Neer Dose Karnataka
Take a fresh look at your lifestyle.

ಕೊಹ್ಲಿ ಅಲ್ಲವೇ ಅಲ್ಲ, ಇವರ ಮೇಲೆ ಭಾರತದ ವಿಶ್ವಕಪ್ ಭವಿಷ್ಯ ನಿಂತಿರುವುದು. ಇವರು ಆಡಿದರೆ ಮಾತ್ರ ಭಾರತಕ್ಕೆ ಗೆಲುವು. ಯಾರ್ಯಾರು ಗೊತ್ತೇ??

ಟಿ20 ವಿಶ್ವಕಪ್ ಪಂದ್ಯಗಳು ಶುರುವಾಗಿ, ಮೊದಲ ಹಂತದ ಪಂದ್ಯಗಳು ಈಗಾಗಲೇ ನಡೆಯುತ್ತಿದೆ, ಸೂಪರ್ 12 ಹಂತದ ಪಂದ್ಯಗಳು ನಾಳೆಯಿಂದ ಶುರುವಾಗಲಿದ್ದು, ಭಾರತದ ಮೊದಲ ಪಂದ್ಯ ಭಾನುವಾರ ಸಾಂಪ್ರದಾಯಿಕ ವೈರಿ ಪಾಕಿಸ್ತಾನ್ ವಿರುದ್ಧ ನಡೆಯಲಿದೆ. ಮೊದಲ ಪಂದ್ಯವನ್ನು ಗೆಲ್ಲಲೇಬೇಕು ಎಂದು ಎರದ್ ತಂಡಗಳು ಚಲದಿಂದ ಅಭ್ಯಾಸ ಮಾಡುತ್ತಿವೆ.

ಆರಂಭಿಕ ಆಟಗಾರರು ಉತ್ತಮ ಪ್ರದರ್ಶನ ನೀಡಿದರೆ, ಭಾರತ ತಂಡ ಗೆಲ್ಲುವುದಂತೂ ಖಚಿತ. ಆದರೆ ಕಳೆದ ವರ್ಷ ಯುಎಇ ಆತಿಥ್ಯದಲ್ಲಿ ನಡೆದ ಟಿ20 ವಿಶ್ವಕಪ್ ನಲ್ಲಿ ಪಾಕಿಸ್ತಾನದ ಬೌಲಿಂಗ್ ದಾಳಿಗೆ ಭಾರತ ತಂಡದ ಬ್ಯಾಟ್ಸ್ಮನ್ ಗಳು ಕಷ್ಟಪಟ್ಟಿದ್ದರು. ಅದರಿಂದ ಪಾಕಿಸ್ತಾನ್ ವಿರುದ್ಧ ಮೊದಲ ಬಾರಿಗೆ ಸೋಲು ಕಾಣುವ ಹಾಗೆ ಆಗಿತ್ತು. ಕಳೆದ ವರ್ಷ ಭಾರತ ತಂಡ ಸೋಲಲು ಮುಖ್ಯ ಕಾರಣ ರೋಹಿತ್ ಶರ್ಮಾ, ಕೆ.ಎಲ್.ರಾಹುಲ್ ಮತ್ತು ಸೂರ್ಯಕುಮಾರ್ ಯಾದವ್ ಅವರ ವೈಫಲ್ಯ.

