Neer Dose Karnataka
Take a fresh look at your lifestyle.

ಭಾರತದ ಖ್ಯಾತ ನಟ ದರ್ಶನ್ ರವರ ಬಗ್ಗೆ ಯಾರಿಗೂ ತಿಳಿಯದ ರಹಸ್ಯವೆನ್ನು ಬಿಚ್ಚಿಟ್ಟ ಹಿರಿಯ ನಟ ರಾಜೇಶ್. ಹೇಳಿದ್ದೇನು ಗೊತ್ತೇ??

178

ಡಿಬಾಸ್ ಅಂದ್ರೆ ಕನ್ನಡ ಸಿನಿಪ್ರಿಯರಿಗೆ ಅದರಲ್ಲು ದರ್ಶನ್ ಅವರ ಅಭಿಮಾನಿಗಳಿಗೆ ಎಂಥಹ ಮಟ್ಟದಲ್ಲಿ ಕ್ರೇಜ್ ಇದೆ ಎನ್ನುವ ವಿಚಾರ ನಮಗೆಲ್ಲ ಗೊತ್ತಿದೆ. ದರ್ಶನ್ ಅವರ ಬಗ್ಗೆ ಯಾವುದೇ ಒಂದು ವಿಚಾರ ಬಂದರು ಸಹ, ಅಭಿಮಾನಿಗಳು ಅದನ್ನು ಸೆಲೆಬ್ರೇಟ್ ಮಾಡುತ್ತಾರೆ. ಸಿನಿಮಾ ಬಗ್ಗೆ ಆಗಲಿ ಅಥವಾ ದರ್ಶನ್ ಅವರ ನಿಜ ಜೀವನದ ಬಗ್ಗೆ ಆಗಲಿ ಯಾವುದೇ ಒಂದು ವಿಷಯ ಸಿಕ್ಕರೂ ಸಹ, ವೈರಲ್ ಮಾಡುತ್ತಾರೆ. ಏನೇ ನಡೆದರೂ, ದರ್ಶನ್ ಅವರನ್ನು ಅಭಿಮಾನಿಗಳು ಮಾತ್ರ ಕೈಬಿಡುವುದಿಲ್ಲ. ಡಿಬಾಸ್ ಅವರ ಕಷ್ಟದ ಸಮಯದಲ್ಲೂ ಸಹ ಕೈಬಿಡದೆ, ಇದ್ದವರು ಅಭಿಮಾನಿಗಳು,

ಅದರಿಂದಲೇ ಡಿಬಾಸ್ ಅವರಿಗೆ ಅಭಿಮಾನಿಗಳು ಅಂದ್ರೆ ಅಷ್ಟು ಪ್ರೀತಿ. ಇನ್ನು ದರ್ಶನ್ ಅವರಃ ಸಹ ತಮ್ಮ ಅಭಿಮಾನಿಗಳಿಗೆ ಅಷ್ಟೇ ಪ್ರೀತಿ ತೋರಿಸುತ್ತಾರೆ ಕಷ್ಟದಲ್ಲಿರುವವರಿಗೆ ಸಹಾಯ ಮಾಡುತ್ತಾರೆ. ದರ್ಶನ್ ಅವರ ಸಹಾಯ ಮಾಡುವ ಗುಣದ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೇ, ತಮ್ಮೊಡನೆ ಇರುವವರಲ್ಲಿ ಯಾರಿಗಾದರು ಕಷ್ಟ ಇದೆ ಎನ್ನುವ ವಿಚಾರ ತಿಳಿದುಬಂದರೆ, ಆ ವ್ಯಕ್ತಿಗೆ ಗೊತ್ತೇ ಆಗದ ಹಾಗೆ ದರ್ಶನ್ ಅವರು ಸಹಾಯ ಮಾಡಿರುತ್ತಾರೆ. ಅಂತಹ ದೊಡ್ಡ ಗುಣ ದರ್ಶನ್ ಅವರದ್ದು. ತಮ್ಮ ಸಹ ಕಲಾವಿದರ ಜೊತೆಯಲ್ಲೂ ಸಹ ದರ್ಶನ್ ಅವರು ಅದೇ ರೀತಿ ಇರುತ್ತಾರೆ, ಎಲ್ಲರೊಡನೆ ಬಹಳ ಸ್ನೇಹದಿಂದ ಇರುತ್ತಾರೆ. ಇದೀಗ ದರ್ಶನ್ ಅವರ ಬಗ್ಗೆ ಕನ್ನಡದ ಖ್ಯಾತ ನಟ ರಾಜೇಶ್ ನಟರಂಗ ಅವರು ಮಾತನಾಡಿದ್ದಾರೆ.

“ಆತ ಒಬ್ಬ ಅದ್ಭುತವಾದ ಮನುಷ್ಯ, ಸಿನಿಮಾ ಸೆಟ್ ನಲ್ಲಿ ಬಹಳ ಸಿಂಪಲ್ ಆಗಿರುತ್ತಾರೆ, ತಮ್ಮ ಜೊತೆಗಿರುವ ಎಲ್ಲರನ್ನು ಹಾಗೆ ಸಿಂಪಲ್ ಆಗಿರುವ ಹಾಗೆ ನೋಡಿಕೊಳ್ಳುತ್ತಾರೆ. ಒಬ್ಬ ದೊಡ್ಡ ಸ್ಟಾರ್ ಎನ್ನುವ ಸ್ವಲ್ಪವೇ ಹ್ಯಾಂಗ್ ಓವರ್ ಕೂಡ ಅವರಲ್ಲಿ ಇಲ್ಲ, ಇದನ್ನು ನೋಡಿ ನನಗೂ ತುಂಬಾ ಖುಷಿ ಆಯ್ತು. ಸ್ಟಾರ್ ಎನ್ನುವ ದೊಡ್ಡ ಕಿರೀಟವನ್ನ ತಲೆ ಮೇಲೆ ಇಟ್ಟುಕೊಂಡು ಯಾರಿಗೂ ತೊಂದರೆ ಕೊಡುವ ವ್ಯಕ್ತಿ ಅವರಲ್ಲ, ಅವರ ಹಾಗೆ ಜೊತೆಯಲ್ಲರುವವರನ್ನು ಕೂಡ ಸರಳವಾಗಿ ನೋಡಿಕೊಳ್ಳುತ್ತಾರೆ..”ಎಂದು ಹೇಳಿದ್ದಾರೆ ನಟ ರಾಜೇಶ್ ನಟರಂಗ.

Leave A Reply

Your email address will not be published.