Neer Dose Karnataka
Take a fresh look at your lifestyle.

ಸುದೀಪ್ ರವರು ಈ ವಾರ ಬಿಗ್ ಬಾಸ್ ಗೆ ಬಾರದ ಕಾರಣ ಕಳೆದುಕೊಂಡ ಹಣ ಎಷ್ಟು ಕೋಟಿ ಗೊತ್ತೇ?? ಯಪ್ಪಾ ಒಂದು ವಾರಕ್ಕೆ ಎಷ್ಟು ಲಾಸ್ ಗೊತ್ತೇ??

ಕನ್ನಡ ಕಿರುತೆರೆ ಪ್ರಪಂಚದಲ್ಲಿ ಅತಿಹೆಚ್ಚು ಜನಪ್ರಿಯತೆ ಪಡೆದುಕೊಂಡಿರುವ ಕಾರ್ಯಕ್ರಮಗಳಲ್ಲಿ ಒಂದು ಬಿಗ್ ಬಾಸ್ ಕನ್ನಡ. ಈ ಕಾರ್ಯಕ್ರಮ ಭಾರತದಲ್ಲಿ ಮೊದಲಿಗೆ ಹಿಂದಿ ಭಾಷೆಯಲ್ಲಿ ಆರಂಭವಾಯಿತು. ನಂತರ ಕನ್ನಡ, ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲೂ ಬಿಗ್ ಬಾಸ್ ಕಾರ್ಯಕ್ರಮ ಶುರುವಾಯಿತು. ಕನ್ನಡ ಬಿಗ್ ಬಾಸ್ ಹೆಚ್ಚು ಜನಪ್ರಿಯತೆ ಪಡೆದುಕೊಂಡಿದೆ.

ಬಿಗ್ ಬಾಸ್ ಕನ್ನಡ ಅವತರಣಿಕೆಯನ್ನು 9 ಸೀಸನ್ ಗಳಿಂದಲು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಿರೂಪಣೆ ಮಾಡುತ್ತಿದ್ದಾರೆ.
ಇನ್ನು ತೆಲುಗಿನಲ್ಲಿ ಒಂದೊಂದು ಸೀಸನ್ ಅನ್ನು ಒಬ್ಬೊಬ್ಬ ನಟ ನಿರೂಪಣೆ ಮಾಡಿದ್ದರು. ಇದೀಗ ಅಕ್ಕಿನೇನಿ ನಾಗಾರ್ಜುನ ತೆಲಗು ಬಿಗ್ ಬಾಸ್ ನಿರೂಪಣೆ ಮಾಡುತ್ತಿದ್ದಾರೆ. ತಮಿಳಿನಲ್ಲಿ ಹಿರಿಯ ಕಮಲ್ ಹಾಸನ್ ಮತ್ತು ಮಲಯಾಳಂ ನಲ್ಲಿ ಹಿರಿಯ ನಟ ಮೋಹನ್ ಲಾಲ್ ಬಿಗ್ ಬಾಸ್ ಕಾರ್ಯಕ್ರಮ ನಿರೂಪಣೆ ಮಾಡುತ್ತಿದ್ದರು.

ಪ್ರತಿವರ್ಷ ಬಿಗ್ ಬಾಸ್ ಕಾರ್ಯಕ್ರಮ ಬಹಳ ಅದ್ಧೂರಿಯಾಗಿ ಶುರುವಾಗುತ್ತಿತ್ತು. ಆದರೆ ಕಳೆದ ಎರಡು ವರ್ಷಗಳಿಂದ ಬಿಗ್ ಬಾಸ್ ಶೋ ಸ್ವಲ್ಪ ಗೊಂದಲದಲ್ಲೇ ಶುರುವಾದವು. ಆದರೆ ಈ ವರ್ಷ ಬಿಗ್ ಬಾಸ್ ಕನ್ನಡ ಸೀಸನ್ 9 ಅದ್ಧೂರಿಯಾಗಿ ಶುರುವಾಗಿ, ಒಂದು ತಿಂಗಳು ಕಳೆದಿದೆ. 4 ವಾರಗಳು ಪೂರೈಸಿ, ನಾಲ್ಕು ಸ್ಪರ್ಧಿಗಳು ಎಲಿಮಿನೇಟ್ ಆಗಿದ್ದಾರೆ. ಐಶ್ವರ್ಯ ಪಿಸ್ಸೇ, ನವಾಜ್, ದರ್ಶ್ ಮತ್ತು ಮಯೂರಿ ಮನೆಯಿಂದ ಹೊರಬಂದಿದ್ದಾರೆ.

