Neer Dose Karnataka
Take a fresh look at your lifestyle.

ಮುಂದಿನ ತಿಂಗಳು ಈ ರಾಶಿಗಳು ಮುಟ್ಟಿದೆಲ್ಲಾ ಚಿನ್ನ: ಊಹೆಗೆ ಸಿಲುಕದಷ್ಟು ಅದೃಷ್ಟ ನಿಮ್ಮದಾಗಲಿದೆ. ಯಾವ್ಯಾವ ರಾಶಿಗಳಿಗೆ ಗೊತ್ತೇ??

ನವೆಂಬರ್ ತಿಂಗಳು ಮಿಥುನ ರಾಶಿಯವರ ಜೀವನವನ್ನು ಬದಲಾಯಿಸುತ್ತದೆ. ಮುಂದಿನ ತಿಂಗಳು ಮಿಥುನ ರಾಶಿಯವರಿಗೆ ಹೇಗಿರುತ್ತದೆ ಎಂದು ತಿಳಿಸುತ್ತೇವೆ ನೋಡಿ.. ಮಿಥುನ ರಾಶಿಯವರ ವೃತ್ತಿ ಜೀವನ ಚೆನ್ನಾಗಿರುತ್ತದೆ, ಆದರೆ ಬೇರೆ ಕ್ಷೇತ್ರಗಳಲ್ಲಿ ನಿಮಗೆ ಅಡೆತಡೆ ಉಂಟಾಗಬಹುದು. ಉದ್ಯೋಗದಲ್ಲಿ ಎಲ್ಲಾ ಕೆಲಸಗಳನ್ನು ಸಮಯಕ್ಕೆ ಸರಿಯಾಗಿ ಅಚ್ಚುಕಟ್ಟಾಗಿ ಮಾಡುತ್ತೀರಿ, ಕಷ್ಟಪಟ್ಟು ಕೆಲಸ ಮಾಡುತ್ತೀರಿ. ಇದರಿಂದ ನಿಮ್ಮ ಕೆಲಸಕ್ಕೆ ಮೆಚ್ಚುಗೆ ಸಿಗುತ್ತದೆ. ನಿಮ್ಮ ಉನ್ನತ ಅಧಿಕಾರಿಗಳ ಜೊತೆಗೆ ಸ್ನೇಹ ಚೆನ್ನಾಗಿರುತ್ತದೆ. ಕೆಲಸ ಬದಲಾವಣೆ ಮಾಡುವ ಪ್ಲಾನ್ ನಲ್ಲಿರುವವರಿಗೆ ಮುಂದಿನ ತಿಂಗಳ ಆರಂಭದ ಸಮಯ ಒಳ್ಳೆಯದು. ನಿಮ್ಮ ಹಿಂದೆ ಯಾರಾದರು ಮೋಸ ಮಾಡಲು ಪ್ಲಾನ್ ಮಾಡುತ್ತಿದ್ದರೆ, ಅವರು ಯಶಸ್ಸು ಪಡೆಯುವುದಿಲ್ಲ. ಹಾಗಾಗಿ ನೀವು ಭಯಪಡಬೇಡಿ.

ಬ್ಯುಸಿನೆಸ್ ಮಾಡುತ್ತಿರುವವರಿಗೆ ನೀವು ಈ ಬ್ಯುಸಿನೆಸ್ ಮುಂದುವರೆಸಲು ಹಿರಿಯರ ಸಹಾಯ ಸಿಗಬಹುದು. ನಿಮ್ಮ ಬ್ಯುಸಿನೆಸ್ ನಲ್ಲಿ ಏರಿಳಿತ ಉಂಟಾದರೆ, ಅದರಿಂದ ಹುಷಾರಾಗಿ ಹೊರಬನ್ನಿ, ಆಗ ನಿಮ್ಮ ಬ್ಯುಸಿನೆಸ್ ಗೆ ಒಳ್ಳೆಯ ಫಲಿತಾಂಶ ಸಿಗುತ್ತದೆ. ಹೊರದೇಶದಲ್ಲಿ ಬ್ಯುಸಿನೆಸ್ ಮಾಡುತ್ತಿರುವವರಿಗೆ, ನವೆಂಬರ್ 13ರ ನಂತರ ಸಮಯ ಚೆನ್ನಾಗಿದೆ. ಪ್ರೀತಿ ಮಾಡುತ್ತಿರುವವರಿಗೆ ಒಬ್ಬರನ್ನೊಬ್ಬರು ಸರಿಯಾಗಿ ಅರ್ಥಮಾಡಿಕೊಳ್ಳದೆ, ಜಗಳ ಉಂಟಾಗಬಹುದು. ಇದರಿಂದ ಬೇಸರವಾಗಿ, ಅದರ ಪರಿಣಾಮ ಪ್ರೀತಿಯ ಸಂಬಂಧದ ಮೇಲೆ ಬೀರುತ್ತದೆ, ಹಾಗಾಗಿ ನೀವು ಅರ್ಥಮಾಡಿಕೊಳ್ಳಲು ಮತ್ತು ನಿಮ್ಮ ಬಗ್ಗೆ ವಿವರಣೆ ನೀಡಲು ಮಾಡುವ ಪ್ರಯತ್ನ ಒಳ್ಳೆಯದು.

