Neer Dose Karnataka
Take a fresh look at your lifestyle.

ಗೆಲುವಿನ ಖುಷಿಯಲ್ಲಿ ಇರುವ ಭಾರತ ತಂಡಕ್ಕೆ ನಿರಾಸೆಯ ಮೇಲೆ ನಿರಾಸೆ. ಪಂದ್ಯ ಗೆದ್ದ 24 ಗಂಟೆಗಳಲ್ಲಿಯೇ ಏನಾಗಿದೆ ಗೊತ್ತೇ??

ನಿನ್ನೆ ವಿಶ್ವಕಪ್ ಸರಣಿಯಲ್ಲಿ ಮೊದಲ ಪಂದ್ಯವನ್ನಾಡಿದ ಭಾರತ ತಂಡ, ಗೆಲುವಿನ ಮೂಲಕ ವಿಶ್ವಕಪ್ ನಲ್ಲಿ ಗೆಲುವಿನ ಖಾತೆ ತೆರೆದಿದ್ದಾರೆ. ಕಳೆದ ವರ್ಷ ಯುಎಇ ನಲ್ಲಿ ನಡೆದ ಟಿ20 ವಿಶ್ವಕಪ್ ನಲ್ಲಿ ಪಾಕಿಸ್ತಾನ್ ವಿರುದ್ಧ ಸೋಲು ಕಂಡಿದ್ದ ಭಾರತ ನಿನ್ನೆ ಪಾಕಿಸ್ತಾನ್ ಗೆ ತಕ್ಕ ಉತ್ತರ ನೀಡಿದ್ದಾರೆ. ಮೊದಲ ಇನ್ನಿಂಗ್ಸ್ ನಲ್ಲಿ ಬ್ಯಾಟಿಂಗ್ ಮಾಡಿದ ಪಾಕಿಸ್ತಾನ್ 20 ಓವರ್ ಗಳಲ್ಲಿ, 8 ವಿಕೆಟ್ ಗಳ ನಷ್ಟಕ್ಕೆ 159 ರನ್ ಗಳಿಸಿತು.

ಶಮಿ ಅವರು ಮತ್ತು ಹಾರ್ದಿಕ್ ಪಾಂಡ್ಯ ಅವರ ಬೌಲಿಂಗ್ ಗೆ ಉತ್ತಮ ಮೆಚ್ಚುಗೆ ಸಿಗುತ್ತಿದೆ. ಇನ್ನು 160 ರನ್ ಚೇಸ್ ಮಾಡಿದ ಭಾರತ ತಂಡ ಉತ್ತಮ ಆರಂಭ ಪಡೆಯಲಿಲ್ಲ, ನಂತರ ಬ್ಯಾಟಿಂಗ್ ಗೆ ಬಂದ ವಿರಾಟ್ ಕೋಹ್ಲಿ ಮತ್ತು ಹಾರ್ದಿಕ್ ಪಾಂಡ್ಯ ಪಂದ್ಯವನ್ನು ಗೆಲ್ಲಿಸುವಲ್ಲಿ ಸಫಲರಾದರು. ವಿಶೇಷವಾಗಿ ವಿರಾಟ್ ಕೋಹ್ಲಿ ಅವರ ಇನ್ನಿಂಗ್ಸ್ ಅದ್ಭುತವಾಗಿತ್ತು.

3ನೇ ಕ್ರಮಾಂಕಕ್ಕೆ ಮೈದಾನಕ್ಕೆ ಬಂದ ಕೋಹ್ಲಿ, 53 ಎಸೆತಗಳಲ್ಲಿ 82 ರನ್ ಭಾರಿಸಿ, 4 ಸಿಕ್ಸರ್ 6 ಬೌಂಡರಿ ಭಾರಿಸಿ, ತಂಡ ಗೆಲ್ಲುವಲ್ಲಿ ಮುಖ್ಯ ಪಾತ್ರ ವಹಿಸಿ, ಅಜೇಯರಾಗಿ ಉಳಿದರು. ಇವರ ಜೊತೆಗೆ ಹಾರ್ದಿಕ್ ಪಾಂಡ್ಯ ಅವರ ಆಟ ಸಹ ಚೆನ್ನಾಗಿತ್ತು. ಆದರೆ ಪಂದ್ಯ ಗೆದ್ದ ಭಾರತ ತಂಡ ಸಂತೋಷವಾಗಿದ್ದರು ಸಹ, ಕ್ಯಾಪ್ಟನ್ ರೋಹಿತ್ ಶರ್ಮಾ ಮತ್ತು ಓಪನರ್ ಕೆ.ಎಲ್.ರಾಹುಲ್ ಅವರನ್ನು ಎಲ್ಲರೂ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.

ನಿನ್ನೆಯ ಪಂದ್ಯದಲ್ಲಿ ಎರಡನೇ ಓವರ್ ಗೆ, 7 ಎಸೆತಗಳಲ್ಲಿ 4 ರನ್ ಗಳಿಸಿ ಔಟ್ ಆದರು ರೋಹಿತ್ ಶರ್ಮಾ, ಇತ್ತ ಕೆ.ಎಲ್.ರಾಹುಲ್ ಅವರು ಸಹ ನಿರೀಕ್ಷೆಯ ಪ್ರದರ್ಶನ ನೀಡಲಿಲ್ಲ. ನಸೀಮ್ ಅವರ ಬೌಲಿಂಗ್ ನಲ್ಲಿ ಕೆ.ಎಲ್.ರಾಹುಲ್ ಅವರು ಕೇವಲ 7 ರನ್ಸ್ ಗಳಿಸಿ ಪೆವಿಲಿಯನ್ ಸೇರಿದರು. ತಂಡದಲ್ಲಿ ಆರಂಭಿಕ ಆಟಗಾರರು ಉತ್ತಮ ಪ್ರದರ್ಶನ ನೀಡದೆ ಹೋದರೆ, ಇನ್ನುಳಿದ ಆಟಗಾರರ ಮೇಲೆ ಒತ್ತಡ ಶುರುವಾಗುತ್ತದೆ.

