Neer Dose Karnataka
Take a fresh look at your lifestyle.

ಪುನೀತ್ ರವರು ಸ್ವಂತ ಸಹೋದರಂತೆ ಕಾಣುತ್ತಿದ್ದ ದರ್ಶನ್ ಹಾಗೂ ಸುದೀಪ್ ಇಬ್ಬರು ಪುನೀತ್ ಪರ್ವಕ್ಕೆ ಬಂದಿಲ್ಲ. ಅಪ್ಪು ರವರು ಗೌರವ ಇಟ್ಟುಕೊಂಡದ್ದೇ ತಪ್ಪಾಯಿತೇ??

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಬಹಳ ಪ್ರೀತಿಯಿಂದ ತಯಾರಿಸಿರುವ ಗಂಧದಗುಡಿ ಈ ಶುಕ್ರವಾರ ತೆರೆಕಾಣುತ್ತಿದೆ. ಈಗಾಗಲೇ ಪ್ರೀಮಿಯರ್ ಶೋನ ಎಲ್ಲಾ ಟಿಕೆಟ್ಸ್ ಗಳು ಸೋಲ್ಡ್ ಔಟ್ ಆಗಿದೆ. ಆಕ್ಟೊಬರ್ 21ರಂದು ಗಂಧದಗುಡಿ ಪ್ರೀರಿಲೀಸ್ ಇವೆಂಟ್ ಪುನೀತಪರ್ವ ನಡೆಯಿತು. ಈ ದಿನ ಇಡೀ ಸ್ಯಾಂಡಲ್ ವುಡ್ ಅಪ್ಪು ಅವರಿಗಾಗಿ ಒಂದಾಗಿ, ಅರಮನೆ ಮೈದಾನದಲ್ಲಿ ಸೇರಿತ್ತು. ಬೇರೆ ಭಾಷೆಯ ಕಲಾವಿದರು ಸಹ ಬಂದಿದ್ದರು. ಎಲ್ಲರೂ ಖುದ್ದು ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರೇ ಆಮಂತ್ರಣ ನೀಡಿದ್ದರು. ಎಲ್ಲಾ ಕಲಾವಿದರು ಸಹ ಆ ದಿನ ಒಂದಾಗಿದ್ದು, ಅಪ್ಪು ಎನ್ನುವ ಆ ಪ್ರೀತಿತುಂಬಿಕೊಂಡಿದ್ದ ಮನುಷ್ಯನಿಗೋಸ್ಕರ.

ಅಪ್ಪು ಅವರು ಇಂದು ದೈಹಿಕವಾಗಿ ನಮ್ಮ ಜೊತೆಗೆ ಇಲ್ಲದೆ ಹೋದರು, ಅವರ ನೆನಪುಗಳು, ಜನರಿಗೆ ಅವರ ಮೇಲಿರುವ ಪ್ರೀತಿ ಮಾತ್ರ ಸ್ವಲ್ಪವು ಕಡಿಮೆ ಆಗಿಲ್ಲ. ಅದಕ್ಕೆ ಸಾಕ್ಷಿ ಅಂದು ಪುನೀತಪರ್ವ ಕಾರ್ಯಕ್ರಮದ ದಿನ ಸೇರಿದ್ದ ಜನರು. ನಮ್ಮ ಚಂದನವನದ ಎಲ್ಲಾ ಹಿರಿಯ ಕಿರಿಯ ಕಲಾವಿದರು ಕಾರ್ಯಕ್ರಮಕ್ಕೆ ಬಂದಿದ್ದರು. ಇನ್ಫೋಸಿಸ್ ಮುಖ್ಯಸ್ಥೆ ಸುಧಾಮೂರ್ತಿ ಅವರು ಸಹ ಕಾರ್ಯಕ್ರಮಕ್ಕೆ ಬಂದಿದ್ದರು.

