Neer Dose Karnataka
Take a fresh look at your lifestyle.

ಅಪ್ಪು ಅಭಿಮಾನಿಗಳಿಗೆ ಕೊನೆಯ ಸಿನಿಮಾದಲ್ಲಿಯೂ ಕೂಡ ನಿರಾಸೆ: ತೆರೆ ಹಿಂದೆ ನಡೆದಿದೆ ಬಾರಿ ಕುತಂತ್ರ. ಏನು ಗೊತ್ತೇ??

23,025

Gandhadagudi: ಅಭಿಮಾನಿಗಳ ಪಾಲಿನ ಆರಾಧ್ಯ ದೈವ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಅಗಲಿ ಇಂದಿಗೆ ಒಂದು ವರ್ಷ ಕಳೆಯಿತು. ಅಭಿಮಾನಿಗಳು ಒಂದು ಕಡೆ ಬೇಸರ, ದುಃಖದಿಂದ ಕಣ್ಣೀರು ಹಾಕುತ್ತಿದ್ದರೆ ಮತ್ತೊಂದು ಕಡೆ, ಗಂಧದಗುಡಿ ಸಿನಿಮಾ ಮೂಲಕ ಕೊನೆಯ ಸಾರಿ ಅಭಿಮಾನಿಗಳ ಎದುರು ಬಂದಿದ್ದಾರೆ ಪುನೀತ್. ಮೆಚ್ಚಿನ ನಟನನ್ನು ನೋಡಲು ಅಭಿಮಾನಿಗಳು ಬಹಳ ಸಮಯದಿಂದ ಕಾದಿದ್ದರು. ಅದರಲ್ಲೂ ಗಂಧದಗುಡಿ ಸಿನಿಮಾ ಬಹಳ ವಿಶೇಷವಾದದ್ದು, ಇದು ಅಪ್ಪು ಅವರ ಬಹಳ ವರ್ಷದ ಕನಸು. ಕರ್ನಾಟಕದ ವನ್ಯ ಪ್ರದೇಶವನ್ನು ಅಮೋಘವರ್ಷ ಅವರ ಜೊತೆಗೆ ಎಕ್ಸ್ಪ್ಲೋರ್ ಮಾಡಿದ್ದಾರೆ.

ಪುಟ್ಟ ಮಗುವಿನ ಹಾಗೆ ಈ ಪರಿಸರ ನೋಡುವ, ಕಾಡಿನ ಬಗ್ಗೆ, ಪ್ರಾಣಿಗಳ ಬಗ್ಗೆ ಹೆಚ್ಚು ತಿಳಿದುಕೊಳ್ಳುವ ಅಪ್ಪು ಅವರ ಆಸಕ್ತಿ ನೋಡಿದರೆ, ಇವರು ಇನ್ನಷ್ಟು ದಿನ ನಮ್ಮೊಡನೆ ಇರಬೇಕಿತ್ತು, ಆ ಭಗವಂತ ಮೋಸ ಮಾಡಿದ ಎಂದು ಅನ್ನಿಸುವುದಂತೂ ನಿಜ. ಗಂಧದಗುಡಿ ನೋಡಿದ ಸಿನಿಪ್ರಿಯರು ಕಣ್ಣೀರು ಹಾಕುತ್ತಲೇ ಹೊರಬರುತ್ತಿದ್ದಾರೆ. ಸೆಲೆಬ್ರಿಟಿಗಳು ಸಹ ಅಪ್ಪು ಅವರ ಈ ಜರ್ನಿ ನೋಡಿ, ಭಾವುಕರಾಗಿ ಮಾತನಾಡುತ್ತಿದ್ದಾರೆ. ಇನ್ನು ಗಂಧದಗುಡಿ ಸಿನಿಮಾ ದಾಖಲೆಗಳನ್ನು ಬರೆಯುತ್ತಲಿದೆ.

ಗುರುವಾರ ಆಕ್ಟೊಬರ್ 27ರಂದು ಅಭಿಮಾನಿಗಳಿಗೆ ರಾಜ್ಯಾದ್ಯಂತ ಪೇಯ್ಡ್ ಪ್ರೀಮಿಯರ್ ಶೋ ಅರೇಂಜ್ ಮಾಡಲಾಗಿತ್ತು, ಇದೇ ಮೊದಲ ಸಾರಿ ಅಭಿಮಾನಿಗಳ ಒತ್ತಾಯದ ಮೇರೆಗೆ 75 ಪ್ರೀಮಿಯರ್ ಶೋಗಳು ನಡೆದವಿ. ಪ್ರೀರಿಯರ್ ಶೋ ಟಿಕೆಟ್ ಬುಕಿಂಗ್ ಶುರುವಾದ ಕೆಲವೇ ನಿಮಿಷಗಳಲ್ಲಿ ಎಲ್ಲಾ ಊರುಗಳಲ್ಲಿ ಎಲ್ಲಾ ಟಿಕೆಟ್ಸ್ ಗಳು ಸೋಲ್ಡ್ ಔಟ್ ಆಗಿದ್ದವು, ಅಷ್ಟರ ಮಟ್ಟಿಗೆ ಅಪ್ಪು ಅವರನ್ನು ನೋಡಲು ಅಭಿಮಾನಿಗಳು ಕಾಯುತ್ತಿದ್ದರು. ಇನ್ನು ಬಿಡುಗಡೆಯಾದ ಮೊದಲ ದಿನ, ಬೆಂಗಳೂರಿನ ಪ್ರಮುಖ ಮಾಲ್ ಗಳಲ್ಲಿ ಬೆಳಗ್ಗೆ 10 ಗಂಟೆಗಿಂತ ಮೊದಲು 50 ಕ್ಕಿಂತ ಶೋಗಳು ಪ್ರದರ್ಶನಗೊಂಡಿದ್ದವು.

