Neer Dose Karnataka
Take a fresh look at your lifestyle.

ಕಾಂತಾರ ಸಿನೆಮಾವನ್ನು ಚಿಲ್ಲರೆ ಹಣಕ್ಕೆ ವಿತರಣಾ ಹಕ್ಕು ಪಡೆದ ಅಲ್ಲೂ ಅರ್ಜುನ ತಂದೆಗೆ ಬಾರಿ ಲಾಭ: ಪಡೆದದ್ದು ಎಷ್ಟು ಎರಡೇ ದಿನಕ್ಕೆ ಎಷ್ಟು ಬಂದಿದೆ ಗೊತ್ತೇ??

3,167

ಕಾಂತಾರ ಸಿನಿಮಾ ದಿನಗಳು ಕಳೆಯುತ್ತಾ, ಈ ಸಿನಿಮಾ ಮೇಲೆ ಕ್ರೇಜ್ ಜಾಸ್ತಿಯಾಗುತ್ತಲೇ ಇದೆ. ಸಿನಿಮಾ ನೋಡಲು ಸಿನಿಪ್ರಿಯರು ಮುಗಿಬಿದ್ದು ಥಿಯೇಟರ್ ಗೆ ಬರುತ್ತಿದ್ದಾರೆ. ಕನ್ನಡದಲ್ಲಿ ಬಿಡುಗಡೆಯಾದ ಕಾಂತಾರ, ಕನ್ನಡ ವರ್ಷನ್ ನಲ್ಲೇ 70 ಕೋಟಿಗಿಂತ ಹೆಚ್ಚು ಗಳಿಸಿದೆ. ಕಳೆದ ಶುಕ್ರವಾರ ತೆಲುಗು, ತಮಿಳು, ಹಿಂದಿ ಭಾಷೆಯಲ್ಲಿ ಬಿಡುಗಡೆ ಆಗಿದ್ದು. ಈ ವಾರ ಮಲಯಾಳಂ ಭಾಷೆಯಲ್ಲಿ ಬಿಡುಗಡೆ ಆಗಲಿದೆ. ಕನ್ನಡ ಸಿನಿಮಾ ಡಿಮ್ಯಾಂಡ್ ಇಂದಾಗಿ ಪ್ಯಾನ್ ಇಂಡಿಯಾ ಸಿನಿಮಾ ಆಗಿದೆ. ಈ ಸಿನಿಮಾವನ್ನು ತೆಲುಗಿನಲ್ಲಿ ಗೀತಾ ಆರ್ಟ್ಸ್ ಸಂಸ್ಥೆ ವಿತರಣೆ ಮಾಡಿದೆ.

ಇದು ನಟ ಅಲ್ಲು ಅರ್ಜುನ್ ಅವರ ತಂದೆಯ ಸಂಸ್ಥೆ. ಕಾಂತಾರ ಸಿನಿಮಾವನ್ನು ಅಲ್ಲು ಅರವಿಂದ್ ಅವರು ಬಹಳ ಕಡಿಮೆ ಹೆಚ್ಚುಕಮ್ಮಿ 3 ಕೋಟಿ ರೂಪಾಯಿ ಕೊಟ್ಟು ಹೊಂಬಾಳೆ ಸಂಸ್ಥೆ ಇಂದ ಖರೀದಿ ಮಾಡಿದ್ದರು. ಆದರೆ ಈಗ ಕಾಂತಾರ ಸಿನಿಮಾ ತೆಲುಗಿನಲ್ಲಿ ಭಾರಿ ಸದ್ದು ಮಾಡುವುದರ ಜೊತೆಗೆ ಭರ್ಜರಿಯಾಗಿ ಕಲೆಕ್ಷನ್ ಮಾಡುತ್ತಿದ್ದು, ಅಲ್ಲು ಅರವಿಂದ್ ಅವರು ಇದರಿಂದ ಬಹಳ ಸಂತೋಷವಾಗಿದ್ದಾರೆ. ಕಾಂತಾರ ತೆಲುಗು ವರ್ಷನ್ ಸಿನಿಮಾ ಮೊದಲ ದಿನವೇ 5 ಕೋಟಿ ಗಳಿಸಿತ್ತು, ಮೊದಲ ದಿನದಿಂದಲೇ ಅಲ್ಲು ಅರವಿಂದ್ ಅವರಿಗೆ ಲಾಭ ಶುರುವಾಗಿದೆ ಎಂದರೆ ತಪ್ಪಾಗುವುದಿಲ್ಲ. ಎರಡನೇ ದಿನಕ್ಕೆ 8 ಕೋಟಿ ಗಳಿಕೆ ಮಾಡಿದೆ.

ಹೀಗೆ ಕಾಂತಾರ ಸಿನಿಮಾ ಅತ್ಯುತ್ತಮವಾಗಿ ಪ್ರದರ್ಶನ ಕಾಣುತ್ತಾ ಸಾಗುತ್ತಿದೆ. ಎಲ್ಲಾ ಭಾಷೆಯಲ್ಲೂ ಸಿನಿಮಾ ಸೂಪರ್ ಹಿಟ್ ಆಗಿದೆ. ತೆಲುಗು ಮತ್ತು ತಮಿಳಿನಲ್ಲಿ ಹಾಗೂ ಹಿಂದಿಯಲ್ಲಿ ಸ್ಟಾರ್ ನಟರ ಸಿನಿಮಾಗಳನ್ನೇ ಹಿಂದಿಕ್ಕಿ ಕಾಂತಾರ ಸಿನಿಮಾ ಮುನ್ನುಗ್ಗುತ್ತಿದೆ. ನಮ್ಮ ಕರಾವಳಿ ಮಣ್ಣಿನ ಕಥೆ, ಸಂಸ್ಕೃತಿ ಆಚರಣೆಗಳನ್ನು ಜನರು ಮೆಚ್ಚಿಕೊಳ್ಳುತ್ತಿದ್ದಾರೆ. ಈ ವಾರ ಮಲಯಾಳಂ ನಲ್ಲಿ ಸಿನಿಮಾ ಬಿಡುಗಡೆ ಆಗಲಿದ್ದು, ಕೇರಳದಲ್ಲಿ ಸಹ ಭೂತಕೋಲ ಆಚರಣೆಗಳು ನಡೆಯುವುದರಿಂದ ಅವರಿಗೂ ಕಾಂತಾರ ಸಿನಿಮಾ ಬಹಳ ಇಷ್ಟ ಆಗುವ ಭರವಸೆ ಇದೆ.

Leave A Reply

Your email address will not be published.