ಸಿಎಂ ಬಸವರಾಜ ಬೊಮ್ಮಾಯಿ ಅವರು, ಹಾಗೂ ಇನ್ನು ಹಲವು ಶಾಸಕರು, ನಟರಾದ, ಪ್ರೇಮ್, ಧನಂಜಯ್, ರಕ್ಷಿತ್ ಶೆಟ್ಟಿ, ರಾಜ್ ಬಿ ಶೆಟ್ಟಿ, ದುನಿಯಾ ವಿಜಯ್, ಧ್ರುವ ಸರ್ಜಾ, ಪ್ರಕಾಶ್ ರಾಜ್, ಎಲ್ಲರೂ ಸೇರಿದ್ದರು. ನಟಿಯರಾದ ರಮ್ಯಾ, ಸುಧಾರಾಣಿ, ಶ್ರುತಿ, ಅನು ಪ್ರಭಾಕರ್, ಪ್ರಿಯಾ ಆನಂದ್ ಸೇರಿದ್ದರು. ಬೇರೆ ಭಾಷೆಯ ಕಲಾವಿದರಾದ ಸಿದ್ಧಾರ್ಥ್, ರಾಣಾ ದಗ್ಗುಬಾಟಿ, ಅಖಿಲ್ ಅಕ್ಕಿನೇನಿ, ಶರತ್ ಕುಮಾರ್ ಇಂಥಹ ಗಣ್ಯ ಕಲಾವಿದರೆಲ್ಲರು ಅಪ್ಪು ಅವರಿಗಾಗಿ ಬಂದಿದ್ದರು.

ಆದರೆ ಎಲ್ಲರೂ ಬಹಳ ನಿರೀಕ್ಷೆ ಮಾಡಿದ್ದ ಚಂದನವನದ ಆ ಇಬ್ಬರು ಕಲಾವಿದರು, ನಟ ದರ್ಶನ್ ಅವರು ಮತ್ತು ಸುದೀಪ್ ಅವರು ಕಾರ್ಯಕ್ರಮಕ್ಕೆ ಬಂದಿರಲಿಲ್ಲ. ಇವರಿಬ್ಬರು ಕಾರ್ಯಕ್ರಮಕ್ಕೆ ಬಂದಿಲ್ಲ ಎಂದು ಸಾಕಷ್ಟು ಚರ್ಚೆಗಳು ಸೋಷಿಯಲ್ ಮೀಡಿಯಾದಲ್ಲಿ ನಡೆಯುತ್ತಿವೆ. ಅಭಿಮಾನಿಗಳು ಮತ್ತು ನೆಟ್ಟಿಗರು ಇವರಿಬ್ಬರು ಬರದೆ ಇರುವ ಬಗ್ಗೆ ಹೆಚ್ಚಾಗಿ ಚರ್ಚೆ ಮಾಡುತ್ತ, ಇಬ್ಬರು ನಟರ ಬಗ್ಗೆ ಬೇಡದೆ ಇರುವುದನ್ನು ಮಾತನಾಡುತ್ತಲಿದ್ದಾರೆ. ಆದರೆ ಇವರಿಬ್ಬರು ಬರದೆ ಇರುವುದಕ್ಕೆ ಕಾರಣ, ಇವರಿಬ್ಬರಿಗೆ ಅಪ್ಪು ಅವರ ಮೇಲೆ ಪ್ರೀತಿ ಇಲ್ಲ ಅಂತ ಅಲ್ಲ.

ಸುದೀಪ್ ಅವರಿಗೆ ಅಪ್ಪು ಅವರನ್ನು ಕಂಡರೆ ಎಷ್ಟು ಪ್ರೀತಿ ಎಂದು ನಾವೆಲ್ಲರೂ ಅವರಿಬ್ಬರು ಜೊತೆಯಾಗಿ ಬಂದಿರುವ ಹಲವು ಕಾರ್ಯಕ್ರಮಗಳಲ್ಲಿ ನೋಡಿದ್ದೇವೆ. ಅಪ್ಪು ಅವರು ಸುದೀಪ್ ಅವರನ್ನು ಅಪ್ಪಿಕೊಂಡಿರುವ ಫೋಟೋಗಳನ್ನು ನೋಡಿದ್ದೇವೆ. ಅಪ್ಪು ಅವರು ಇನ್ನಿಲ್ಲ ಎಂದಾಗ ಸುದೀಪ್ ಅವರು ಕಣ್ಣೀರು ಹಾಕಿದ್ದರು. ಎಲ್ಲಾ ವಿಧಿವಿಧಾನಗಳು ಮುಗಿಯುವ ವರೆಗು ಕಂಠೀರವ ಸ್ಟುಡಿಯೋ ನಲ್ಲೇ ಇದ್ದರು.