ಹೀಗೆ ಅಭಿಮಾನಿಗಳು, ಅಪ್ಪು ಅವರನ್ನು ಕಣ್ತುಂಬಿಕೊಳ್ಳಲು ಸಾಲು ಸಾಲಾಗಿ ಥಿಯೇಟರ್ ಗೆ ಬರುತ್ತಿದ್ದಾರೆ. ಎಲ್ಲಾ ಕುಟುಂಬಗಳು ತಮ್ಮ ಮಕ್ಕಳ ಜೊತೆಗೆ ಥಿಯೇಟರ್ ಗೆ ಬರುತ್ತದ್ದಾರೆ. ಇನ್ನು ಮೊದಲ ಸಿನಿಮಾ ಗಂಧದಗುಡಿ ಸಿನಿಮಾ ಸುಮಾರು 17ಕೋಟಿ ಹಣಗಳಿಕೆ ಮಾಡಿದೆ ಎಂದು ಮಾಹಿತಿ ಸಿಕ್ಕಿದೆ. ಸಿನಿಮಾ ಇಷ್ಟು ಚೆನ್ನಾಗಿ ಓಪನಿಂಗ್ ಪಡೆದುಕೊಂಡು, ಹೆಚ್ಚಿನ ಜನರು ಗಂಧದಗುಡಿ ನೋಡಲು ಥಿಯೇಟರ್ ಗೆ ಬರುತ್ತಿರುವಾಗ, ಅಪ್ಪು ಅವರ ಕೊನೆಯ ಸಿನಿಮಾ ವಿಚಾರದಲ್ಲೂ ಅವರ ಅಭಿಮಾನಿಗಳಿಗೆ ಅನ್ಯಾಯ ಆಗುತ್ತಿದೆ.

ಗಂಧದಗುಡಿ ಎಲ್ಲಾ ಊರುಗಳಲ್ಲಿ ಮತ್ತು ಎಲ್ಲಾ ಥಿಯೇಟರ್ ಗಳಲ್ಲೂ ಸಹ ಭರ್ಜರಿಯಾಗಿ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಸಾವಿರಾರು ಅಭಿಮಾನಿಗಳು ಸಿನಿಮಾ ನೋಡಲು ಟಿಕೆಟ್ ಸಿಗುತ್ತಿಲ್ಲ ಎಂದು ನಿರಾಶೆಗೊಂಡಿದ್ದಾರೆ. ಹೀಗಿರುವಾಗ, ಗಂಧದಗುಡಿ ಸಿನಿಮಾದ ಪ್ರದರ್ಶನವನ್ನು ಇನ್ನು ಹೆಚ್ಚು ಮಾಡಿದರೆ, ಹೆಚ್ಚು ಥಿಯೇಟರ್ ಗಳಲ್ಲಿ ಬಿಡುಗಡೆ ಮಾಡಿ, ಹೆಚ್ಚು ಸ್ಕ್ರೀನ್ ಗಳಲ್ಲಿ ಗಂಧದಗುಡಿ ಬಿಡುಗಡೆಯಾದರ್, ಅಭಿಮಾನಿಗಳು ಖಂಡಿತವಾಗಿ ಥಿಯೇಟರ್ ಗೆ ಬಂದು ಸಿನಿಮಾ ನೋಡೇ ನೋಡುತ್ತಾರೆ ಎನ್ನುವುದರಲ್ಲಿ ಸಂಶಯವೇ ಇಲ್ಲ.

ಆದರೆ ಇಂಗ್ಲಿಷ್ ಮತ್ತು ಹಿಂದಿ ಭಾಷೆಗೆ ಸಿಗುವಷ್ಟು ಸ್ಕ್ರೀನ್ ಗಳು ಸಹ ಗಂಧದಗುಡಿಗೆ ಸಿಕ್ಕಿಲ್ಲ. ಇಂಗ್ಲಿಷ್ ಸಿನಿಮಾಗಳಿಗೆ ಮೊದಲ ದಿನವೆ ಸುಮಾರು 2000 ಸ್ಕ್ರೀನ್ ನೀಡಲಾಗಿದೆ, ಆದರೆ ಗಂಧದಗುಡಿಗೆ ಕೇವಲ 250 ಸ್ಕ್ರೀನ್ ಗಳಿಗೆ ಅವಕಾಶ ನೀಡಲಾಗಿದೆ. ಒಂದು ವೇಳೆ ಸ್ಕ್ರೀನ್ಸ್ ಜಾಸ್ತಿ ಮಾಡಿದಂತೆ, ಹಣಗಳಿಕೆಯಲ್ಲಿ ಸಹ ಹೆಚ್ಚು ಕೋಟಿಗಟ್ಟಲೆ ಹಣ ಗಳಿಸುವುದರಲ್ಲಿ ಯಾವುದೇ ಸಂಶಯ ಇಲ್ಲ, ಪ್ರತಿಯೊಬ್ಬರು ಥಿಯೇಟರ್ ಗೆ ಬಂದು ಸಿನಿಮಾ ನೋಡುತ್ತಿದ್ದರು.

Leave A Reply

Your email address will not be published.