Neer Dose Karnataka
Take a fresh look at your lifestyle.

ಎಲ್ಲರೂ ಸಿನಿಮಾ ನೋಡಿ ಹೊಗಳುತ್ತಿರುವಾಗ ಕಾಂತಾರ ಯಶಸ್ಸು ಕಾಣುತ್ತಿರುವುದು ನೋಡಿ, ಯಶ್ ಸುಮ್ಮನೆ ಆಗಿಬಿಟ್ರಾ?? ರಿಷಬ್ ಶೆಟ್ಟಿ ಹೇಳಿದ್ದೇನು ಗೊತ್ತೇ??

5,619

ಕಾಂತಾರ ಸಿನಿಮಾ ಇಂದು ವರ್ಲ್ಡ್ ಲೆವೆಲ್ ನಲ್ಲಿ ರೀಚ್ ಆಗುತ್ತಿದೆ. ನಮ್ಮ ಕನ್ನಡ ಮಣ್ಣಿನ ಕರ್ನಾಟಕದ ಕರಾವಳಿ ಪ್ರದೇಶದ ಕಥೆಯೊಂದು ಗ್ಲೋಬಲ್ ಆಗಿ ರೀಚ್ ಆಗುತ್ತಿದ್ದು, ಎಲ್ಲರೂ ಕಾಂತಾರ ಸಿನಿಮಾ ನೋಡಿ ಟ್ರಾನ್ಸ್ ಗೆ ಒಳಗಾಗುತ್ತಾರೆ. ಪ್ಯಾನ್ ಇಂಡಿಯಾ ಯುಗದಲ್ಲಿ, ಕನ್ನಡದಲ್ಲೇ ಸಿನಿಮಾ ಮಾಡಿ, ಕನ್ನಡದಲ್ಲಿ ಮಾತ್ರವೇ ಸಿನಿಮಾ ಬಿಡುಗಡೆ, ಪ್ಯಾನ್ ಇಂಡಿಯಾ ಕ್ರೇಜ್ ತಾನಾಗಿಯೇ ಹುಡುಕಿ ಬರುವ ಹಾಗೆ ಕ್ರೇಜ್ ಸೃಷ್ಟಿಸಿದ ಸಿನಿಮಾ ಕಾಂತಾರ.

ಬೇರೆ ಭಾಷೆಯ ಮೂವಿ ಮೇಕರ್ ಗಳು ತಾವಾಗಿಯೇ ಬಂದು ಸಿನಿಮಾ ಮಾಡಿಕೊಡಿ ಎಂದು ಕೇಳುವ ಮಟ್ಟಕ್ಕೆ ಕಾಂತಾರ ಹವಾ ಸೃಷ್ಟಿಯಾಯಿತು. ಸಿನಿಮಾಪ್ರಿಯರು ಈಗ ಭಾಷೆಯ ಬ್ಯಾರಿಯರ್ ಇಲ್ಲದೆ ಎಲ್ಲಾ ಭಾಷೆಯ ಸಿನಿಮಾಗಳನ್ನು ನೋಡಿ ಒಪ್ಪಿಕೊಳ್ಳುತ್ತಿರುವುದು ಬಹಳ ಸಂತೋಷದ ವಿಚಾರ. ಕಾಂತಾರ ಇಂದು ತೆಲುಗು, ತಮಿಳು, ಹಿಂದಿ, ಭಾಷೆಯಲ್ಲಿ ಬಿಡುಗಡೆಯಾಗಿ ಅಲ್ಲಿ ಕೂಡ ಅದ್ಭುತ ಪ್ರದರ್ಶನ ಕಾಣುತ್ತಿದ್ದು..

ಈ ವಾರ ಮಲಯಾಳಂ ವರ್ಷನ್ ಬಿಡುಗಡೆ ಆಗಲಿದೆ. ಎಲ್ಲಾ ಭಾಷೆಗಳಲ್ಲಿ ಅದ್ಭುತವಾಗಿ ಕಲೆಕ್ಷನ್ ಸಹ ಮಾಡುತ್ತಿರುವ ಕಾಂತಾರ ಸಿನಿಮಾ, 150 ಕೋಟಿ ಗಳಿಸಿದೆ ಎಂದು ವರದಿಗಳ ಪ್ರಕಾರ ತಿಳಿದುಬಂದಿದೆ. ಸಿನಿಮಾ ನೋಡಿದ ಜನರು ಸಿನಿಪ್ರಿಯರು ಸಿನಿಮಾ ಬಗ್ಗೆ ಹೊಗಳುವುದು ಮಾತ್ರವಲ್ಲ. ಭಾರತ ಚಿತ್ರರಂಗದ ಗಣ್ಯಾತಿಗಣ್ಯರು ಕಾಂತಾರ ಸಿನಿಮಾ ನೋಡಿ ಪ್ರಶಂಸೆ ನೀಡುತ್ತಿದ್ದಾರೆ.

ತೆಲುಗು ನಟರಾದ ರಾಣಾ ದಗ್ಗುಬಾಟಿ, ತಮಿಳಿನ ನಟರಾದ ಕಾರ್ತಿ, ಧನುಷ್, ಮಲಯಾಳಂ ನಟ ಪೃಥ್ವಿ ರಾಜ್ ಸುಕುಮಾರನ್, ನಟಿಯರಾದ ಅನುಷ್ಕಾ ಶೆಟ್ಟಿ, ಶಿಲ್ಪಾ ಶೆಟ್ಟಿ, ಶಾನ್ವಿ ಶ್ರೀವಾಸ್ತವ್ ಸೇರಿದಂತೆ ಸೆಲೆಬ್ರಿಟಿ ಬಳಗ ಸಹ ಕಾಂತಾರ ನೋಡಿ ಫಿದಾ ಆಗಿದೆ.

