Neer Dose Karnataka
Take a fresh look at your lifestyle.

ಅಲ್ಲೂ ಅರ್ಜುನ್ ತಂದೆಗೆ ಭರ್ಜರಿ ಸಿಹಿ ಕೊಟ್ಟ ಕಾಂತಾರ:ತೆಲುಗು ಕಾಂತಾರ ಮೊದಲ ದಿನ ಕಲೆಕ್ಷನ್ ಕೇಳಿದರೆ ದೇಶಕ್ಕೆ ನಡುಕ. ಎಷ್ಟಾಗಿದೆ ಗೊತ್ತೇ?

ಚಿತ್ರರಂಗದಲ್ಲಿ ಈಗ ಎಲ್ಲೆಲ್ಲೂ ಕಾಂತಾರ ಹವಾ ಜೋರಾಗಿದೆ. ಮೊದಲಿಗೆ ವಿಶ್ವಾದ್ಯಂತ ಕನ್ನಡದಲ್ಲೇ ಬಿಡುಗಡೆಯಾಗಿ ಎಲ್ಲೆಡೆ ಭಾರಿ ಸದ್ದು ಮಾಡಿ 60 ಕೋಟಿಗಿಂತ ಹೆಚ್ಚು ಹಣಗಳಿಕೆ ಮಾಡಿದ ಕಾಂತಾರ ಸಿನಿಮಾ ಈಗ ಬೇರೆ ಭಾಷೆಗಳಿಗೆ ಡಬ್ ಆಗಿ ಅದ್ಭುತವಾದ ರೆಸ್ಪಾನ್ಸ್ ಪಡೆಯುತ್ತದೆ. ಆಕ್ಟೊಬರ್ 14 ರಂದು ಹಿಂದಿಯಲ್ಲಿ, ಆಕ್ಟೊಬರ್ 15ರಂದು ತೆಲುಗಿನಲ್ಲಿ ಕಾಂತಾರ ಸಿನಿಮಾ ಬಿಡುಗಡೆ ಆಗಿದೆ. ತಮಿಳು ಭಾಷೆಯಲ್ಲಿ ಸಹ ಬಿಡುಗಡೆ ಆಗಿದ್ದು, ಮಲಯಾಳಂ ನಲ್ಲಿ ಆಕ್ಟೊಬರ್ 20 ರಂದು ಬಿಡುಗಡೆ ಆಗುತ್ತದೆ. ಇನ್ನು ತುಳು ಭಾಷೆಗೆ ಸಹ ಡಬ್ಬಿಂಗ್ ಕೆಲಸ ನಡೆಯುತ್ತಿದೆ. ಹೀಗಿರುವಾಗ ಕಾಂತಾರ ಸಿನಿಮಾ ತೆಲುಗು ವರ್ಷದ ಫಸ್ಟ್ ಡೇ ಕಲೆಕ್ಷನ್ ಎಲ್ಲರನ್ನು ಬೆಚ್ಚಿಬೀಳಿಸಿದೆ.

