Neer Dose Karnataka
Take a fresh look at your lifestyle.

ಅಪ್ಪು ರವರನ್ನು ಫಿಲಂ ಫೇರ್ ಅವಾರ್ಡ್ಸ್ ನಲ್ಲಿ ಮೀರಿಸಿರುವ ಏಕೈಕ ನಟ ಯಾರು ಗೊತ್ತೇ?? ತಿಳಿದರೆ ಸ್ವರ್ಗದಿಂದಲೇ ಅಪ್ಪು ಕೂಡ ಹೆಮ್ಮೆ ಪಡುತ್ತಾರೆ. ಟಾಪ್ 5 ಯಾರು ಗೊತ್ತೇ??

ಫಿಲ್ಮ್ ಫೇರ್ ಅವಾರ್ಡ್ಸ್ ಇದು ಚಿತ್ರರಂಗದಲ್ಲಿ ಸಾಧನೆ ಮಾಡಿದವರಿಗೆ ನೀಡಲಾಗುವ ಪ್ರಮುಖ ಅವಾರ್ಡ್ ಗಳಲ್ಲಿ ಒಂದು. ಫಿಲ್ಮ್ ಫೇರ್ ಶುರುವಾಗಿದ್ದು, 1954 ರಲ್ಲಿ, ಮೊದಲಿಗೆ ಎಲ್ಲಾ ಚಿತ್ರರಂಗದವರಿಗೂ ಒಟ್ಟಾಗಿ ಫಿಲ್ಮ್ ಫೇರ್ ಪ್ರಸಶಸ್ತಿಗಳನ್ನು ನೀಡಲಾಗುತ್ತಿತ್ತು, 1963 ರಿಂದ ದಕ್ಷಿಣ ಭಾರತ ಚಿತ್ರರಂಗಕ್ಕಾಗಿ ಫಿಲ್ಮ್ ಫೇರ್ ಅವಾರ್ಡ್ಸ್ ಸೌತ್ ಎಂದು ಪ್ರತ್ಯೇಕವಾಗಿ ಮಾಡಲಾಯಿತು. 1954 ರಲ್ಲಿ ತಮಿಳು, ತೆಲುಗು, ಬೆಂಗಾಲಿ ಮತ್ತು ಮರಾಠಿ ಭಾಷೆಯ ಸಿನಿಮಾಗಳಿಗೆ ಮಾತ್ರ ಫಿಲ್ಮ್ ಫೇರ್ ಪ್ರಶಸ್ತಿ ನೀಡುತ್ತಿದ್ದರು.

1963 ರಿಂದ ಮಲಯಾಳಂ ಭಾಷೆಯ ಸಿನಿಮಾಗಳಿಗೂ ಫಿಲ್ಮ್ ಫೇರ್ ಅವಾರ್ಸ್ ನೀಡಲು ಶುರು ಮಾಡಿದರು. 1967 ರಿಂದ ಕನ್ನಡ ಚಿತ್ರರಂಗದ ಸಿನಿಮಾಗಳಿಗೆ ಫಿಲ್ಮ್ ಫೇರ್ ಅವಾರ್ಡ್ಸ್ ನೀಡಲು ಶುರು ಮಾಡಲಾಯಿತು. 1967 ರಿಂದ ಫಿಲ್ಮ್ ಫೇರ್ ಅವಾರ್ಡ್ಸ್ ಸೌತ್ ನಲ್ಲಿ ಕನ್ನಡ, ತಮಿಳು, ತೆಲುಗು ಮತ್ತು ಮಲಯಾಳಂ ಸಿನಿಮಾಗಳಿಗೆ ಅವಾರ್ಡ್ ಗಳನ್ನು ನೀಡಲು ಶುರು ಮಾಡಿದರು. ಆಗಿನಿಂದ ಈಗಿನವರೆಗೂ, ಫಿಲ್ಮ್ ಫೇರ್ 67 ವರ್ಷಗಳ ಜರ್ನಿಯಲ್ಲಿ ಈ ವರ್ಷವೇ ಮೊದಲ ಸಾರಿ ಬೆಂಗಳೂರಿನಲ್ಲಿ ಫಿಲ್ಮ್ ಫೇರ್ ಅವಾರ್ಡ್ಸ್ ಕಾರ್ಯಕ್ರಮ ನಡೆಯಿತು.

