Neer Dose Karnataka
Take a fresh look at your lifestyle.

ಅದೊಂದು ಜಾಗದಲ್ಲಿ ಮನೆಯಲ್ಲಿ ಆಂಜನೇಯ ಸ್ವಾಮಿಯ ಫೋಟೋ ಇಟ್ಟು ನೋಡಿ, ಹನುಮಾನ್ ಕಾದು, ಅದೃಷ್ಟದ ಬಾಗಿಲು ತೆರೆಯುತ್ತಾನೆ.

ಪ್ರತಿ ಮನೆಯಲ್ಲೂ ದೇವರ ಫೋಟೋಗಳನ್ನು ಇರಿಸಿ ಪೂಜೆ ಮಾಡುತ್ತಾರೆ. ದೇವರ ಫೋಟೋಗಳನ್ನು ಇಡುವ ಬಗ್ಗೆ ವಾಸ್ತು ಶಾಸ್ತ್ರದಲ್ಲಿ ಹಲವು ವಿಚಾರಗಳನ್ನು ತಿಳಿಸಿದ್ದಾರೆ. ಕೆಲವು ದೇವರ ಫೋಟೋಗಳನ್ನು ಮನೆಯಲ್ಲಿಟ್ಟರೆ ಒಳ್ಳೆಯದಾಗುತ್ತದೆ, ಇನ್ನು ಕೆಲವು ಫೋಟೋಗಳನ್ನು ಇಡುವುದರಿಂದ ತೊಂದರೆ ಹೆಚ್ಚಾಗುತ್ತದೆ, ಯಾವ ಫೋಟೋ ಇಡುವುದು ಒಳ್ಳೆಯದು, ಯಾವ ಫೋಟೋ ಇಟ್ಟರೆ ಒಳ್ಳೆಯದಲ್ಲ ಎಂದು ಹಲವು ಜನರಿಗೆ ಗೊತ್ತಾಗುವುದಿಲ್ಲ, ಇದರ ಬಗ್ಗೆ ಜನರಿಗೆ ತಿಳಿಸಿಕೊಡಲು,ಇವುಗಳ ಬಗ್ಗೆ ವಾಸ್ತು ಶಾಸ್ತ್ರದಲ್ಲಿ ತಿಳಿಸಲಾಗಿದೆ.

ಮನೆಯಲ್ಲಿ ಹನುಮಂತನ ಫೋಟೋ ಇಟ್ಟು ಹಲವು ಜನರು ಪೂಜೆ ಮಾಡುತ್ತಾರೆ. ಹನುಮಂತನಿಗೆ ಸಮರ್ಪಣೆ ಮಾಡಿರುವ ದಿನ ಮಂಗಳವಾರ. ಹನುಮಂತನ ಯಾವ ಫೋಟೋವನ್ನು ನಿಮ್ಮ ಮನೆಯಲ್ಲಿ ಹಾಕಬಹುದು? ಯಾವ ಫೋಟೋ ಹಾಕಬಾರದು ? ಇದರ ಬಗ್ಗೆ ವಾಸ್ತು ಶಾಸ್ತ್ರಜ್ಞರು ಸಂಪೂರ್ಣ ವಿವರ ನೀಡಿದ್ದಾರೆ. ಅದರ ಬಗ್ಗೆ ಇಂದು ತಿಳಿಸುತ್ತೇವೆ ನೋಡಿ..

