ದೀಪಾವಳಿಯಲ್ಲಿ 2000 ವರ್ಷಗಳ ನಂತರ ನಿರ್ಮಾಣವಾಗುತ್ತಿದೆ ಅಪರೂಪದ ಯೋಗ: ಇದರಿಂದ ಅದೃಷ್ಟ ಪಡೆಯುತ್ತಿರುವ 5 ರಾಶಿಗಳು ಯಾವುವು ಗೊತ್ತೇ??
ಪ್ರತಿ ವರ್ಷ ಕಾರ್ತಿಕ ಮಾಸ, ಕೃಷ್ಣ ಪಕ್ಷ, ಅಮಾವಾಸ್ಯೆಯ ದಿನ ದೀಪಾವಳಿ ಹಬ್ಬವನ್ನು ಆಚರಣೆ ಮಾಡುತ್ತೇವೆ. ಈ ವರ್ಷ ಆಕ್ಟೊಬರ್ 24 ರಂದು ಶುರುವಾಗಿ ಆಕ್ಟೊಬರ್ 25ರಂದು ಹಬ್ಬ ಮುಕ್ತಾಯವಾಗಬೇಕಿತ್ತು, ಆದರೆ 25ರಂದು ಸೂರ್ಯಗ್ರಹಣ ಇರುವ ಕಾರಣ, ಲಕ್ಷ್ಮಿಪೂಜೆ ಮಾಡಲಾಗುವುದು 24ರಂದು ಮಾತ್ರ. ಆಕ್ಟೊಬರ್ 24 ರಂದು ದೀಪಾವಳಿ ಆಚರಣೆ ಮಾಡುತ್ತೇವೆ.
ಇಂದು ಸಂಜೆ 5:30ರ ನಂತರ ಕಾರ್ತಿಕ್ ಅಮಾವಾಸ್ಯೆ ಶುರುವಾಗುತ್ತದೆ. ಸಂಜೆ ದೀಪಾವಳಿ ಹಬ್ಬ ಶುರುವಾದಾಗ ನಕ್ಷತ್ರಗಳು ಸಹ ಇರಲಿದ್ದು, ಈ ಸಮಯದಲ್ಲಿ, ಬುಧ, ಗುರು, ಶುಕ್ರ, ಶನಿ ಗ್ರಹಗಳ ಸಂಯೋಗ ನಡೆಯುತ್ತದೆ, ಜೊತೆಗೆ 5 ವಿಶೇಷವಾದ ರಾಜಯೋಗಗಳು ರೂಪುಗೊಳ್ಳುತ್ತದೆ, 2000 ವರ್ಷಗಳಲ್ಲಿ ಈ ಯೋಗ ಮೂಡುತ್ತಿರುವುದು ಇದೇ ಮೊದಲ ಸಾರಿ ಆಗಿದೆ.
ಈ ಯೋಗವು ಲಕ್ಷ್ಮೀದೇವಿಯ ಕೃಪೆಯಿಂದ ಖುಷಿ ಮತ್ತು ಸಮೃದ್ಧಿ ತರಲಿದೆ. ವೈದಿಕ ಶಾಸ್ತ್ರದಲ್ಲಿ ಹೇಳಿರುವ ಪ್ರಕಾರ, ಬುಧ ಗ್ರಹದ ಮುಂದೆ, ಸೂರ್ಯ ಮತ್ತು ಶುಕ್ರ ಗ್ರಹವು ಬರುತ್ತದೆ, ಇದರಿಂದಾಗಿ ಹಣಕಾಸಿನ ವಿಚಾರದಲ್ಲಿ ಪ್ರಗತಿ ಇರುತ್ತದೆ. ಜೊತೆಗೆ ಶುಕ್ರ ಮತ್ತು ಬುಧ ಗ್ರಹ ಇರುವುದರಿಂದ ಬ್ಯುಸಿನೆಸ್ ನಲ್ಲಿ ಒಳ್ಳೆಯದಾಗುತ್ತದೆ.
ಗುರು ಮತ್ತು ಬುಧ ಗ್ರಹಗಳು ಇರುವುದರಿಂದ, ನಮ್ಮ ದೇಶದಲ್ಲಿ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ. ಧನಯೋಗ ರೂಪುಗೊಳ್ಳುತ್ತಿರುವುದರಿಂದ ಭಾರತ ದೇಶದ ವ್ಯಾಪಾರ ಹೆಚ್ಚು ಸ್ಟ್ರಾಂಗ್ ಆಗುತ್ತದೆ. ಇಲ್ಲಿನ ಸ್ಲೋ ಪ್ರೋಗ್ರೆಸ್ ಕಡಿಮೆಯಾಗಿ, ಐಟಿ ಸಂಸ್ಥೆಗಳು ಒಳ್ಳೆಯ ರೀತಿಯಲ್ಲಿ ಮುಂದುವರೆಯುತ್ತದೆ.
ಆಕ್ಟೊಬರ್ 23ರಂದು ಶನಿಗ್ರಹವು, ಮಕರ. ರಾಶಿಯಲ್ಲಿ ನೇರನಡೆ ಶುರು ಮಾಡಲಿದ್ದು.. ಹೀಗಿರುವಾಗ ಶನಿಯ ಗಮನ ಗುರುವಿನ ಮೇಲೆ ಇರುವುದರಿಂದ, ಈ ಸಮಯದಲ್ಲಿ ಮೂರು ತಿಂಗಳ ಬಳಿಕ ಬೆಳ್ಳಿ ಬೆಲೆಯಲ್ಲಿ ಭಾರಿ ಹೆಚ್ಚಳ ಉಂಟಾಗುತ್ತದೆ. ಇನ್ನಿತರ ಮೆಟಲ್ ಗಳ ಬೆಲೆ ಕೂಡ ಜಾಸ್ತಿಯಾಗುತ್ತದೆ. ಈ ಸಮಯದಲ್ಲಿ ಮಾಳವ್ಯ, ಶತ, ಗಜಕೇಸರಿ, ಹರ್ಷ ಮತ್ತು ವಿಮಲ ಈ 5 ರಾಜಯೋಗಗಳು ರೂಪುಗೊಳ್ಳಲಿದೆ.
ಈ ಸಮಯದಲ್ಲಿ ಶಾಪಿಂಗ್, ಹೂಡಿಕೆ ಹಾಗು ಯಾವುದೇ ಕೆಲಸ ಶುರು ಮಾಡಲು ಇದು ಅತ್ಯುತ್ತಮವಾದ ಸಮಯ ಆಗಿದೆ. ಈ ಐದು ರಾಜಯೋಗಗಳು ಇಡೀ ವರ್ಷ ಶುಭಫಲ ಇರುತ್ತದೆ. ಈ ಯೋಗಗಳಿಂದ, ಈ ವರ್ಷ ದೀಪಾವಳಿ ಹಬ್ಬವನ್ನು ವಿಶೇಷವಾಗಿ ಆಚರಿಸಿ. ಲಕ್ಷ್ಮೀದೇವಿಯ ಕೃಪೆಗೆ ಪಾತ್ರರಾಗಿ.