Neer Dose Karnataka
Take a fresh look at your lifestyle.

ಮತ್ತೊಬ್ಬರಿಗೆ ಪವರ್ ಸ್ಟಾರ್ ಎಂದು ಬಿರುದು ಕೊಟ್ಟ ಅಭಿಮಾನಿಗಳು. ಜೂನಿಯರ್ ಪವರ್ ಸ್ಟಾರ್ ಎಂದು ಥಿಯೇಟರ್ ನಲ್ಲಿ ಯಾರ ಹೆಸರು ಬಂದಿದೆ ಗೊತ್ತೇ??

ಕರ್ನಾಟಕದ ಪಾಲಿನ ಪವರ್ ಸ್ಟಾರ್ ಎಂದರೆ ಅದು ಡಾ.ಪುನೀತ್ ರಾಜ್ ಕುಮಾರ್ ಅವರು. ಅಪ್ಪು ಅವರು ಅಗಲಿ ಒಂದು ವರ್ಷ ಕಳೆದಿದ್ದರು ಅಪ್ಪು ಅವರ ನೆನಪುಗಳನ್ನು ಅಭಿಮಾನಿಗಳು ಮರೆತಿಲ್ಲ. ಈ ಸಮಯದಲ್ಲಿ ಅಪ್ಪು ಅವರ ಕೊನೆಯ ಸಿನಿಮಾ ಗಂಧದಗುಡಿ ಬಿಡುಗಡೆಯಾಗಿ ಉತ್ತಮ ಪ್ರದರ್ಶನ ಕಾಣುತ್ತಿದೆ. ಅಭಿಮಾನಿಗಳು ಅಪ್ಪು ಅವರನ್ನು ನೋಡಿ ಒಂದು ಕಡೆ ಸಂತೋಷಪಟ್ಟರೆ, ಮತ್ತೊಂದು ಕಡೆ ಭಾವುಕರಾಗುತ್ತಿದ್ದಾರೆ. ಅಪ್ಪು ಅವರ ಸ್ಥಾನವನ್ನು ತುಂಬಲು ಯಾರಿಂದಲೂ ಸಾಧ್ಯವಿಲ್ಲ ಆದರೆ ಈಗ ಮತ್ತೊಬ್ಬರಿಗೆ ಪವರ್ ಸ್ಟಾರ್ ಎನ್ನುವ ಹೆಸರು ನೀಡಲಾಗಿದೆ. ಅಷ್ಟಕ್ಕೂ ಆ ನಟ ಯಾರು? ತಿಳಿಸುತ್ತೇವೆ ನೋಡಿ..

ಪುನೀತ್ ಅವರಿಗೆ ಪವರ್ ಸ್ಟಾರ್ ಎನ್ನುವ ಬಿರುದ್ಧು ಕೊಟ್ಟಿದ್ದು ಶಿವಣ್ಣ ಅವರು, ಇದೀಗ ಟೈಟಲ್ ಮುಂದುವರೆಸಿಕೊಂಡು ಹೋಗಲು ಮತ್ತೊಬ್ಬರು ಬಂದಿದ್ದಾರೆ. ವೀರೇಶ್ ಥಿಯೇಟರ್ ನಲ್ಲಿ ಗಂಧದಗುಡಿ ಪ್ರದರ್ಶನ ಮುಗಿದ ಬಳಿಕ ಯುವ ರಾಜ್ ಕುಮಾರ್ ಅವರ ಯುವ ರಣಧೀರ ಕಂಠೀರವ ಟ್ರೈಲರ್ ಬಿಡುಗಡೆ ಮಾಡಲಾಯಿತು, ಇದು ಅಪ್ಪು ಅವರ ಅಭಿಮಾನಿ ಎಡಿಟ್ ಮಾಡಿರುವ ಟ್ರೈಲರ್ ಆಗಿದ್ದು, ಟ್ರೈಲರ್ ಕೊನೆಯಲ್ಲಿ ಯುವ ಅವರನ್ನು ಜ್ಯೂನಿಯರ್ ಪವರ್ ಸ್ಟಾರ್ ಎಂದು ಕರೆಯಲಾಗಿದೆ. “ಜ್ಯೂನಿಯರ್ ಪವರ್ ಸ್ಟಾರ್ ಬೇಗ ಬರುತ್ತಿದ್ದಾರೆ..”ಎಂದು ಬರೆಯಲಿದೆ. ಅಭಿಮಾನಿಗಳು ಯುವ ಅವರಲ್ಲಿ ಅಪ್ಪು ಅವರನ್ನು ನೋಡುತ್ತಿದ್ದಾರೆ.

ಅಪ್ಪು ಅವರು ಇಲ್ಲವಾದಾಗ, ಅಪ್ಪು ಅವರು ಅಭಿನಯಿಸಬೇಕಿದ್ದ ಸಿನಿಮಾದಲ್ಲಿ ಧ್ರುವ ಅವರು ನಟಿಸಬೇಕು ಎಂದು ಅಭಿಮಾನಿಗಳು ಒತ್ತಾಯ ಮಾಡಿದ್ದರು, ಅದೇ ರೀತಿ ಸಂತೋಷ್ ಆನಂದ್ ರಾಮ್ ಅವರು ನಿರ್ದೇಶನ ಮಾಡಬೇಕಿದ್ದ ಅಪ್ಪು ಅವರ ಸಿನಿಮಾಗೆ ಯುವ ನಾಯಕನಾಗಿದ್ದಾರೆ. ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ಯುವ ಅವರನ್ನು ಲಾಂಚ್ ಮಾಡಲಿದೆ. ಯುವ ಅವರು ಮೊದಲಿಗೆ ಯುವ ರಣಧೀರ ಕಂಠೀರವ ಸಿನಿಮಾದಲ್ಲಿ ಅಭಿನಯಿಸಬೇಕಿತ್ತು, ಆದರೆ ಆ ಸಿನಿಮಾ ಟೀಸರ್ ಬಿಡುಗಡೆ ಬಳಿಕ ಸೆಟ್ಟೇರಲಿಲ್ಲ. ಹೊಂಬಾಳೆ ಫಿಲ್ಮ್ಸ್ ಜೊತೆಗೆ ಹೊಸ ಸಿನಿಮಾ ಶುರುವಾಗಲಿದೆ. ಯುವ ಅವರಿಗೆ ಜ್ಯೂನಿಯರ್ ಪವರ್ ಸ್ಟಾರ್ ಪಟ್ಟ ನೀಡಲಾಗಿದ್ದು, ಇದರ ಬಗ್ಗೆ ದೊಡ್ಮನೆ ಮಂದಿ ಹೇಗೆ, ರಿಯಾಕ್ಟ್ ಮಾಡುತ್ತಾರೆ ಎಂದು ಕಾದು ನೋಡಬೇಕಿದೆ.

Comments are closed.