ದಕ್ಷಿಣವರ್ತಿ ಹನುಮಾನ್ :- ಹನುಮಾನ್ ಅವರು ದಕ್ಷಿಣ ದಿಕ್ಕಿಗೆ ಮುಖ ಮಾಡಿರುವ ಫೋಟೋವನ್ನು ನಿಮ್ಮ ಮನೆಯಲ್ಲಿ ಇಡುವುದರಿಂದ ನಿಮ್ಮ ಮನೆಯಲ್ಲಿ ಖುಷಿ ಮತ್ತು ಐಶ್ವರ್ಯ ಹೆಚ್ಚಾಗುತ್ತದೆ. ಹನುಮಂತ ಕುಳಿತಿರುವ ಹಾಗೆ ಮತ್ತು ಕೆಂಪು ಬಣ್ಣದ ಫೋಟೋ ಆಗಿರಬೇಕು. ಈ ರೀತಿಯ ಹನುಮಾನ್ ಫೋಟೋ ಶುಭವಾದದ್ದು ಎಂದು ಹೇಳಲಾಗುತ್ತದೆ. ದಕ್ಷಿಣ ದಿಕ್ಕಿನಿಂದ ಬರುವ ದುಷ್ಟಶಕ್ತಿಗಳು ಹನುಮಾನ್ ಫೋಟೋ ನೋಡಿ ಹೆದರಿ ಹೋಗುತ್ತದೆ ಎನ್ನುತ್ತಾರೆ. ಜೊತೆಗೆ ಈ ಫೋಟೋ ಇಂದ ಮಂಗಲ್ ದೋಷ ಪರಿಹಾರ ಆಗುತ್ತದೆ.

ಉತ್ತರಮುಖಿ ಹನುಮಾನ್ :- ಉತ್ತರ ದಿಕ್ಕಿಗೆ ಮುಖ ಮಾಡಿಕೊಂಡಿರುವ ಹನುಮಂತನ ಫೋಟೋ ಇಡುವುದರಿಂದ ಎಲ್ಲಾ ದೇವರ ಆಶೀರ್ವಾದ ಪಡೆಯಬಹುದು ಎಂದು ಹೇಳುತ್ತಾರೆ. ಇದು ಹನುಮಾನ್ ದೇವರ ಉತ್ತರದ ರೂಪ. ಈ ಫೋಟೋಗೆ ಭಕ್ತಿಯಿಂದ ಪೂಜೆ ಮಾಡುವುದರಿಂದ ಎಲ್ಲಾ ದೇವತೆಗಳ ಆಶೀರ್ವಾದ ಆ ವ್ಯಕ್ತಿಗೆ ಸಿಗುತ್ತದೆ. ಜೊತೆಗೆ ಲಕ್ಷ್ಮೀದೇವಿಯ ಕೃಪೆ ಸಹ ಆ ವ್ಯಕ್ತಿಯ ಮೇಲಿರುತ್ತದೆ.

ಪಂಚಮುಖಿ ಹನುಮಾನ್ :- ಹನುಮಂತನ ಪಂಚಮುಖಿ ಫೋಟೋವನ್ನು ಮನೆಯಲ್ಲಿ ಇಟ್ಟು ಪೂಜೆ ಮಾಡುವುದರಿಂದ ನಿಮ್ಮ ಮನೆ ಏಳಿಗೆಯ ದಾರಿಯಲ್ಲಿ ಸಾಗುತ್ತದೆ. ಆ ದಾರಿಯ ಅಡತಡೆಗಳು ಸರಿಹೋಗುತ್ತವೆ. ನಿಮ್ಮ ಮನೆಯಲ್ಲಿ ಐಶ್ವರ್ಯ ಹೆಚ್ಚಾಗುತ್ತದೆ, ಮನೆಯ ವಾಸ್ತುದೋಷಗಳು ಸರಿಹೋಗುತ್ತದೆ. ಮನೆಯ ಮುಖ್ಯದ್ವಾರದ ಮೇಲೆ ಪಂಚಮುಖಿ ಆಂಜನೇಯ ಸ್ವಾಮಿ ಫೋಟೋ ಇಡಬಹುದು. ನಿಮ್ಮ ಮನೆಯಲ್ಲಿ ದುಷ್ಟ ಶಕ್ತಿಗಳ ತೊಂದರೆ ಇದ್ದರೆ, ಈ ಫೋಟೋ ಇಟ್ಟರೆ ಒಳ್ಳೆಯದಾಗುತ್ತದೆ. ಈ ಫೋಟೋ ಇಡುವುದರಿಂದ ದುಷ್ಟ ಶಕ್ತಿಗಳು ನಿಮ್ಮ ಮನೆಗೆ ಸುಳಿಯುವುದಿಲ್ಲ.