ಸೆಲೆಬ್ರಿಟಿಗಳ ಶೋ ಬಿಗ್ ಬಾಸ್ ನಟ ಕಿಚ್ಚ ಸುದೀಪ್ ಅವರು ಸಾರಥಿ ಇದ್ದ ಹಾಗೆ, ಅವರಿಲ್ಲದೆ ಉ ಕಂಪ್ಲೀಟ್ ಎನ್ನಿಸುವುದಿಲ್ಲ. ಪ್ರತಿ ವೀಕೆಂಡ್ ನಲ್ಲಿ ಸುದೀಪ್ ಅವರು ಬಂದು ಮನೆ ಮಂದಿ ಜೊತೆಗೆ ಮಾತನಾಡಿ, ಅವರನ್ನು ನಗಿಸಿ, ವಾರ ಪೂರ್ತಿ ನಡೆದ ಪ್ರಮುಖ ಘಟನೆಗಳ ಬಗ್ಗೆ ಚರ್ಚೆ ಮಾಡಿ, ಬುದ್ಧಿ ಹೇಳುವವರಿಗೆ ಬುದ್ಧಿ ಹೇಳಿ, ತಮಾಷೆ ಮಾಡಿ ಅವರು ಕಾರ್ಯಕ್ರಮ ನಡೆಸಿಕೊಡುವುದನ್ನು ನೋಡುವುದೇ ಮಜಾ ಕೊಡುತ್ತದೆ.

ಹಲವು ಜನರು ಬಿಗ್ ಬಾಸ್ ವೀಕ್ಷಣೆ ಮಾಡುವುದೇ, ವೀಕೆಂಡ್ ನಲ್ಲಿ ಸುದೀಪ್ ಅವರ ಎಪಿಸೋಡ್ ನೋಡುವ ಸಲುವಾಗಿ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಮನೆಯೊಳಗೆ ಇರುವ ಸ್ಪರ್ಧಿಗಳು ಸಹ ಸುದೀಪ್ ಅವರ ಜೊತೆ ಮಾತನಾಡಲು ಕಾದು ಕುಳಿತಿರುತ್ತಾರೆ. ಪ್ರತಿವಾರ ಅವರ ನೋಡಬಹುದಾದ ಒಬ್ಬರೇ ವ್ಯಕ್ತಿ ಸುದೀಪ್ ಅವರು. ತಮಗೆ ಅನ್ನಿಸಿದ್ದೆಲ್ಲವನ್ನು ಸುದೀಪ್ ಅವರ ಜೊತೆಗೆ ಹಂಚಿಕೊಳ್ಳುತ್ತಾರೆ.

ಸುದೀಪ್ ಅವರಿಗೂ ಸಹ ಬಿಗ್ ಬಾಸ್ ಶೋ ಎಂದರೆ ಬಹಳ ಪ್ರೀತಿ, ಪ್ರತಿ ಸೀಸನ್ ನಲ್ಲಿ ಬರುವ ಸ್ಪರ್ಧಿಗಳು ತಮ್ಮ ಫ್ಯಾಮಿಲಿ ಎಂದೇ ಭಾವಿಸಿ ಎಲ್ಲರನ್ನು ಬಹಳ ಚೆನ್ನಾಗಿ ನೋಡಿಕೊಳ್ಳುತ್ತಾರೆ ಸುದೀಪ್ ಅವರು, ಅವರ ಮಾತಿನಲ್ಲಿರುವ ಗತ್ತು ಗಂಭೀರ್ಯದ ಜೊತೆಗೆ ಅಷ್ಟೇ ಪ್ರೀತಿ ಸಹ ಇರುತ್ತದೆ. ಸಿನಿಮಾ ಚಿತ್ರೀಕರಣ ಅಥವಾ ಬೇರೆ ಕೆಲಸಗಳಲ್ಲಿ ಎಷ್ಟೇ ಬ್ಯುಸಿ ಇದ್ದರು ಸಹ, ಸುದೀಪ್ ಅವರು ಬಿಗ್ ಬಾಸ್ ಶೋಗೆ ಬರುವುದನ್ನು ತಪ್ಪಿಸುವುದಿಲ್ಲ.

