Neer Dose Karnataka
Take a fresh look at your lifestyle.

ವಿಚ್ಚೇದನ ಪಡೆದುಕೊಂಡ ಮೇಲೆ, ತಾಳಿಯನ್ನು ಸಮಂತಾ ಏನು ಮಾಡಿದ್ದಾರೆ ಗೊತ್ತೇ?? ಇಂಗು ಇರ್ತಾರ. ಸಮಂತಾ ಹೀಗೆ ಮಾಡಿದ್ದು ಎಷ್ಟು ಸರಿ?

1,990

ನಟಿ ಸಮಂತಾ ಮತ್ತು ನಾಗಚೈತನ್ಯ ಅವರ ಜೋಡಿ ದಕ್ಷಿಣ ಭಾರತ ಚಿತ್ರರಂಗದ ಬಹಳ ಮುದ್ದಾದ ಜೋಡಿ ಎಂದೇ ಹೆಸರು ಮಾಡಿದ್ದರು. ಈ ಜೋಡಿಗೆ ಬಹಳ ದೊಡ್ಡ ಅಭಿಮಾನಿ ಬಳಗ ಇದೆ. ಯೇ ಮಾಯ ಚೇಸಾವೆ ಸಿನಿಮಾ ಸಮಯದಲ್ಲಿ ಈ ಜೋಡಿ ಮೊದಲಿಗೆ ಭೇಟಿಯಾದರು, ಐದಾರು ವರ್ಷಗಳ ಕಾಲ ಒಬ್ಬರನ್ನೊಬ್ಬರು ಪ್ರೀತಿಸಿದ ಸಮಂತಾ ಮತ್ತು ಚೈತನ್ಯ ಇಬ್ಬರು ಸಹ 2017ರಲ್ಲಿ ತಮ್ಮ ಎರಡು ಕುಟುಂಬಗಳನ್ನು ಒಪ್ಪಿಸಿ ಅದ್ಧೂರಿಯಾಗಿ ಮದುವೆಯಾಗಿದ್ದರು. ಇವರ ಮದುವೆ ಒಂದು ರೀತಿ ಫೇರಿ ಟೇಲ್ ವೆಡ್ಡಿಂಗ್ ರೀತಿ ಇತ್ತು ಎಂದರೆ ತಪ್ಪಾಗುವುದಿಲ್ಲ.

ಮದುವೆಯಾಗಿ ಬಹಳ ಸಂತೋಷವಾಗಿ ಅನ್ಯೋನುವಾಗಿ ಜೀವನ ನಡೆಸುತ್ತಿದ್ದ ಈ ಜೋಡಿ, ಮದುವೆಯಾದ ನಾಲ್ಕೇ ವರ್ಷಕ್ಕೆ ವಿಚ್ಛೇದನ ಪಡೆದುಕೊಂಡರು. ಇವರಿಬ್ಬರು ವಿಚ್ಛೇದನ ಪಡೆಯುತ್ತಾರೆ ಎನ್ನುವ ಚಿತ್ರರಂಗ, ಅಭಿಮಾನಿ ಬಳಗ ಎಲ್ಲರೂ ಸಹ ಶಾಕ್ ಗೆ ಒಳಗಾಗಿದ್ದರು. ಈ ಜೋಡಿ ಬಗ್ಗೆ ಈಗಲೂ ಕೆಲವು ಬಾರಿ ಚರ್ಚೆಗಳು ನಡೆಯುತ್ತಲಿರುತ್ತದೆ. ಇದೀಗ ಸಮಂತಾ ಅವರ ಬಗ್ಗೆ ಮತ್ತೊಂದು ವಿಚಾರ ಭಾರಿ ಸುದ್ದಿಯಾಗುತ್ತಿದೆ. ಅದು ಸಮಂತಾ ಅವರ ಮದುವೆಯಲ್ಲಿ ಬಳಸಿದ ಬಟ್ಟೆಗಳು ಮತ್ತು ಆಭರಣದ ವಿಚಾರಗಳ ಬಗ್ಗೆ. ಸಮಂತಾ ಅವರು ಮದುವೆಯಲ್ಲಿ ಧರಿಸಿದ್ದ ಆಭರಣಗಳು ಎಲ್ಲವೂ ಚೈತನ್ಯ ಅವರ ತಾಯಿ ಲಕ್ಷ್ಮಿ ದಗ್ಗುಬಾಟಿ ಅವರ ಕುಟುಂಬಕ್ಕೆ ಸೇರಿದ ಒಡವೆಗಳಾಗಿದೆ..

ಮದುವೆಯ ಸಮಯದಲ್ಲಿ ಸಮಂತಾ ಅವರು ಧರಿಸಿದ್ದ ಆಭರಣಗಳನ್ನು ಮತ್ತು ಸೀರೆಗಳನ್ನು ಸಮಂತಾ ಅವರು ತಮ್ಮ ಮ್ಯಾನೇಜರ್ ಮೂಲಕ ಲಕ್ಷ್ಮಿ ದಗ್ಗುಬಾಟಿ ಅವರ ಕುಟುಂಬಕ್ಕೆ ಕಳಿಸಿಕೊಟ್ಟಿದ್ದಾರೆ. ಇನ್ನು ಸಮಂತಾ ಅವರ, ಮದುವೆಯಲ್ಲಿ ಚೈತನ್ಯ ಅವರು ಕಟ್ಟಿದ ತಾಳಿಯ ಬಗ್ಗೆ ಸಹ ಸುದ್ದಿಗಳು ಕೇಳಿಬರುತ್ತಿದೆ. ಆ ತಾಳಿ ಬೊಟ್ಟನ್ನು ಲಕ್ಷ್ಮಿ ದಗ್ಗುಬಾಟಿ ಅವರ ತಾಯಿ ತಮ್ಮ ಮಗಳಿಗಾಗಿ ನೀಡಿದ್ದರಂತೆ. ಸಮಂತಾ ಅವರ ತಾಳಿಯಲ್ಲಿದ್ದ ಮತ್ತೊಂದು ಬೊಟ್ಟನ್ನು, ಸಮಂತಾ ಅವರ ತಾಯಿ ನೀಡಿದ್ದರಂತೆ. ಹಾಗಾಗಿ ಲಕ್ಷ್ಮಿ ದಗ್ಗುಬಾಟಿ ಅವರಿಂದ ಬಂದಿದ್ದ ತಾಳಿಯ ಬೊಟ್ಟನ್ನು ಸಹ ಸಮಂತಾ ಅವರು ಹಿಂದಿರುಗಿಸಿದ್ದಾರೆ ಎಂದು ಮಾಹಿತಿ ಸಿಕ್ಕಿದೆ..

Leave A Reply

Your email address will not be published.