Neer Dose Karnataka
Take a fresh look at your lifestyle.

ಅಂದು ಕೊಹ್ಲಿ ನಾಯಕತ್ವವನ್ನು ತೆಗೆದಿದ್ದ ದ್ರಾವಿಡ್ ನಿನ್ನೆ ಕೊಹ್ಲಿ ಗೆಲ್ಲಿಸಿ ಕೊಟ್ಟು ಡ್ರೆಸ್ಸಿಂಗ್ ರೂಮ್ ಗೆ ತೆರಳಿದ ಬಳಿಕ ದ್ರಾವಿಡ್ ಮಾಡಿದ್ದೇನು ಗೊತ್ತೇ??

ನಿನ್ನೆ ಭಾರತ ತಂಡ ತಮ್ಮ ಮೊದಲ ವಿಶ್ವಕಪ್ ಪಂದ್ಯವನ್ನು ಪಾಕಿಸ್ತಾನ್ ವಿರುದ್ಧ ಆಡಿತು. ಈ ಪಂದ್ಯದಲ್ಲಿ ಗೆಲ್ಲಲೇಬೇಕು ಎನ್ನುವುದು ಭಾರತ ತಂಡ ಮತ್ತು ಭಾರತದ ಅಭಿಮಾನಿಗಳ ಆಶಯ ಆಗಿತ್ತು. ಅದೇ ರೀತಿ ನಮ್ಮ ಭಾರತ ತಂಡ ನಿನ್ನೆಯ ಪಂದ್ಯದಲ್ಲಿ ಗೆಲುವು ಸಾಧಿಸಿತು. ನಿನ್ನೆಯ ಪಂದ್ಯದಲ್ಲಿ ಪಂದ್ಯ ಶ್ರೇಷ್ಠರಾಗಿ ನಿಂತವರು ವಿರಾಟ್ ಕೋಹ್ಲಿ.

ಪಾಕಿಸ್ತಾನ್ ವಿರುದ್ಧ ಭಾರತ ತಂಡವು 6 ಓವರ್ ಗಳಲ್ಲಿ 31 ರನ್ ಗಳಿಸಿ, 4 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದಾಗ, ತಂಡಕ್ಕೆ ನೆರವಾಗಿದ್ದು, ಕಿಂಗ್ ಕೋಹ್ಲಿ ಮತ್ತು ಹಾರ್ದಿಕ್ ಪಾಂಡ್ಯ. ಇವರಿಬ್ಬರ ಜೊತೆಯಾಟದಲ್ಲಿ, ಅದರ ಮೂಲಕ ಬಂದ ಬರೋಬ್ಬರಿ 113 ರನ್ ಗಳು ಭಾರತ ತಂಡಕ್ಕೆ ಬಹಳ ಆವಶ್ಯಕವಾಯಿತು. ಜೊತೆಗೆ ತಂಡವನ್ನು ಗೆಲುವಿನ ಕಡೆಗೆ ತೆಗೆದುಕೊಂಡು ಹೋಗಲು ಸಹಾಯ ಮಾಡಿತು.

ಭಾರತ ಗೆಲ್ಲುವ ಸಂಭ ತಂಡದಿಂದ ದೂರ ಆಗುತ್ತಲೇ ಇರುವಾಗ ವಿರಾಟ್ ಕೋಹ್ಲಿ ಅವರ ಬ್ಯಾಟ್ ಇಂದ ರನ್ ಗಳ ಮಳೆಯೇ ಹರಿಯಲು ಶುರುವಾದವು, ಕೋಹ್ಲಿ ಅವರು ತಮ್ಮ ಬ್ಯಾಟ್ ಇಂದ ಸಿಕ್ಸರ್ ಮತ್ತು ಬೌಂಡರಿ ಭಾರಿಸಿ, ತಂಡವನ್ನು ಗೆಲುವಿನ ಸನಿಹಕ್ಕೆ ಕರೆದೊಯ್ದರು. ಕೊನೆಯ ಈ ಓವರ್ ಗಳಲ್ಲಿ ಕೋಹ್ಲಿ ಅವರ ಬ್ಯಾಟಿಂಗ್ ಅಬ್ಬರಕ್ಕೆ ಅಭಿಮಾನಿಗಳು ಕುಣಿದಾಡುತ್ತಿದ್ದರು.

ಇತ್ತ ಪಾಕಿಸ್ತಾನ್ ತಂಡ ಅವರನ್ನು ಕಟ್ಟಿಹಾಕುವುದು ಹೇಗೆ ಎಂದು ತಲೆಕೆಡಿಸಿಕೊಂಡಿತ್ತು. ಎರಡರಿಂದ ಮೂರು ವರ್ಷಗಳಿಂದ ಕಳಪೆ ಫಾರ್ಮ್ ಎದುರಿಸುತ್ತಿರುವ ಕೋಹ್ಲಿ ಅವರು ಏಷ್ಯಾಕಪ್ ಇಂದ ಫಾರ್ಮ್ ಗೆ ಮರಳಿದರು, ಆಗ ಒಂದು ಶತಕ ಮತ್ತು ಒಂದೆರಡು ಅರ್ಧಶತಕ ಸಿಡಿಸಿದ್ದ ಕೋಹ್ಲಿ ಅವರು, ನಿನ್ನೆಯ ಮ್ಯಾಚ್ ನಲ್ಲಿ 53 ಎಸೆತಗಳಲ್ಲಿ 82 ರನ್ ಭಾರಿಸಿ, ಔಟ್ ಆಗದೆ ಅಜೇಯರಾಗಿ ಕ್ರೀಸ್ ನಲ್ಲಿ ಉಳಿದರು.

