Neer Dose Karnataka
Take a fresh look at your lifestyle.

ತಮಿಳಿನ ಚಿತ್ರಗಳಿಗೆ ಠಕ್ಕರ್ ಕೊಡುತ್ತಿರುವ ಕಾಂತಾರ ಬಗ್ಗೆ ಮಾತನಾಡಿದ ಒಂದು ಕಾಲದ ಕನ್ನಡಿಗ ರಜನಿಕಾಂತ್. ಹೇಳಿದ್ದೇನು ಗೊತ್ತೇ??

561

ಕಾಂತಾರ, ಈ ಸಿನಿಮಾ ದಿನದಿಂದ ಬೆಳೆಯುತ್ತಲೇ ಹೋಗುತ್ತಿದೆ ಹೊರತು, ಕಾಂತಾರ ಸಿನಿಮಾದ ಕ್ರೇಜ್ ಮಾತ್ರ ಕಡಿಮೆ ಆಗುತ್ತಿಲ್ಲ. ಬಿಡುಗಡೆ ಆದ ದಿನದಿಂದ ಇಂದಿನವರೆಗೂ ಕಾಂತಾರ ಕ್ರೇಜ್ ಹೆಚ್ಚುತ್ತಲೆ ಇದೆ. ದಿನದಿಂದ ಸಿನಿಮಾ ನೋಡುವ ಸಿನಿಪ್ರಿಯರು ಜಾಸ್ತಿ ಆಗುತ್ತಲೇ ಇದ್ದಾರೆ. ನಮ್ಮ ಕನ್ನಡ ಸಿನಿಮಾಗೆ ವರ್ಲ್ಡ್ ವೈಡ್ ರೆಕಗ್ನಿಶನ್ ಸಿಗುತ್ತಿರುವುದು ಕನ್ನಡಿಗರಾಗಿ ನಮಗೆ ಹೆಮ್ಮೆ ತರುವ ವಿಷಯ ಆಗಿದೆ. ಕನ್ನಡದ ಕಾಂತಾರ ತೆಲುಗು, ತಮಿಳು, ಹಿಂದಿ ಮತ್ತು ಮಲಯಾಳಂ ಭಾಷೆಗೆ ಡಬ್ ಆಗಿ, ಎಲ್ಲಾ ಭಾಷೆಗಳಲ್ಲೂ ಯಶಸ್ಸು ಕಾಣುತ್ತಿದೆ.

ಸ್ಟಾರ್ ಕಲಾವಿದರೆಲ್ಲರು ಕಾಂತಾರ ಸಿನಿಮಾವನ್ನು ನೋಡಿ ಮೆಚ್ಚಿಕೊಳ್ಳುತ್ತಿರುವವುದು ಸಂತೋಷದ ವಿಷಯ. ಪ್ಯಾನ್ ಇಂಡಿಯಾ ಸ್ಟಾರ್ ಆಗಿರುವ ನಟ ಪ್ರಭಾಸ್ ಅವರು ಎರಡು ಸಾರಿ ಕಾಂತಾರ ಸಿನಿಮಾ ನೋಡಿ, ಮತ್ತೊಮ್ಮೆ ನೋಡಲು ಸಿದ್ಧ ಎಂದಿದ್ದರು. ತಮಿಳು ನಟರಾದ ಧನುಷ್, ಕಾರ್ತಿ ಅವರು ಸಹ ಕಾಂತಾರ ಸಿನಿಮಾ ನೋಡಿ ಮೆಚ್ಚಿಕೊಂಡಿದ್ದರು. ಇದೀಗ ಸೂಪರ್ ಸ್ಟಾರ್ ರಜನಿಕಾಂತ್ ಅವರು ಸಹ ಕಾಂತಾರ ಸಿನಿಮಾ ನೋಡಿ ಹಾಡಿ ಹೊಗಳಿದ್ದಾರೆ, ಸೂಪರ್ ಸ್ಟಾರ್ ಅವರು ತಮ್ಮ ಬಾಬಾ ಸಿನಿಮಾ ಡೈಲಾಗ್ ಮೂಲಕ ಕಾಂತಾರ ಸಿನಿಮಾಗೆ ಮೆಚ್ಚುಗೆ ನೀಡಿದ್ದಾರೆ. ಟ್ವೀಟ್ ಮಾಡಿರುವ ರಜನಿಕಾಂತ್ ಅವರು ಹೊಂಬಾಳೆ ಸಂಸ್ಥೆ ಮತ್ತು ರಿಷಬ್ ಶೆಟ್ಟಿ ಅವರಿಗೆ ಪ್ರಶಂಸೆ ತಿಳಿಸಿದ್ದಾರೆ. “ಗೊತ್ತಿಲ್ಲದಿರುವ ವಿಷಯ ಗೊತ್ತಿರುವ ವಿಷಯಕ್ಕಿಂತ ಹೆಚ್ಚು.. ಈ ಮಾತನ್ನು ಹೊಂಬಾಳೆ ಸಂಸ್ಥೆ ಮತ್ತು ಕಾಂತಾರ ಸಿನಿಮಾಗಿಂತ ಬೇರೆ ಯಾರು ಚೆನ್ನಾಗಿ ಹೇಳಲು ಸಾಧ್ಯ ಆಗುತ್ತಿರಲಿಲ್ಲ. ನೀವು ನನಗೆ ಗೂಸ್ ಬಂಪ್ಸ್ ಕೊಟ್ಟಿದ್ದೀರಿ.

