Neer Dose Karnataka
Take a fresh look at your lifestyle.

ಪ್ರೀತಿ ಮಾಡುತ್ತಿದ್ದ ನರೇಶ್ ಹಾಗೂ ಪವಿತ್ರ ರವರ ಪ್ರೇಮದಲ್ಲಿ ಬ್ರೇಕ್ ಅಪ್. ಕೈಕೊಟ್ಟ ನಟ. ಮತ್ತೊಬ್ಬ ನಟಿಯ ಜೊತೆ ಪ್ರೀತಿ ಶುರು??

ಕಳೆದ ಕೆಲವು ತಿಂಗಳುಗಳ ಹಿಂದೆ ನಟಿ ಪವಿತ್ರಾ ಲೋಕೇಶ್ ಮತ್ತು ನಟ ನರೇಶ್ ಅವರ ಪ್ರೇಮ ವಿಚಾರ ಮಾಧ್ಯಮಗಳಲ್ಲಿ, ಸ್ಯಾಂಡಲ್ ವುಡ್ ನಟರು ಟಾಲಿವುಡ್ ನಲ್ಲಿ ಭಾರಿ ಚರ್ಚೆಗೆ ಕಾರಣವಾಗಿತ್ತು. ಇವರಿಬ್ಬರು ಮಹಾಬಲೇಶ್ವರ ದೇವಸ್ಥಾನಕ್ಕೆ ಜೊತೆಯಾಗಿ ಹೋಗಿಬಂದ ನಂತರ, ಮದುವೆ ಆಗಿದ್ದಾರೆ ಎನ್ನುವ ಸುದ್ದಿಯೊಂದು ಭಾರಿ ಸದ್ದು ಮಾಡಿತ್ತು, ಕೆಲವು ವರ್ಷಗಳಿಂದ ಜೊತೆಯಾಗಿ ವಾಸ ಮಾಡುತ್ತಿದ್ದಾರೆ ಮದುವೆ ಆಗುತ್ತಾರೆ ಎನ್ನುವ ವಿಚಾರ ವೈರಲ್ ಆಗಿತ್ತು.

ನರೇಶ್ ಅವರು ಅದಾಗಲೇ ಮೂರು ಬಾರಿ ಮದುವೆ ಆಗಿದ್ದು, ಪವಿತ್ರಾ ಲೋಕೇಶ್ ಅವರೊಡನೆ ನಾಲ್ಕನೇ ಮದುವೆ ಆಗುತ್ತಾರೆ ಎನ್ನುವ ಗಾಸಿಪ್ ಹರಿದಾಡಲು ಶುರುವಾದ ಬಳಿಕ, ಮೈಸೂರಿನ ಹೋಟೆಲ್ ಒಂದರಲ್ಲಿ ನರೇಶ್ ಅವರು ಮತ್ತು ಪವಿತ್ರಾ ಅವರು ಜೊತೆಯಾಗಿ ಇರುವುದನ್ನು ನರೇಶ್ ಅವರ ಪತ್ನಿ ರಮ್ಯಾ ರಘುಪತಿ ಅವರು ಬಯಲು ಮಾಡಿದ್ದರು. ಇವರಿಬ್ಬರ ವಿರುದ್ಧ ಪೊಲೀಸ್ ಕಂಪ್ಲೇಂಟ್ ಸಹ ನೀಡಿದ್ದರು. ಆಗ ನರೇಶ್ ಅವರು ಮತ್ತು ಪವಿತ್ರಾ ಲೋಕೇಶ್ ಅವರು ಮಾಧ್ಯಮದ ಎದುರು ಬಂದು ಕ್ಲಾರಿಟಿ ನೀಡಿದ್ದರು. ತಾವಿಬ್ಬರು ಜೊತೆಯಾಗಿ ವಾಸ ಮಾಡುತ್ತ ಇದ್ದದ್ದು ನಿಜ ಆದರೆ ಮದುವೆ ಆಗಿಲ್ಲ ಎಂದು ಹೇಳಿಕೊಂಡಿದ್ದರು.

ಪವಿತ್ರಾ ಲೋಕೇಶ್ ಅವರು ತೆಲುಗಿನಲ್ಲಿ ಹಲವು ಸಿನಿಮಾಗಳಲ್ಲಿ ಅಭಿನಯಿಸಿರುವ ಕಾರಣ, ಎಲ್ಲರೂ ಪರಿಚಯ ಇದ್ದಾರೆ, ಹಾಗೆಯೇ ನರೇಶ್ ಅವರ ಕುಟುಂಬ ಕೂಡ ಬಹಳ ಆತ್ಮೀಯರು ಎಂದು ತಿಳಿಸಿದ್ದರು. ಆದರೆ ಈಗ ಇವರಿಬ್ಬರ ವಿಚಾರದಲ್ಲಿ ಬೇರೆಯದೇ ಟ್ವಿಸ್ಟ್ ಸಿಕ್ಕಿದೆ. ನರೇಶ್ ಪವಿತ್ರಾ ಬ್ರೇಕಪ್ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಇಬರಿಬ್ಬರು ಒಪ್ಪಂದದ ಪ್ರಕಾರ ಜೊತೆಗಿದ್ದಾರೆ ಎನ್ನಲಾಗಿತ್ತು. ಇದೀಗ ನರೇಶ್ ಅವರು ಮತ್ತೊಬ್ಬ ಮಹಿಳೆಯ ಜೊತೆಗೆ ಆತ್ಮೀಯವಾಗಿರುವ ಕಾರಣ ಪವಿತ್ರಾ ಲೋಕೇಶ್ ಅವರೊಡನೆ ಬ್ರೇಕಪ್ ಆಗಿದೆ ಎಂದು ಹೊಸ ಸುದ್ದಿ ಕೇಳಿ ಬರುತ್ತಿದೆ. ಇದು ನಿಜವೋ ಸುಳ್ಳೋ ಎನ್ನುವ ಬಗ್ಗೆ ಇನ್ನೂ ಸ್ಪಷ್ಟನೆ ಸಿಕ್ಕಿಲ್ಲ.

Comments are closed.