Neer Dose Karnataka
Take a fresh look at your lifestyle.

ಮೊದಲ ಬಾರಿಗೆ ಕಾಂತಾರ ಸಿನಿಮಾ ನೋಡಿ ಅನುಷ್ಕಾ ಶರ್ಮ ಹೇಳಿದ್ದೇನು ಗೊತ್ತೇ?? ಚಿತ್ರ ಹೇಗಿದೆ ಗೊತ್ತೇ??

ಈಗ ಇಡೀ ಭಾರತ ಚಿತ್ರರಂಗದಲ್ಲಿ ಸದ್ದು ಮಾಡುತ್ತಿರುವುದು ಒಂದೇ ಕನ್ನಡ ಸಿನಿಮಾ ಕಾಂತಾರ, ಎಲ್ಲೆಡೆ ಕಾಂತಾರ ಸಿನಿಮಾದ್ದೇ ಹವಾ ಆಗಿದೆ. ರಿಷಬ್ ಶೆಟ್ಟಿ ಅವರ ನಿರ್ದೇಶನ, ರಚನೆ, ಅಭಿನಯ ಎಲ್ಲವೂ ಟಾಪ್ ಕ್ಲಾಸ್ ಎನ್ನುತ್ತಿದ್ದಾರೆ ಸಿನಿಪ್ರಿಯರು. ಕನ್ನಡದಲ್ಲಿ ಬಿಡುಗಡೆಯಾದ ಕಾಂತಾರ ಹೊರರಾಜ್ಯ, ಹೊರದೇಶ ಎಲ್ಲಾ ಕಡೆ ಸದ್ದು ಸಿನಿಪ್ರಿಯರಿಗೆ ಬಹಳ ಇಷ್ಟವಾದ ಕಾರಣ, ಬೇರೆ ಭಾಷೆಯ ಸಿನಿಮಾ ತಯಾರಕರು ಕಾಂತಾರ ಸಿನಿಮಾವನ್ನು ತಮ್ಮ ಭಾಷೆಗೆ ಡಬ್ ಮಾಡಿ ಬಿಡುಗಡೆ ಮಾಡಬೇಕು ಎಂದು ಕೇಳಿಕೊಂಡ ಕಾರಣ ಹಿಂದಿ, ತೆಲುಗು, ತಮಿಳ್ ಮತ್ತು ಮಲಯಾಳಂ ಭಾಷೆಯಲ್ಲಿ ಬಿಡುಗಡೆಯಾಗಿದೆ.

ಕನ್ನಡದ ಕಾಂತಾರ ಸಿನಿಮಾ ಎಲ್ಲಾ ಭಾಷೆಗಳಲ್ಲೂ ಸಹ ಸದ್ದು ಮಾಡುತ್ತಿದೆ. ಎಲ್ಲಾ ಭಾಷೆಯ ಸಿನಿಪ್ರಿಯರು ಸಿನಿಮಾವನ್ನು ಥಿಯೇಟರ್ ನಲ್ಲಿ ಸಿನಿಮಾ ನೋಡಿ ಎಂಜಾಯ್ ಮಾಡುತ್ತಿದ್ದಾರೆ. ಬೇರೆ ಭಾಷೆಯ ಸಿನಿಪ್ರಿಯರು ಮಾತ್ರವಲ್ಲದೆ ಕಲಾವಿದರು ಸಹ ಕಾಂತಾರ ಸಿನಿಮಾ ನೋಡಿ ಮೆಚ್ಚಿಕೊಂಡು, ಮೆಚ್ಚುಗೆಯ ಸುರಿಮಳೆಯನ್ನೇ ಸುರಿಸುತ್ತಿದ್ದಾರೆ. ನಟ ಧನುಷ್, ನಟ ಪ್ರಭಾಸ್, ನಟ ಕಾರ್ತಿ, ನಟ ಪೃಥ್ವಿರಾಜ್ ಸುಕುಮಾರನ್ ಸೇರಿದಂತೆ ಇನ್ನು ಕೆಲವು ಕಲಾವಿದರು ಸಹ ಮಾತನಾಡಿದ್ದು, ಇದೀಗ ಕರಾವಳಿ ಬೆಡಗಿ ಅನುಷ್ಕಾ ಶೆಟ್ಟಿ ಅವರು ಸಹ ಕಾಂತಾರ ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಾರೆ. ಅನುಷ್ಕಾ ಶೆಟ್ಟಿ ಅವರು ಸಿನಿಮಾ ನೋಡಿ, ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.

“ಕಾಂತಾರ ಸಿನಿಮಾ ನೋಡಿದೆ.. ಸಿನಿಮಾ ಸಂಪೂರ್ಣವಾಗಿ ನನಗೆ ತುಂಬಾ ಇಷ್ಟ ಆಯಿತು. ಕಾಂತಾರ ಸಿನಿಮಾದ ಪ್ರತಿಯೊಬ್ಬ ಕಲಾವಿದರು, ಪ್ರೊಡ್ಯುಸರ್, ಟೆಕ್ನಿಷಿಯನ್ಸ್ ಎಲ್ಲರಿಗೂ ಸಹ ಶುಭಾಶಯಗಳು. ಇಡೀ ಕಾಂತಾರ ತಂಡ ನೀವು ಅದ್ಭುತವಾಗಿದ್ದೀರಿ.. ಇಂತಹ ಒಂದು ಅನುಭಕ್ಕೆ ನೀಡಿದ್ದಕ್ಕೆ ಎಲ್ಲರಿಗೂ ಬಹಳ ಧನ್ಯವಾದಗಳು.. ರಿಷಬ್ ಶೆಟ್ಟಿ ನೀವು ಅದ್ಭುತವಾಗಿದ್ದಿರಿ..ಈ ಸಿನಿಮಾವನ್ನು ಥಿಯೇಟರ್ ನಲ್ಲಿ ನೋಡಿ.. ಮಿಸ್ ಮಾಡಿಕೊಳ್ಳಬೇಡಿ..” ಎಂದು ಅನುಷ್ಕಾ ಶೆಟ್ಟಿ ಅವರು ಸೋಷಿಯಲ್ ಮೀಡಿಯಾ ಮೂಲಕ ಕಾಂತಾರ ಸಿನಿಮಾ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

Comments are closed.