Neer Dose Karnataka
Take a fresh look at your lifestyle.

ನಡೆದು ಹೋಯಿತು ಶುಕ್ರನ ತ್ರಿಕೋನ ರಾಜಯೋಗ: ಇನ್ನು ಮೂರು ರಾಶಿಗಳ ಅದೃಷ್ಟ ಶುರು. ಯಾರಿಗೆ ಗೊತ್ತೇ??

ಜ್ಯೋತಿಷ್ಯ ಶಾಸ್ತ್ರದಲ್ಲಿ ತಿಳಿಸಿರುವ ಪ್ರಕಾರ, ಇಂದು ಆಕ್ಟೊಬಫ್ 18ರಂದು ಶುಕ್ರಗ್ರಹವು ತುಲಾ ರಾಶಿಗೆ ಪ್ರವೇಶ ಮಾಡಿದೆ. ಶುಕ್ರ ಗ್ರಹವನ್ನು ಸಂಪತ್ತು, ಐಶ್ವರ್ಯ, ಐಷಾರಾಮಿ ಜೀವನ, ಮತ್ತು ಭೌತಿಕ ಜೀವನದ ಸಂತೋಷ ಎಂದು ಹೇಳಲಾಗುತ್ತದೆ. ತುಲಾ ರಾಶಿಗೆ ಶುಕ್ರನ ಆಗಮನದಿಂದ, ಈ ವಿಚಾರಗಳಲ್ಲಿ ರಾಶಿಗಳ ಮೇಲೆ ಒಳ್ಳೆಯ ಅಥವಾ ಕೆಟ್ಟ ಪರಿಣಾಮ ಬೀರುತ್ತದೆ. ಶುಕ್ರ ಗ್ರಹವು, ತುಲಾ ರಾಶಿಗೆ ಪ್ರವೇಶ ಮಾಡಿದಾಗ, ತ್ರಿಕೋನ ರಾಜಯೋಗ ರೂಪುಗೊಳ್ಳಲಿದ್ದು, ಇದರ ಪರಿಣಾಮ ಮೂರು ರಾಶಿಗಳಿಗೆ ಅದೃಷ್ಟ ತರಲಿದೆ. ಆ ಮೂರು ರಾಶಿಗಳು ಎಂದು ತಿಳಿಸುತ್ತೇವೆ ನೋಡಿ..

ಕನ್ಯಾ ರಾಶಿ :- ತ್ರಿಕೋನ ರಾಜಯೋಗದಿಂದ ಈ ರಾಶಿಯವರಿಹೇ ಅತ್ಯಂತ ಶುಭಫಲ ಉಂಟಾಗುತ್ತದೆ. ಕೆಲಸ ಮಾಡುತ್ತಿರುವವರಿಗೆ ಸಂಬಳ ಹೆಚ್ಚಾಗುತ್ತದೆ, ಬ್ಯುಸಿನೆಸ್ ಮಾಡುತ್ತಿರುವವರಿಗೆ ಲಾಭ ಹೆಚ್ಚಾಗುತ್ತದೆ. ಮನೆ, ಕಾರು ಅಥವಾ ಐಷಾರಾಮಿ ವಸ್ತುಗಳನ್ನು ಖರೀದಿ ಮಾಡಬಹುದು. ದಾಂಪತ್ಯ ಜೀವನ ಅಥವಾ ಪ್ರೀತಿ ಮಾಡುತ್ತಿರುವವರ ಜೀವನ ಚೆನ್ನಾಗಿರುತ್ತದೆ. ನೀವು ಪ್ರವಾಸಕ್ಕೆ ಹೋಗಬಹುದು.

ಮಕರ ರಾಶಿ :- ಶುಕ್ರ ಗ್ರಹದಿಂದ ರೂಪುಗೊಳ್ಳುವ ತ್ರಿಕೋನ ರಾಜಯೋಗವು ಮಕರ ರಾಶಿಯವರಿಗೆ ಮಂಗಳಕರ ಫಲ ತರುತ್ತದೆ. ಕೆಲಸಕ್ಕಾಗಿ ಹುಡುಕುತ್ತಿರುವವರಿಗೆ ಒಳ್ಳೆಯ ಕೆಲಸ ಸಿಗುತ್ತದೆ. ಕೆಲಸ ಮತ್ತು ಬ್ಯುಸಿನೆಸ್ ನಲ್ಲಿ ಏಳಿಗೆಗೆ ಒಳ್ಳೆಯ ಅವಕಾಶ ಸಿಗುತ್ತದೆ, ಹೊಸ ಬ್ಯುಸಿನೆಸ್ ಶುರು ಮಾಡಬಹುದು. ಕೆಲಸದಲ್ಲಿ ಬಡ್ತಿ ಸಿಗುತ್ತದೆ. ನಿಮ್ಮ ಆದಾಯ ಹೆಚ್ಚಾಗುತ್ತದೆ, ಆರ್ಥಿಕವಾಗಿ ಸದೃಢರಾಗುತ್ತೀರಿ. ಮದುವೆ ಆಗದೆ ಇರುವವರಿಗೆ ಒಳ್ಳೆಯ ಸಂಬಂಧ ಕೂಡಿಬರುತ್ತದೆ. ಎಲ್ಲಾ ಕೆಲಸಗಳಲ್ಲಿ ಯಶಸ್ಸು ಬೆಂಬಲ ಸಿಗುತ್ತದೆ.

ಕುಂಭ ರಾಶಿ :- ತ್ರಿಕೋನ ರಾಜಯೋಗವು ಕುಂಭ ರಾಶಿಯವರಿಗೆ ಅದೃಷ್ಟ ತರುತ್ತದೆ. ಎಲ್ಲಾ ಕೆಲಸದಲ್ಲೂ ನಿಮಗೆ ಯಶಸ್ಸು ಸಿಗುತ್ತದೆ. ಕೆಲಸಕ್ಕಾಗಿ ಪ್ರಯಾಣ ಮಾಡುವುದರಿಂದ ಒಳ್ಳೆಯದಾಗುತ್ತದೆ. ಹೂಡಿಕೆ ಮಾಡಲು ಇದು ಸೂಕ್ತ ಸಮಯ, ನಿರೀಕ್ಷೆ ಮಾಡದೆ ಧನಲಾಭ ಆಗುತ್ತದೆ. ಕೆಲಸ ಮತ್ತು ಬ್ಯುಸಿನೆಸ್ ನಲ್ಲಿ ಲಾಭ ಸಿಗುತ್ತದೆ. ಸಮಾಜದಲ್ಲಿ ಪ್ರತಿಷ್ಠೆ ಹೆಚ್ಚಾಗುತ್ತದೆ. ವಿದೇಶದಲ್ಲಿ ಉದ್ಯೋಗದಲ್ಲಿರುವವರಿಗೆ ಲಾಭ ಸಿಗುತ್ತದೆ.

Comments are closed.