Neer Dose Karnataka
Take a fresh look at your lifestyle.

Rishab Love Story: ಶಾಲಾ ಸಮಯದಲ್ಲಿಯೇ ಪ್ರೀತಿ ಮಾಡಿದ ರಿಷಬ್ ಶೆಟ್ಟಿ, ಆ ವಯಸ್ಸಿನಲ್ಲೂ ಪ್ರೀತಿ ಮಾಡಿದ್ದು ಯಾರನ್ನು ಗೊತ್ತೇ?? | Kantara

225

ಕಾಂತಾರ ಸಿನಿಮಾ ಈಗ ಇಡೀ ಭಾರತದಲ್ಲಿ ದೊಡ್ಡ ಹಿಟ್ ಎನ್ನಿಸಿಕೊಂಡಿದೆ. ತುಳುನಾಡಿನ ಸಂಸ್ಕೃತಿ ಸಂಪ್ರದಾಯ ಇದೆಲ್ಲವನ್ನು ಸಹ ರಿಷಬ್ ಶೆಟ್ಟಿ ಅವರು ಕಾಂತಾರ ಸಿನಿಮಾದಲ್ಲಿ ಅದ್ಭುತವಾಗಿ ತೋರಿಸಿಕೊಟ್ಟಿದ್ದಾರೆ. ಸಿನಿಮಾದಲ್ಲಿ ರಿಷಬ್ ಶೆಟ್ಟಿ ಅವರ ಅಭಿನಯ ಅಂತೂ ಅದ್ಭುತ ಎಂದು ಸಿನಿಪ್ರಿಯರು ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ.

ಕಾಂತಾರ ಸಿನಿಮಾ ಶಿವ ಲೀಲಾ ಲವ್ ಸ್ಟೋರಿ ಇದೆ, ಆದರೆ ರಿಷಬ್ ಶೆಟ್ಟಿ ಅವರ ಜೀವನದಲ್ಲಿ ಮೊದಲ ಲವ್ ಸ್ಟೋರಿ ಆಗಿದ್ದು ಯಾವಾಗ ಗೊತ್ತಾ? ಕಾಂತಾರ ಸಿನಿಮಾ ಕುರಿತು ಸಂದರ್ಶನದಲ್ಲೇ ಈ ವಿಚಾರ ತಿಳಿಸಿದ್ದಾರೆ ರಿಷಬ್.

ಮೊದಲಿಗೆ ರಿಷಬ್ ಶೆಟ್ಟಿ ಅವರ ಹೆಸರು ಪ್ರಶಾಂತ್ ಶೆಟ್ಟಿ, ಸಿನಿಮಾಗೆ ಬಂದ ನಂತರ ರಿಷಬ್ ಶೆಟ್ಟಿ ಎಂದು ಬಸಲಾಯಿಸಿಕೊಂಡರು. ರಿಷಬ್ ಅವರಿಗೆ ಮೊದಲ ಸಾರಿ ಲವ್ ಆಗಿದ್ದು ಶಾಲಾ ದಿನಗಳಲ್ಲಿ, ತಮ್ಮ ಕ್ಲಾಸ್ ಮೇಟ್ ಆಗಿದ್ದ ಹುಡುಗಿಯನ್ನು ಪ್ರೀತಿಸಲು ಶುರು ಮಾಡಿದ್ದ ರಿಷಬ್ ಈ ವಿಚಾರವನ್ನು ತಮ್ಮ ಸ್ನೇಹಿತನೊಬ್ಬನಿಗೆ ಮಾತ್ರ ತಿಳಿಸಿದ್ದರು.

ರಿಷಬ್ ಅವರು ಇಷ್ಟಪಟ್ಟ ಆ ಹುಡುಗಿಯ ಹೆಸರು ರತ್ನಾವತಿ. ಶಾಲೆಯಲ್ಲಿ ಓದುವಾಗಲೇ ರತ್ನಾವತಿ ಅವರನ್ನು ತುಂಬಾ ಪ್ರೀತಿಸುತ್ತಿದ್ದರಂತೆ, ಆ ಹುಡುಗಿ ಯಾಕೆ ಇಷ್ಟ ಎಂದು ರಿಷಬ್ ಅವರ ಫ್ರೆಂಡ್ಸ್ ಕೇಳಿದಾಗ, ನನ್ನ ಅಮ್ಮನ ಹೆಸರು ರತ್ನಾವತಿ, ಅವಳ ಹೆಸರು ಕೂಡ ರತ್ನಾವತಿ ಅದಕ್ಕೆ ಇಷ್ಟ ಎಂದು ಹೇಳಿದ್ದರಂತೆ.. ಈ ವಿಚಾರ ರಿಷಬ್ ಅವರ ಫ್ರೆಂಡ್ಸ್ ಬಿಟ್ಟು ಮತ್ಯಾರಿಗೂ ಗೊತ್ತಿರಲಿಲ್ಲ..

ರಿಷಬ್ ಅವರ ಫ್ರೆಂಡ್ಸ್ ಇದೇ ವಿಷಯ ಇಟ್ಟುಕೊಂಡು ಬ್ಲ್ಯಾಕ್ ಮೇಲ್ ಮಾಡುತ್ತಿದ್ದರಂತೆ. ರಿಷಬ್ ಅವರ ತಂದೆ ಬೆಂಗಳೂರಿನನಿಂದ ತಮ್ಮ ಊರಿಗೆ ವಾಪಸ್ ಬಂದಾಗಲೆಲ್ಲಾ ರಿಷಬ್ ಅವರು ತಮ್ಮ ಫ್ರೆಂಡ್ಸ್ ಗೆ ಚಾಕೊಲೇಟ್ಸ್ ಕೊಡಬೇಕಿತ್ತಂತೆ, ಸುಮಾರು ಒಂದು ವರ್ಷಗಳ ಕಾಲ ಫ್ರೆಂಡ್ಸ್ ಚಾಕೊಲೇಟ್ ಅನ್ನು ಲಂಚದ ಹಾಗೆ ಕೊಡುತ್ತಿದ್ದರಂತೆ ರಿಷಬ್.

ಮುಂದೆ ಈ ವಿಷಯ ಅವರ ಟೀಚರ್ ನಾಗರತ್ನ ಅವರ ವರೆಗು ಹೋಗಿ, ರಿಷಬ್ ಅವನ್ನು ಕರೆಸಿ ಕೇಳಿದಾಗ, ತನಗೂ ಇದಕ್ಕೂ ಸಂಬಂಧ ತಮ್ಮ ಸ್ನೇಹಿತರೆ ಈ ವಿಚಾರ ಶುರು ಮಾಡಿದ್ದು ಎಂದು ಹೇಳಿದ್ದರಂತೆ, ಆಗ ಅವರ ಟೀಚರ್ ರಿಷಬ್ ಅವರ ಫ್ರೆಂಡ್ಸ್ ಅನ್ನೇ ಕರೆಸಿ ಬೆಂಡೆತ್ತಿದ್ದರಂತೆ. ಹೀಗಿತ್ತು ರಿಷಬ್ ಅವರ ಮೊದಲ ಲವ್ ಸ್ಟೋರಿ, ತಮ್ಮ ಸ್ಟೋರಿ ಇಂದ ತಾವೇ ಪರದಾಟಕ್ಕೆ ಸಿಕ್ಕಿಕೊಂಡಿದ್ದರು ರಿಷಬ್.

Leave A Reply

Your email address will not be published.