ಸಂಬಂಧದಲ್ಲಿ ನೋವು ಅಸಮಾಧಾನ ಹೆಚ್ಚಾಗುತ್ತದೆ. ಮನೆಯ ಪರಿಸ್ಥಿತಿ ನಿಮ್ಮ ಕಂಟ್ರೋಲ್ ನಲ್ಲಿರುತ್ತದೆ, ಮನೆಯವರ ಜೊತೆಗೆ ನೀವು ಸ್ವಲ್ಪ ಸಿಹಿಯಾಗಿರುವುದರಿಂದ, ಎಲ್ಲವೂ ಸುಗಮವಾಗಿ ಸಾಗುತ್ತದೆ. ಮನೆಯವರು ನಿಮ್ಮನ್ನು ನಂಬುತ್ತಾರೆ, ಮನೆಯವರ ಬೆಂಬಲ ಕೂಡ ನಿಮಗೆ ಸಿಗುತ್ತದೆ. ಇದರಿಂದ ನಿಮಗೆ ಆಸ್ತಿ ಖರೀದಿ ಮಾಡುವ ಅವಕಾಶ ಸಹ ಸಿಗಬಹುದು. ಒಡಹುಟ್ಟಿದವರ ಜೊತೆಗೆ ಜಗಳ ಉಂಟಾದರು ಸಹ, ಎಲ್ಲವೂ ಸರಿಹೋಗುತ್ತದೆ. ಹೊಸದಾಗಿ ಮದುವೆ ಆಗಿರುವವರ ನಡುವೆ ಜಗಳ ಉಂಟಾಗಬಹುದು. ಅದರಿಂದ ನೀವು ಶಾಂತಿಯುತವಾಗಿ ಇರುವುದು ಒಳ್ಳೆಯದು. ನಿಮ್ಮ ಪಾರ್ಟ್ನರ್ ಜೊತೆಗೆ ಶಾಪಿಂಗ್ ಹೋಗುತ್ತೀರಿ, ಅದರಿಂದ ಎಲ್ಲವೂ ಸರಿ ಹೋಗುತ್ತದೆ.

ನವೆಂಬರ್ 13ರ ಬಳಿಕ ನಿಮ್ಮ ಆರೋಗ್ಯದಲ್ಲಿ ಏರುಪೇರು ಉಂಟಾಗಬಹುದು. ಆರೋಗ್ಯದ ಬಗ್ಗೆ ಕಾಳಜಿ ವಹಿಸಿ, ಹಾರ್ಮೋನ್ ಇಂಬ್ಯಾಲೆನ್ಸ್, ಸ್ಕಿನ್ ಅಲರ್ಜಿ ಅಥವಾ ಹೆಣ್ಣುಮಕ್ಕಳಿಗೆ ಸಂಬಂಧಿಸಿದ ಸಮಸ್ಯೆಗಳು ಉಂಟಾಗಬಹುದು. ಈ ಸಮಯದಲ್ಲಿ ನಿಮ್ಮ ಆಹಾರ ಪದ್ಧತಿ ಚೆನ್ನಾಗಿರಬೇಕು. ಚಿಕಿತ್ಸೆ ಪಡೆಯುವುದು ಉತ್ತಮ. ಈ ಸಮಯದಲ್ಲಿ ನಿಮ್ಮ ಆರ್ಥಿಕ ಸ್ಥಿತಿ ಚೆನ್ನಾಗಿರುತ್ತದೆ. ಆದಾಯ ಹೆಚ್ಚಾಗುವುದರ ಜೊತೆಗೆ, ವೆಚ್ಚಗಳು ಕೂಡ ಹೆಚ್ಚಾಗುತ್ತದೆ. ಈ ಸಮಯದಲ್ಲಿ ಹಣವನ್ನು ಸರಿಯಾದ ರೀತಿಯಲ್ಲಿ ಖರ್ಚು ಮಾಡುವುದು ಒಳ್ಳೆಯದು, ಇಲ್ಲದೆ ಹೋದರೆ, ನಿಮ್ಮ ಬಜೆಟ್ ಗೆ ತೊಂದರೆ ಆಗಬಹುದು.

Comments are closed.