ಬೆಂಗಳೂರಿಗೆ ಇಡೀ ದಕ್ಷಿಣ ಭಾರತ ಚಿತ್ರರಂಗ ಬಂದಿತ್ತು, ಎಲ್ಲರೂ ಕನ್ನಡ ಸಿನಿಮಾಗಳನ್ನು ಹೊಗಳಿದರು. ನಮ್ಮ ಕನ್ನಡ ಚಿತ್ರರಂಗ ಈಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದೆ. ಈ ಫಿಲ್ಮ್ ಫೇರ್ ನಲ್ಲಿ ಹಲವು ಬಾರಿ ಪ್ರಶಸ್ತಿಗಳನ್ನು ಪಡೆದುಕೊಂಡ ಕಲಾವಿದದ್ದಾರೆ, ತಮಿಳಿನಲ್ಲಿ ಎ.ಆರ್.ರೆಹಮಾನ್ ಅವರು ಸಂಗೀತ ನಿರ್ದೇಶನಕ್ಕೆ 17 ಫಿಲ್ಮ್ ಫೇರ್ ಅವಾರ್ಡ್ಸ್ ಪಡೆದಿದ್ದಾರೆ. ನಟ ಕಮಲ್ ಹಾಸನ್ ಅವರು 16 ಬಾರಿ ಫಿಲ್ಮ್ ಫೇರ್ ಅವಾರ್ಡ್ಸ್ ಪಡೆದಿದ್ದು, ಮಲಯಾಳಂ ನಲ್ಲಿ ನಟ ಮಮ್ಮೂಟಿ ಅವರು 12 ಬಾರಿ ಫಿಲ್ಮ್ ಫೇರ್ ಅವಾರ್ಡ್ ಪಡೆದಿದ್ದಾರೆ.

ಈ ರೀತಿ ನಮ್ಮ ಕನ್ನಡ ಚಿತ್ರರಂಗದಲ್ಲಿ ಅತಿ ಹೆಚ್ಚು ಫಿಲ್ಮ್ ಫೇರ್ ಅವಾರ್ಡ್ಸ್ ಪ್ರಶಸ್ತಿ ಪಡೆದ ಟಾಪ್ 5 ಗಣ್ಯರು ಯಾರ್ಯಾರು ಗೊತ್ತಾ? ತಿಳಿಸುತ್ತೇವೆ ನೋಡಿ…
5ನೇ ಸ್ಥಾನದಲ್ಲಿ ಇರುವವರು ಹಿರಿಯನಟ ಲೋಕೇಶ್, ನಟ ರಮೇಶ್ ಅರವಿಂದ್, ನಟ ಪ್ರೇಮ್, ನಟ ಯಶ್ ಮತ್ತು ನಟ ಗಣೇಶ್, ಈ ಐವರು ಸಹ 2 ಬಾರಿ ಫಿಲ್ಮ್ ಫೇರ್ ಅವಾರ್ಡ್ ಪಡೆದು ಐದನೇ ಸ್ತಾನದಲ್ಲಿದ್ದಾರೆ. ಈ ಕಲಾವಿದರು ಕನ್ನಡದ ಮೇರು ನಟರಾಗಿದ್ದಾರೆ.