ಹನುಮಂತ ಪರ್ವತ ಮೇಲೆತ್ತುವ ಫೋಟೋ :- ಈ ಫೋಟೋ ಇಂದ ಮನೆಯಲ್ಲಿ ಇರುವವರ ಆತ್ಮವಿಶ್ವಾಸ, ಧೈರ್ಯ, ಶಕ್ತಿ ಮತ್ತು ಜವಾಬ್ದಾರಿಯ ಪ್ರಜ್ಞೆ ಸಹ ಹೆಚ್ಚಾಗುತ್ತದೆ. ಈ ಫೋಟೋವನ್ನು ನಿಮ್ಮ ಮನೆಯಲ್ಲಿ ಇಡುವುದರಿಂದ ಪರಿಸ್ಥಿತಿ ಎಂಥದ್ದೇ ಆದರೂ ನಿಮಗೆ ಭಯ ಬರುವುದಿಲ್ಲ, ಎಂಥದ್ದೇ ಕಷ್ಟದ ಪರಿಸ್ಥಿತಿ ಇದ್ದರು, ಬಹಳ ಬೇಗ ಪರಿಹಾರ ಕಂಡುಕೊಳ್ಳುತ್ತೀರಿ.

ಬಿಳಿ ಹನುಮಾನ್ :- ಹನುಮಂತನ ಬಿಳಿ ಹನುಮಾನ್ ಫೋಟೋವನ್ನು ಇಡುವುದರಿಂದ ಕೆಲಸದಲ್ಲಿ ಲಾಭ ಮತ್ತು ಬಡ್ತಿ ಪಡೆಯಬಹುದು, ಇದಕ್ಕಾಗಿ ಕ್ ಫೋಟೋವನ್ನು ಮನೆಯಲ್ಲಿಡುತ್ತಾರೆ. ಹನುಮಾನ್ ದೇವರ ಈ ಫೋಟೋ ಇಡುವುದರಿಂದ ಆ ವ್ಯಕ್ತಿಯ ಜೀವನದಲ್ಲಿ ಯಶಸ್ಸು ಕಾಣುತ್ತಾನೆ. ತಪ್ಪದೇ ಬಿಳಿ ಹನುಮಾನ್ ದೇವರ ಫೋಟೋವನ್ನು ನಿಮ್ಮ ಮನೆಯೊಳಗೆ ಇಡಿ.

ಹನುಮಂತ ಧ್ಯಾನ ಮಾಡುತ್ತಿರುವ ಫೋಟೋ :- ಈ ಫೋಟೋದಲ್ಲಿ ಹನುಮಂತನು ಕಣ್ಣು ಮುಚ್ಚಿರುತ್ತಾರೆ. ಹಾಗಾಗಿ ಈ ಫೋಟೋ ಇಡುವುದರಿಂದ ಮನೆಯವರ ಮನಸ್ಸಿಗೆ ಶಾಂತಿ ಸಿಗುತ್ತದೆ, ಮನೆಯವರಲ್ಲಿ ಧ್ಯಾನ ಮಾಡುವ ಆಸಕ್ತಿ ಬೆಳೆಯುತ್ತದೆ. ಧಾನ್ಯ ಮಾಡುತ್ತಿರುವವರು ಬೆಳವಣಿಗೆ ಕಾಣುತ್ತಾರೆ. ಮೋಕ್ಷ ಬಯಸುವವರು ಈ ಫೋಟೋವನ್ನು ಮನೆಯಲ್ಲಿ ಇಡಬಹುದು, ಇದರಿಂದ ಮೋಕ್ಷ ಸಾಧಿಸುತ್ತೀರಿ.

Comments are closed.