Neer Dose Karnataka
Take a fresh look at your lifestyle.

ನಿನ್ನೆ ದರ್ಶನ್ ಇಂದು ಸುದೀಪ್: ಕಷ್ಟದಲ್ಲಿದ್ದ ರವಿ ಚಂದ್ರನ್ ರವರಿಗೆ ಸುದೀಪ್ ಭೇಟಿ ಮಾಡಿ ಮಾಡಿದ್ದೇನು ಗೊತ್ತೇ?? ಎಲ್ಲರೂ ಒಮ್ಮೆಲೇ ಶಾಕ್.

52,941

ಕನ್ನಡದ ಸಿನಿಮಾ ಮಾಂತ್ರಿಕ ಕ್ರೇಜಿಸ್ಟಾರ್ ವಿ ರವಿಚಂದ್ರನ್ ಅವರು ಇಷ್ಟುವರ್ಷಗಳ ಕಾಲ ಚಿತ್ರರಂಗದಲ್ಲಿದ್ದು, ಸಿನಿಮಾರಂಗಕ್ಕೆ ಬಹಳಷ್ಟು ಕೊಡುಗೆ ನೀಡಿದ್ದಾರೆ. ಪ್ರೇಮಲೋಕ ಸಿನಿಮಾ ಮೂಲಕ ಕನ್ನಡ ಚಿತ್ರರಂಗದ ದಿಕ್ಕನ್ನೇ ಬದಲಿಸಿದವರು ರವಿಚಂದ್ರನ್. ಪ್ರಸ್ತುತ ಇವರು ರಾಜಾಜಿನಗರದಲ್ಲಿದ್ದ ಮನೆಯನ್ನು ಖಾಲಿ ಮಾಡಿ, ಬೇರೆ ಮನೆಗೆ ಶಿಫ್ಟ್ ಆಗಿದ್ದಾರೆ ಎನ್ನುವ ವಿಚಾರ ಭಾರಿ ವೈರಲ್ ಆಗಿದೆ. ರವಿಚಂದ್ರನ್ ಅವರು ಮನೆಯನ್ನು ಖಾಲಿ ಮಾಡಿದ್ದು ಯಾಕೆ ಎನ್ನುವ ಪ್ರಶ್ನೆ ಶುರುವಾಗಿದ್ದು, ಅದಕ್ಕೀಗ ಉತ್ತರ ಸಿಕ್ಕಿದೆ. ಇತ್ತಿಚೆಗೆ ಮಗನ ಮದುವೆಯನ್ನು ಮಾಡಿದರು ಕ್ರೇಜಿಸ್ಟಾರ್. ಮದುವೆ ಬಳಿಕ ಮಗ ಸೊಸೆ ಬೇರೆ ಮನೆಯಲ್ಲಿರಬೇಕು ಎಂದು ನಿರ್ಧಾರ ಮಾಡಿದ್ದರಂತೆ.

ಹಾಗಾಗಿ ಮಗ ಸೊಸೆ ಇಬ್ಬರನ್ನೇ ಕಳಿಸುವುದು ಚೆನ್ನಾಗಿರುವುದಿಲ್ಲ ಎಂದು ರವಿಚಂದ್ರನ್ ಅವರು ಈ ನಿರ್ಧಾರ ತೆಗೆದುಕೊಂಡಿದ್ದು, ಮಗ ಸೊಸೆಯ ಜೊತೆಗೆ ಇಡೀ ಕುಟುಂಬ ಹೊಸ ಮನೆಗೆ ಶಿಫ್ಟ್ ಆಗಿದೆ. ಅಷ್ಟೇ ಅಲ್ಲದೆ, ಎಲ್ಲಾ ರೀತಿಯಲ್ಲಿ ಯೋಚನೆ ಮಾಡಿದ್ದ ರವಿಚಂದ್ರನ್ ಅವರು ಕೆಲ ವರ್ಷಗಳ ಹಿಂದೆಯೇ ರಾಜಾಜಿನಗರದ ಮನೆಯನ್ನು ಖಾಲಿ ಮಾಡಬೇಕು ಎಂದುಕೊಂಡಿದ್ದರು. ಆದರೆ ಅವರ ತಾಯಿ ಆ ಮನೆಯ ಮೇಲೆ ಅಟ್ಯಾಚ್ಮೆಂಟ್ ಇಟ್ಟುಕೊಂಡಿದ್ದರಿಂದ ಮನೆಯನ್ನು ಬಿಟ್ಟು ಬಂದಿರಲಿಲ್ಲ. ರವಿಚಂದ್ರನ್ ಅವರ ತಾಯಿ ಮೃತರಾಗಿ ಕೆಲ ಸಮಯ ಕಳೆದಿದ್ದು ಈಗ ಮನೆಯಿಂದ ಹೊರಬಂದಿದ್ದಾರೆ..

ಅಷ್ಟೇ ಅಲ್ಲದೆ, ರವಿಚಂದ್ರನ್ ಅವರು ಸಿನಿಮಾಗಳ ಕಾರಣಕ್ಕೆ ಬಹಳಷ್ಟು ಸಾಲಗಳನ್ನು ಸಹ ಮಾಡಿಕೊಂಡಿದ್ದು, ಅದೆಲ್ಲವನ್ನು ತೀರಿಸಲು ಆಗದೆ ಕಷ್ಟದಲ್ಲಿದ್ದಾರೆ. ಇದರಿಂದ ರಿಯಾಲಿಟಿ ಶೋಗಳನ್ನು ಒಪ್ಪಿಕೊಂಡಿದ್ದಾರೆ. ಸಿನಿಮಾಗಳಲ್ಲಿ ಸಣ್ಣಪುಟ್ಟ ಪಾತ್ರಗಳಲ್ಲಿ ಸಹ ನಟಿಸುತ್ತಿದ್ದಾರೆ. ರವಿಚಂದ್ರನ್ ಅವರು ಕಷ್ಟದಲ್ಲಿ ಇರುವುದರಿಂದ ನಟ ಸುದೀಪ್ ಅವರು ರವಿಚಂದ್ರನ್ ಅವರ ಪರವಾಗಿ ನಿಂತಿದ್ದಾರೆ. ರವಿಚಂದ್ರನ್ ಅವರು ಹಲವು ವೇದಿಕೆಗಳಲ್ಲಿ ಸುದೀಪ್ ಅವರು ತಮ್ಮ ದೊಡ್ಡ ಮಗ ಎಂದು ಹೇಳಿಕೊಂಡಿದ್ದರು. ಅದೇ ರೀತಿ ಈಗ ಸುದೀಪ್ ಅವರು ರವಿಚಂದ್ರನ್ ಅವರ ಕಷ್ಟದಲ್ಲಿ ನಾನು ಸದಾ ಜೊತೆಯಲ್ಲಿರುತ್ತೇನೆ ಎಂದು ಹೇಳಿದ್ದಾರೆ. ಸುದೀಪ್ ಅವರು ಮಗನಾಗಿ ರವಿಚಂದ್ರನ್ ಅವರ ಪರವಾಗಿ ನಿಂತಿರುವುದಕ್ಕೆ ಎಲ್ಲರ ಮೆಚ್ಚುಗೆ ವ್ಯಕ್ತವಾಗುತ್ತಿದೆ.

Leave A Reply

Your email address will not be published.