Neer Dose Karnataka
Take a fresh look at your lifestyle.

ನೆದರ್ಲ್ಯಾಂಡ್ ತಂಡದ ವಿರುದ್ಧ ಗೆದ್ದ ಬೆನ್ನಲ್ಲೇ ಮುಂದಿನ ಪಂದ್ಯಗಳಿಗೆ ಇಬ್ಬರು ಹೊರ ಹೋಗುವುದು ಖಚಿತ, ಯಾರ್ಯಾರು ಗೊತ್ತೆ??

39

ಟಿ20 ವಿಶ್ವಕಪ್ ಪಂದ್ಯಗಳು ಭರದಿಂದ ನಡೆಯುತ್ತಿದೆ. ಪ್ರಸ್ತುತ ಆಸ್ಟ್ರೇಲಿಯಾದಲ್ಲಿ ಸೂಪರ್ 12 ಹಂತದ ಪಂದ್ಯಗಳು ನಡೆಯುತ್ತಲಿವೆ. ನಮ್ಮ ಭಾರತ ತಂಡ ಎರಡು ಪಂದ್ಯಗಳನ್ನು ಆಡಿ ಎರಡನ್ನು ಗೆದ್ದು, ನಾಳೆ ನಡೆಯಲಿರುವ ಮೂರನೇ ಪಂದ್ಯಕ್ಕೆ ಸಜ್ಜಾಗಿದೆ. ನಾಳೆ ಪರ್ತ್ ನಲ್ಲಿ ಸೌತ್ ಆಫ್ರಿಕಾ ವಿರುದ್ಧ ಮೂರನೇ ಪಂದ್ಯ ನಡೆಯಲಿದ್ದು, ಭಾರತ ತಂಡ ಗೆಲ್ಲುವ ಭರವಸೆ ಇಟ್ಟುಕೊಂಡಿದೆ. ನಮ್ಮ ತಂಡದಲ್ಲಿ ಈಗ ಬ್ಯಾಟಿಂಗ್ ಮತ್ತ್ ಫೀಲ್ಡಿಂಗ್ ಎರಡು ಕೂಡ ಚೆನ್ನಾಗಿದೆ.

ವಿರಾಟ್ ಕೋಹ್ಲಿ ಅವರು ಮತ್ತೆ ಫಾರ್ಮ್ ಗೆ ಬಂದಿದ್ದಾರೆ. ಪಾಕಿಸ್ತಾನ್ ವಿರುದ್ಧ ಮತ್ತು ನೆದರ್ಲ್ಯಾಂಡ್ ವಿರುದ್ಧ ನಡೆದ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿದರು. ಇನ್ನು ಸೂರ್ಯಕುಮಾರ್ ಯಾದವ್ ಅವರು ಸಹ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಅಷ್ಟೇ ಅಲ್ಲದೆ, ಕಳೆದ ಪಂದ್ಯದಿಂದ ಕ್ಯಾಪ್ಟನ್ ರೋಹಿತ್ ಶರ್ಮಾ ಅವರು ಸಹ ಉತ್ತಮ ಫಾರ್ಮ್ ಗೆ ಮರಳಿದ್ದಾರೆ. ಹೀಗಿರುವಾಗ ತಂಡಕ್ಕೆ ಕಾಡುತ್ತಿರುವ ಪ್ರಮುಖ ಸಮಸ್ಯೆ ಆರಂಭಿಕ ಆಟಗಾರ ಕೆ.ಎಲ್.ರಾಹುಲ್ ಅವರ ಫಾರ್ಮ್ ಬಗ್ಗೆ ಆಗಿದೆ.

ಇಂಜುರಿ ಬಳಿಕ ತಂಡಕ್ಕೆ ವಾಪಸ್ ಆಗಿರುವ ರಾಹುಲ್ ಅವರು ಲಯ ಕಂಡುಕೊಳ್ಳಲು ಕಷ್ಟಪಡುತ್ತಿದ್ದಾರೆ. ಆಸ್ಟ್ರೇಲಿಯಾದಲ್ಲಿ ನಡೆದ ಅಭ್ಯಾಸ ಪಂದ್ಯಗಳಲ್ಲಿ ಕೆ.ಎಲ್.ರಾಹುಲ್ ಉತ್ತಮವಾದ ಪ್ರದರ್ಶನ ನೀಡಿದ್ದರು. ಅರ್ಧಶತಕ ಸಿಡಿಸಿದ್ದರು. ಆದರೆ ಟೂರ್ನಿ ಆರಂಭವಾದ ನಂತರ, ಎರಡು ಪಂದ್ಯಗಳಲ್ಲಿ ರಾಹುಲ್ ಅವರು ವೈಫಲ್ಯ ಅನುಭವಿಸಿದ್ದಾರೆ. ಪಾಕಿಸ್ತಾನ್ ವಿರುದ್ಧ ಮೊದಲ ಪಂದ್ಯದಲ್ಲಿ ಕೇವಲ 4 ರನ್ ಗಳಿಸಿ ಔಟ್ ಆದರು, ಎರಡನೇ ಪಂದ್ಯದಲ್ಲಿ 9 ರನ್ ಗಳಿಸಿ ಔಟ್ ಆಗಿದ್ದರು.

