Neer Dose Karnataka
Take a fresh look at your lifestyle.

ಕೊಹ್ಲಿ ವಿರುದ್ಧ ಮತ್ತೊಮ್ಮೆ ಗುಡುಗಿದ ಗಂಭೀರ್: ಅಸಲಿಗೆ ಪಂದ್ಯ ಗೆಲ್ಲಲು ಕಾರಣ ಕೊಹ್ಲಿ ಅಲ್ಲವಂತೆ, ಮತ್ಯಾರು ಗೊತ್ತೇ??

ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡ ನಿನ್ನೆ ನೆದರ್​ಲ್ಯಾಂಡ್ಸ್ ವಿರುದ್ಧ ತನ್ನ ಎರಡನೇ ಪಂದ್ಯವನ್ನಾಡಿತು. ಈ ಪಂದ್ಯದಲ್ಲಿ ಸಹ ಭರ್ಜರಿ ಜಯ ಸಾಧಿಸಿ ಎರಡನೇ ಗೆಲುವು ದಾಖಲಿಸಿಕೊಂಡಿತು. ನಿನ್ನೆಯ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು, ಆರಂಭದಲ್ಲಿ ಕೆ.ಎಲ್.ರಾಹುಲ್ ಅವರು 9 ರನ್ ಗಳಿಸಿ ಔಟ್ ಆದರು. ರೋಹಿತ್ ಶರ್ಮಾ ಅವರು 39 ಎಸೆತಗಳಲ್ಲಿ 52 ರನ್ ಗಳಿಸಿ ಉತ್ತಮ ಇನ್ನಿಂಗ್ಸ್ ನೀಡಿ, ಔಟ್ ಆದರು. ಬಳಿಕ ಕ್ರೀಸ್ ಗೆ ಬಂದ ಸೂರ್ಯಕುಮಾರ್ ಯಾದವ್ ಮತ್ತು ವಿರಾಟ್ ಕೋಹ್ಲಿ ಅವರ ಇನ್ನಿಂಗ್ಸ್ ಟೀಮ್ ಇಂಡಿಯಾ ಒಳ್ಳೆಯ ರನ್ ಮೊತ್ತವನ್ನು ಕಲೆಹಾಕಲು ಸಹಾಯ ಮಾಡಿತು. ಇವರಿಬ್ಬರ ಜೊತೆಯಾಟದಲ್ಲಿ ತಂಡಕ್ಕೆ ಬಂದಿದ್ದು ಬರೋಬ್ಬರಿ 95 ರನ್ ಗಳು.

ವಿರಾಟ್ ಕೋಹ್ಲಿ ಅವರು 44 ಎಸೆತಗಳಲ್ಲಿ 2ಸಿಕ್ಸರ್ ಮತ್ತು 3 ಬೌಂಡರಿ ಇಂದ 62 ರನ್ ಗಳಿಸಿ ಅಜೇಯರಾಗಿ ಉಳಿದರು, ಇನ್ನು ಸೂರ್ಯಕುಮಾರ್ ಯಾದವ್ ಅವರು 25 ಎಸೆತಗಳಲ್ಲಿ 7 ಬೌಂಡರಿ ಮತ್ತು 1 ಸಿಕ್ಸರ್ ಇಂದ 51 ರನ್ ಕಲೆಹಾಕಿದರು. ಇದರಿಂದ 20 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ ಭಾರತ ತಂಡ ಕಲೆಹಾಕಿದ್ದು ಸುಮಾರು 179 ರನ್ ಗಳು. ಈ ಸ್ಕೋರ್ ಬೆನ್ನಟ್ಟಿದ ನೆದರ್​ ಲ್ಯಾಂಡ್ಸ್ ತಂಡ 20 ಓವರ್ ಗಳಲ್ಲಿ,9 ವಿಕೆಟ್ ನಷ್ಟಕ್ಕೆ ಗಳಿಸಿದ್ದು 123 ರನ್ ಗಳು ಮಾತ್ರ, ಭಾರತ ತಂಡಕ್ಕೆ 56 ರನ್ ಗಳ ಭರ್ಜರಿ ಜಯ ಸಿಕ್ಕಿತು. ಜಯದ ಸಂತೋಷ ಒಂದು ಕಡೆಯಾದರೆ, ಭಾರತ ತಂಡದ ಮಾಜಿ ಆಟಗಾರ ಗೌತಮ್ ಗಂಭೀರ್ ಅವರು, ಈಗ ನೀಡಿರುವ ಹೇಳಿಕೆಯೊಂದು ವೈರಲ್ ಆಗುತ್ತಿದೆ. ವಿರಾಟ್ ಕೋಹ್ಲಿ ಅವರನ್ನು ತಮ್ಮ ಹೇಳಿಕೆಯಲ್ಲಿ ನಿರ್ಲಕ್ಷ್ಯ ಮಾಡಿರುವುದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.

ಪಂದ್ಯ ಮುಗಿದ ಬಳಿಕ ಮಾತನಾಡಿರುವ ಗೌತಮ್ ಗಂಭೀರ್ ಅವರು, “ಪಂದ್ಯದಲ್ಲಿ ಹೀರೋ ಸೂರ್ಯಕುಮಾರ್ ಯಾದವ್ ಅವರು ವಿರಾಟ್ ಕೋಹ್ಲಿ ಅಲ್ಲ, ವಿರಾಟ್ ಕೋಹ್ಲಿ ತಮ್ಮ ಆಟದಲ್ಲಿ ಯಾವುದೇ ಒತ್ತಡವನ್ನು ತೆಗೆದುಕೊಳ್ಳುಲಿಲ್ಲ. ಸೂರ್ಯಕುಮಾರ್ ಯಾದವ್ ಅವರು ಎಲ್ಲವನ್ನು ನಿಭಾಯಿಸಿದರು..”ಎಂದು ಗಂಭೀರ್ ಅವರು ಹೇಳಿಕೆ ನೀಡಿದ್ದಾರೆ. ಇದನ್ನು ಕೇಳಿದ ಅಭಿಮಾನಿಗಳು, ಗಂಭೀರ್ ಅವರು ಹೇಳಿದ ಮಾತುಗಳಿಗೆ ಆಕ್ರೋಶ, ಅಸಮಾಧಾನ ವ್ಯಕ್ತಪಡಿಸಿ, ವಿರಾಟ್ ಕೋಹ್ಲಿ ಅವರು ಬೃಹತ್ ಮೊತ್ತವನ್ನು ಸ್ಕೋರ್ ಮಾಡಿದ್ದಾರೆ, 62 ರನ್ ಗಳಿಸುವುದು ಕಡಿಮೆ ಏನಲ್ಲಾ ಎಂದು ಅಭಿಮಾನಿಗಳು ವಿರಾಟ್ ಅವರ ಪರವಾಗಿ ಮಾತನಾಡುತ್ತಿದ್ದಾರೆ.

Comments are closed.