Neer Dose Karnataka
Take a fresh look at your lifestyle.

ಬಿಗ್ ನ್ಯೂಸ್: ಮಯೂರಿ ಬಿಗ್ ಬಾಸ್ ನಿಂದ ಎಲಿಮಿನೇಟ್ ಆದರೂ ಮನೆಗೆ ಹೋಗಿಲ್ಲ.ಟಾಪ್ ಸ್ಪರ್ದಿ ಹೊರಹೋದರು ಹೋದದ್ದು ಎಲ್ಲಿಗೆ ಗೊತ್ತೇ??

ಬಿಗ್ ಬಾಸ್ ಕನ್ನಡ ಸೀಸನ್ 9ರ 4ನೇ ಎಲಿಮಿನೇಷನ್ ನಿನ್ನೆ ನಡೆದಿದೆ. ಈ ವಾರ ವೀಕೆಂಡ್ ನ ಕಿಚ್ಚನ ಪಂಚಾಯಿತಿ ನಡೆಯಲಿಲ್ಲ, ಸುದೀಪ್ ಅವರು ಆಸ್ಟ್ರೇಲಿಯಾದಲ್ಲಿ ಪ್ರವಾಸ ಮಾಡುತ್ತಾ, ಭಾರತ ವರ್ಸಸ್ ಪಾಕಿಸ್ತಾನ್ ಮ್ಯಾಚ್ ನೋಡಲು ಹೋಗಿದ್ದ ಕಾರಣ, ಈ ವಾರದ ವೀಕೆಂಡ್ ಎಪಿಸೋಡ್ ಗೆ ಬಂದಿರಲಿಲ್ಲ. ಸುದೀಪ್ ಅವರು ಇಲ್ಲದೆ ಎಲಿಮಿನೇಶನ್ ಹೇಗೆ ಆಗುತ್ತದೆ ಎನ್ನುವ ಕುತೂಹಲ ಎಲ್ಲರಲ್ಲೂ ಇತ್ತು, ಅದಕ್ಕೆ ನಿನ್ನೆ ಉತ್ತರ ಸಿಕ್ಕಿದೆ.

ಬಿಗ್ ಬಾಸ್ ವಿಭಿನ್ನ ರೀತಿಯಲ್ಲಿ ಎಲಿಮಿನೇಷನ್ ಪ್ರಕ್ರಿಯೆ ನಡೆಸಿದರು. ನಾಮಿನೇಟ್ ಆಗಿದ್ದ ಸದಸ್ಯರನ್ನು ಮನೆಯ ಹೊರಗಡೆ ಕರೆದು, ಒಂದೊಂದು ಹಂತದಲ್ಲಿ ಒಬ್ಬೊಬ್ಬ ಸ್ಪರ್ಧಿಯನ್ನು ಸೇವ್ ಮಾಡುತ್ತಾ ಹೋದರು. ಕೊನೆಯಲ್ಲಿ ಉಳಿದುಕೊಂಡವರು ಮಯೂರಿ ಕ್ಯಾತರಿ ಮತ್ತು ನೇಹಗೌಡ. ಇವರಿಬ್ಬರನ್ನು ಒಬ್ಬರನ್ನು ಮನೆಯಿಂದ ಹೊರಗೆ ಕರೆದುಕೊಂಡು ಹೋಗಲು ಬಂದದ್ದು ಎರಡು ಬೈಕ್ ಗಳು, ಬೈಕ್ ಗಳ ಮೇಲೆ ಮಯೂರಿ ಮತ್ತು ನೇಹಾ ಅವರನ್ನು ಕೂರಿಸಲಾಯಿತು.

ಇಬ್ಬರನ್ನು ಮನೆಯ ಸುತ್ತ ರೌಂಡ್ ಹಾಕಿಸಲಾಯಿತು, ಕೊನೆಗೆ ಮಯೂರಿ ಅವರನ್ನು ಬೈಕ್ ನಲ್ಲಿ ಮನೆಯಿಂದ ಹೊರಗೆ ಕರೆದುಕೊಂಡು ಹೋಗಲಾಯಿತು. ಈ ಎಲಿಮಿನೇಶನ್ ಮನೆಯಲ್ಲಿ ಇದ್ದವರಿಗೆ ಶಾಕ್ ನೀಡಿತು. ಮಯೂರಿ ಅವರು ಮೊದಲ ವಾರದಿಂದಲೂ ಸ್ವಲ್ಪ ವೀಕ್ ಆಗಿಯೇ ಇದ್ದರು. ತಮ್ಮ ಮಗನನ್ನು ಬಹಳ ನೆನಪು ಮಾಡಿಕೊಂಡು ಭಾವುಕರಾಗುತ್ತಿರು.

ಮಯೂರಿ ಅವರು ಟಾಸ್ಕ್ ಗಳ ಕಡೆಗೆ ಹೆಚ್ಚು ಗಮನ ಕೊಡಲು ಸಾಧ್ಯ ಆಗುತ್ತಿರಲಿಲ್ಲ, ಬಹಳಷ್ಟು ಸಮಯ ಬೇಸರ ಮಾಡಿಕೊಳ್ಳುತ್ತಿದ್ದರು ಮಯೂರಿ. ಮನೆಯ ಸ್ಪರ್ಧಿಗಳ ಜೊತೆಗೂ ಹೆಚ್ಚು ಬೆರೆಯುತ್ತಿರಲಿಲ್ಲ, ಹೆಚ್ಚಾಗಿ ಕಣ್ಣೀರು ಹಾಕುತ್ತಿದ್ದರಿ. ಆ ಕಾರಣದಿಂದಲೋ ಏನೋ ಮಯೂರಿ ಅವರು ನಾಲ್ಕೇ ವಾರಕ್ಕೆ ಎಲಿಮಿನೇಟ್ ಆದರು.