4ನೇ ಸ್ಥಾನದಲ್ಲಿ ಇರುವವರು ಕಿಚ್ಚ ಸುದೀಪ್ ಅವರು, ಸುದೀಪ್ ಅವರು ಕೂರಿ ಸಾರಿ ಫಿಲ್ಮ್ ಫೇರ್ ಅವಾರ್ಡ್ಸ್ ಪಡೆದಿದ್ದಾರೆ. 2001 ರಲ್ಲಿ ಹುಚ್ಚ ಸಿನಿಮಾಗಾಗು, 2002 ರಲ್ಲಿ ನಂದಿ ಸಿನಿಮಾಗಾಗಿ, 2003 ರಲ್ಲಿ ಸ್ವಾತಿ ಸಿನಿಮಾ ಅಭಿನಯಕ್ಕೆ ಸುದೀಪ್ ಅವರು ಮೂರು ಸಾರಿ ಫಿಲ್ಮ್ ಫೇರ್ ಅವಾರ್ಡ್ ಗೆದ್ದಿದ್ದಾರೆ. ಅಷ್ಟೇ ಅಲ್ಲದೆ ಈಗ ಸಿನಿಮಾ ಅಭಿನಯಕ್ಕೆ ಸುದೀಪ್ ಅವರಿಗೆ ತೆಲುಗಿನಲ್ಲಿ ಫಿಲ್ಮ್ ಫೇರ್ ಅವಾರ್ಡ್ ಲಾಬಿಗಿಸಿತ್ತು.

3ನೇ ಸ್ಥಾನದಲ್ಲಿ ಇರುವವರು, ಸಾಹಸಸಿಂಹ ವಿಷ್ಣುವರ್ಧನ್ ಅವರು ಮತ್ತು ಸೆಂಚುರಿ ಸ್ಟಾರ್ ಶಿವ ರಾಜ್ ಕುಮಾರ್ ಅವರು. ಇವರಿಬ್ಬರು ನಾಲ್ಕು ಸಾರಿ ಫಿಲ್ಮ್ ಫೇರ್ ಅವಾರ್ಡ್ ಗೆದ್ದಿದ್ದಾರೆ. ವಿಷ್ಣುವರ್ಧನ್ ಅವರು 1988 ರಲ್ಲಿ ಸುಪ್ರಭಾತ ಸಿನಿಮಾಗಾಗಿ, 1994 ರಲ್ಲಿ ಹಾಲುಂಡ ತವರು ಸಿನಿಮಾಗಾಗಿ, 2000ದಲ್ಲಿ ಯಜಮಾನ ಸಿನಿಮಾಗಾಗಿ, 2004 ರಲ್ಲಿ ಆಪ್ತಮಿತ್ರ ಸಿನಿಮಾಗಾಗಿ. ಇನ್ನು ಶಿವಣ್ಣ ಅವರು 1995 ಓಂ ಸಿನಿಮಾಗೆ, 1996 ರಲ್ಲಿ ನಮ್ಮೂರ ಮಂದಾರ ಹೂವೆ ಸಿನಿಮಾಗೆ, 1999 ರಲ್ಲಿ ಎಕೆ 47 ಸಿನಿಮಾಗೆ, 2010 ರಲ್ಲಿ ತಮಸ್ಸು ಸಿನಿಮಾ ಅಭಿನಯಕ್ಕೆ ಫಿಲ್ಮ್ ಫೇರ್ ಅವಾರ್ಡ್ಸ್ ಪಡೆದರು.