ಎರಡನೇ ಪಂದ್ಯದಲ್ಲಿ ಕ್ಯಾಪ್ಟನ್ ಡಿ.ಆರ್.ಎಸ್ ತೆಗೆದುಕೊಳ್ಳುವಂತೆ ಸಲಹೆ ನೀಡಿದರು ಕೂಡ, ರಾಹುಲ್ ಅವರು ಆತ್ಮವಿಶ್ವಾಸ ಇಲ್ಲದೆ, ಔಟ್ ಎಂದುಕೊಂಡು ಪೆವಿಲಿಯನ್ ಹೋಗಿದ್ದರು. ಹೀಗೆ ರಾಹುಲ್ ಅವರು ಪದೇ ಪದೇ ವೈಫಲ್ಯ ಅನುಭವಿಸುತ್ತಿರುವುದರಿಂದ ಅವರನ್ನು ಪ್ಲೇಯಿಂಗ್ 11 ಇಂದ ಬಹುತೇಕ ಹೊರಗಿಡಲಾಗಿದೆ ಎಂದು ಮಾಹಿತಿ ಸಿಕ್ಕಿದೆ. ಅವರ ಬದಲಾಗಿ ಬೇರೆ ಯಾರನ್ನು ಆಯ್ಕೆ ಮಾಡಬೇಕು ಎನ್ನುವ ಪ್ರಶ್ನೆಗೂ ಉತ್ತರ ಸಿಕ್ಕಿದ್ದು, ದೀಪಕ್ ಹೂಡಾ ಅವರು ಒಂದು ಆಯ್ಕೆಯಾದರೆ ರಿಷಬ್ ಪಂತ್ ಅವರು ಮತ್ತೊಂದು ಆಯ್ಕೆ ಆಗಿದ್ದಾರೆ.

ಇಲ್ಲಿ ದೀಪಕ್ ಹೂಡಾ ಅವರಿಗಿಂತ ರಿಷಬ್ ಪಂತ್ ಅವರು ಉತ್ತಮವಾದ ಆಯ್ಕೆ ಆಗುತ್ತಾರೆ. ಏಕೆಂದರೆ ಪಂತ್ ಅವರು ಎಡಗೈ ಬ್ಯಾಟ್ಸ್ಮನ್ ಆಗಿದ್ದು, ಅವರನ್ನು ಆರಂಭಿಕ ಆಟಗಾರನಾಗಿ ಆಯ್ಕೆ ಮಾಡಿದರೆ, ಎದುರಾಳಿ ತಂಡಕ್ಕೆ ಚಾಲೆಂಜಿಂಗ್ ಆಗಿರುತ್ತದೆ, ಜೊತೆಗೆ ಪಂತ್ ಅವರು ಆರಂಭಿಕ ಆಟಗಾರನಾಗಿ ಉತ್ತಮವಾಗಿ ಸ್ಕೋರ್ ಮಾಡುತ್ತಾರೆ ಎನ್ನುವ ಭರವಸೆ ಇದೆ. ಇದೇ ನಿರ್ಧಾರವನ್ನು ಬಿಸಿಸಿಐ ತೆಗೆದುಕೊಳ್ಳುತ್ತಾ ಎಂದು ಕಾದು ನೋಡಬೇಕಿದೆ.

ಇನ್ನು ತಂಡದಿಂದ ಹೊರಗೆ ಉಳಿಯಬಹುದಾದ ಮತ್ತೊಬ್ಬ ಆಟಗಾರ ಆರ್.ಅಶ್ವಿನ್ ಅವರು. ಮೊದಲ ಪಂದ್ಯದಲ್ಲಿ ಬೌಲಿಂಗ್ ನಲ್ಲಿ ವಿಫಲರಾದರು ಅಶ್ವಿನ್. ಎರಡನೇ ಪಂದ್ಯದಲ್ಲಿ ಸಹ ನಿರೀಕ್ಷೆ ಮಾಡಿದ ಹಾಗೆ ಉತ್ತಮ ಪ್ರದರ್ಶನ ನೀಡಲಿಲ್ಲ. ಹಾಗಾಗಿ ಇವರನ್ನು ಸಹ ಪ್ಲೇಯಿಂಗ್ 11 ಇಂದ ಹೊರಗಿಡುವುದು ಖಚಿತ ಎನ್ನಲಾಗುತ್ತಿದೆ. ಅಶ್ವಿನ್ ಅವರ ಬದಲಾಗಿ ಚಾಣಾಕ್ಷ ಆಟಗಾರ ಯುಜವೇಂದ್ರ ಚಾಹಲ್ ಅವರಿಗೆ ಅವಕಾಶ ಕೊಡಬಹುದು ಎನ್ನಲಾಗುತ್ತಿದೆ.

Leave A Reply

Your email address will not be published.