ಮಯೂರಿ ಅವರು ಆರಂಭದಿಂದಲೂ ಸಣ್ಣ ಪುಟ್ಟ ವಿಚಾರಗಳಿಗೆ ಬೇಸರ ಮಾಡಿಕೊಳ್ಳುತ್ತಿದ್ದರು, ಹೆಚ್ಚಾಗಿ ಯಾರೊಂದಿಗು ಬೆರೆಯುತ್ತಿರಲಿಲ್ಲ, ಮಾತನಾಡುವುದು ಕೂಡ ಕಡಿಮೆಯೇ ಇರುತ್ತಿತ್ತು, ಜೊತೆಗೆ, ಟಾಸ್ಕ್ ಗಳಲ್ಲಿ ಮೇಲುಗೈ ಸಾಧಿಸುವ ಅವಕಾಶ ಸಿಕ್ಕರು ಅದನ್ನು ಇವರು ಸರಿಯಾಗಿ ಬಳಸಿಕೊಳ್ಳಲಿಲ್ಲ, ಕೆಲವೊಮ್ಮೆ ಸರಿಯಾದ ಅವಕಾಶ ಕೂಡ ಮಯೂರಿ ಅವರಿಗೆ ಸಿಗುತ್ತಿರಲಿಲ್ಲ, ಮಯೂರಿ ಅವರು ಹೆಚ್ಚು ವೀಕ್ ಆಗಿದ್ದಾರೆ ಅನ್ನಿಸುತ್ತಿತ್ತು.

ಯಾವಾಗಲೂ ಮಗನನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ, ಮಗನನ್ನು ನೋಡಬೇಕು ಅನ್ನಿಸುತ್ತದೆ, ಇಲ್ಲಿಂದ ಹೊರಹೋಗಬೇಕು ಅನ್ನಿಸುತ್ತಿದೆ ಎಂದು ಸಹ ಹೇಳುತ್ತಿದ್ದರು ಮಯೂರಿ. ವೀಕ್ಷಕರು ಮಯೂರಿ ಅವರಿಗೆ ವೋಟ್ ಮಾಡದೆ ಸೇವ್ ಮಾಡದೆ ಇರಲು ಇದು ಕೂಡ ಕಾರಣ ಇರಬಹುದು. ಮಯೂರಿ ಅವರು ಎಲಿಮಿನೇಟ್ ಆಗಿ ಮನೆಯಿಂದ ಬೈಕ್ ನಲ್ಲಿ ಹೊರಬಂದರು..

ಆದರೆ ಇವರ ಎಲಿಮಿನೇಶನ್ ಬಗ್ಗೆ ಈಗ ಬೇರೆಯದೇ ವಿಷಯ ಕೇಳಿಬರುತ್ತಿದೆ. ಮಯೂರಿ ಅವರು ಎಲಿಮಿನೇಟ್ ಆದ ಬಳಿಕ ಬಿಗ್ ಬಾಸ್ ವೇದಿಕೆಗೆ ಬರಲಿಲ್ಲ, ಅವರು ಮನೆಗೂ ಸಹ ಹೋಗಿಲ್ಲ. ಹಾಗಾಗಿ ಮಯೂರಿ ಅವರ ವಿಚಾರದಲ್ಲಿ ಹೊಸದೊಂದು ಅನುಮಾನ ಶುರುವಾಗಿದ್ದು, ಮಯೂರಿ ಅವರು ಸೀಕ್ರೆಟ್ ರೂಮ್ ನಲ್ಲಿ ಇರಬಹುದು ಎನ್ನುವ ಚರ್ಚೆ ಶುರುವಾಗಿದೆ. ಈ ವಿಚಾರ ಈಗ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಗೆ ಒಳಗಾಗಿದೆ.

ನಿಜಕ್ಕೂ ಮಯೂರಿ ಅವರು ಸೀಕ್ರೆಟ್ ರೂಮ್ ನಲ್ಲಿದ್ದಾರಾ? ಮಯೂರಿ ಅವರು ಮನೆಗೆ ಹೋಗಿಲ್ಲವಾ? ಈ ವಿಷಯದ ಬಗ್ಗೆ ಕಲರ್ಸ್ ಕನ್ನಡ ಇಂದ ಅಧಿಕೃತವಾಗಿ ಮಾಹಿತಿ ಇನ್ನು ತಿಳಿದುಬಂದಿಲ್ಲ, ಹಾಗಾಗಿ ಮಯೂರಿ ಅವರ ಬಗ್ಗೆ ಸರಿಯಾದ ಮಾಹಿತಿ ಪಡೆಯಲು ಮುಂದಿನ ಒಂದೆರಡು ಎಪಿಸೋಡ್ ಗಳ ವರೆಗು ಕಾದು ನೋಡಬೇಕಿದೆ. ಸೀಕ್ರೆಟ್ ರೂಮ್ ವಿಚಾರ ನಿಜ ಇರಬಹುದೇ? ನಿಮ್ಮ ಅಭಿಪ್ರಾಯ ತಿಳಿಸಿ..

Comments are closed.