Neer Dose Karnataka
Take a fresh look at your lifestyle.

ಕಾರ್ತಿಕ್ ಗೆ ನೆಮ್ಮದಿ ಸುದ್ದಿ: ಮುಂದಿನ ನ್ಯೂಜಿಲೆಂಡ್ ಸರಣಿಗೆ ಸ್ಥಾನ ಸಿಗದೇ ಇರುವುದಕ್ಕೆ ಕಾರಣ ಕೊಟ್ಟ ಬಿಸಿಸಿಐ: ಹೇಳಿದ್ದೇನು ಗೊತ್ತೇ??

ವಿಶ್ವಕಪ್ ಟೂರ್ನಿ ಮುಗಿದ ಬಳಿಕ ನವೆಂಬರ್ 18ರಿಂದ ಟೀಮ್ ಇಂಡಿಯಾ ನ್ಯೂಜಿಲೆಂಡ್ ಪ್ರವಾಸ ಕೈಗೊಳ್ಳಲಿದೆ, ಇದಾದ ಬಳಿಕ ಬಾಂಗ್ಲಾದೇಶ್ ಪ್ರವಾಸ ಕೈಗೊಳ್ಳಲಿದೆ. ಈ ಎರಡು ರಾಷ್ಟ್ರಗಳ ವಿರುದ್ಧ 3 ಟಿ20 ಮತ್ತು 3 ಏಕದಿನ ಸರಣಿ ಪಂದ್ಯಗಳನ್ನು ಆಡಲಿದೆ. ಈ ಸರಣಿಗಳಿಗಾಗಿ ಬಿಸಿಸಿಐ ನಿನ್ನೆ ಸಂಜೆ ಆಯ್ಕೆಯಾಗಿರುವ ಸದಸ್ಯರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ತಂಡದ ಹಿರಿಯ ಆಟಗಾರರಾದ ವಿರಾಟ್ ಕೋಹ್ಲಿ, ರೋಹಿತ್ ಶರ್ಮಾ ಮತ್ತು ಕೆ.ಎಲ್.ರಾಹುಲ್ ಅವರಿಗೆ ವಿಶ್ರಾಂತಿ ನೀಡಲಾಗಿದೆ. ಆದರೆ ರವಿಚಂದ್ರನ್ ಅಶ್ವಿನ್ ಮತ್ತು ದಿನೇಶ್ ಕಾರ್ತಿಕ್ ಅವರನ್ನು ಸಹ ಈ ಸರಣಿಗೆ ಆಯ್ಕೆ ಮಾಡಿಲ್ಲ. ಇದು ಎಲ್ಲರಿಗೂ ಆಶ್ಚರ್ಯ ಉಂಟು ಮಾಡಿತ್ತು.

ವಿಶ್ವಕಪ್ ನಲ್ಲಿ ದಿನೇಶ್ ಕಾರ್ತಿಕ್ ಅವರು ನಿರೀಕ್ಷೆಯ ಪ್ರದರ್ಶನ ನೀಡದ ಕಾರಣ ಅವರನ್ನು ಆಯ್ಕೆ ಮಾಡಿಲ್ಲ ಎಂದು ಎಲ್ಲರೂ ಅಂದುಕೊಂಡಿದ್ದರು. ಆದರೆ ಅಸಲಿ ವಿಷಯ ಬೇರೆಯೇ ಇದ್ದು, ಬಿಸಿಸಿಐ ಆಯ್ಕೆ ಸಮಿತಿಯ ಅಧ್ಯಕ್ಷರಾದ ಚೇತನ್ ಶರ್ಮಾ ಅವರು ದಿನೇಶ್ ಕಾರ್ತಿಕ್ ಅವರನ್ನು ಆಯ್ಕೆ ಮಾಡದೆ ಇರುವ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. “ಇಲ್ಲಿ ನೀವೆಂದುಕೊಂಡಿರುವ ಹಾಗೆ ಏನು ನಡೆಯುತ್ತಿಲ್ಲ. ವಿಶ್ವಕಪ್ ಮುಗಿದ ತಕ್ಷಣವೇ ಈ ಸರಣಿ ಶುರುವಾಗುತ್ತದೆ. ಕೆಲವು ಆತಗಾರರು, ಸತತವಾಗಿ ಆಡುತ್ತಲೇ ಇದ್ದಾರೆ. ಅವರಿಗೆ ವಿಶ್ರಾಂತಿಯ ಅಗತ್ಯ ಇದೆ. ಹಾಗಾಗಿ ಕಾರ್ತಿಕ್ ಅವರಿಗೆ ವಿಶ್ರಾಂತಿ ನೀಡಲು ಮ್ಯಾನೇಜ್ಮೆಂಟ್ ನಿರ್ಧಾರ ಮಾಡಿತು. ಟಿ20 ಸರಣಿ ಎಂದರೆ ಕಾರ್ತಿಕ್ ನಮ್ಮ ಆಯ್ಕೆಯಲ್ಲಿ ಇದ್ದೇ ಇರುತ್ತಾರೆ. ಅವರೊಬ್ಬ ಅದ್ಭುತ ಆಟಗಾರ, ಅವರನ್ನು ಕಡೆಗಣಿಸುವ ಪ್ರಶ್ನೆಯೇ ಇಲ್ಲ..” ಎಂದಿದ್ದಾರೆ ಚೇತನ್ ಶರ್ಮಾ.

ಇದನ್ನು ಕೇಳಿದ ಬಳಿಕ ದಿನೇಶ್ ಕಾರ್ತಿಕ್ ಅವರ ಅಭಿಮಾನಿಗಳಿಗೆ ನೆಮ್ಮದಿ ಆಗಿದೆ. ವಿಶ್ವಕಪ್ ನಲ್ಲಿ ಕಾರ್ತಿಕ್ ಅವರು ಆಡಿದ ಎರಡು ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಲಿಲ್ಲ. ಭಾನುವಾರ ನಡೆದ ಪಂದ್ಯದಲ್ಲಿ ದಿನೇಶ್ ಕಾರ್ತಿಕ್ ಅವರಿಗೆ ಬೆನ್ನು ನೋವು ಕಾಣಿಸಿಕೊಂಡ ಕಾರಣ ಅವರು, ಅರ್ಧದಲ್ಲೇ ಗ್ರೌಂಡ್ ಇಂದ ಹೊರಹೋಗಿದ್ದರು, ಬೆನ್ನು ನೋವಿನ ಸಮಸ್ಯೆ ಇರುವುದರಿಂದ ಕಾರ್ತಿಕ್ ಅವರು ನಾಳಿನ ಪಂದ್ಯದಲ್ಲಿ ಆಡುವುದು ಅನುಮಾನ ಆಗಿದೆ. ಅವರ ಬದಲಾಗಿ ರಿಷಬ್ ಪಂತ್ ಅವರು ಪ್ಲೇಯಿಂಗ್ 11 ನಲ್ಲಿ ಸ್ಥಾನ ಪಡೆಯಬಹುದು ಎಂದು ಹೇಳಲಾಗುತ್ತಿದೆ.

Comments are closed.