Neer Dose Karnataka
Take a fresh look at your lifestyle.

Vastu Tips In Kannada: ನೀವು ಹಣ ಎಣಿಸುವಾಗ ಅಪ್ಪಿ ತಪ್ಪಿಯೂ ಕೂಡ ಈ ತಪ್ಪು ಮಾಡಬೇಡಿ, ದಾರಿದ್ರ ಸುತ್ತುಕೊಳ್ಳುತ್ತದೆ.

ಜೀವನದಲ್ಲಿ ಎಲ್ಲರೂ ಕೆಲಸ ಮಾಡುವುದು ಹಣಕ್ಕಾಗಿ, ಹಣದಿಂದಲೇ ಉತ್ತಮವಾಗಿ ಜೀವನ ನಡೆಸಲು ಸಾಧ್ಯ. ಕೆಲವರು ಉತ್ತಮ ರೀತಿಯಲ್ಲಿ ಹಣ ಗಳಿಸಿ, ಐಷಾರಾಮಿ ಜೀವನ ನಡೆಸುತ್ತಾರೆ. ಇನ್ನು ಕೆಲವರಿಂದ ಅದು ಸಾಧ್ಯ ಆಗುವುದಿಲ್ಲ, ಹಣ ಗಳಿಸಲು ಸಾಧ್ಯ ಆಗದೆ ಹೋದಾಗ, ಜನರು ತಮ್ಮ ಯೋಜನೆ ಚೆನ್ನಾಗಿಲ್ಲ, ಅದೃಷ್ಟ ಚೆನ್ನಾಗಿಲ್ಲ ಎಂದುಕೊಂಡು ಸುಮ್ಮನಾಗುವುದನ್ನು ನೋಡಿದ್ದೇವೆ, ಆದರೆ ವಾಸ್ತು ಶಾಸ್ತ್ರದ ಪ್ರಕಾರ, ಹಣ ಎಣಿಸುವಾಗ ನೀವು ಮಾಡುವ ಕೆಲವು ಸಣ್ಣ ತಪ್ಪುಗಳು ಸಹ ನಿಮ್ಮ ಬಡತನಕ್ಕೆ ಕಾರಣ ಆಗಬಹುದು. ಆ ತಪ್ಪುಗಳು ಯಾವುವು? ತಪ್ಪು ಮಾಡದ ಹಾಗೆ ಹೇಗೆ ಇರಬಹುದು ಎಂದು ತಿಳಿಸುತ್ತೇವೆ ನೋಡಿ..

ಹಣವನ್ನು ಎಲ್ಲೆಂದರಲ್ಲಿ ಇಡುವುದು :-ಹಣ ಲಕ್ಷ್ಮೀದೇವಿಯ ಸ್ವರೂಪ ಎಂದು ಪರಿಗಣಿಸಲಾಗುತ್ತದೆ. ಲಕ್ಷ್ಮೀದೇವಿಗೆ ಕೊಡುವಷ್ಟು ಮರಿಯಾದೆ ಹಣಕ್ಕೂ ಕೊಡಬೇಕು. ಕೆಲವರು ತಮಗೆ ಹಣ ಸಿಕ್ಕಾಗ, ಸಂಬಳ ಬಂದಾಗ, ಹಣವನ್ನು ತೆಗೆದುಕೊಂಡು ಬಂದು ಮನೆಯಲ್ಲಿ ಎಲ್ಲೆಲ್ಲೋ ಇಡುತ್ತಾರೆ. ಹೀಗೆ ಜವಾಬ್ದಾರಿ ಇಲ್ಲದೆ ಹಣವನ್ನು ಎಲ್ಲೆಲ್ಲೋ ಇಡುವುದರಿಂದ ಲಕ್ಷ್ಮೀದೇವಿಗೆ ಅವಮಾನ ಮಾಡಿದ ಹಾಗೆ ಎಂದು ಹೇಳಲಾಗುತ್ತದೆ. ಹಣಕ್ಕೆ ಗೌರವ ನೀಡಿ, ಅದನ್ನು ನಿಮ್ಮ ಮನೆಯಲ್ಲಿ ಮುಖ್ಯವಾದ ಒಂದು ಜಾಗದಲ್ಲಿ ಇರಿಸಿ, ವಾಲ್ಟ್ ಅಥವಾ ಕಬೋರ್ಡ್ ನಲ್ಲಿ ಇಡಿ. ಇದರಿಂದಾಗಿ ಹಣವು ಸುರಕ್ಷತೆಯಿಂದ ಇರುತ್ತದೆ. ಜೊತೆಗೆ ನಿಮ್ಮ ಬಡತನವು ಕಡಿಮೆ ಆಗುತ್ತದೆ.

