Neer Dose Karnataka
Take a fresh look at your lifestyle.

ಯಾರು ಎಂದು ತಿಳಿದ ಕೆಲವೇ ದಿನಗಳಿಗೆ ಸಿಕ್ಕಿ ಬಿದ್ದ ಡೆವಿಲ್ ಪಾತ್ರದಾರಿ: ರೆಡ್ ಹ್ಯಾಂಡ್ ಸಿಕ್ಕಿ ಬಿದ್ದ ಭಾರ್ಗವಿ: ಧಾರಾವಾಹಿಯಲ್ಲಿ ಹೊಸ ಟ್ವಿಸ್ಟ್ ಏನು ಗೊತ್ತೇ??

8,114

ಕಲರ್ಸ್ ಕನ್ನಡ ವಾಹಿನಿಯಲ್ಲಿ ರಾತ್ರಿ 8:30 ಕ್ಕೆ ಪ್ರಸಾರ ಆಗುತ್ತಿರುವ ಧಾರವಾಹಿ ಲಕ್ಷಣ ಈಗ ಭಾರಿ ಟ್ವಿಸ್ಟ್ ಗಳ ಮೂಲಕ ವೀಕ್ಷಕರಿಗೆ ಸಖತ್ ಮನರಂಜನೆ ನೀಡುತ್ತಿದೆ. ಭೂಪತಿ ನಕ್ಷತ್ರ ಗೆ ಇಷ್ಟು ದಿನಗಳ ಕಾಲ ಮೌರ್ಯ ವಿಲ್ಲನ್ ಆಗಿದ್ದನು, ಆದರೆ ಈಗ ಹೊಸ ವಿಲ್ಲನ್ ಎಂಟ್ರಿ ಆಗಿದೆ. ಚಂದ್ರಶೇಖರ್ ತಂಗಿ ಭಾರ್ಗವಿಯೇ ಡೇವಿಲ್ ಆಗಿದ್ದಾಳೆ..ಮನೆಯಲ್ಲೇ ಇದ್ದುಕೊಂಡು ಅಣ್ಣನ ವಿರುದ್ಧವೇ, ಅಣ್ಣನನ್ನೇ ಕೊಲೆ ಮಾಡಬೇಕು ಎಂದು ಹೊಂಚು ಹಾಕುತ್ತಿದ್ದಾಳೆ ಭಾರ್ಗವಿ. ಇಷ್ಟು ವರ್ಷಗಳ ಕಾಲ ಮನೆಯಲ್ಲಿ ಯಾರಿಗೂ ಡೌಟ್ ಬರದ ಹಾಗೆ ಅವರ ಜೊತೆಯಲ್ಲೇ ಇದ್ದಾಳೆ..

ಪ್ರಖ್ಯಾತ್ ಹತ್ಯೆಯನ್ನು ಚಂದ್ರಶೇಖರ್ ಗೆ ಭಯ ಆಗಬೇಕು ಎಂದು ಆತ ನೋಡುವ ಹಾಗೆ ಮಾಡಿದ್ದಾಳೆ ಭಾರ್ಗವಿ. ಇದರಿಂದ ಎಲ್ಲರೂ ಭಯವಾಗಿ ಮನೆಗೆ ಬಂದಾಗ, ಭಾರ್ಗವಿ ಬಾಗಿಲು ತೆರೆಯುತ್ತಾಳೆ, ಆಗ ಸಿಎಸ್ ಆ ಡೆವಿಲ್ ನನ್ನ ಮುಂದೆ ಬಂದರೆ ಸುಮ್ಮನೆ ಬಿಡುವುದಿಲ್ಲ ಎನ್ನುತ್ತಾರೆ, ಆಗ ಭಾರ್ಗವಿ ಯಾರನ್ನು ಹುಡುಕುತ್ತಿದ್ದಿಯಾ ಅಣ್ಣ ಎಂದು ಕೇಳುತ್ತಾರೆ, ಆಗ ಸಿಎಸ್, ನಡೆದ ಘಟನೆ ಹೇಳಿ, ಅದನ್ನು ನೋಡಿ ನಾನು ಒದ್ದಾಡುತ್ತಿದ್ದೇನೆ ಎಂದು ಹೇಳುತ್ತಾರೆ, ಒದ್ದಾಡಲಿ ಅಂತಾನೆ ಅಲ್ವಾ ಹಾಗೆ ಮಾಡಿರೋದು ಎಂದು ಹೇಳಿದಾಗ ಎಲ್ಲರೂ ಶಾಕ್ ಆಗಿ ಭಾರ್ಗವಿಯ ಕಡೆಗೆ ನೋಡುತ್ತಾರೆ.

ಬಳಿಕ ಡೆವಿಲ್ ಭಾರ್ಗವಿ ನಕ್ಷತ್ರಾಗೆ ಕರೆಮಾಡಿ, ಇದು ನನ್ನ ಚಂದ್ರಶೇಖರ್ ನಡುವೆ ನಡೆಯುತ್ತಿರುವ ಯುದ್ಧ, ನೀನು ಇದರಿಂದ ದೂರ ಇರು, ಇಲ್ಲವಾದರೆ ನಿನ್ನನ್ನು ಮುಗಿಸಿಬಿಡುತ್ತೇನೆ ಎಂದು ಧಮ್ಕಿ ಹಾಕುತ್ತಾಳೆ. ಆದರೆ ಭಯಪಡದ ನಕ್ಷತ್ರಾ, ನಮ್ಮಪ್ಪನ ವಿಷಯಕ್ಕೆ ಬಂದರೆ ಸುಮ್ಮನೆ ಇರುವುದಿಲ್ಲ ಎನ್ನುತ್ತಾಳೆ. ಬಳಿಕ ಭಾರ್ಗವಿ, ಆ ಸಿಮ್ ತೆಗೆದು ಮುರಿದು ಹಾಕಿ, ತಿರುಗಿ ನೋಡಿದಾಗ ಭೂಪತಿ ಅಲ್ಲಿರುತ್ತಾನೆ. ಭಾರ್ಗವಿ ಭೂಪತಿ ಮುಂದೆ ಸಿಕ್ಕಿಹಾಕಿಕೊಂಡು ಬಿಟ್ರಾ ಎನ್ನುವ ಕುತೂಹಲ ಈಗ ಶುರುವಾಗಿದೆ. ಭೂಪತಿ ಮುಂದೆ ಭಾರ್ಗವಿ ಸಿಕ್ಕಿಹಾಕಿಕೊಂಡಿದ್ದಾಳಾ ಅಥವಾ ಭೂಪತಿ ಕೇಳಿಸಿಕೊಂಡಿಲ್ಲವಾ ಎಂದು ಮುಂದಿನ ಎಪಿಸೋಡ್ ಗಳಲ್ಲಿ ಗೊತ್ತಾಗಲಿದೆ.

Leave A Reply

Your email address will not be published.