6 ಬಾರಿ ಫಿಲ್ಮ್ ಫೇರ್ ಅವಾರ್ಡ್ ಪಡೆದು ಎರಡನೇ ಸ್ಥಾನದಲ್ಲಿ ಇರುವವರು ಹಿರಿಯನಟ ಅನಂತ್ ನಾಗ್ ಅವರು ಮತ್ತು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು. ಅನಂತ್ ನಾಗ್ ಅವರು 1979 ರಲ್ಲಿ ನಾ ನಿನ್ನ ಬಿಡಲಾರೆ ಸಿನಿಮಾಗೆ, 1982 ರಲ್ಲಿ ಬಾರ ಸಿನಿಮಾಗೆ, 1989ರಲ್ಲಿ ಹೆಂಡ್ತಿಗ್ ಹೇಳ್ಬೇಡಿ ಸಿನಿಮಾಗೆ, 1990ರಲ್ಲಿ ಉದ್ಭವ ಸಿನಿಮಾಗೆ, 1991 ರಲ್ಲಿ ಗೌರಿ ಗಣೇಶ ಸಿನಿಮಾಗೆ, 2016 ರಲ್ಲಿ ಗೋಧಿ ಬಣ್ಣ ಸಾಧಾರಣ ಮೈಕಟ್ಟು ಸಿನಿಮಾಗೆ ಫಿಲ್ಮ್ ಫೇರ್ ಅವಾರ್ಡ್ ಪಡೆದರು. ಪುನೀತ್ ರಾಜ್ ಕುಮಾರ್ ಅವರು, 1985 ರಲ್ಲಿ ಬೆಟ್ಟದ ಹೂವು ಸಿನಿಮಾಗೆ, 2007ರಲ್ಲಿ ಅರಸು ಸಿನಿಮಾಗೆ, 2011 ರಲ್ಲಿ ಹುಡುಗರು ಸಿನಿಮಾಗೆ, 2015ರಲ್ಲಿ ರಣವಿಕ್ರಮ ಸಿನಿಮಾಗೆ, 2017ರಲ್ಲಿ ರಾಜಕುಮಾರ ಸಿನಿಮಾಗೆ ಅವಾರ್ಡ್ ಪಡೆದರು ಪುನೀತ್, ಈ ವರ್ಷ ಪುನೀತ್ ಅವರಿಗೆ ಫಿಲ್ಮ್ ಫೇರ್ ಇಂದ ಜೀವಮಾನ ಸಾಧನೆ ಪ್ರಶಸ್ತಿ ಬಂದಿತು. ಅದು ಸೇರಿ 6 ಅವಾರ್ಡ್ ಅಪ್ಪು ಅವರಿಗೆ ಬಂದಿದೆ..

8 ಬಾರಿ ಫಿಲ್ಮ್ ಫೇರ್ ಅವಾರ್ಡ್ ಪಡೆದು ಮೊದಲ ಸ್ಥಾನದಲ್ಲಿ ಇರುವವರು ಡಾ.ರಾಜ್ ಕುಮಾರ್ ಅವರು, 1973ರಲ್ಲಿ ಗಂಧದಗುಡಿ ಸಿನಿಮಾಗಾಗಿ, 1975 ರಲ್ಲಿ ಮಯೂರ ಸಿನಿಮಾಗಾಗಿ, 1978 ರಲ್ಲಿ ಶಂಕರ್ ಗುರು ಸಿನಿಮಾಗಾಗಿ, 1981ರಲ್ಲಿ ಕೆರಳಿದ ಸಿಂಹ ಸಿನಿಮಾಗಾಗಿ, 1984ರಲ್ಲಿ ಶ್ರಾವಣ ಬಂತು ಸಿನಿಮಾಗಾಗಿ, 1985ರಲ್ಲಿ ಅದೇ ಕಣ್ಣು ಸಿನಿಮಾಗಾಗಿ, 1986 ರಲ್ಲಿ ಭಾಗ್ಯದ ಲಕ್ಷ್ಮಿ ಬಾರಮ್ಮ ಸಿನಿಮಾಗಾಗಿ, 1993 ರಲ್ಲಿ ಆಕಸ್ಮಿಕ ಸಿನಿಮಾಗಾಗಿ 8 ಬಾರಿ ಫಿಲ್ಮ್ ಫೇರ್ ಅವಾರ್ಡ್ ಪಡೆದು, ಕನ್ನಡದಲ್ಲಿ ಅತಿ ಹೆಚ್ಚು ಫಿಲ್ಮ್ ಫೇರ್ ಅವಾರ್ಡ್ ಪಡೆದ ನಟ ಆಗಿದ್ದಾರೆ ಅಣ್ಣಾವ್ರು.

Comments are closed.