Neer Dose Karnataka
Take a fresh look at your lifestyle.

ಅದನ್ನೂ ನೋಡಿದೆ, ಭಾರತದ ಆಟಗಾರರನ್ನು ಟ್ರೊಲ್ ಮಾಡಲು ಯತ್ನಿಸಿದವನಿಗೆ ಗೂಗಲ್ CEO, ಸುಂದರ್ ಕೊಟ್ಟ ಟಾಂಗ್ ಹೇಗಿತ್ತು ಗೊತ್ತೇ??

ಅದನ್ನೂ ನೋಡಿದೆ, ಭಾರತದ ಆಟಗಾರರನ್ನು ಟ್ರೊಲ್ ಮಾಡಲು ಯತ್ನಿಸಿದವನಿಗೆ ಗೂಗಲ್ CEO, ಸುಂದರ್ ಕೊಟ್ಟ ಟಾಂಗ್ ಹೇಗಿತ್ತು ಗೊತ್ತೇ??

ಭಾನುವಾರ ನಡೆದ ಭಾರತ ವರ್ಸಸ್ ಪಾಕಿಸ್ತಾನ್ ಮ್ಯಾಚ್ ಬಗ್ಗೆ ಸಾಕಷ್ಟು ಚರ್ಚೆಗಳು ಮೆಚ್ಚುಗೆಗಳು ವ್ಯಕ್ತವಾಗುತ್ತಲೇ ಇವೆ. ಭಾರತ ತಂಡ ಗೆಲ್ಲುವುದಿಲ್ಲ ಎಂದೇ ಹಲವರು ಭಾವಿಸಿದ್ದರು. ಪಂದ್ಯ ಸಹ ಅದೇ ರೀತಿ ಸಾಗುತ್ತಿತ್ತು, ಮೊದಲ ಟಾಸ್ ಸೋತು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ್ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 159 ರನ್ ಗಳ ಟಾರ್ಗೆಟ್ ನೀಡಿತು. ಮೊದಲ ಇನ್ನಿಂಗ್ಸ್ ನಲ್ಲಿ ನಮ್ಮ ತಂಡದ ಬೌಲಿಂಗ್ ಪ್ರದರ್ಶನ ಉತ್ತಮವಾಗಿತ್ತು.

ಇನ್ನು ಎರಡನೇ ಇನ್ನಿಂಗ್ಸ್ ಶುರುವಾದಾಗ, ಆರಂಭದಲ್ಲೇ 4 ವಿಕೆಟ್ ಕಳೆದುಕೊಂಡ ಭಾರತ ಹಿನ್ನಡೆ ಅನುಭವಿಸಿತು. ಮೊದಲ ಮೂರು ಓವರ್ ಗಳಲ್ಲಿ ಭಾರತ ತಂಡವು ಓಪನರ್ ಗಳ ವಿಕೆಟ್ ಕಳೆದುಕೊಂಡಿತ್ತು, ಮೊನ್ನೆಯ ಪಂದ್ಯದಲ್ಲಿ ಪಂದ್ಯ ಶ್ರೇಷ್ಠವಾಗಿ ನಿಂತವರು ವಿರಾಟ್ ಕೋಹ್ಲಿ. ಪಾಕಿಸ್ತಾನ್ ತಂಡ ಹೇಗೆ ಬೌಲಿಂಗ್ ಮಾಡಿದರು ಜಗ್ಗದೆ, 53 ಎಸೆತಗಳಲ್ಲಿ 82 ರನ್ ಗಳಿಸಿ ಭಾರತವನ್ನು ಗೆಲುವಿನ ಕಡೆಗೆ ತಲುಪಿಸಿದರು ವಿರಾಟ್.

ವಿರಾಟ್ ಕೋಹ್ಲಿ ಅವರ ಅದ್ಬುತ ಬ್ಯಾಟಿಂಗ್ ಪ್ರದರ್ಶನವನ್ನು ಮೆಚ್ಚಿ ಅಭಿಮಾನಿಗಳು ಹಿರಿಯ ಕ್ರಿಕೆಟ್ ಪ್ಲೇಯರ್ ಗಳು, ಕ್ರಿಕೆಟ್ ತಜ್ಞರು ಎಲ್ಲರೂ ಫಿದಾ ಆಗಿದ್ದಾರೆ. ಇದು ವಿರಾಟ್ ಅವರ ಕೆರಿಯರ್ ನ ಬೆಸ್ಟ್ ಇನ್ನಿಂಗ್ಸ್ ಎನ್ನುತ್ತಿದ್ದಾರೆ ಹಲವರು. ಭಾರತ ತಂಡ ಪಂದ್ಯ ಗೆಲ್ಲುವುದು ಬಹಳ ಕಷ್ಟವಾಗಿತ್ತು, ಪಾಕಿಸ್ತಾನ್ ತಂಡವು ಆಕ್ರಮಣಕಾರಿ ಬೌಲಿಂಗ್ ಇಂಡಿಯನ್ ಬ್ಯಾಟ್ಸ್ಮನ್ ಗಳನ್ನು ಕಟ್ಟಿ ಹಾಕಿದ್ದರು. ಆದರೆ ವಿರಾಟ್ ಕೋಹ್ಲಿ ಮತ್ತು ಹಾರ್ದಿಕ್ ಪಾಂಡ್ಯ ಅವರ ಜೊತೆಯಾಟ ತಂಡಕ್ಕೆ ಬಹಳ ಸಹಾಯ ಮಾಡಿತು,