ಕೋಹ್ಲಿ ಅವರ ಬ್ಯಾಟಿಂಗ್ ಅಬ್ಬರಕ್ಕೆ ಎದುರಾಳಿ ಪಾಕ್ ತಂಡ ತತ್ತರಿಸಿ ಹೋಯಿತು. ಕೋಹ್ಲಿ ಅವರಿಗೆ ಹಾರ್ದಿಕ್ ಪಾಂಡ್ಯ ಉತ್ತಮ ವಾದ ಸಪೋರ್ಟ್ ನೀಡಿದರು. ಸತತ ಪರಿಶ್ರಮದಿಂದ, ಅಷ್ಟು ಒತ್ತಡದ ಮ್ಯಾಚ್ ನಲ್ಲಿ ಕೂಲ್ ಆಗಿ ಆಡಿ ರನ್ ಚೇಸ್ ಮಾಡಿದರು, ಕಿಂಗ್ ಕೋಹ್ಲಿ. ಪಂದ್ಯ ಮುಗಿದು, ಭಾರತ ಗೆದ್ದ ಬಳಿಕ ವಿರಾಟ್ ಅವರನ್ನು ಎಲ್ಲರೂ ಕೊಂಡಾಡಲು ಶುಭಾಶಯ ಹೇಳಲು ಶುರು ಮಾಡಿದರು.

ಮೊದಲಿಗೆ ಕ್ಯಾಪ್ಟನ್ ರೋಹಿತ್ ಶರ್ಮಾ ಅವರು ಓಡಿಬಂದು, ಕೋಹ್ಲಿ ಅವರನ್ನು ಎತ್ತಿ ರೌಂಡ್ ಹೊಡೆದು, ಸಂತೋಷ ಹೊರಹಾಕಿದರು. ಈ ಮ್ಯಾಚ್ ಗೆಲ್ಲುತ್ತೇವೆ ಎಂದು ಯಾರು ನಿರೀಕ್ಷೆ ಮಾಡಿರಲಿಲ್ಲ. ಸ್ವತಃ ಕೋಹ್ಲಿ ಅವರು ಸಹ ಬಹಳ ಸಂತೋಷದಲ್ಲಿ ಆಕಾಶದ ಕಡೆ ನೋಡಿ ಧನ್ಯವಾದ ತಿಳಿಸಿ ಭಾವುಕರಾದರು. ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ ಹಾಗೂ ತಂಡದ ಇನ್ನೆಲ್ಲಾ ಸದಸ್ಯರು ಸಹ ಓಡೋಡಿ ಬಂದು ಕೋಹ್ಲಿ ಅವರನ್ನು ಅಪ್ಪಿ ವಿಶ್ ಮಾಡಲು ಶುರು ಮಾಡಿದರು.

ಕೋಹ್ಲಿ ಅವರು ಡ್ರೆಸ್ಸಿಂಗ್ ರೂಮ್ ಕಡೆಗೆ ಹೋಗುವಾಗ, ಆಗಲು ಕೂಡ ಸಿಬ್ಬಂದಿಗಳು ಮತ್ತು ಬೇರೆ ಸ್ಪರ್ಧಿಗಳು ಕೋಹ್ಲಿ ಅವರಿಗೆ ವಿಶ್ ಮಾಡುತ್ತಲೇ ಇದ್ದರು. ಇನ್ನು ಕೋಚ್ ರಾಹುಲ್ ದ್ರಾವಿಡ್ ಅವರು ಈ ಹಿಂದೆ ಕೋಹ್ಲಿ ಅವರನ್ನು ಕ್ಯಾಪ್ಟನ್ಸಿ ಇಂದ ತೆಗೆದಿದ್ದರು, ಇದೀಗ ವಿರಾಟ್ ಅವರ ಈ ಭರ್ಜರಿ ಇನ್ನಿಂಗ್ಸ್ ನೋಡಿದ ಬಳಿಕ ವಿರಾಟ್ ಅವರನ್ನು ಅಪ್ಪಿ, ವಿಶ್ ಮಾಡಿದ್ದಾರೆ..

ನಿನ್ನೆಯ ಪಂದ್ಯ ವೀಕ್ಷಿಸಲು ಮೆಲ್ಬೋರ್ನ್ ನ ಎಂಸಿಜಿ ಕ್ರಿಕೆಟ್ ಸ್ಟೇಡಿಯಂ ಗೆ ಬರೋಬ್ಬರಿ 90,000 ಜನರು ಬಂದಿದ್ದರು. ಅವರೆಲ್ಲರ ಎದುರು ವಿರಾಟ್ ಕೋಹ್ಲಿ ಅವರು ವಿರಾಟ ರೂಪ ಪ್ರದರ್ಶನ ನೀಡಿದರು. ವಿರಾಟ್ ಅವರ ನಿನ್ನೆಯ ಇನ್ನಿಂಗ್ಸ್ ನಿಜಕ್ಕೂ ಸುವರ್ಣಾಕ್ಷರದಲ್ಲಿ ಬರೆದಿಡಬೇಕಾದ ಇನ್ನಿಂಗ್ಸ್ ಎಂದರೆ ತಪ್ಪಾಗುವುದಿಲ್ಲ

Comments are closed.