Neer Dose Karnataka
Take a fresh look at your lifestyle.

ಸದಾ ಅಪ್ಪು ಜೊತೆಗಿದ್ದು, ಅಪ್ಪು ಅಪ್ಪು ಎಂದು ಬಾಂಧ್ಯವ್ಯದಿಂದ ಇದ್ದ ಜಗ್ಗೇಶ್, ಪುನೀತ್ ಪರ್ವ ಕಾರ್ಯಕ್ರಮಕ್ಕೆ ಯಾಕೆ ಬಂದಿಲ್ಲ ಗೊತ್ತೇ??

203

ನಿನ್ನೆ ನಡೆದ ಅಪ್ಪು ಪರ್ವ ಕಾರ್ಯಕ್ರಮ ನೋಡಿದರೆ, ಅಪ್ಪು ಅವರ ಮೇಲೆ ಅದೆಷ್ಟು ಜನರಿಗೆ ಪ್ರೀತಿ ಗೌರವ ಇತ್ತು ಎಂದು ಗೊತ್ತಾಗುತ್ತದೆ. ದಕ್ಷಿಣ ಭಾರತ ಚಿತ್ರರಂಗದ ಸಾಕಷ್ಟು ಕಲಾವಿದರು, ನಟನಟಿಯರು ಅಪ್ಪು ಎನ್ನುವ ಆ ಒಬ್ಬ ವ್ಯಕ್ತಿಗೋಸ್ಕರ ಬೆಂಗಳೂರಿಗೆ ಬಂದಿದ್ದರು. ನಿನ್ನೆ ಬಹಳಷ್ಟು ತಾರೆಯರು ಬಂದಿದ್ದರು ಸಹ, ಎಲ್ಲರೂ ಜಗ್ಗೇಶ್ ಅವರು ಬರದೆ ಇದ್ದಿದ್ದರ ಬಗ್ಗೆ ಮಾತನಾಡಿಕೊಂಡಿದ್ದರು, ಜಗ್ಗೇಶ್ ಅವರು ಅಪ್ಪು ಅವರೊಡನೆ ಬಹಳ ಆತ್ಮೀಯರಾಗಿದ್ದರು. ಹಾಗಿದ್ದರೂ ಜಗ್ಗೇಶ್ ಅವರು ಯಾಕೆ ಪುನೀತ ಪರ್ವ ಕಾರ್ಯಕ್ರಮಕ್ಕೆ ಬರಲಿಲ್ಲ ಎನ್ನುವುದು ಎಲ್ಲರ ಪ್ರಶ್ನೆ ಆಗಿತ್ತು, ಆ ಪ್ರಶ್ನೆಗೆ ಸ್ವತಃ ಜಗ್ಗೇಶ್ ಅವರೇ ಉತ್ತರ ಕೊಟ್ಟಿದ್ದಾರೆ..

ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಅಪ್ಪು ಅವರ ಬಗ್ಗೆ ಭಾವನಾತ್ಮಕ ಸಾಲುಗಳನ್ನು ಬರೆಯುವ ಮೂಲಕ ಜಗ್ಗೇಶ್ ಅವರು ಕಾರಣ ತಿಳಿಸಿದ್ದಾರೆ.. “ಬದುಕಲ್ಲಿ ನೂರಾರು ಮಂದಿ ಸಿಗುತ್ತಾರೆ , ಆದರೆ ಎಲ್ಲರೂ ಆತ್ಮೀಯರಾಗುವುದಿಲ್ಲ.. ನೂರಾರು ಮಂದಿಯಲ್ಲಿ ಕೆಲವರು ಮಾತ್ರ ಹೃದಯಕ್ಕೆ ಹತ್ತಿರವಾಗುತ್ತಾರೆ.. ಹತ್ತಿರವಾದ ಕೆಲ ಆತ್ಮೀಯರಷ್ಟೇ ಹೃದಯದಲ್ಲಿ ಉಳಿಯುತ್ತಾರೆ.. ನನ್ನ ಹೃದಯದಲ್ಲಿ ನನ್ನ ತಂದೆತಾಯಿ ಹೆಂಡತಿ ಮಕ್ಕಳು ಅಕ್ಕಂದಿರು ತಮ್ಮಂದಿರು ಹಾಗು ಇತ್ತೀಚಿನ ವರ್ಷದಲ್ಲಿ ಮೊಮ್ಮಗ ಅರ್ಜುನ ಬಿಟ್ಟರೆ ರಾಜಣ್ಣ, ಪುನೀತ ನನ್ನ ಅತ್ಯಂತ ಆತ್ಮೀಯರಾಗಿದ್ದರು..ರಾಜಣ್ಣ ಹೋದಾಗ ನನ್ನ ತಂದೆ ಹೋದಂತೆ ದುಃಖಿಸಿದೆ.. ಪುನೀತ ಹೋದಮೇಲೆ ನನ್ನಲ್ಲಿದ್ದ ಆಶಾಭಾವವೆ ಕೊನೆಯಾಯಿತು.. ಬದುಕು ನಶ್ವರ ಅನ್ನಿಸಿತು..

ಎಲ್ಲಾ ಬಿಟ್ಟು ಹೋಗಬೇಕು ಎಂದು ನಿಶ್ಚಯವಾಯಿತು.. ನನ್ನ ಬದುಕಿಗೆ ಪುನೀತ ಬದಲಾವಣೆಯ ಮಾರ್ಗದರ್ಶನದ ಬೆಳಕಾದ.. ನನ್ನಲ್ಲಿದ್ದ ಕೋಪ, ಆವೇಶ ನಿರ್ನಾಮವಾಯಿತು.. ಒಟ್ಟಿನಲ್ಲಿ ಪುನೀತ ನನಗೆ ಗುರುವಾದ.. ಅಮೇರಿಕದಿಂದ ಹಿಂದಿರುಗುವ ಟಿಕೆಟ್ಟು ಸಿಗದೆ ಆತನ ಕೊನೆಯ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಲಿಲ್ಲವೆಂದು ವಿಪರೀತ ದುಃಖವಾಯಿತು.. ಅಪ್ಪನ ಹೆಸರಿನ ಗಂಧದಗುಡಿ ಚಿತ್ರ ಮತ್ತೊಮ್ಮೆ ಪುನೀತನಿಂದ ಕೊನೆಯ ಚಿತ್ರವಾಗಿ ಹೊರಬರುತ್ತಿದೆ.. ಆ ಚಿತ್ರಕ್ಕೆ ನನ್ನ ಹೃದಯಪೂರ್ವಕ ಶುಭಕಾಮನೆಗಳು.. ಎಲ್ಲರೂ ಒಂದು ದಿನ ಕಡ್ಡಾಯ ನಿರ್ಗಮಿಸಲೇಬೇಕು.. ಆದರೆ ಕೆಲವರು ಮಾತ್ರ ನಿರ್ಗಮಿಸಿದ ಮೇಲೆಯೂ ಉಳಿಯುತ್ತಾರೆ.. ಆ ಕೆಲವರಲ್ಲಿ ಪುನೀತ ನಮ್ಮಗಳಿಗೆ ದೇವರಾದ..ನಿನ್ನ ಪ್ರೀತಿಯ ನೆನಪು ನನ್ನ ಕೊನೆ ಉಸಿರಿನವರೆಗೂ ನನ್ನ ಮಾನಸದಲ್ಲಿ.. Love You ..ಶುಭದಿನ….” ಎಂದು ಬರೆದುಕೊಂಡಿದ್ದಾರೆ ನಟ ಜಗ್ಗೇಶ್.

Leave A Reply

Your email address will not be published.