ಹಾಗೂ ವಿರಾಟ್ ಕೋಹ್ಲಿ ಅವರ ವಿರಾಟ ಪ್ರದರ್ಶನವೇ ಗೆಲುವಿಗೆ ಮುಖ್ಯ ಕಾರಣವಾಯಿತು, ಭಾರತದ ಈ ಗೆಲುವನ್ನು ದೇಶದ ಎಲ್ಲರೂ ಸಂಭ್ರಮಿಸಿದರು, ಸೋಷಿಯಲ್ ಮೀಡಿಯಾದಲ್ಲಿ ಟ್ವೀಟ್ ಮಾಡುವ ಮೂಲಕ, ಪೋಸ್ಟ್ ಮಾಡುವ ಮೂಲಕ ಸಂಭ್ರಮಿಸಿದರು. ಹೀಗೆ ಸಂಭ್ರಮಿಸಿದವರಲ್ಲಿ ಒಬ್ಬರು ಗೂಗಲ್ ಸಿಇಒ ಸುಂದರ್ ಪಿಚೈ.. ಭಾರತದ ಗೆಲುವನ್ನು ಸಂಭ್ರಮಿಸಿರುವ ಸುಂದರ್ ಅವರು, ಸಂತೋಷದಿಂದ ಟ್ವೀಟ್ ಮಾಡಿ, ದೀಪಾವಳಿ ಹಬ್ಬಕ್ಕೆ ಶುಭಾಶಯ ಕೋರಿದರು.

ಆ ಟ್ವೀಟ್ ಗೆ ಒಬ್ಬ ಪಾಕಿಸ್ತಾನ್ ಅಭಿಮಾನಿ ಟಾಂಗ್ ಕೊಟ್ಟಿದ್ದು, ಆತನಿಗೆ ಸುಂದರ್ ಅವರು ಕೊಟ್ಟಿರುವ ಉತ್ತರ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ, ಭಾರತ ತಂಡದ ಪ್ರದರ್ಶನವನ್ನು ಟ್ರೋಲ್ ಮಾಡಲು ಟ್ರೈ ಮಾಡಿದ ಪಾಕಿಸ್ತಾನ್ ಅಭಿಮಾನಿಯನ್ನು ಟ್ರೋಲ್ ಮಾಡಿದ್ದಾರೆ ಸುಂದರ್. “ದೀಪಾವಳಿ ಹಬ್ಬದ ಶುಭಾಶಯಗಳು. ನೀವೆಲ್ಲರು ಕುಟುಂಬದ ಜೊತೆಗೆ ಸಂತೋಷವಾಗಿ ಹಬ್ಬ ಆಚರಿಸುತ್ತಿದ್ದೀರಿ ಎಂದು ಭಾವಿಸುತ್ತೇನೆ.

ನಿನ್ನೆಯ ಪಂದ್ಯದ ಕೊನೆಯ ಮೂರು ಓವರ್ ಗಳನ್ನು ಮತ್ತೊಮ್ಮೆ ನೋಡುವ ಮೂಲಕ ನಾನು ದೀಪಾವಳಿ ಆಚರಿಸಿದ್ದೇನೆ…” ಎಂದು ಟ್ವೀಟ್ ಮಾಡಿದ್ದು, ಇದಕ್ಕೆ ರಿಪ್ಲೈ ಮಾಡಿರುವ ಪಾಕಿಸ್ತಾನ್ ಅಭಿಮಾನಿ, ನೀವು ಮೊದಲ ಮೂರು ಓವರ್ ಗಳನ್ನು ಕೂಡ ಮತ್ತೊಮ್ಮೆ ನೋಡಬೇಕು ಎಂದಿದ್ದಾನೆ. ಅದಕ್ಕೆ ಮರುಉತ್ತರ ಕೊಟ್ಟಿರುವ ಸುಂದರ್ ಪಿಚೈ ಅವರು, “ಅದನ್ನು ನೋಡಿದೆ, ಭುವಿ ಮತ್ತು ಅರ್ಷದೀಪ್ ಎಷ್ಟು ಅದ್ಭುತವಾಗಿ ಆಡಿದರು..” ಎಂದು ಸುಂದರ್ ರಿಪ್ಲೈ ಮಾಡಿದ್ದಾರೆ.

ಭಾರತದ ಇನ್ನಿಂಗ್ಸ್ ನಲ್ಲಿ ಮೊದಲ ಮೂರು ಓವರ್ ಕಷ್ಟಕರವಾಗಿತ್ತು, ಅದನ್ನು ನೆನೆಪಿಸಿ ಆತ ಮೊದಲ ಮೂರು ಓವರ್ ನೋಡಿ ಎಂದು ಹೇಳಿದ್ದಾನೆ, ಆದರೆ ಸುಂದರ್ ಅವರು ಆತನನ್ನೇ ಟ್ರೋಲ್ ಮಾಡಿದ್ದಾರೆ.ಪಾಕಿಸ್ತಾನ್ ತಂಡ ಬ್ಯಾಟಿಂಗ್ ಮಾಡುವಾಗ ಕೂಡ ಮೊದಲ ಮೂರು ಓವರ್ ಗಳಲ್ಲಿ ಭಾರತ ತಂಡ ಉತ್ತಮವಾಗಿ ಬೌಲಿಂಗ್ ಮಾಡಿತ್ತು, ಅದನ್ನು ವಿವರಿಸಿ ಉತ್ತರ ಕೊಟ್ಟಿರುವ ಸುಂದರ್ ಅವರ ಟ್ವೀಟ್, ಈಗ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ. ಭಾರತೀಯರನ್ನು ಕೆಣಕಲು ಬಂದರೆ ಅವರು ಸುಮ್ಮನೆ ಬಿಡುವುದಿಲ್ಲ ಎನ್ನುತ್ತಿದ್ದಾರೆ ನೆಟ್ಟಿಗರು.

Comments are closed.