ರಿಷಬ್ ಶೆಟ್ಟಿ, ನೀವು ಒಬ್ಬ ನಟನಾಗಿ, ಬರಹಗಾರಣಗಿ, ಒಬ್ಬ ನಟನಾಗಿ ಕೆಲಸ ಮಾಡಿದ್ದೀರಿ, ನಿಮಗೆ ಹ್ಯಾಟ್ಸಾಫ್. ಭಾರತ ಚಿತ್ರರಂಗದ ಮಾಸ್ಟರ್ ಪೀಸ್ ಆಗಿರುವ ಈ ಸಿನಿಮಾದಲ್ಲಿ ನಟಿಸಿದ ಎಲ್ಲಾ ಕಲಾವಿದರಿಗೂ ತಂತ್ರಜ್ಞರಿಗೂ ಶುಭಾಶಯಗಳು..” ಎಂದು ಸೂಪರ್ ಸ್ಟಾರ್ ರಜನಿಕಾಂತ್ ಅವರು ಟ್ವೀಟ್ ಮಾಡಿದ್ದಾರೆ. ಅದಕ್ಕೆ ರಿಪ್ಲೈ ಮಾಡಿರುವ ರಿಷಬ್ ಶೆಟ್ಟಿ ಅವರು, “ಚಿತ್ರರಂಗದ ಲೆಜೆಂಡ್..ಸೂಪರ್ ಸ್ಟಾರ್ ಆಗಿರುವ ನೀವು ನನ್ನ ಸಿನಿಮಾ ನೋಡಿ ಹೊಗಳಿದ್ದು ನನ್ನ ಕನಸು ನನಸಾದ ಹಾಗೆ ಆಗಿದೆ. ಚಿಕ್ಕಂದಿನಿಂದ ನಿಮ್ಮ ಸಿನಿಮಾಗಳನ್ನು ನೋಡುತ್ತಾ ಬೆಳೆದು, ನಿಮ್ಮ ಅಭಿಮಾನಿಯಾಗಿದ್ದೆ. ನಮ್ಮ ಮಣ್ಣಿನ ಕಥೆ ಮಾಡಲು ನಿಮ್ಮ ಟ್ವೀಟ್ ನನಗೆ ಹೆಚ್ಚು ಸ್ಪೂರ್ತಿ ನೀಡಿದೆ..” ಎಂದು ರಿಷಬ್ ಅವರು ಟ್ವೀಟ್ ಮಾಡಿದ್ದಾರೆ. ಒಟ್ಟಿನಲ್ಲಿ ನಮ್ಮ ಕನ್ನಡ ಸಿನಿಮಾ ಇಷ್ಟು ಎತ್ತರಕ್ಕೆ ಬೆಳೆದು, 200 ಕೋಟಿ ವರೆಗು ಹಣಗಳಿಕೆ ಮಾಡುತ್ತಿರುವುದು ಒಳ್ಳೆಯ ವಿಷಯ ಆಗಿದೆ.

Leave A Reply

Your email address will not be published.