Neer Dose Karnataka
Take a fresh look at your lifestyle.

ಕನ್ನಡದ ಕ್ವೀನ್ ರಶ್ಮಿಕಾ ಹಾಗೂ ತೆಲುಗಿನ ಕಿಂಗ್ ವಿಜಯ್ ದೇವರಕೊಂಡ ನಡುವಿನ ವಯಸ್ಸಿನ ಅಂತರ ಎಷ್ಟು ಗೊತ್ತೇ?? ಯಪ್ಪಾ ಇಷ್ಟೊಂದಾ??

ತೆಲುಗು ಚಿತ್ರರಂಗದ ಲವ್ ಬರ್ಡ್ಸ್ ಎಂದು ಹೆಸರು ಪಡೆದುಕೊಂಡಿದ್ದವರು ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಜೋಡಿ. ಗೀತಾ ಗೋವಿಂದಮ್ ಸಿನಿಮಾದಿಂದ ಶುರುವಾದ ಇವರಿಬ್ಬರ ಸ್ನೇಹ ಆತ್ಮೀಯತೆ ದಿನಗಳು ಕಳೆದಂತೆ ಹೆಚ್ಚಾಯಿತು ಹಲವು ಕಡೆಗಳಲ್ಲಿ ಇವರಿಬ್ಬರು ಜೊತೆಯಾಗಿ ಕಾಣಿಸಿಕೊಳ್ಳಲು ಶುರು ಮಾಡಿದ್ದರು. ಸಾಕಷ್ಟು ಕಾರ್ಯಕ್ರಮಗಳಿಗೆ ಜೊತೆಯಾಗಿ ಹೋಗುತ್ತಿದ್ದರು, ಮುಂಬೈ ನಲ್ಲಿ ಹೋಟೆಲ್ ಗಳಿಗೆ ಊಟಕ್ಕೆ ಜೊತೆಯಾಗಿ ಹೋಗುತ್ತಿದ್ದರು. ಇವರಿಬ್ಬರು ಇಷ್ಟು ಆತ್ಮೀಯವಾಗಿರುವುದನುಮನ್ನು ನೋಡಿ, ಈ ಜೋಡಿ ಡೇಟಿಂಗ್ ಮಾಡುತ್ತಿದ್ದಾರೆ, ಮದುವೆ ಆಗುತ್ತಾರೆ ಎನ್ನುವ ಮಾತುಗಳು ಸಹ ಕೇಳಿ ಬಂದಿದ್ದವು.

ರಶ್ಮಿಕಾ ವಿಜಯ್ 2022ರ ಹೊಸ ವರ್ಷದ ಆಚರಣೆಯನ್ನು ಜೊತೆಯಾಗಿ ಗೋವಾದಲ್ಲಿ ಆಚರಿಸಿದ್ದರು. ವಿಜಯ್ ಗಾಗಿ ಒಂದು ಸಾರಿ ಅಮೆರಿಕಾ ಗೆ ಹೋಗಿದ್ದರು. ನಂತರದ ದಿನಗಳಲ್ಲಿ ಇವರಿಬ್ಬರ ನಡುವೆ ಎಲ್ಲವೂ ಸರಿಯಿಲ್ಲ ಎನ್ನುವ ಮಾತುಗಳು ಕೇಳಿಬಂದಿದ್ದವು. ಇವರಿಬ್ಬರ ಮದುವೆ ಬಗ್ಗೆ ಆಗಾಗ ಸುದ್ದಿಗಳು ಕೇಳಿಬರುತ್ತಲೇ ಇರುತ್ತವೆ. ಆದರೆ ಈ ಜೋಡಿ ತಾವಿಬ್ಬರು ಬೆಸ್ಟ್ ಫ್ರೆಂಡ್ಸ್ ಎಂದು ಹೇಳಿಕೊಂಡಿದ್ದಾರೆ. ರಶ್ಮಿಕಾ ಅವರು ಕಳೆದ ಶುಕ್ರವಾರ ತಮ್ಮ ಗುಡ್ ಬೈ ಸಿನಿಮಾ ರಿಲೀಸ್ ದಿನವೇ ಏರ್ ಪೋರ್ಟ್ ನಲ್ಲಿ ವಿಜಯ್ ದೇವರಕೊಂಡ ಅವರ ಜೊತೆಗೆ ಕಾಣಿಸಿಕೊಂಡಿದ್ದರು, ಇವರಿಬ್ಬರು ಜೊತೆಯಾಗಿ ಮಾಲ್ಡಿವ್ಸ್ ಗೆ ಹೋಗಿದ್ದಾರೆ ಎನ್ನಲಾಗಿತ್ತು.

ರಶ್ಮಿಕಾ ಅವರು ಮಾತ್ರ ಮಾಲ್ಡಿವ್ಸ್ ನ ಫೋಟೋಗಳನ್ನು ಶೇರ್ ಮಾಡುತ್ತಿದ್ದು, ವಿಜಯ್ ದೇವರಕೊಂಡ ಯಾವುದೇ ಫೋಟೋ ಶೇರ್ ಮಾಡಿಲ್ಲ. ರಶ್ಮಿಕಾ ಅವರ ಹಾಟ್ ಫೋಟೋಗಳಿಗೆ ಕಮೆಂಟ್ಸ್ ಬರೆಯುತ್ತಿರುವ ಜನರು, ಈ ಫೋಟೋ ತೆಗೆದಿದ್ದು ವಿಜಯ್ ದೇವರಕೊಂಡ ನ ಎಂದು ಕಮೆಂಟ್ಸ್ ಗಳ ಮೂಲಕ ಕೇಳುತ್ತಿದ್ದಾರೆ. ಈ ಜೋಡಿಯ ವಿಚಾರದಲ್ಲಿ ಇಷ್ಟೆಲ್ಲಾ ಗಾಸಿಪ್ಸ್ ನಡೆಯುತ್ತಿರುವಾಗ, ಇವರಿಬ್ಬರ ನಡುವೆ ಇರುವ ವಯಸ್ಸಿನ ವ್ಯತ್ಯಾಸ ಎಷ್ಟಿರಬಹುದು ಎನ್ನುವ ಚರ್ಚೆ ಶುರುವಾಗಿದ್ದು, ರಶ್ಮಿಕಾ ಅವರಿಗೆ ಈಗ 26 ವರ್ಷಗಳು, ವಿಜಯ್ ದೇವರಕೊಂಡ ಅವರಿಗೆ 33 ವರ್ಷ, ಈ ಜೋಡಿಯ ನಡುವೆ 7 ವರ್ಷಗಳ ವಯಸ್ಸಿನ ವ್ಯತ್ಯಾಸ ಇದೆ.

Comments are closed.