ಕಳೆದ ವರ್ಷ ಈ ಮೂವರು ಆಟಗಾರರು ಕೂಡ ಪಾಕಿಸ್ತಾನ್ ತಂಡದ ಬೌಲಿಂಗ್ ಅಬ್ಬರಕ್ಕೆ ಬೆಂಡಾಗಿ ಹೋಗಿದ್ದರು. ಆಸ್ಟ್ರೇಲಿಯಾ, ಇಂಗ್ಲೆಂಡ್, ಸೌತ್ ಆಫ್ರಿಕಾ ಅಂತಹ ತಂಡಗಳನ್ನು ಮಣಿಸಿ ಮುನ್ನುಗ್ಗಿದ್ದ ಭಾರತ ತಂಡ, ಪಾಕಿಸ್ತಾನ್ ಫೀಲ್ಡಿಂಗ್ ಮತ್ತು ಬೌಲಿಂಗ್ ಗೆ ತತ್ತರಿಸಿ, ರನ್ ಗಳಿಸಲಾಗದೆ ಕಷ್ಟ ಪಟ್ಟಿತ್ತು, ಭಾರಿ ಭರವಸೆ ಇಟ್ಟುಕೊಂಡಿದ್ದ ಈ ಮೂವರು ಆಟಗಾರರು ಎಡವಿದ್ದರು. ಆದರೆ ಈ ವರ್ಷ ಸೂರ್ಯಕುಮಾರ್ ಯಾದವ್ ಅವರು ಅದ್ಭುತವಾದ ಫಾರ್ಮ್ ನಲ್ಲಿದ್ದಾರೆ.

ದಾಖಲೆಯ ರನ್ ಗಳನ್ನು ಸಿಡಿಸುತ್ತಿದ್ದಾರೆ. ಮೈದಾನ ಯಾವುದೇ ಆಗಲಿ, ಎದುರಾಳಿ ತಂಡ ಯಾವುದೇ ಆಗಿರಲಿ, ಬೌಲರ್ ಯಾರೇ ಆಗಿರಲಿ ಸೂರ್ಯಕುಮಾರ್ ಯಾದವ್ ಅವರು ರನ್ ಗಳ ಹೊಳೆಯನ್ನೇ ಹರಿಸುತ್ತಿದ್ದಾರೆ. ಇಂಜುರಿ ಬಳಿಕ ತಂಡಕ್ಕೆ ಮರಳಿ, ಫಾರ್ಮ್ ಕಂಡುಕೊಳ್ಳಲು ಕಷ್ಟಪಡುತ್ತಿದ್ದ ಕೆ.ಎಲ್.ರಾಹುಲ್ ಅವರು ಕೂಡ ಫಾರ್ಮ್ ಗೆ ಮರಳಿದ್ದಾರೆ.

ಕಳೆದ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದು, ಅರ್ಧಶತಕ ಸಿಡಿಸಿದ್ದಾರೆ. ಅಭ್ಯಾಸ ಪಂದ್ಯಗಳಲ್ಲಿ ಕೂಡ ಉತ್ತಮವಾದ ಪ್ರದರ್ಶನ ನೀಡುತ್ತಿದ್ದಾರೆ. ಇನ್ನು ವಿರಾಟ್ ಕೋಹ್ಲಿ ಅವರು ಸಹ ಫಾರ್ಮ್ ಗೆ ಮರಳಿ ಏಷ್ಯಾಕಪ್ ನಲ್ಲಿ ಸೆಂಚುರಿ ಭಾರಿಸಿದ್ದರು, ಬಳಿಕ ಎರಡು ಅರ್ಧಶತಕ ಸಿಡಿಸಿದ್ದರು. ರೋಹಿತ್ ಶರ್ಮಾ ಅವರು ಸ್ಥಿರವಲ್ಲದ ಪ್ರದರ್ಶನ ತೋರುತ್ತಿದ್ದಾರೆ. ಕೆಲವು ಪಂದ್ಯಗಳಲ್ಲಿ ಉತ್ತಮ ಇನ್ನಿಂಗ್ಸ್ ಆಡಿದರೆ, ಇನ್ನು ಕೆಲವು ಪ್ರದರ್ಶನಗಳಲ್ಲಿ ಬೇಗ ಔಟ್ ಆಗುತ್ತಿದ್ದಾರೆ.

