Neer Dose Karnataka
Take a fresh look at your lifestyle.

ಗಂಧದ ಗುಡಿ ಬಗ್ಗೆ ಅಪ್ಪು ಜೊತೆ ಮಾತನಾಡಿದಾಗ ತೆಲುಗಿನ ರಾಣ, ಇವೆಲ್ಲ ಬೇಕಾ, ರಿಸ್ಕ್ ಯಾಕೆ ಎಂದಾಗ ಅಪ್ಪು ಅಂದು ಹೇಳಿದ್ದೇನು ಗೊತ್ತೇ?

26

ಗಂಧದಗುಡಿ ಪ್ರೀರಿಲಿಸ್ ಇವೆಂಟ್ ನಲ್ಲಿ ಅಪ್ಪು ಅವರಿಗಾಗಿ ಎಲ್ಲರೂ ಸೇರಿದ್ದರು, ಲಕ್ಷಾಂತರ ಅಭಿಮಾನಿಗಳು, ಚಿತ್ರರಂಗದ ತಾರೆಯರು, ಕನ್ನಡದವರು ಮಾತ್ರವಲ್ಲದೆ, ತಮಿಳು ಮತ್ತು ತೆಲುಗು ಚಿತ್ರರಂಗದ ತಾರೆಯರು ಇವರೆಲ್ಲರೂ ಸಹ ಬೆಂಗಳೂರಿಗೆ ಆಗಮಿಸಿ, ಇವೆಂಟ್ ಅಟೆಂಡ್ ಮಾಡಿ, ಅಪ್ಪು ಅವರ ಜೊತೆಗೆ ತಮಗಿದ್ದ ಒಡನಾಟದ ಬಗ್ಗೆ ಹಂಚಿಕೊಂಡರು. ನಿನ್ನೆಯ ಇವೆಂಟ್ ಗೆ ತೆಲುಗು ಚಿತ್ರರಂಗದಿಂದ ನಟ ರಾಣಾ ದಗ್ಗುಬಾಟಿ ಮತ್ತು ನಟ ಅಖಿಲ್ ಅಕ್ಕಿನೇನಿ ಬಂದಿದ್ದರು.

ರಾಣಾ ದಗ್ಗುಬಾಟಿ ಅವರು ಪ್ಯಾನ್ ಇಂಡಿಯಾ ಸ್ಟಾರ್, ಪುನೀತ್ ಅವರೊಡನೆ ರಾಣಾ ಅವರಿಗೆ ಹಲವು ವರ್ಷಗಳ ಒಡನಾಟ ಇದೆ, ಅಪ್ಪು ಅವರ ಬಗ್ಗೆ ಮಾತನಾಡಿದ ರಾಣಾ ಅವರು ಹೇಳಿದ ಹಾಗೆ, ವರ್ಷದ ಹಿಂದೆಯೇ ಅಪ್ಪು ಅವರು ಗಂಧದಗುಡಿ ಕ್ಲಿಪಿಂಗ್ ಒಂದನ್ನು ರಾಣಾ ಅವರಿಗೆ ವಾಟ್ಸಾಪ್ ಮೂಲಕ ಕಳಿಸಿದ್ದರಂತೆ. ಅದನ್ನು ನೋಡಿದ ರಾಣಾ ಅವರು, ನಟನೆಯ ಜೊತೆಗೆ ಈ ಎಲ್ಲಾ ಕೆಲಸಗಳನ್ನು ನೀವು ಯಾಕೆ ಮಾಡುತ್ತೀರಾ, ಇಷ್ಟೆಲ್ಲಾ ರಿಸ್ಕ್ ಗಳನ್ನು ಯಾಕೆ ತೆಗೆದುಕೊಳ್ಳುತ್ತೀರಾ ಎಂದು ಕೇಳಿದರಂತೆ.. ಆಗ ಅಪ್ಪು ಅವರು, “ಬ್ರದರ್.. ನಮ್ಮ ಮುಂದಿನ ಜೆನೆರೇಷನ್ ಇದೆಲ್ಲಾ ಗೊತ್ತಾಗಬೇಕು ಎಂದರೆ, ನಾವು ಇದೆಲ್ಲಾ ಮಾಡಲೇಬೇಕು..

ಆಗಲೇ ಅವರಿಗೆ ನಮ್ಮ ವನ್ಯ ಸಂಪತ್ತಿನ ಬಗ್ಗೆ ಗೊತ್ತಾಗೋದು. ಇದನ್ನು ಎಲ್ಲರಿಗೂ ತೋರಿಸುತ್ತೇನೇ..” ಎಂದು ಹೇಳಿದ್ದರಂತೆ ಅಪ್ಪು. ಆ ಮಾತುಗಳನ್ನು ನೆನೆದ ರಾಣಾ, ನಾನು ಅಪ್ಪು ಅವರ ಫ್ರೆಂಡ್, ಅವರ ಬಗ್ಗೆ ಎಲ್ಲಾ ವಿಷಯವು ಬಹಳ ಸ್ಪೆಶಲ್ ಎಂದು ಹೇಳಿದರು. ಇತ್ತೀಚೆಗೆ ರಾಣಾ ಅವರ ಆಫೀಸ್ ನಲ್ಲಿ ಸಹ ಪುನೀತ್ ರಾಜ್ ಕುಮಾರ್ ಅವರ ಪುತ್ಥಳಿಯನ್ನು ಇರಿಸಿ, ಅದರ ಫೋಟೋ ತೆಗೆದು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿ, ಅಪ್ಪು ಅವರನ್ನು ನೆನಪು ಮಾಡಿಕೊಂಡಿದ್ದರು ನಟ ರಾಣಾ ದಗ್ಗುಬಾಟಿ. ಇದೆಲ್ಲವನ್ನು ನೋಡಿದರೆ, ಕೇಳಿದರೆ ನಮ್ಮ ಅಪ್ಪು ಅವರು ಎಂಥಾ ದೊಡ್ಡ ಮನುಷ್ಯ ಎಂದು ಅರಿವಾಗುತ್ತದೆ.

Leave A Reply

Your email address will not be published.