ಸುದೀಪ್ ಅವರು ಬಿಗ್ ಬಾಸ್ ವೀಕೆಂಡ್ ಎಪಿಸೋಡ್ ಗೆ ಬರುವುದನ್ನು ಮಿಸ್ ಮಾಡಿರುವುದು ಬಹಳ ಕಡಿಮೆ, ಕಳೆದ ಸೀಸನ್ ನಲ್ಲಿ ಸುದೀಪ್ ಅವರು ಅನಾರೋಗ್ಯದಿಂದ ಬಳಲುತ್ತಿದ್ದಾಗ 4 ವಾರಗಳ ಕಾಲ ಬಂದಿರಲಿಲ್ಲ. ಈ ವರ್ಷ ಕೂಡ 4ನೇ ವಾರದ ವೀಕೆಂಡ್ ಎಪಿಸೋಡ್ ನಲ್ಲಿ ಬಂದಿಲ್ಲ, ಅದಕ್ಕೆ ಕಾರಣ ಸುದೀಪ್ ಅವರು ಪತ್ನಿ ಪ್ರಿಯಾ ಅವರೊಡನೆ ವಿದೇಶ ಪ್ರವಾಸದಲ್ಲಿದ್ದಾರೆ. ಆಸ್ಟೇಲಿಯಾದಲ್ಲಿ ನಡೆದ ಭಾರತ ವರ್ಸಸ್ ಪಾಕಿಸ್ತಾನ್ ಟಿ20 ವರ್ಲ್ಡ್ ಕಪ್ ಪಂದ್ಯ ವೀಕ್ಷಸಲು ಹೋಗಿದ್ದರು.

ಹಾಗಾಗಿ ಸುದೀಪ್ ಅವರು ಬಿಬಿಕೆ9 4ನೇ ವೀಕೆಂಡ್ ಎಪಿಸೋಡ್ ಗೆ ಬರಲು ಸಾಧ್ಯವಾಗಿಲ್ಲ. ಸುದೀಪ್ ಅವರು ಬರದೆ ಇರುವುದು ಒಂದೇ ಒಂದು ವೀಕೆಂಡ್ ಎಪಿಸೋಡ್ ನಲ್ಲಿ, ಇದರಿಂದ ಅವರಿಗೆ ನಷ್ಟ ಆಗಿರುವುದು ಎಷ್ಟು ಕೋಟಿ ಗೊತ್ತಾ? ಇದನ್ನು ತಿಳಿದರೆ ನೀವು ಕೂಡ ಶಾಕ್ ಆಗುವುದು ಗ್ಯಾರೆಂಟಿ, ಒಂದು ವಾರ ವೀಕೆಂಡ್ ಎಪಿಸೋಡ್ ಮಿಸ್ ಮಾಡಿರುವುದರಿಂದ ಸುದೀಪ್ ಅವರಿಗೆ ಬರೋಬ್ಬರಿ 9 ಕೋಟಿ ರೂಪಾಯಿ ನಷ್ಟ ಆಗಿದೆ. ಸುದೀಪ್ ಅವರಿಗೆ ಒಂದು ವಾರಕ್ಕೆ ೯ ಕೋಟಿ ರೂಪಾಯಿ ಕಡಿತ ಮಾಡಲಾಗಿದೆ.

Comments are closed.