Neer Dose Karnataka
Take a fresh look at your lifestyle.

ಸುದೀಪ್ ಬಂದಿಲ್ಲ ಎಂದರೂ ದರ್ಶನ್ ರವರು ಅಪ್ಪು ಕಾರ್ಯಕ್ರಮಕ್ಕೆ ಯಾಕೆ ಬಂದಿಲ್ಲ. ನಿಜವಾದ ಕಾರಣ ಏನು ಗೊತ್ತೇ??

ಸುದೀಪ್ ಬಂದಿಲ್ಲ ಎಂದರೂ ದರ್ಶನ್ ರವರು ಅಪ್ಪು ಕಾರ್ಯಕ್ರಮಕ್ಕೆ ಯಾಕೆ ಬಂದಿಲ್ಲ. ನಿಜವಾದ ಕಾರಣ ಏನು ಗೊತ್ತೇ??

68

ಶುಕ್ರವಾರ ನಡೆದ ಪುನೀತ ಪರ್ವ ಕಾರ್ಯಕ್ರಮ ಸಂತೋಷದ ಜೊತೆಗೆ ಭಾವನಾತ್ಮಕವಾಗಿತ್ತು. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಕನಸು ಗಂಧದಗುಡಿಯ ಪ್ರೀ ರಿಲೀಸ್ ಇವೆಂಟ್ ಗೆ ಕನ್ನಡ ಚಿತ್ರರಂಗದ ಬಹುತೇಕ ಕಲಾವಿದರು ಬಂದಿದ್ದರು.

ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ಸ್ವತಃ ಎಲ್ಲಾ ಕಲಾವಿದರಿಗು ಆಹ್ವಾನ ನೀಡಿದ್ದರು, ಎಲ್ಲರಿಗೂ ಅವರೇ ಕರೆಮಾಡಿ ಕಾರ್ಯಕ್ರಮಕ್ಕೆ ಬರಲು ಹೇಳಿದ್ದರು. ಅಶ್ವಿನಿ ಅವರ ಮಾತಿಗೆ ಬೆಲೆ ಕೊಟ್ಟು ಬಹುತೇಕ ಎಲ್ಲಾ ಕಲಾವಿದರು ಬಂದಿದ್ದರು.

ಆದರೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಮತ್ತು ಕಿಚ್ಚ ಸುದೀಪ್ ಅವರು ಬಂದಿರಲಿಲ್ಲ. ಇವರಿಬ್ಬರು ಯಾಕೆ ಬಂದಿರಲಿಲ್ಲ ಎಂದು ಸೋಷಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆ ಆಗುತ್ತಿದೆ.

ಆದರೆ ದರ್ಶನ್ ಅವರು ಮತ್ತು ಸುದೀಪ್ ಅವರು ಇಬ್ಬರು ಸಹ ಯಾಕೆ ಬಂದಿರಲಿಲ್ಲ ಎನ್ನುವುದಕ್ಕೆ ನಿಜವಾದ ಕಾರಣ ತಿಳಿದುಬಂದಿದೆ. ಸುದೀಪ್ ಅವರು ತಮ್ಮ ಪತ್ನಿ ಪ್ರಿಯಾ ಅವರ ಜೊತೆಗೆ ವಿದೇಶದಲ್ಲಿದ್ದಾರೆ, ಹಾಗಾಗಿ ಸುದೀಪ್ ಅವರು ಬರಲು ಸಾಧ್ಯವಾಗಿಲ್ಲ, ಬಿಗ್ ಬಾಸ್ ವೀಕೆಂಡ್ ಎಪಿಸೋಡ್ ಗೆ ಸಹ ಸುದೀಪ್ ಅವರು ಬಂದಿಲ್ಲ. ಇನ್ನು ದರ್ಶನ್ ಅವರು ಕೂಡ ಯಾಕೆ ಬರಲಿಲ್ಲ ಎಂದು ತಿಳಿದುಬಂದಿದೆ.

ಗಂಧದಗುಡಿ ಪ್ರೀ ರಿಲೀಸ್ ಇವೆಂಟ್ ನಡೆದ ದಿನ, ದರ್ಶನ್ ಅವರು ಕ್ರಾಂತಿ ಸಿನಿಮಾ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರು ಎಂದು ಮಾಹಿತಿ ಸಿಕ್ಕಿದೆ, ಈ ವಿಚಾರವನ್ನು ಮೊದಲೇ ಶಿವಣ್ಣ ಅವರಿಗೆ ತಿಳಿಸಿದ್ದಾರಂತೆ ಡಿಬಾಸ್.

ಶಿವಣ್ಣ ಅವರು ಈ ವಿಷಯದ ಬಗ್ಗೆ ಮಾತನಾಡಿ, ದರ್ಶನ್ ಅವರಿಗೆ ಚಿತ್ರೀಕರಣವನ್ನು ಈ ಮೊದಲೇ ನಿಗದಿ ಮಾಡಲಾಗಿತ್ತು, ಆ ಕಾರಣದಿಂದಲೇ ದರ್ಶನ್ ಅವರು ಕಾರ್ಯಕ್ರಮಕ್ಕೆ ಬರಲು ಸಾಧ್ಯವಾಗಲಿಲ್ಲ.

ಅದನ್ನು ಬೇರೆ ರೀತಿಯಲ್ಲಿ ಹೇಳಬಾರದು ಎಂದು ತಿಳಿಸಿದ್ದಾರೆ. ಕೊನೆಗೂ ದರ್ಶನ್ ಅವರು ಕಾರ್ಯಕ್ರಮಕ್ಕೆ ಯಾಕೆ ಬಂದಿರಲಿಲ್ಲ ಎನ್ನುವುದು ತಿಳಿದು ಅವರ ಅಭಿಮಾನಿಗಳು ಸಹ ಸಮಾಧಾನ ಮಾಡಿಕೊಂಡಿದ್ದಾರೆ.

Leave A Reply

Your email address will not be published.