ಆರಂಭಿಕ ಮೂರು ಓವರ್ ಗಳಲ್ಲೇ ರಾಹುಲ್ ಮತ್ತು ರೋಹಿತ್ ಇಬ್ಬರ ವಿಕೆಟ್ ಸಹ ಉರುಳಿತ್ತು, ಕೊನೆಗೆ ವಿರಾಟ್ ಕೊಹ್ಲಿ ಮತ್ತು ಹಾರ್ದಿಕ್ ಪಾಂಡ್ಯ ಪಂದ್ಯವನ್ನು ಗೆಲ್ಲಿಸುವಲ್ಲಿ, ಮುಖ್ಯ ಪಾತ್ರ ವಹಿಸಿದರು. ಇವರಿಬ್ಬರ ರೋಚಕ ಬ್ಯಾಟಿಂಗ್ ಇಂದ ಭಾರತ ತಂಡ ಗೆಲುವಿನ ಗಡಿ ದಾಟಿತು ಎಂದು ಹೇಳಬಹುದು. ನಿನ್ನೆಯ ಪಂದ್ಯ ಗೆದ್ದ ಸಂತೋಷ ಇದ್ದರು ಸಹ ನಡೆಯುತ್ತಿರುವುದು ಬೇರೆಯೇ ಆಗಿದೆ.

ನೆಟ್ಟಿಗರು ಮತ್ತು ಕ್ರಿಕೆಟ್ ಪ್ರೇಮಿಗಳು, ಕೆ.ಎಲ್.ರಾಹುಲ್ ಮತ್ತು ರೋಹಿತ್ ಶರ್ಮ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಟ್ವೀಟ್ ಮೂಲಕ ಇವರಿಬ್ಬರ ಮೇಲೆ ಅಸಮಾಧಾನ ವ್ಯಕ್ತವಾಗುತ್ತಿದೆ. ಕೆ.ಎಲ್.ರಾಹುಲ್ ಅವರು ಬೇರೆ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡುತ್ತಾರೆ, ಮ್ಯಾಚ್ ವಿನ್ನಿಂಗ್ ಇನ್ನಿಂಗ್ಸ್ ಅಡುತ್ತಾರೆ, ಆದರೆ ಮುಖ್ಯವಾದ ಪಂದ್ಯಗಳಲ್ಲೇ ಕೈ ಕೂಡುತ್ತಾರೆ ಎನ್ನುತ್ತಿದ್ದಾರೆ ನೆಟ್ಟಿಗರು.

ಇನ್ನು ರೋಹಿತ್ ಶರ್ಮಾ ಅವರ ಬಗ್ಗೆ ಮಾತನಾಡಿ, ರೋಹಿತ್ ಅವರು ಬಹಳ ಸಮಯದಿಂದ ಫಾರ್ಮ್ ನಲ್ಲಿಯೇ ಇಲ್ಲ, ಯಾವ ಪಂದ್ಯದಲ್ಲೂ ಅವರು ಉತ್ತಮ ಪ್ರದರ್ಶನ ನೀಡುತ್ತಿಲ್ಲ, ಫಾರ್ಮ್ ನಲ್ಲಿಯೇ ಇಲ್ಲದ ಆಟಗಾರ ಕ್ಯಾಪ್ಟನ್ ಆಗಿರುವುದು ಹೇಗೆ ಸಾಧ್ಯ? ರೋಹಿತ್ ಅವರನ್ನು ಕ್ಯಾಪ್ಟನ್ಸಿ ಇಂದ ಕೆಳಗಿಳಿಸಿ ಅವರು ಕ್ಯಾಪ್ಟನ್ ಸ್ಥಾನಕ್ಕೆ ಅರ್ಹರಲ್ಲ ಎನ್ನುವ ಅಭಿಪ್ರಾಯ ವ್ಯಕ್ತವಾಗುತ್ತಿದೆ..

ಪಾಕಿಸ್ತಾನ್ ವಿರುದ್ಧದ ಪಂದ್ಯಗಳಲ್ಲಿ ಕೆ.ಎಲ್.ರಾಹುಲ್ ಅವರ ಆವರೇಜ್ 8.75 ಇದೆ, ರಾಹುಲ್ ಅವರು ಪಾಕಿಸ್ತಾನ್ ವಿರುದ್ಧದ ಪಂದ್ಯಗಳಲ್ಲಿ ಯಾವಾಗಲೂ ಸೋಲುತ್ತಾರೆ, ಇವರು ಭಾರತ ತಂಡದ ಆಸಿಫ್ ಅಲಿ..ಎಂದು ವಿವಿಧವಾಗಿ ಕಮೆಂಟ್ಸ್ ಮಾಡುವ ಮೂಲಕ ನೆಟ್ಟಿಗರು ಕ್ಯಾಪ್ಟನ್ ರೋಹಿತ್ ಶರ್ಮಾ ಮತ್ತು ಕೆ.ಎಲ್.ರಾಹುಲ್ ಅವರನ್ನು ಟ್ರೋಲ್ ಮಾಡುತ್ತಿದ್ದು, ಇವರಿಬ್ಬರನ್ನು ಪ್ಲೇಯಿಂಗ್ 11 ಇಂದ ಹೊರಗಿಟ್ಟರೆ ಒಳ್ಳೆಯದು ಎನ್ನುತ್ತಿದ್ದಾರೆ.

Comments are closed.