Neer Dose Karnataka
Take a fresh look at your lifestyle.

ವಿಚ್ಚೇದನದ ಹಾದಿ ಹಿಡಿದಿರುವ ರಾಣಾ ದಗ್ಗುಬಾಟಿ, ಮದುವೆಯಾಗುವ ಮುನ್ನ ಯಾವೆಲ್ಲ ನಟಿಯರ ಜೊತೆ ಸಂಬಂಧ ಹೊಂದಿದ್ದರು ಗೊತ್ತೇ??

6,013

ನಮಸ್ಕಾರ ಸ್ನೇಹಿತರೇ ನಮ್ಮ ಭಾರತೀಯ ಚಿತ್ರರಂಗದ ಕೆಲವು ನಟ ಹಾಗೂ ನಟಿಯರ ಕುರಿತಂತೆ ಆಗಾಗ ಸುದ್ದಿಗಳು ಕೇಳುತ್ತಲೇ ಇರುತ್ತದೆ. ಅವುಗಳಲ್ಲಿ ಇಂದು ನಾವು ಮಾತನಾಡಲು ಹೊರಟಿರುವುದು ಬಾಹುಬಲಿ ಖ್ಯಾತಿಯ ನಟರೊಬ್ಬರ ಕುರಿತಂತೆ. ಬಾಹುಬಲಿ ವಿಚಾರ ತೆಗೆದಾಗ ನೀವು ಪ್ರಭಾಸ್ ಎಂದು ಭಾವಿಸಿಕೊಳ್ಳಬಹುದು ಆದರೆ ಅವರ ಕುರಿತಂತೆ ನಾವು ಮಾತನಾಡಲು ಹೊರಟಿಲ್ಲ. ಬದಲಾಗಿ ನಾವು ಮಾತನಾಡಲು ಹೊರಟಿರುವುದು ಬಲ್ಲಾಳದೇವ ಪಾತ್ರಧಾರಿಯಾಗಿರುವ ರಾಣಾ ದಗ್ಗುಬಾಟಿ ರವರ ಕುರಿತಂತೆ.-

ಹೌದು ರಾಣಾ ದಗ್ಗುಬಾಟಿ ರವರು ಕೇವಲ ತೆಲುಗು ಚಿತ್ರರಂಗದಲ್ಲಿ ಮಾತ್ರವಲ್ಲದೆ ಬಾಲಿವುಡ್ ಚಿತ್ರರಂಗದಲ್ಲಿ ಕೂಡ ಸಾಕಷ್ಟು ಪ್ರಮುಖ ಚಿತ್ರಗಳಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇತ್ತೀಚೆಗಷ್ಟೇ ಅವರು ತಮ್ಮ ಬಹುಕಾಲದ ಗೆಳತಿ ಯಾಗಿರುವ ಮಿಹಿಕಾ ಬಜಾಜ್ ರವರನ್ನು ಮದುವೆಯಾಗಿದ್ದಾರೆ. ಇಂದಿನ ಲೇಖನಿಯಲ್ಲಿ ನಾವು ಮದುವೆಗೂ ಮುನ್ನ ರಾಣಾ ದಗ್ಗುಬಾಟಿ ರವರು ಯಾರನ್ನೆಲ್ಲಾ ಡೇಟ್ ಮಾಡಿದ್ದಾರೆ ಎಂಬುದರ ಕುರಿತಂತೆ ತಿಳಿದುಕೊಳ್ಳೋಣ ಬನ್ನಿ. ಇದಕ್ಕಾಗಿ ಲೇಖನಿಯನ್ನು ತಪ್ಪದೆ ಕೊನೆಯವರೆಗೂ ಓದಿ.

ಮೊದಲನೇದಾಗಿ ಬಿಪಾಶಬಸು. 2011 ರ ಸಂದರ್ಭದಲ್ಲಿ ಇವರಿಬ್ಬರು ಹಲವಾರು ಬಾರಿ ಮಾಧ್ಯಮಗಳ ಕ್ಯಾಮರಾದ ಕಣ್ಣಿಗೆ ಕಾಣಿಸಿಕೊಂಡಿದ್ದರು ಈ ಕಾರಣದಿಂದಾಗಿ ಸುದ್ದಿ ಮಾಧ್ಯಮಗಳಲ್ಲಿ ಇವರಿಬ್ಬರು ಮದುವೆಯಾಗುತ್ತಾರೆ ಎಂಬುದಾಗಿ ಸುದ್ದಿಗಳು ದೊಡ್ಡಮಟ್ಟದಲ್ಲಿ ಹರಡಿದ್ದವು. ಆದರೆ ಇವರಿಬ್ಬರ ನಡುವೆ ಯಾವ ಮನಸ್ತಾಪ ಮೂಡಿತ್ತೋ ಏನೋ ಇಬ್ಬರೂ ಕೂಡ ಬ್ರೇಕಪ್ ಮಾಡಿಕೊಂಡಿದ್ದಾರೆ.

