ನೇರವಾಗಿ ರೂಪೇಶ್ ರಾಜಣ್ಣಗೆ ಕ್ಲಾಸ್ ತೆಗೆದುಕೊಂಡ ದಿವ್ಯ ಉರುಡುಗ: ಕ್ಲಾಸ್ ತೆಗೆದುಕೊಳ್ಳುತ್ತಿದ್ದರು ಮರು ಮಾತನಾಡದೆ ಸುಮ್ಮನಾದ ರೂಪೇಶ್ ರಾಜಣ್ಣ. ಏನಾಗಿದೆ ಗೊತ್ತೇ??
ಬಿಗ್ ಬಾಸ್ ಮನೆಯಲ್ಲಿ ತರ್ಲೆ, ತಮಾಷೆ, ಪ್ರಾಂಕ್ ಗಳು ಇದೆಲ್ಲವೂ ಕಾಮನ್. ಇದೀಗ ಬಿಗ್ ಮನೆಯಲ್ಲಿ ರೂಪೇಶ್ ರಾಜಣ್ಣ ಅವರ ಮೇಲೆ ದೊಡ್ಡ ಪ್ರಾಂಕ್ ಒಂದನ್ನೇ ಪ್ಲಾನ್ ಮಾಡಿಕೊಂಡು ನಡೆಸಲಾಗುತ್ತಿತ್ತು, ಆ ಪ್ರಾಂಕ್ ಶುರು ಮಾಡಿದವರು, ಪ್ರಶಾಂತ್ ಸಂಬರ್ಗಿ ಮತ್ತು ಸಾನ್ಯಾ ಅಯ್ಯರ್. ಈ ಹಿಂದೆ ರಾಕೇಶ್ ಅಡಿಗ ಅವರು ಪ್ರಾಂಕ್ ಮಾಡಿದಾಗ, ಪ್ರಶಾಂತ್ ಅವರು ಕೋಪಗೊಂಡು ಅದರ ವಿರುದ್ಧ ಮಾತನಾಡಿದ್ದರು. ಆದರೆ ಈಗ ಅದೇ ಪ್ರಶಾಂತ್ ಸಂಬರ್ಗಿ ಅವರು ಸಾನ್ಯಾ ಅಯ್ಯರ್ ಅವರನ್ನು ಜೊತೆಗೂಡಿಸಿಕೊಂಡು ರೂಪೇಶ್ ರಾಜಣ್ಣ ಅವರನ್ನು ಪ್ರಾಂಕ್ ಮಾಡುತ್ತಾರೆ.
ಅದು ರೂಪೇಶ್ ರಾಜಣ್ಣ ಅವರ ಮುಗ್ಧತೆಯನ್ನು ಬಳಸಿಕೊಂಡು, ಸಾನ್ಯಾ ಅಯ್ಯರ್ ಅವರಿಗೆ ದೇವರ ಮೂಲಕ ಆಜ್ಞೆ ಬರುತ್ತಿದೆ ಎನ್ನುವ ಹಾಗೆ ಬಿಂಬಿಸಿ ಪ್ರಾಂಕ್ ಮಾಡಲಾಗಿತ್ತು, ಅದನ್ನು ಮೂರ್ನಾಲ್ಕು ದಿನಗಳವರೆಗೂ ಮುಂದುವರೆಸಿಕೊಂಡು ಕೂಡ ಹೋಗಲಾಗಿತ್ತು, ಆದರೆ ಈ ಪ್ರಾಂಕ್ ವಿಚಾರ ದಿವ್ಯ ಉರುಡುಗ ಅವರಿಗೆ ಅರ್ಥವಾಗಿದ್ದು, ಪಾತ್ರೆ ತೊಳೆಯುವಾಗ ಅದನ್ನು ರೂಪೇಶ್ ರಾಜಣ್ಣ ಅವರಿಗೆ ಅರ್ಥ ಮಾಡಿಸಲು ಪ್ರಯತ್ನ ಮಾಡಿದ್ದಾರೆ. ಅವರಿಬ್ಬರು ನಿಮ್ಮ ಮೇಲೆ ಪ್ಲಾನ್ ಮಾಡಿ ಪ್ರಾಂಕ್ ಮಾಡುತ್ತಿದ್ದಾರೆ, ಅದು ನಿಮಗೆ ಅರ್ಥ ಆಗ್ತಾ ಇಲ್ಲ, ಅವರಿಬ್ಬರು ಮಾತನಾಡಿರೋದನ್ನ ನಾನೇ ಕೇಳಿಸಿಕೊಂಡಿದ್ದೇನೆ..ಎಂದು ದಿವ್ಯ ಹೇಳಿದ್ದಾರೆ.

ಆದರೆ ಆ ಮಾತು ಕೇಳಿಸಿಕೊಂಡ ರೂಪೇಶ್ ರಾಜಣ್ಣ ಅವರು ನಂಬೋದಕ್ಕೆ ರೆಡಿ ಇಲ್ಲ, ಪ್ರಾಂಕ್ ಎಂದು ನನಗೆ ಅನ್ನಿಸುತ್ತಿಲ್ಲ ಎಂದು ಹೇಳಿದ್ದಾರೆ. ಕೊನೆಗೆ ದಿವ್ಯ ಅವರು, ಅದು ಪ್ರಾಂಕ್ ಅಂತ ನಿಮಗೆ ಗೊತ್ತಿದೆ ಎನ್ನುವ ಹಾಗೆ ತೋರಿಸಿಕೊಳ್ಳಬೇಡಿ. ನೀವು ಅವರನ್ನ ನಂಬಿದ್ದೀರಿ ಅಂತಾನೆ ಅವರು ಅಂದುಕೊಳ್ಳಲಿ, ಆದರೆ ನಾವು ಅವರ ಪ್ರಾಂಕ್ ಗೆ ಪ್ರಾಂಕ್ ಮಾಡೋಣ, ಅವರಿಗೆ ಟೆನ್ಷನ್ ಆಗುವ ಹಾಗೆ ಮಾಡೋಣ ಎಂದಿದ್ದು, ರೂಪೇಶ್ ರಾಜಣ್ಣ ಅವರು ಆಗಲು ದಿವ್ಯ ಅವರ ಮಾತನ್ನು ಪೂರ್ತಿಯಾಗಿ ನಂಬದೆ ಇದ್ದಾಗ, ಕೊನೆಗೆ ದಿವ್ಯ ಅವರು ನೀವು ಇಂಟರ್ನ್ಯಾಷನಲ್ ದಡ್ಡ ಎಂದು ಹೇಳಿದ್ದಾರೆ. ಹೀಗೆ ರೂಪೇಶ್ ರಾಜಣ್ಣ ಅವರ ಮೇಲೆ ಪ್ರಾಂಕ್ ನಡೆದಿದೆ.
Comments are closed.