ತೆಲುಗಿನ ಸಿನಿಪ್ರಿಯರು ಕನ್ನಡ ವರ್ಶನ್ ಅನ್ನೇ ನೋಡಿ ಬಹಳ ಇಷ್ಟಪಟ್ಟಿದ್ದರು, ಇದೀಗ ಅವರದ್ದೇ ಭಾಷೆಯಲ್ಲಿ ಸಿನಿಮಾ ನೋಡಿ, ಇನ್ನೊಮ್ಮೆ ಸಿನಿಮಾ ನೋಡಲು ಥಿಯೇಟರ್ ಗೆ ಮುಗಿಬೀಳುತ್ತಿದ್ದಾರೆ. ತೆಲುಗಿನಲ್ಲಿ ಕಾಂತಾರ ಸಿನಿಮಾವನ್ನು ನಟ ಅಲ್ಲು ಅರ್ಜುನ್ ಅವರ ತಂದೆ ಅಲ್ಲು ಅರವಿಂದ್ ಅವರು ಖರೀದಿ ಮಾಡಿ, ತಮ್ಮ ಗೀತಾ ಆರ್ಟ್ಸ್ ಬ್ಯಾನರ್ ಮೂಲಕ ಬಿಡುಗಡೆ ಮಾಡಿದ್ದು, ಕಡಿಮೆ ಹಣಕ್ಕೆ ಕಾಂತಾರ ಸಿನಿಮಾ ಖರೀದಿ ಮಾಡಿದ್ದರು ಎನ್ನಲಾಗಿದೆ. ಆದರೆ ಕಾಂತಾರ ಸಿನಿಮಾದ ಮೊದಲ ದಿನದ ಕಲೆಕ್ಷನ್ ನೋಡಿ, ಸ್ವತಃ ಅಲ್ಲು ಅರವಿಂದ್ ಅವರಿಗೆ ಶಾಕ್ ಆಗಿದೆ. ಕಾಂತಾರ ತೆಲುಗು ವರ್ಷನ್ ಬಿಡುಗಡೆಯಾದ ಮೊದಲ ದಿನ ಗಳಿದಿರುವುದು ಬರೋಬ್ಬರಿ 5 ಕೋಟಿ ರೂಪಾಯಿಗಳು ಎಂದು ಮಾಹಿತಿ ಸಿಕ್ಕಿದೆ.

ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ 4ಕೋಟಿ, ವಿಶ್ವಾದ್ಯಂತ ಇತರ ಚಿತ್ರಮಂದಿರಗಳಲ್ಲಿ ತೆರೆಕಂಡಿರುವ ತೆಲುಗು ವರ್ಷನ್ ಇಂದ 1 ಕೋಟಿ ರೂಪಾಯಿ ಗಳಿಕೆ ಆಗಿದೆ ಎಂದು ತಿಳಿದು ಬಂದಿದೆ. ಶನಿವಾರ ಇದಕ್ಕಿಂತ ಹೆಚ್ಚು ಗಳಿಕೆ ಮಾಡಿದ್ದು, ಭಾನುವಾರ ಕಲೆಕ್ಷನ್ ಇನ್ನು ಜಾಸ್ತಿಯಾಗಿರುತ್ತದೆ ಎಂದು ಮಾಹಿತಿ ಸಿಕ್ಕಿದೆ. ಇನ್ನು ಹಿಂದಿಯಲ್ಲಿ ಸಹ ಕಾಂತಾರ ಹವಾ ಜೋರಾಗಿದೆ, ಹಿಂದಿ ವರ್ಷನ್ ಬರೋಬ್ಬರಿ 2500 ಸ್ಕ್ರೀನ್ ಗಳಲ್ಲಿ ತೆರೆಕಂಡಿತ್ತು, ಮೊದಲ 1.27 ಕೋಟಿ, 2ನೇ ದಿನ 2.75 ಕೋಟಿ ಕಲೆಕ್ಷನ್ ಮಾಡಿದ್ದು, ಭಾನುವಾರ ಇನ್ನು ಜಾಸ್ತಿ ಆಗಿರುವ ಸಾಧ್ಯತೆ ಇದೆ. ಈ ಮೂಲಕ ಕಾಂತಾರ ಸಿನಿಮಾ 100 ಕೋಟಿ ಕ್ಲಬ್ ಸೇರಿದ್ದು, ಕಾಂತಾರ ಅಬ್ಬರ ನಿಲ್ಲುವ ಹಾಗೆ ಕಾಣುತ್ತಿಲ್ಲ. ಮುಂದಿನ ದಿನಗಳಲ್ಲಿ 250 ಕೋಟಿ ಕಲೆಕ್ಷನ್ ದಾಟಿ, ಕೆಜಿಎಫ್ ಚಾಪ್ಟರ್ 1 ದಾಖಲೆ ಮುರಿಯಬಹುದು ಎನ್ನುವ ಭರವಸೆ ಮೂಡಿಸಿದೆ.

Comments are closed.