ಎರಡನೇದಾಗಿ ರಾಕುಲ್ ಪ್ರೀತ್ ಸಿಂಗ್. ಮೊದಮೊದಲು ರಾಕುಲ್ ರವರು ದಕ್ಷಿಣ ಭಾರತ ಚಿತ್ರರಂಗದಲ್ಲಿಯೇ ಸಿನಿಮಾದಲ್ಲಿ ನಟಿಸುತ್ತಿದ್ದರು. ನಂತರ ಬಾಲಿವುಡ್ ಚಿತ್ರರಂಗದಲ್ಲಿ ತಮ್ಮ ಅದೃಷ್ಟ ಪರೀಕ್ಷೆಗಾಗಿ ಸಿನಿಮಾಗಳಲ್ಲಿ ನಟಿಸಲು ಆರಂಭಿಸುತ್ತಾರೆ. ಇವುಗಳು ಮಧ್ಯೆ ರಾಕುಲ್ ರವರು ರಾಣಾ ದಗ್ಗುಬಾಟಿ ರವರ ಸಿನಿಮಾಗಳಲ್ಲಿ ಕೂಡ ಒಟ್ಟಿಗೆ ನಟಿಸುತ್ತಾರೆ. ಇವರಿಬ್ಬರ ನಡುವೆ ಪ್ರೀತಿ ಇದೆ ಎಂಬುದಾಗಿ ಕೂಡಾ ಸುದ್ದಿ ಮಾಧ್ಯಮಗಳಲ್ಲಿ ಸುದ್ದಿ ಬಿತ್ತರವಾಗಿತ್ತು. ಹಲವಾರು ತಿಂಗಳುಗಳ ಕಾಲ ಒಟ್ಟಿಗೆ ಇದ್ದರೂ ಕೂಡ ನಂತರ ಯಾಕೆ ಬೇರೆಯಾದರು ಎಂಬುದು ಇಂದಿಗೂ ಕೂಡ ತಿಳಿದುಬಂದಿಲ್ಲ.

ಮೂರನೇದಾಗಿ ಸಮೀರಾ ರೆಡ್ಡಿ. ಟಾಲಿವುಡ್ ಹಾಗೂ ಕಾಲಿವುಡ್ ಚಿತ್ರರಂಗದಲ್ಲಿ ಸಾಕಷ್ಟು ಜನಪ್ರಿಯತೆ ಹೊಂದಿರುವ ನಟಿಯಾಗಿರುವ ಸಮೀರಾ ರೆಡ್ಡಿ ಅವರ ಜೊತೆಗೆ ರಾಣಾ ದಗ್ಗುಬಾಟಿ ರವರ ಲವ್ ಕಹಾನಿ ಒಂದು ಕಾಲದಲ್ಲಿ ಪೀಕ್ ಹಂತದಲ್ಲಿತ್ತು. ಆದರೆ ಇದು ಕೇವಲ ಪ್ರೀತಿ ಹಂತದಲ್ಲೇ ಮುಕ್ತಾಯವಾಯಿತೇ ಹೊರತು ಮದುವೆ ಹಂತಕ್ಕೆ ಹೋಗಲಿಲ್ಲ.

ನಾಲ್ಕನೇದಾಗಿ ತ್ರಿಷಾ. ದಕ್ಷಿಣ ಭಾರತ ಚಿತ್ರರಂಗದ ಬಹು ಬೇಡಿಕೆಯ ನಟಿ ಆಗಿದ್ದಂತಹ ಹಾಗೂ ಈಗಲೂ ಕೂಡ ಬಹು ಬೇಡಿಕೆಯ ನಟಿ ಆಗಿರುವಂತಹ ಕ್ರುಷರ್ ಅವರು ಕೂಡ ರಾಣಾ ದಗ್ಗುಬಾಟಿ ರವರ ಲವ್ ಕಹಾನಿ ಯಲ್ಲಿ ಕಂಡು ಬಂದಿದ್ದರು. ಹಲವಾರು ಪಾರ್ಟಿ ಸಮಾರಂಭಗಳಲ್ಲಿ ತ್ರಿಷಾ ಹಾಗೂ ರಾಣಾ ದಗ್ಗುಬಾಟಿ ರವರು ಒಟ್ಟಿಗೆ ಕಾಣಿಸಿಕೊಂಡಿರುವಂತಹ ಫೋಟೋಗಳು ಕೂಡ ವೈರಲ್ ಆಗಿದ್ದವು. ನಂತರ ತಮಿಳು ಚಿತ್ರರಂಗದ ಖ್ಯಾತ ನಟ ಧನುಷ್ ರವರ ಎಂಟರಿಂದ ಆಗಿ ಇವರಿಬ್ಬರ ನಡುವಿನ ಸಂಬಂಧ ಹಾಳಾಗಿ ಹೋಯಿತು. ಇವೆಲ್ಲ ಗತಕಾಲದ ಇತಿಹಾಸಗಳು ಆದರೆ ಈಗ ತಮ್ಮ ಪತ್ನಿಯೊಂದಿಗೆ ರಾಣಾ ದಗ್ಗುಬಾಟಿ ರವರು ಸುಖವಾಗಿ ಜೀವನ ನಡೆಸುತ್ತಿದ್ದಾರೆ. ಈ ವಿಚಾರದ ಕುರಿತಂತೆ ನಿಮ್ಮ ಒಪಿನಿಯನ್ ಅನ್ನು ತಪ್ಪದೇ ಹಂಚಿಕೊಳ್ಳಿ.

Leave A Reply

Your email address will not be published.