Neer Dose Karnataka
Take a fresh look at your lifestyle.

ಬಿಗ್ ನ್ಯೂಸ್: ಪುನೀತ್ ಪರ್ವ ಕಾರ್ಯಕ್ರಮಕ್ಕೆ ಅನುಶ್ರೀ ರವರು ಪಡೆದ ಸಂಭಾವನೆ ಅದೆಷ್ಟು ಗೊತ್ತೇ??

1,969

ಕರ್ನಾಟಕದ ನಂಬರ್ 1 ನಿರೂಪಕಿ ಎಂದೇ ಖ್ಯಾತಿಯಾಗಿರುವವರು ಅನುಶ್ರೀ. ಸಧ್ಯಕ್ಕೆ ಜೀಕನ್ನಡ ವಾಹಿನಿಯ ಸರಿಗಮಪ, ಡಿಕೆಡಿ, ಸೀರಿಯಲ್ ಸಂತೆಗಳು ಹಾಗೂ ಇನ್ನಿತರ ಕಾರ್ಯಕ್ರಮಗಳನ್ನು ನಿರೂಪಣೆ ಮಾಡುವ ಅನುಶ್ರೀ, ತಮ್ಮದೇ ಆದ ವಿಶಿಷ್ಟವಾದ ಶೈಲಿಯಲ್ಲಿ ನಿರೂಪಣೆ ಮಾಡಿ, ವೀಕ್ಷಕರಿಗೆ ಸಂಪೂರ್ಣ ಮನರಂಜನೆ ನೀಡುತ್ತಾರೆ.

ಇವರ ನಿರೂಪಣೆ ನೋಡಿದ ವೀಕ್ಷಕರು ಹೊಟ್ಟೆ ತುಂಬ ನಗುವುದಂತೂ ಖಂಡಿತ. ಮೊದಲಿಗೆ ಮಂಗಳೂರಿನ ಖಾಸಗಿ ಚಾನೆಲ್ ನಮ್ಮ ಟಿವಿಯಲ್ಲಿ ಅಂತಾಕ್ಷರಿ ಕಾರ್ಯಕ್ರಮ ನಡೆಸಿಕೊಡುತ್ತಿದ್ದ ಅನುಶ್ರೀ, ನಂತರ ಬೆಂಗಳೂರಿಗೆ ಬಂದು, ಕಷ್ಟಪಟ್ಟು ಅವಕಾಶಗಳನ್ನು ಪಡೆದುಕೊಂಡರು .

ಈಟಿವಿಯಲ್ಲಿ ಡಿಮ್ಯಾಂಡಪ್ಪೋ ಡಿಮ್ಯಾಂಡು, ನಂತರ ಕಸ್ತೂರಿ ವಾಹಿನಿಯಲ್ಲಿ ಒಂದಷ್ಟು ಕಾರ್ಯಕ್ರಮಗಳು, ಸುವರ್ಣ ವಾಹಿನಿಯಲ್ಲಿ ಕೆಲವು ಶೋಗಳನ್ನು ನಡೆಸಿಕೊಡುತ್ತಿದ್ದರು. 2015 ರಿಂದ ಜೀಕನ್ನಡ ವಾಹಿನಿಯಲ್ಲಿ ಸರಿಗಮಪ ಲಿಟ್ಲ್ ಚಾಂಪ್ಸ್ ಕಾರ್ಯಕ್ರಮದ ನಿರೂಪಣೆ ಮಾಡಲು ಶುರು ಮಾಡಿದರು.

ಜೊತೆಗೆ, 2013 ರಲ್ಲಿ ಮೊದಲ ಬಾರಿಗೆ ಕನ್ನಡದಲ್ಲಿ ಬಿಗ್ ಬಾಸ್ ರಿಯಾಲಿಟಿ ಶೋ ಶುರುವಾದಾಗ, ಮೊದಲ ಸೀಸನ್ ನಲ್ಲಿ ಸ್ಪರ್ಧಿಸಿದ್ದರು ಅನುಶ್ರೀ. ಈ ಮೂಲಕ ಕರ್ನಾಟಕದ ವೀಕ್ಷಕರಿಗೆ ಮತ್ತಷ್ಟು ಹತ್ತಿರವಾದರು. ಬಿಗ್ ಬಾಸ್ ನಂತರ ಇನ್ನಷ್ಟು ಕಾರ್ಯಕ್ರಮಗಳನ್ನು ನಿರೂಪಣೆ ಮಾಡುವ ಅವಕಾಶ ಅನುಶ್ರೀ ಅವರಿಗೆ ಸಿಕ್ಕಿತು.

ನಿರೂಪಣಾ ಕ್ಷೇತ್ರದಲ್ಲಿ ಜನಪ್ರಿಯತೆ ಗಳಿಸಿರುವ ಅನುಶ್ರೀ, ಜೀಕುಟುಂಬ ಅವಾರ್ಡ್ಸ್ ನಲ್ಲಿ ಫೇವರೆಟ್ ನಿರೂಪಕಿ ಎಂದು ಅವಾರ್ಡ್ ಪಡೆದಿದ್ದರು. ಪ್ರತಿ ಕಾರ್ಯಕ್ರಮ ನಿರೂಪಣೆ ಮಾಡಲು ಅನುಶ್ರೀ ಅವರು ಭಾರಿ ಸಂಭಾವನೆ ಪಡೆಯುತ್ತಾರೆ. ಅನುಶ್ರೀ ಅವರು ಸಾಮಾನ್ಯವಾಗಿ ಕಾರ್ಯಕ್ರಮ ನಿರೂಪಣೆ ಮಾಡಲು,

1,20,000 ಲಕ್ಷ ರೂಪಾಯಿ ಸಂಭಾವನೆ ಪಡೆಯುತ್ತಾರೆ. ಅಪ್ಪು ಅವರ ದೊಡ್ಡ ಫ್ಯಾನ್ ಆಗಿರುವ ಅನುಶ್ರೀ ಅವರು ಪುನೀತ ಪರ್ವ ಕಾರ್ಯಕ್ರಮ ನಿರೂಪಣೆ ಮಾಡಲು ಪಡೆದ ಸಂಭಾವನೆ ಎಷ್ಟು ಎನ್ನುವ ಚರ್ಚೆ ಶುರುವಾಗಿದ್ದು, ಸಧ್ಯಕ್ಕೆ ಸಿಕ್ಕಿರುವ ಮಾಹಿತಿ ಪ್ರಕಾರ, 2 ಲಕ್ಷ ರೂಪಾಯಿ ಸಂಭಾವನೆ ಪಡೆಯುತ್ತಾರೆ ಎಂದು ತಿಳಿದುಬಂದಿದೆ.

Leave A Reply

Your email address will not be published.