Neer Dose Karnataka
Take a fresh look at your lifestyle.

ಅಪ್ಪು ಸರ್ ದೊಡ್ಡ ಮಗಳು ಧೃತಿ ರವರು ಅಪ್ಪನ ತಿಥಿಗೆ ವಿದೇಶದಿಂದ ಬರುತ್ತೇನೆ ಎಂದಾಗ ಅಡ್ಡಗಾಲು ಹಾಕಿದ್ದು ಯಾರು ಗೊತ್ತೇ?? ಯಾಕೆ ಗೊತ್ತೇ??

ಇಂದಿಗೆ ಅಪ್ಪು ಅವರು ಅಗಲಿ ಒಂದು ವರ್ಷ, ನಿನ್ನೆಯಷ್ಟೇ ಅಪ್ಪು ಅವರ ಕನಸು ಗಂಧದಗುಡಿ ತೆರೆಕಂಡು ಎಲ್ಲೆಡೆ ಅದ್ಭುತ ಪ್ರದರ್ಶನ ಕಾಣುತ್ತಿದೆ. ಎಲ್ಲಾ ದಾಖಲೆಗಳನ್ನು ಮುರಿಯುತ್ತಿದೆ. ವಿಶ್ವಮಾನವನನ್ನು ನೋಡಲು ಅಭಿಮಾನಿಗಳು ಥಿಯೇಟರ್ ಗೆ ಬರುತ್ತಿದ್ದಾರೆ. ಅದೆಲ್ಲವೂ ಒಂದು ಕಡೆಯಾದರೆ, ಇಂದು ಅಪ್ಪು ಅವರ ಪುಣ್ಯಸ್ಮರಣೆಯ ದಿನ ನಡೆಯುತ್ತಿರುವ ಕಾರ್ಯಗಳು ಮತ್ತೊಂದು ಕಡೆ. ಕಂಠೀರವ ಸ್ಟುಡಿಯೋನಲ್ಲಿ ಅಪ್ಪು ಅವರ ಸಮಾಧಿ ಬಳಿ ನಿನ್ನೆಯಿಂದಲೇ ಅಭಿಮಾನಿಗಳು ಮತ್ತು ಚಂದನವನದ ಸೆಲೆಬ್ರಿಟಿಗಳು ಬರಲು ಶುರುಮಾಡಿದ್ದಾರೆ. ಇಂದು ಬೆಳಗ್ಗೆ ಇಡೀ ದೊಡ್ಮನೆ ಕುಟುಂಬ ಬಂದು ಅಪ್ಪು ಅವರಿಗೆ ಪೂಜೆ ಸಲ್ಲಿಸಿದೆ.

ಅಶ್ವಿನಿ ಅವರು ಕಣ್ಣೀರು ಹಾಕುತ್ತಲೇ ಅಪ್ಪು ಅವರಿಗೆ ಪೂಜೆ ಮಾಡಿದರು, ಅಪ್ಪು ಅವರ ಮಗಳು ವಂದಿತಾ ಸಹ ಅಪ್ಪನ ನೆನಪಿನಲ್ಲಿ ಭಾವುಕರಾಗಿದ್ದರು. ಇನ್ನು ಶಿವಣ್ಣ, ರಾಘಣ್ಣ ಅವರ ಮಕ್ಕಳು ಹಾಗೂ ಇಡೀ ದೊಡ್ಮನೆ ಕುಟುಂಬ, ಅಭಿಮಾನಿಗಳು ಲಕ್ಷಗಟ್ಟಲೆ ಸಂಖ್ಯೆಯಲ್ಲಿ ನೆರೆದಿದ್ದರು. ಅಪ್ಪು ಅವರ ಅಭಿಮಾನಿಗಳು ಇಂದು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರು. ಇಂದು ಕಂಠೀರವ ಸ್ಟುಡಿಯೋದಲ್ಲಿ 1 ಲಕ್ಷ ಜನರಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು. ಇಂದು ಎಲ್ಲರೂ ಅಪ್ಪು ಅವರಿಗೆ ಪೂಜೆ ಸಲ್ಲಿಸಲು ಬಂದಿದ್ದರು. ಆದರೆ ಅಪ್ಪು ಅವರ ದೊಡ್ಡ ಮಗಳು ಧೃತಿ ಅವರು ಬಂದಿರಲಿಲ್ಲ. ಧೃತಿ ಅವರು ಬರುತ್ತೇನೆ ಎಂದರು ಕೂಡ ಆ ಒಬ್ಬ ವ್ಯಕ್ತಿ ಬೇಡ ಎಂದು ಹೇಳಿದರಂತೆ. ಆ ವ್ಯಕ್ತಿ ಯಾರು ಗೊತ್ತಾ?

ಅಪ್ಪು ಅವರ ಮಗಳು ಧೃತಿ, ತಂದೆ ತಾಯಿಯ ಸಹಾಯ ಇಲ್ಲದೆ ಸ್ಕಾಲರ್ಶಿಪ್ ಪಡೆದು ವಿದೇಶದಲ್ಲಿ ಉನ್ನತ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಇಂದು ಅಪ್ಪು ಅವರ ಸ್ಮರಣೆಯ ದಿನ ಧೃತಿ ಅವರು ಬರುತ್ತೇನೆ ಎಂದು ಹೇಳಿದರು ಕೂಡ ಶಿವಣ್ಣ ಅವರು ಬೇಡ ಎಂದು ಹೇಳಿದರಂತೆ. ಅದಕ್ಕೆ ಒಂದು ಕಾರಣವೂ ಇದೆ. ಧೃತಿ ಅವರ ಓದಿಗೆ ತೊಂದರೆ ಆಗಬಾರದು ಎಂದು ಈ ರೀತಿ ಹೇಳಿದರಂತೆ ಶಿವಣ್ಣ, ನಾನು ಮತ್ತು ಇಡೀ ಕರ್ನಾಟಕ ಇಲ್ಲಿದೆ ಅಮ್ಮನನ್ನು ನಾವು ಚೆನ್ನಾಗಿ ನೋಡಿಕೊಳ್ಳುತ್ತೇವೆ. ನಿನ್ನ ಓದಿಗೆ ತೊಂದರೆ ಆಗುವುದು ಬೇಡ. ಈಗ ಬಂದರೆ 15 ದಿನ ಓದಿಗೆ ತೊಂದರೆ ಆಗುತ್ತದೆ. ಹಾಗೆ ಆಗುವುದ್ ಬೇಡ, ಅಪ್ಪು ಇದ್ದಿದ್ದರೆ ಇದೇ ರೀತಿ ಹೇಳುತ್ತಿದ್ದ ಎಂದು ಹೇಳಿದ್ದಾರಂತೆ ಶಿವಣ್ಣ. ಹಾಗಾಗಿ ಧೃತಿ ಅವರು ಇಂದು ಬಂದಿಲ್ಲ ಎಂದು ಮಾಹಿತಿ ಸಿಕ್ಕಿದೆ.

Comments are closed.