ಪಾಕಿಸ್ತಾನ್ ವಿರುದ್ಧ ನಮ್ಮ ಬ್ಯಾಟ್ಸ್ಮನ್ ಗಳು ಆಡಿರುವ ಹಿಂದಿನ ಪಂದ್ಯಗಳನ್ನು ನೋಡಿದರೆ, ಪಾಕಿಸ್ತಾನ್ ವಿರುದ್ಧ ಕೆ.ಎಲ್.ರಾಹುಲ್ ಅವರು ಆಡಿರುವ ಹಿಂದಿನ 5 ಪಂದ್ಯಗಳನ್ನು ತೆಗೆದುಕೊಂಡರೆ, 106.89 ಸ್ಟ್ರೈಕ್ ರೇಟ್ ನಲ್ಲಿ ಕೇವಲ 31 ರನ್ ಗಳಿಸಿದ್ದಾರೆ, ಇವರ ಆವರೇಜ್ ಕೇವಲ 10.33. ಬೇರೆ ತಂಡಗಳ ವಿರುದ್ಧ ಉತ್ತಮವಾಗಿ ಆಡುವ ರೋಹಿತ್ ಶರ್ಮಾ ಅವರು ಕೂಡ ಪಾಕ್ ವಿರುದ್ಧ ಅಡಿರುವ 9 ಇನ್ನಿಂಗ್ಸ್ ಗಳಲ್ಲಿ 110 ರನ್ ಗಳನ್ನಷ್ಟೇ ಗಳಿಸಿದ್ದಾರೆ. ಇನ್ನು ಸೂರ್ಯಕುಮಾರ್ ಯಾದವ್ ಅವರ ಕಥೆ ಕೂಡ ಇದೇ ರೀತಿ.

ಇನ್ನುಳಿದ ಎಲ್ಲಾ ತಂಡಗಳ ವಿರುದ್ಧ ರನ್ ಗಳ ಮಳೆ ಹರಿಸುವ ಇವರು, ಪಾಕಿಸ್ತಾನ್ ವಿರುದ್ಧ ಅದೇ ರೀತಿ ಆಡಲು ಸಾಧ್ಯವಾಗಿಲ್ಲ, ಪಾಕ್ ವಿರುದ್ಧ ಆಡಿರುವ ಹಿಂದಿನ 3 ಮ್ಯಾಚ್ ಗಳಲ್ಲಿ ಸೂರ್ಯಕುಮಾರ್ ಯಾದವ್ ಅವರು 116.66 ಸ್ಟ್ರೈಕ್ ರೇಟ್ ನಲ್ಲಿ, ಆವರೇಜ್ 14ರಲ್ಲಿ, ಕೇವಲ 42 ರನ್ ಗಳಿಸಿದ್ದಾರೆ. ಆರಂಭಿಕ ಬ್ಯಾಟ್ಸ್ಮನ್ ಗಳಾಗಿರುವ ಇವರ ಮೇಲೆಯೇ ಜವಾಬ್ದಾರಿ ಹೆಚ್ಚಾಗಿದೆ. ಇವರು ಉತ್ತಮವಾಗಿ ಆರಂಭಿಸಿದರೆ, ಟೀಮ್ ಇಂಡಿಯಾ ಸ್ಕೋರ್ 200ರ ಗಡಿ ದಾಡುತ್ತದೆ.

2022ರ ವಿಶ್ವಕಪ್ ನಲ್ಲಿ ಪಾಕ್ ವಿರುದ್ಧದ ಮೊದಲ ಸಮಯ, ಭಾನುವಾರದಂದು ಭಾರತದ ಸಮಯ 1:30ಕ್ಕೆ ಆಸ್ಟ್ರೇಲಿಹಯಾದ ಮೆಲ್ಬೋರ್ನ್ ಕ್ರೀಡಾಂಗಣದಲ್ಲಿ ನಡೆಯಲಿದ್ದು, ನಮ್ಮ ಭಾರತ ತಂಡದ ಆಟಗಾರರು, ವಿಶೇಷವಾಗಿ ಆರಂಭಿಕ ಆಟಗಾರರಾದ ಕ್ಯಾಪ್ಟನ್ ರೋಹಿತ್ ಶರ್ಮಾ, ಕನ್ನಡಿಗ ಕೆ.ಎಲ್.ರಾಹುಲ್ ಮತ್ತು ಸೂರ್ಯಕುಮಾರ್ ಯಾದವ್ ಅವರು ಯಾವ ರೀತಿ ಆಡುತ್ತಾರೆ ಎಂದು ಕಾದು ನೋಡಬೇಕಿದೆ.

Comments are closed.