Neer Dose Karnataka
Take a fresh look at your lifestyle.

ಸುಧಾಮೂರ್ತಿ ರವರು ಪುನೀತ್ ರವರನ್ನು ಏನೆಂದು ಕರೆಯುತ್ತಿದ್ದರು ಗೊತ್ತೇ?? ಬೇರೆ ಯಾರು ಈ ಹೆಸರಿನಲ್ಲಿ ಕರೆಯುತ್ತಿರಲಿಲ್ಲ.

ನಿನ್ನೆ ನಡೆದ ಗಂಧದಗುಡಿ ಪ್ರೀರಿಲೀಸ್ ಇವೆಂಟ್ ನಲ್ಲಿ ಅಪ್ಪು ಅವರಿಗಾಗಿ ಇಡೀ ಸ್ಯಾಂಡಲ್ ವುಡ್ ನೆರೆದಿತ್ತು.. ನಮ್ಮ ಕನ್ನಡ ಚಿತ್ರರಂಗ ಮಾತ್ರವಲ್ಲದೆ, ತಮಿಳು ಮತ್ತು ತೆಲುಗು ಚಿತ್ರರಂಗದ ನಟರು ಸಹ ಕಾರ್ಯಕ್ರಮಕ್ಕೆ ಬಂದು, ಅಪ್ಪು ಅವರ ಬಗ್ಗೆ ತಮಗಿರುಗ ನೆನಪುಗಳನ್ನು ಹಂಚಿಕೊಂಡರು. ದೊಡ್ಮನೆ ಕುಟುಂಬಕ್ಕೆ ಇದೊಂದು ಅದ್ಭುತವಾದ ಕ್ಷಣವಾಗಿತ್ತು. ಲಕ್ಷಾಂತರ ಅಭಿಮಾನಿಗಳು ಪುನೀತ ಪರ್ವ ಕಾರ್ಯಕ್ರಮವನ್ನು ಕಣ್ತುಂಬಿಕೊಳ್ಳಲು ಕರ್ನಾಟಕದ ಹಲವೆಡೆಗಳಿಂದ ಮಾತ್ರವಲ್ಲದೆ, ಹೊರ ರಾಜ್ಯಗಳಿಂದಲೂ ಬಂದಿದ್ದರು. ನಿನ್ನೆಯ ಸಂಜೆ ಒಂದು ರೀತಿ ಸಂತೋಷ ಮತ್ತು ದುಃಖ ಮಿಶ್ರಿತವಾಗಿತ್ತು. ಎಲ್ಲರ ಕಣ್ಣಲ್ಲಿ ಸಂತೋಷ ಇದ್ದರು, ಇಡೀ ದೊಡ್ಮನೆ ಕುಟುಂಬ ಸ್ಟೇಜ್ ಗೆ ಬಂದು, ಬೊಂಬೆ ಹೇಳುತೈತೆ ಹಾಡನ್ನು ಹಾಡಿದರು.

