Neer Dose Karnataka
Take a fresh look at your lifestyle.

ಮಾಸ್ಟರ್ ಕ್ಲಾಸ್ ಇನ್ನಿಂಗ್ಸ್ ಮೂಲಕ ಪಾಕ್ ಗೆ ಸೋಲುಣಿಸಿದ ಕೊಹ್ಲಿ ಬಗ್ಗೆ ಹೊಗಳಿ ನಂತರ ವಿಚಿತ್ರ ಸಲಹೆ ಕೊಟ್ಟ ಅಕ್ತರ್. ಕೊಹ್ಲಿ ಗೆ ನೀಡಿದ ಸಲಹೆ ಏನು ಗೊತ್ತೇ??

ಆಕ್ಟೊಬರ್ 23ರಂದು ಭಾನುವಾರ ನಡೆದ ಭಾರತ ವರ್ಸಸ್ ಪಾಕಿಸ್ತಾನ್ ಪಂದ್ಯ ಅತ್ಯಂತ ರೋಚಕವಾಗಿತ್ತು, ಈ ಪಂದ್ಯದಲ್ಲಿ ವಿರಾಟ್ ಕೋಹ್ಲಿ ಅವರ ಇನ್ನಿಂಗ್ಸ್ ಅದ್ಭುತವಾಗಿತ್ತು ಎಂದು ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿ ಕಿಂಗ್ ಇಸ್ ಬ್ಯಾಕ್ ಎನ್ನುತ್ತಿದ್ದಾರೆ. ವಿರಾಟ್ ಕೋಹ್ಲಿ ಅವರು ಬಹಳ ಸಮಯದ ನಂತರ ಇಂತಹ ಇನ್ನಿಂಗ್ಸ್ ನೀಡಿದ್ದು, ಅಭಿಮಾನಿಗಳಿಗೆ ಬಹಳ ಸಂತೋಷ ತಂದಿದೆ. ಕ್ರಿಕೆಟ್ ಪಂಡಿತರು ಸಹ, ವಿರಾಟ್ ಅವರ ಆಟವನ್ನು ಹಾಡಿ ಹೊಗಳಿದರು. ಅಂದಿನ ಪಂದ್ಯದಲ್ಲಿ ಭಾರತ ಗೆಲ್ಲುವುದು ಬಹಳ ಕಷ್ಟಕರವಾಗಿತ್ತು. ಪಾಕಿಸ್ತಾನ್ ಬೌಲಿಂಗ್ ಆಕ್ರಮಣಕಾರಿಯಾಗಿತ್ತು.

ಕೊನೆಯ ಬಾಲ್ ವರೆಗು ಎರಡು ತಂಡಗಳು ಗೆಲ್ಲುವದಕ್ಕೆ ಹೋರಾಟ ನಡೆಸಿದವು. ಕೊನೆಗೆ ವಿರಾಟ್ ಅವರ ಮಿಂಚಿನಂತಹ ಬ್ಯಾಟಿಂಗ್ ಪ್ರದರ್ಶನದಿಂದ ಭಾರತ ಗೆದ್ದಿತು. ಪಂದ್ಯ ಮುಗಿದ ಬಳಿಕ ವಿರಾಟ್ ಅವರನ್ನು ಹೊಗಳಿದರು ಅದೆಷ್ಟೋ ಜನ, ಆದರೆ ಮೊದಲಿಗೆ ವಿರಾಟ್ ಅವರನ್ನು ಈಗ ಬೇರೆಯದೇ ರೀತಿಯಲ್ಲಿ ಮಾತನಾಡುತ್ತಿದ್ದಾರೆ ಮಾಜಿ ಆಟಗಾರ ಶೋಯೆಬ್ ಅಕ್ತರ್. ವಿರಾಟ್ ಅವರ ಬ್ಯಾಟಿಂಗ್ ಪ್ರದರ್ಶನ ಅದ್ಭುತವಾಗಿತ್ತು, ಅವರು ಇದೇ ರೀತಿ ಮುಂದಿನ ಪಂದ್ಯಗಳಲ್ಲೂ ಆಡಬೇಕು ಎಂದು ಹೊಗಳಿದ್ದ ಅಕ್ತರ್ ಈಗ, ವಿರಾಟ್ ಅವರು ಟಿ20 ಪಂದ್ಯಗಳಿಂದ ನಿವೃತ್ತಿ ಪಡೆಯುವುದು ಒಳ್ಳೆಯದು ಎನ್ನುತ್ತಿದ್ದಾರೆ.

“ಟಿ20 ಪಂದ್ಯಗಳಿಂದ ವಿರಾಟ್ ಕೋಹ್ಲಿ ಅವರು ನಿವೃತ್ತಿ ಹೊಂದಬೇಕು ಎನ್ನುವುದು ನನ್ನ ಕೋರಿಕೆ. ವಿರಾಟ್ ಅವರು ತಮ್ಮ ಪೂರ್ತಿ ಎನರ್ಜಿಯನ್ನು ಈ ಪಂದ್ಯಗಳ ಮೇಲೆಯೆ ಹಾಕುತ್ತಿದ್ದಾರೆ, ಆ ರೀತಿ ಆಗುವುದನ್ನು ನಾನು ಬಯಸುವುದಿಲ್ಲ. ಟಿ20 ಗಿಂತ ಒನ್ ಡೇ ಕ್ರಿಕೆಟ್ ಅಥವಾ ಟೆಸ್ಟ್ ಕ್ರಿಕೆಟ್ ನಲ್ಲಿ ಅವರು ಆಡಬೇಕು ಎಂದು ನಾನು ಬಯಸುತ್ತೇನೆ..” ಎಂದಿದ್ದಾರೆ ಶೋಯೆಬ್ ಅಕ್ತರ್. ಇವರ ಈ ಹೇಳಿಕೆ ಈಗ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಗೆ ಒಳಗಾಗಿದೆ. ಅಷ್ಟೇ ಅಲ್ಲದೆ, ಪಾಕಿಸ್ತಾನ್ ತಂಡವನ್ನು ಸಹ ಹೊಗಳಿದ್ದು, ತಮ್ಮ ಯೂಟ್ಯೂಬ್ ಚಾನೆಲ್ ನ ವಿಡಿಯೋದಲ್ಲಿ ಈ ಹೇಳಿಕೆಗಳನ್ನು ನೀಡಿದ್ದಾರೆ.

Comments are closed.