Neer Dose Karnataka
Take a fresh look at your lifestyle.

ಲಕ್ಷಣ ಧಾರಾವಾಹಿಯಲ್ಲಿ ಲಿಲ್ಲಿ ರವರ ತಾಯಿ ಪಾತ್ರಕ್ಕೆ ದೊಡ್ಡ ನಟಿಯನ್ನು ಕರೆತರಲು ಸಿದ್ಧತೆ. ಯಾರು ಅಂತೇ ಗೊತ್ತೇ??

9,109

ಲಕ್ಷಣ ಧಾರವಾಹಿ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಪ್ರಮುಖ ಧಾರವಾಹಿಗಳಲ್ಲಿ ಒಂದು. ಉತ್ತಮ ಕಥೆ ಇರುವ ಕಾರಣ, ಈ ಧಾರವಾಹಿ ಒಳ್ಳೆಯ ರೀಚ್ ಪಡೆದುಕೊಳ್ಳುತ್ತಿದೆ. ಈ ಸೀತಾವಲ್ಲಭ ಧಾರವಾಹಿಯ ಜಗನ್ನಾಥ್ ಚಂದ್ರಶೇಖರ್ ನಾಯಕನಾಗಿ ನಟಿಸುತ್ತಿದ್ದಾರೆ. ನಾಯಕಿಯರಾಗಿ ವಿಜಯಲಕ್ಷ್ಮಿ, ಸುಕೃತ ನಾಗ್ ನಟಿಸುತ್ತಿದ್ದು, ಸುಧಾ ಬೆಳವಾಡಿ, ದೀಪಾ ಅಯ್ಯರ್ ಸೇರಿದಂತೆ ಖ್ಯಾತ ಕಲಾವಿದರು ಲಕ್ಷಣ ಧಾರವಾಹಿಯಲ್ಲಿ ನಟಿಸುತ್ತಿದ್ದಾರೆ. ಜಗನ್ನಾಥ್ ಚಂದ್ರಶೇಖರ್ ಅವರೇ ಧಾರವಾಹಿ ನಿರ್ಮಾಣದ ಜವಾಬ್ದಾರಿ ಸಹ ತೆಗೆದುಕೊಂಡಿದ್ದಾರೆ.

ಲಕ್ಷಣ ಧಾರವಾಹಿಯ ಕಥೆ ಈಗ ಬಹಳ ರೋಚಕ ಘಟ್ಟದಲ್ಲಿ ಸಾಗುತ್ತಿದೆ. ಶ್ವೇತಾ ಜೊತೆಗೆ ಆಫೀಸ್ ನಲ್ಲಿ ಕೆಲಸ ಮಾಡುತ್ತಿದ್ದ ಮಿಲಿ, ಶ್ವೇತಾ ಮತ್ತು ಚಂದ್ರಶೇಖರ್ ವಿರುದ್ಧವೇ ಕೆಲಸ ಮಾಡುತ್ತಿದ್ದಳು. ತನ್ನ ತಾಯಿಗೆ ಎಲ್ಲಾ ಮಾಹಿತಿ ಕೊಡುವ ಸಲುವಾಗಿ ಶ್ವೇತಾ ಜೊತೆಯಲ್ಲೇ ಇದ್ದು, ತನಗೆ ಬೇಕಾದ ಹಾಗೆ ಎಲ್ಲಾ ಕೆಲಸವನ್ನು ಮಾಡುತ್ತಿದ್ದಳು ಮಿಲಿ. ಆಕೆಯ ತಾಯಿ ಸಹ ದೊಡ್ಡ ಪ್ಲಾನ್ ಗಳನ್ನೇ ಮಾಡಿ, ಚಂದ್ರಶೇಖರ್ ಮತ್ತು ನಕ್ಷತ್ರ ಗೆ ತೊಂದರೆ ಕೊಡುತ್ತಿದ್ದಾರೆ, ಭೂಪತಿ ಫ್ಯಾಮಿಲಿ ಗು ಇದರಿಂದ ತೊಂದರೆ ಆಗುತ್ತಿದೆ. ನಕ್ಷತ್ರ ಭೂಪತಿ ಮದುವೆ ಆದಾಗಿನಿಂದಲೂ ಅವರಿಬ್ಬರಿಗೂ ತೊಂದರೆ ಕೊಡುತ್ತಲೇ ಬರುತ್ತಿದ್ದಾರೆ. ನಕ್ಷತ್ರ ಜೊತೆ ಚೆನ್ನಾಗಿಯೇ ಇರುವ ಮಿಲಿ, ತಾಯಿ ಜೊತೆ ಸೇರಿ ಮಾಸ್ಟರ್ ಪ್ಲಾನ್ ಮಾಡುತ್ತಿದ್ದಾಳೆ.

ಧಾರವಾಹಿಯಲ್ಲಿ ಮಿಲಿ ತಾಯಿ ಪಾತ್ರದಲ್ಲಿ ನಟಿಸುತ್ತಿರುವುದು ಯಾರು ಎಂದು ಇನ್ನು ತೋರಿಸಿಲ್ಲ, ಬಹಳ ಸಸ್ಪೆನ್ಸ್ ಆಗಿ ಇಡಲಾಗಿದೆ. ಫೋನ್ ನಲ್ಲಿ ಮಾತನಾಡುವ ಹಾಗೆ ತೋರಿಸಲಾಗುತ್ತಿದ್ದು, ಈಗ ನವರಾತ್ರಿ ಹಬ್ಬದ ಸಂಭ್ರಮದಲ್ಲಿ ಹಿಂದಿನಿಂದ ಈ ಡೆವಿಲ್ ಲೇಡಿಯನ್ನು ತೋರಿಸಲಾಗುತ್ತಿದೆ, ಆದರೆ ಆ ಪಾತ್ರ ನಿರ್ವಹಿಸುತ್ತಿರುವುದು ಯಾರು ಎಂದು ರಿವೀಲ್ ಆಗಿಲ್ಲ. ಸಧ್ಯಕ್ಕೆ ಮಿಲಿ ತಾಯಿ ಪಾತ್ರದಲ್ಲಿ ನಟಿಸುವುದು ಯಾರು ಎನ್ನುವ ಕುತೂಹಲ ಎಲ್ಲಾ ಕಡೆ ಮನೆಮಾಡಿದ್ದು, ಸಧ್ಯಕ್ಕೆ ಸಿಕ್ಕಿರುವ ಮಾಹಿತಿ ಪ್ರಕಾರ, ಮಿಲಿ ತಾಯಿ ಪಾತ್ರ, ಬಹಳ ಪ್ರಾಮುಖ್ಯತೆ ಇರುವ ಖಡಕ್ ವಿಲ್ಲನ್ ಪಾತ್ರ ಆಗಿರುವ ಕಾರಣ ಕನ್ನಡದ ಖ್ಯಾತ ಹಿರಿಯನಟಿ ಶ್ರುತಿ ಅವರನ್ನು ಕರೆತರುವ ಪ್ರಯತ್ನ ಮಾಡಲಾಗುತ್ತಿದೆ ಎನ್ನಲಾಗಿದೆ. ಶ್ರುತಿ ಅವರು ಈ ಪಾತ್ರವನ್ನು ಒಪ್ಪಿಕೊಳ್ಳುತ್ತಾರಾ ಎಂದು ಕಾದು ನೋಡಬೇಕಿದೆ.

Leave A Reply

Your email address will not be published.