ಅದೊಂದು ಕ್ಷಣ, ಎಲ್ಲರ ಕಣ್ಣಂಚಲ್ಲು ಕಣ್ಣೀರು ತರಿಸಿತು. ನಿನ್ನೆಯ ಕಾರ್ಯಕ್ರಮದಲ್ಲಿ ಶಿವಮ್ಮ ಅವರು 60ರ ಹರೆಯದಲ್ಲೂ 20ರ ಹರೆಯದ ಹುಡುಗನ ಹಾಗೆ ಅಪ್ಪು ಅವರ ಹಾಡುಗಳಿಗೆ ಹೆಜ್ಜೆ ಹಾಕಿದ್ದು ಇನ್ನಷ್ಟು ವಿಶೇಷವಾಗಿತ್ತು. ಪುನೀತ ಪರ್ವ ಕಾರ್ಯಕ್ರಮಕ್ಕೆ ರಾಜ್ಯದ ಸಿಎಂ ಬಸವರಾಜ ಬೊಮ್ಮಾಯಿ ಅವರು, ಇನ್ಫೋಸಿಸ್ ಮುಖ್ಯಸ್ಥೆ ಸುಧಾಮೂರ್ತಿ ಅಮ್ಮನವರು ಸೇರಿದಂತೆ ಅನೇಕ ಗಣ್ಯವ್ಯಕ್ತಿಗಳು ಬಂದಿದ್ದರು. ವೇದಿಕೆಯ ಮೇಲೆ ಬಂದ ಸುಧಾಮೂರ್ತಿ ಅಮ್ಮನವರು ಅಪ್ಪು ಅವರ ಬಗ್ಗೆ ಕೆಲವು ವಿಚಾರಗಳನ್ನು ಹೇಳಿಕೊಂಡರು. ಅಪ್ಪು ಅವರನ್ನು ತಾವು ಬೇರೆಯದೇ ಹೆಸರಿನಲ್ಲಿ ಕರೆಯುತ್ತಿದ್ದ ಬಗ್ಗೆ ಹಂಚಿಕೊಂಡರು.
“ಅಪ್ಪು ಅವರು ಬಾಲನಟನಾಗಿ ಅಭಿನಯಿಸಿದ್ದ ಸಿನಿಮಾಗಳನ್ನ ನಾನು ಹೆಚ್ಚಾಗಿ ನೋಡಿದ್ದೇನೆ, ಚಲಿಸುವ ಮೋಡಗಳು, ಎರಡು ನಕ್ಷತ್ರಗಳು, ಭಕ್ತ ಪ್ರಹ್ಲಾದ ಬೆಟ್ಟದ ಹೂವು ಇದೆಲ್ಲವನ್ನು ನೋಡಿದ್ದೇ.

ನನ್ನ ಕಣ್ಣಿಗೆ ಅವರು ಲೋಹಿತ್ ಆಗಿಯೇ ಇದ್ದರು. ನಾನು ಅವರನ್ನ ಲೋಹಿತ್ ಎಂದೇ ಕರೆಯುತ್ತಿದ್ದೇ, ಭೇಟಿ ಆದಾಗಲೆಲ್ಲಾ ನಿಮ್ಮನ್ನ ನಾನು ಪುನೀತ್ ಅಂತ ಅಥವಾ ಅಪ್ಪು ಅಂತ ಕರೆಯೋದಕ್ಕೆ ಆಗಲ್ಲ, ಲೋಹಿತ್ ಅಂತಾನೆ ಕರೀತೀನಿ ಅಂದಿದ್ದೆ, ಆಗ ಅವರು ನಗ್ತಾ ಇದ್ರು. ಒಂದು ಸಾರಿ ಕೊಲಂಬೋ ಏರ್ ಪೋರ್ಟ್ ನಲ್ಲಿ ಅವರನ್ನ ಭೇಟಿ ಮಾಡಿದ್ದು, ಅವರು ಚಿತ್ರೀಕರಣ ಮುಗಿಸಿಕೊಂಡು ಬರ್ತಾ ಇದ್ರು. ಬಹಳ ಜನ ಏರ್ ಪೋರ್ಟ್ ನಲ್ಲಿ ಇದ್ದರು ಕೂಡ ,ನನ್ನ ಬಳಿ ಬಂದು ನಮಸ್ಕಾರ ಮಾಡಿ ಮಾತನಾಡಿಸಿದ್ರು, ಅಷ್ಟು ಜನ ಅಂತ ಇದ್ದಾರಲ್ಲ ಇದೆಲ್ಲಾ ಯಾಕೆ ಅಂತ ಕೇಳಿದ್ದೆ..ಆ ವ್ಯಕ್ತಿತ್ವ ಅವರ ಬಗ್ಗೆ ಹೇಳುತ್ತೆ. ನಮ್ಮ ಜೆನೆರೇಷನ್ ನವರು ಅವರ ತಂದೆಯ ಸಿನಿಮಾಗಳನ್ನ ನೋಡಿಕೊಂಡು ಬೆಳೆದವರು, ನಾನು ರಾಜ್ ಕುಮಾರ್ ಭಕ್ತೆ..” ಎಂದು ಹೇಳಿದ್ದಾರೆ ಸುಧಾಮೂರ್ತಿ ಅಮ್ಮನವರು. ತಾವು ಅಪ್ಪು ಅವರನ್ನು ಲೋಹಿತ್ ಎಂದು ಕರೆಯುತ್ತಿದ್ದಾಗಿ ತಿಳಿಸಿದ್ದಾರೆ.

Comments are closed.