Neer Dose Karnataka
Take a fresh look at your lifestyle.

ಭಾರತ ತಂಡಕ್ಕೆ ಇರುವ ದೊಡ್ಡ ಸವಾಲು ಬೌಲಿಂಗ್ ಸಮಸ್ಯೆ ಅಲ್ಲ ಎಂದ ರವಿ ಶಾಸ್ತ್ರೀ. ಬೇರೆ ಏನು ತೊಂದರೆ ಅಂತೇ ಗೊತ್ತೇ??

ವಿಶ್ವಕಪ್ ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಕಪ್ ಗೆಲ್ಲಲು ಭಾರತ ತಂಡವು ಎಲ್ಲಾ ಪ್ರಯತ್ನ ಮಾಡುತ್ತಿದೆ. ಈಗಾಗಲೇ ಆಸ್ಟ್ರೇಲಿಯಾಗೆ ತೆರಳಿ ಅಭ್ಯಾಸ ಶುರು ಮಾಡಿದ್ದು, ಎರಡು ಅಭ್ಯಾಸ ಪಂದ್ಯಗಳನ್ನು ಸಹ ಆಡಿದೆ. ಮೊದಲ ಅಭ್ಯಾಸ ಪಂದ್ಯದಲ್ಲಿ ಗೆದ್ದ ಭಾರತ ತಂಡ ಎರಡನೇ ಅಭ್ಯಾಸ ಪಂದ್ಯದಲ್ಲಿ ಸೋತಿದೆ. ಹೀಗೆ ಭಾರತ ತಂಡದ ಬ್ಯಾಟಿಂಗ್ ಪ್ರದರ್ಶನ ಚೆನ್ನಾಗಿದ್ದರೂ, ಸೋಲುವ ಹಾಗೆ ಆಗಿದೆ. ಈ ಸಮಯದಲ್ಲಿ ಭಾರತದ ಮಾಜಿ ಆಟಗಾರ ರವಿಶಾಸ್ತ್ರಿ ಅವರು ತಂಡಕ್ಕೆ ಒಂದು ಖಡಕ್ ಸಂದೇಶ ನೀಡಿದ್ದಾರೆ. ಭಾರತ ತಂಡ ಅದೊಂದು ವಿಭಾಗದಲ್ಲಿ ಇಂಪ್ರೂವ್ ಆಗಬೇಕು ಎಂದಿದ್ದಾರೆ ರವಿಶಾಸ್ತ್ರಿ ಅವರು..

ರವಿಶಾಸ್ತ್ರಿ ಅವರು ಹೇಳಿರುವುದು ಬ್ಯಾಟಿಂಗ್ ಅಥವಾ ಬೌಲಿಂಗ್ ಬಗ್ಗೆ ಅಲ್ಲ, ಅವರು ಮಾತನಾಡಿರುವುದು ಫೀಲ್ಡಿಂಗ್ ಬಗ್ಗೆ. ರವಿಶಾಸ್ತ್ರಿ ಅವರು ಭಾರತ ತಂಡ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ತಂಡದ ಹಾಗೆ ಫೀಲ್ಡಿಂಗ್ ಮಾಡುವುದನ್ನು ಅಭ್ಯಾಸ ಮಾಡಬೇಕು. ಏಷ್ಯಾಕಪ್ ನಲ್ಲಿ ಎಡವಿದ್ದು ಫೀಲ್ಡಿಂಗ್ ಸಮಸ್ಯೆ ಇಂದಲೇ, ಈಗಲೂ ಅದೇ ಆಗುತ್ತಿದೆ. ಫೀಲ್ಡಿಂಗ್ ಚೆನ್ನಾಗಿ ಮಾಡಿದರೆ, 15 ರಿಂದ 20 ರನ್ ಗಳನ್ನು ಕಡಿಮೆ ಮಾಡಬಹುದು. ಇದರಿಂದ ಬ್ಯಾಟ್ಸ್ಮನ್ ಗಳ ಮೇಲೆ ಒತ್ತಡ ಇರುವುದಿಲ್ಲ. ಎಲ್ಲಾ ಪಂದ್ಯಗಳನ್ನು ಬ್ಯಾಟಿಂಗ್ ಇಂದಲೇ ಗೆಲ್ಲಲು ಆಗುವುದಿಲ್ಲ. ಪಾಕಿಸ್ತಾನದ ವಿರುದ್ಧ ಆಡಲು ಭಾರತ ತಂಡದ ಫೀಲ್ಡಿಂಗ್ ಇನ್ನು ಬಲಿಷ್ಠವಾಗಿ ಇರಬೇಕು ಎಂದು ಸಲಹೆ ಕೊಟ್ಟಿದ್ದಾರೆ ರವಿಶಾಸ್ತ್ರಿ ಅವರು..

ಇವರು ಕೂಡ ಭಾರತ ತಂಡದ ಜೊತೆಯಲ್ಲೇ ಇದ್ದರು, ಇತ್ತೀಚೆಗಷ್ಟೇ ರಿಟೈರ್ ಆಗಿದ್ದಾರೆ. ಭಾರತದ ಬ್ಯಾಟಿಂಗ್ ಬಗ್ಗೆ ಮಾತನಾಡಿ, ನಾನು 7 ವರ್ಷಗಳ ಕಾಲ ಭಾರತ ತಂಡದ ಜೊತೆಯಲ್ಲೇ ಇದ್ದೆ, ಈಗ ಹೊರಗಿನಿಂದ ತಂಡವನ್ನು ನೋಡಿದರೆ, ಅತ್ಯಂತ ಬಲಿಷ್ಠವಾದ ಬ್ಯಾಟಿಂಗ್ ಲೈನಪ್ ಇದೆ. 5ನೇ ಕ್ರಮಾಂಕದಲ್ಲಿ ಹಾರ್ದಿಕ್ ಪಾಂಡ್ಯ, 6ನೇ ಕ್ರಮಾಂಕದಲ್ಲಿ ದಿನೇಶ್ ಕಾರ್ತಿಕ್ ಅಥವಾ ರಿಷಬ್ ಪಂತ್ ಉತ್ತಮ ಪ್ರದರ್ಶನ ಕೊಡುತ್ತಾರೆ. ಭಾರತ ತಂಡ ಫೀಲ್ಡಿಂಗ್ ನಲ್ಲಿ ಮಾತ್ರ ಬದಲಾವಣೆ ಮಾಡಿಕೊಳ್ಳಬೇಕಿದೆ.. ಎಂದು ರವಿಶಾಸ್ತ್ರಿ ಅವರು ಖಡಕ್ ವಾರ್ನಿಂಗ್ ನೀಡಿದ್ದಾರೆ.

Comments are closed.