ನಮ್ಮ ಕನ್ನಡದ ಬಹುತೇಕ ನಟರು, ಕಿಚ್ಚ ಸುದೀಪ್ ಅವರು, ವಸಿಷ್ಠ ಸಿಂಹ, ಇನ್ನು ಸಾಕಷ್ಟು ಕಲಾವಿದರು ಸಿನಿಮಾ ಮೆಚ್ಚಿ ಸೋಷಿಯಲ್ ಮೀಡಿಯಾ ಮೂಲಕ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿ, ಮೆಚ್ಚುಗೆ ಸೂಚಿಸಿದ್ದರು.. ಆದರೆ ನಟ ಯಶ್ ಅವರು ಮತ್ತು ಶಿವಣ್ಣ ಅವರು ಕಾಂತಾರ ಸಿನಿಮಾ ನೋಡಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ, ಅದರಲ್ಲೂ ಯಶ್ ಅವರು ಒಂದು ಒಳ್ಳೆಯ ಕನ್ನಡ ಸಿನಿಮಾಗೆ ವಿಶ್ ಕೂಡ ಮಾಡಿಲ್ಲ..

ಒಂದೇ ಒಂದು ಟ್ವೀಟ್ ಸಹ ಮಾಡಿಲ್ಲ ಎನ್ನುವ ಚರ್ಚೆಯೊಂದು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿತ್ತು. ಯಶ್ ಅವರು ಶಿವಣ್ಣ ಅವರು ಕನ್ನಡ ಸಿನಿಮಾಗೆ ಸಪೋರ್ಟ್ ಮಾಡುತ್ತಿಲ್ಲ ಎನ್ನುವ ಮಾತು ಸಹ ಕೇಳಿಬಂದಿತ್ತು. ಆ ಪ್ರಶ್ನೆಗೆ ಸ್ವತಃ ರಿಷಬ್ ಶೆಟ್ಟಿ ಅವರೆ ಉತ್ತರ ಕೊಟ್ಟಿದ್ದಾರೆ. ಸಂದರ್ಶನ ಒಂದರಲ್ಲಿ ಯಾವೆಲ್ಲಾ ಸ್ಟಾರ್ ಗಳು ಸಿನಿಮಾಗೆ ಸಪೋರ್ಟ್ ಮಾಡಿದರು ಎಂದು ಕೇಳಲಾಯಿತು.

ಅದಕ್ಕೆ ಉತ್ತರ ಕೊಟ್ಟ ರಿಷಬ್ ಶೆಟ್ಟಿ ಅವರು, ಸಿನಿಮಾ ಬಿಡುಗಡೆಯಾದ ಮೊದಲ ದಿನವೇ ಯಶ್ ಅವರು ಕಾಲ್ ಮಾಡಿ ವಿಶ್ ಮಾಡಿದ್ರು, ಚೆನ್ನಾಗಾಗುತ್ತೆ ಚಿನ್ನ ಎಂದರು, ಅವರು ಮಾತನಾಡೋದೆ ಹಾಗೆ, ಸೋ ಡೋಂಟ್ ವರಿ ಚಿನ್ನ ಸಿನಿಮಾ ಚೆನ್ನಾಗಿ ರೀಚ್ ಆಗುತ್ತೆ ಎಂದರು ಎಂದು ರಿಷಬ್ ಶೆಟ್ಟಿ ಅವರು ಹೇಳಿದ್ದು, ಈ ಮೂಲಕ ಯಶ್ ಅವರು ಕಾಂತಾರ ಸಿನಿಮಾಗೆ ವಿಶ್ ಮಾಡಲಿಲ್ಲ ಎನ್ನುವ ಆರೋಪಕ್ಕೆ ಉತ್ತರ ನೀಡಿದ್ದಾರೆ.

ನಮ್ಮ ಕನ್ನಡದ ನಟರು ಎಷ್ಟು ಹೇಗೆ ಒಬ್ಬರಿಗೊಬ್ಬರು ಸಪೋರ್ಟಿವ್ ಆಗಿದ್ದಾರೆ ಎನ್ನುವುದು ಕೂಡ ಈ ಮೂಲಕ ಗೊತ್ತಾಗುತ್ತಿದೆ. ಕಾಂತಾರ ಸಿನಿಮಾ ಮೂರು ವಾರದ ಬಳಿಕ ಸಹ ಇಂತಹ ಒಳ್ಳೆಯ ರೆಸ್ಪಾನ್ಸ್ ಪಡೆಯುತ್ತಿದ್ದು, ಮುಂದಿನ ದಿನಗಳಲ್ಲಿ 200 ಕೋಟಿ ಕ್ಲಬ್ ಸೇರುವುದು ಖಚಿತ ಎನ್ನುವ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಒಟ್ಟಿನಲ್ಲಿ ನಮ್ಮ ಮಣ್ಣಿನ ಸಿನಿಮಾ ಇಷ್ಟದ ಮಟ್ಟಿಗೆ ರೀಚ್ ಆಗುತ್ತಿರುವುದು ಸಂತೋಷದ ವಿಚಾರ.

Leave A Reply

Your email address will not be published.