ ಎನ್ನುವ ಕಾರಣಕ್ಕೆ ಅವರಿಗೆ ಹೆಚ್ಚು ಅವಕಾಶಗಳು ಸಿಗುತ್ತಿಲ್ಲ ಎಂದು ಸಹ ಹೇಳಲಾಗುತ್ತಿದೆ. ಒಟ್ಟಿನಲ್ಲಿ ಕೆಜಿಎಫ್ ಚಾಪ್ಟರ್1 ಮತ್ತು ಕೆಜಿಎಫ್ ಚಾಪ್ಟರ್ 2 ಗಾಗಿ 5 ವರ್ಷಗಳ ಕಾಲ ಮುಡಿಪಾಗಿಟ್ಟ ಶ್ರೀನಿಧಿ ಶೆಟ್ಟಿ ಅವರಿಗೆ ಈಗ 29 ವರ್ಷ ವಯಸ್ಸು. ನೋಡಲು 20ರ ಹರೆಯದ ಹುಡುಗಿಯ ಹಾಗೆ ಕಾಣುವ ಶ್ರೀನಿಧಿ ಅವರು 30 ಆಸುಪಾಸಿನಲ್ಲಿರುವುದು ಅಭಿಮಾನಿಗಳಿಗೆ ಶಾಕಿಂಗ್ ಆಗಿದೆ.

Comments are closed.