ಹಣ ಕೊಡುವಾಗ ಎಸೆಯುವುದು :- ಕೆಲವು ಜನರು ಮತ್ತೊಬ್ಬರಿಗೆ ಹಣ ಕೊಡುವಾಗ, ಅದನ್ನು ಕೈಗೆ ಕೊಡದೆ ಎಸೆಯುತ್ತಾರೆ. ಈ ಅಭ್ಯಾಸ ಒಳ್ಳೆಯದಲ್ಲ ಈ ರೀತಿ ಹಣ ಎಸೆಯುಯುವುದು ಹಣ ಕೊಡಲು ಸರಿಯಾದ ರೀತಿ ಅಲ್ಲ, ಇದರಿಂದ ಹಣಕ್ಕೆ ಮತ್ತು ಲಕ್ಷ್ಮೀದೇವಿಗೆ ಇಬ್ಬರಿಗೂ ಅವಮಾನ ಮತ್ತು ಲಕ್ಷ್ಮೀದೇವಿಗೆ ಅಗೌರವ ತೋರಿಸಿದ ಹಾಗೆ ಎಂದು ಪರಿಗಣಿಸಲಾಗಿದೆ. ಈ ರೀತಿಯ ಅಭ್ಯಾಸವನ್ನು ಬದಲಾವಣೆ ಮಾಡಿಕೊಳ್ಳಿ, ಇದನ್ನು ಮುಂದುವರೆಸಿಕೊಂಡು ಹೋದರೆ, ನಿಮ್ಮ ಮನೆಯಲ್ಲಿ ಬಡತನ ಬರಬಹುದು.

ಹಣ ಎಣಿಸುವಾಗ ಬೆರಳಿಗೆ ಉಗುಳು ಹಚ್ಚುವುದು :- ಹಲವಾರು ಜನರು ಹಣವನ್ನು ಎಣಿಸುವಾಗ, ಬೆರಳಿಗೆ ಉಗುಳು ಹಚ್ಚಿ ಹಣವನ್ನು ಎಣಿಸುತ್ತಾ ಇರುತ್ತಾರೆ. ಈ ರೀತಿ ಮಾಡುವುದರಿಂದ ಹಣ ಎಣಿಸುವುದು ಸುಲಭವಾಗುತ್ತದೆ ಮತ್ತು ಬೇಗ ಎಣಿಸಬಹುದು ಎಂದುಕೊಂಡು ಈ ರೀತಿ ಮಾಡುತ್ತಾರೆ. ಇದು ಒಳ್ಳೆಯ ಅಭ್ಯಾಸ ಅಲ್ಲ ಎಂದು ಆಧ್ಯಾತ್ಮದ ಪ್ರಕಾರ ಮತ್ತು ವಾಸ್ತು ಶಾಸ್ತ್ರಗಳ ಪ್ರಕಾರ ಇದು ಲಕ್ಷ್ಮೀದೇವಿಯ ಮೇಲೆ ತೋರುವ ಅಜಾಗರೂಕತೆ ಮತ್ತು ಲಕ್ಷ್ಮಿದೇವಿಗೆ ಮಾಡುವ ಅವಮಾನ ಎಂದು ಹೇಳಲಾಗುತ್ತದೆ. ಹಾಗಾಗಿ ಈ ರೀತಿ ಮಾಡಬೇಡಿ.

Comments are closed.