ಇನ್ನು ದರ್ಶನ್ ಅವರ ಬಗ್ಗೆ ಕೂಡ ಗೊತ್ತಿದೆ, ಅಪ್ಪು ಅವರೊಡನೆ ಬಹಳ ಆತ್ಮೀಯವಾಗಿದ್ದರು ನಟ ದರ್ಶನ್ ಅವರು, ಕೆಲವು ಕಾರ್ಯಕ್ರಮಗಳಲ್ಲಿ ಇಬ್ಬರು ಜೊತೆಯಾಗಿ ಕಾಣಿಸಿಕೊಂಡಿದ್ದರು. ಅಪ್ಪು ಅವರು ಇನ್ನಿಲ್ಲ ಎಂದಾಗ, ದರ್ಶನ್ ಅವರು ತಮ್ಮ ಸಿನಿಮಾ ಚಿತ್ರೀಕರಣವನ್ನು ಕೂಡಲೇ ನಿಲ್ಲಿಸಿ ಆಸ್ಪತ್ರೆಗೆ ಧಾವಿಸಿ ಬಂದಿದ್ದರು. ಶಿವಣ್ಣ ಅವರಿಗೆ ಧೈರ್ಯ ಹೇಳಿದ್ದರು.

ಈ ಇಬ್ಬರು ಕಲಾವಿದರಿಗೂ ದೊಡ್ಮನೆಯ ಮೇಲೆ ಅಪಾರವಾದ ಪ್ರೀತಿ ಗೌರವ ಇದೆ. ಆದರೆ ಕಾರ್ಯಕ್ರಮಕ್ಕೆ ಬರದೆ ಇರಲು ಕಾರಣವೇ ಬೇರೆ ಆಗಿದೆ, ತಮ್ಮ ವೈಯಕ್ತಿಕ ಕೆಲಸಗಳಲ್ಲಿ ಬ್ಯುಸಿ ಇದ್ದ ಕಾರಣ ದರ್ಶನ್ ಅವರು ಮತ್ತು ಸುದೀಪ್ ಅವರು ಪುನೀತಪರ್ವ ಕಾರ್ಯಕ್ರಮಕ್ಕೆ ಬರಲು ಸಾಧ್ಯವಾಗಿರಲಿಲ್ಲ. ಆದರೆ, ಜನರು ಇಲ್ಲ ಸಲ್ಲದ ವಿಚಾರಗಳನ್ನು ಹಬ್ಬಿಸುತ್ತಿದ್ದಾರೆ. ದರ್ಶನ್ ಅವರು ಚಿತ್ರೀಕರಣದಲ್ಲಿದ್ದರು, ಮರುದಿನ ಬನಾರಸ್ ಸಿನಿಮಾ ಪ್ರೀ ರಿಲೀಸ್ ಇವೆಂಟ್ ನಲ್ಲಿ ಅಪ್ಪು ಅವರ ಬಗ್ಗೆ ಮಾತಮಾಡಿ ಕಣ್ಣೀರು ಹಾಕಿದ್ದರು ಡಿಬಾಸ್. ಇನ್ನು ಸುದೀಪ್ ಅವರು ವಿದೇಶದಲ್ಲಿದ್ದಾರೆ, ಆ ಕಾರಣದಿಂದ ಅವರು ಪುನೀತಪರ್ವ ಕಾರ್ಯಕ್ರಮಕ್ಕೆ ಬಂದಿರಲಿಲ್ಲ. ಬೇಕೆಂದು ಅವರು ಬಾರದೆ ಇರಲಿಲ್ಲ. ಹಾಗಾಗಿ, ಜನರು ಅವರಿಬ್ಬರ ಬಗ್ಗೆ ಚರ್ಚೆ ಮಾಡುವುದನ್ನು ಬಿಟ್ಟು, ಎಲ್ಲರೂ ಒಂದಾಗಿರುವುದು ಒಳ್ಳೆಯದು ಎನ್ನಿಸುತ್ತದೆ.

Comments are closed.