Neer Dose Karnataka
Take a fresh look at your lifestyle.

ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟ ಖಡಕ್ ಬ್ಯುಟಿ: ಎಂಟ್ರಿ ನೋಡಿ ಶೇಕ್ ಆದ ಬಿಗ್ ಬಾಸ್ ಹುಡುಗರು. ವೈಲ್ಡ್ ಕಾರ್ಡ್ ಎಂಟ್ರಿ ಯಾರು ಗೊತ್ತೇ??

ಬಿಗ್ ಬಾಸ್ ಶೋ ಎಂದರೆ ಎಲ್ಲರಿಗೂ ವಿಶೇಷ ಆಸಕ್ತಿ, ಕುತೂಹಲ ಇರುವುದಂತೂ ಖಂಡಿತ. ಪ್ರತಿ ವರ್ಷ ಬಿಗ್ ಬಾಸ್ ಶೋ ಶುರುವಾಗುತ್ತದೆ ಎಂದರೆ ಮನೆಗೆ ಬರುವ ಸ್ಪರ್ಧಿಗಳು ಯಾರು, ಬಿಗ್ ಬಾಸ್ ಏನೆಲ್ಲಾ ಟಾಸ್ಕ್ ಕೊಡುತ್ತಾರೆ ಎನ್ನುವ ಕುತೂಹಲ ಎಲ್ಲಾ ಜನರಲ್ಲೂ ಇರುತ್ತದೆ. ಇನ್ನು ಪ್ರತಿ ವೀಕೆಂಡ್ ನಲ್ಲಿ ಕಿಚ್ಚ ಸುದೀಪ್ ಅವರನ್ನು ನೋಡುವ ಸಲುವಾಗಿ ಬಿಗ್ ಬಾಸ್ ನೋಡುವ ಒಂದು ವರ್ಗ ಸಹ ಇದೆ. ಹೀಗೆ ಬಿಗ್ ಬಾಸ್ ಶೋ ಒಂದಲ್ಲಾ ಒಂದು ಆಕರ್ಷಣೆಯಿಂದ ಜನರನ್ನು ಆಕರ್ಷಿಸುತ್ತಿದೆ. ಈಗ ಕನ್ನಡದಲ್ಲಿ 9ನೇ ಸೀಸನ್ ಭರ್ಜರಿಯಾಗಿ ಸಾಗುತ್ತಿದೆ.

ಬಿಗ್ ಬಾಸ್ ಮನೇ ಮಂದಿ ಈಗ 4ನೇ ವಾರಕ್ಕೆ ಕಾಲಿಟ್ಟಿದ್ದಾರೆ. ಮನೆಯಿಂದ ಮೂರು ಸ್ಪರ್ಧಿಗಳು ಎಲಿಮಿನೇಟ್ ಆಗಿದ್ದಾರೆ. ಮನೆಯಲ್ಲಿರುವ ಸ್ಪರ್ಧಿಗಳು ಟಾಸ್ಕ್ ಗಳ ಮೂಲಕ ಜನರನ್ನು ರಂಜಿಸುವುದರ ಜೊತೆಗೆ, ಹಾಡು ಹೇಳುತ್ತಾ, ಡ್ಯಾನ್ಸ್ ಮಾಡುತ್ತಾ, ಕ್ರಿಯಾಶೀಲವಾಗಿ ಜನರನ್ನು ಮನರಂಜಿಸುತ್ತಿದ್ದಾರೆ. ಇದೆಲ್ಲಾ ಏನೇ ಇದ್ದರುಜ್ ಮನೆಯಲ್ಲಿ ಏನೋ ಒಂದು ಅಂಶ ಮಿಸ್ ಆಗುತ್ತಿದೆ ಎಂದು ವೀಕ್ಷಕರಿಗೆ ಅನ್ನಿಸುತ್ತಿದೆ. ಸಾಮಾನ್ಯವಾಗಿ ಬಿಗ್ ಬಾಸ್ ಮನೆಯಲ್ಲಿ ಹೆಚ್ಚು ಗಾಸಿಪ್ಸ್ ಇರುತ್ತದೆ. ಈ ಸೀಸನ್ ನಲ್ಲಿ ಹೆಚ್ಚು ಗಾಸಿಪ್ಸ್ ಇಲ್ಲ, ಸುದ್ದಿಗಳು ಕೂಡ ಜಾಸ್ತಿ ಇಲ್ಲ.

ಹಾಗಾಗಿ ಬಿಗ್ ಬಾಸ್ ಮನೆಯೊಳಗೆ ಒಬ್ಬ ಸ್ಪರ್ಧಿ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಬರುತ್ತಾರೆ ಎನ್ನಲಾಗುತ್ತಿದೆ. ಆ ಸ್ಪರ್ಧಿ ಸೋನು ಗೌಡ ಅವರು ಎಂದು ಹೇಳಲಾಗುತ್ತಿದೆ. ಸೋನು ಗೌಡ ಅವರು ಓಟಿಟಿ ಸೀಸನ್ ನಲ್ಲಿ ಕಂಟೆಂಟ್ ಕ್ವೀನ್ ಎನ್ನಿಸಿಕೊಂಡಿದ್ದವರು. ಬಿಗ್ ಬಾಸ್ ಮನೆಯನ್ನು ಇನ್ನು ಹೆಚ್ಚು ರಂಗು ರಂಗಾಗಿಸಲು, ಬಿಗ್ ಬಾಸ್ ಮನೆಗೆ ಕಂಟೆಂಟ್ ಸಿಗಲಿ ಎನ್ನುವ ಕಾರಣದಿಂದ ಸೋನು ಶ್ರೀನಿವಾಸ್ ಗೌಡ ಅವರನ್ನು ಬಿಗ್ ಬಾಸ್ ಮನೆಗೆ ಕಳಿಸಲಾಗುತ್ತಿದೆ ಎಂದು ಮಾಹಿತಿ ಸಿಕ್ಕಿದೆ. ಒಟ್ಟಿನಲ್ಲಿ ಈ ವಿಚಾರ ಕೇಳಿ, ಸೋನು ಅಭಿಮಾನಿಗಳಿಗೆ ಬಹಳ ಸಂತೋಷ ಆಗಿದೆ.

Comments are closed.